Govind Karjol : 'ನೀರಾವರಿ ಇಲಾಖೆಯಲ್ಲಿ 400 ಹುದ್ದೆ ನೇಮಕಕ್ಕೆ ಅನುಮತಿ'

ನೀರಾವರಿ ಇಲಾಖೆಯಲ್ಲಿ 400 ಹುದ್ದೆಗಳ ನೇಮಕಕ್ಕೆ ಅನುಮತಿ ನೀಡಿದ್ದು, 300 ಅಸಿಸ್ಟೆಂಟ್ ಇಂಜಿನಿಯರ್, 100 ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

Written by - Prashobh Devanahalli | Last Updated : Feb 3, 2023, 06:10 PM IST
  • ನೀರಾವರಿ ಇಲಾಖೆಯಲ್ಲಿ 400 ಹುದ್ದೆಗಳ ನೇಮಕಕ್ಕೆ ಅನುಮತಿ
  • 300 ಅಸಿಸ್ಟೆಂಟ್ ಇಂಜಿನಿಯರ್, 100 ಜ್ಯೂನಿಯರ್ ಇಂಜಿನಿಯರ್ ಹುದ್ದೆ
  • ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
Govind Karjol : 'ನೀರಾವರಿ ಇಲಾಖೆಯಲ್ಲಿ 400 ಹುದ್ದೆ ನೇಮಕಕ್ಕೆ ಅನುಮತಿ' title=

ಬೆಂಗಳೂರು : ನೀರಾವರಿ ಇಲಾಖೆಯಲ್ಲಿ 400 ಹುದ್ದೆಗಳ ನೇಮಕಕ್ಕೆ ಅನುಮತಿ ನೀಡಿದ್ದು, 300 ಅಸಿಸ್ಟೆಂಟ್ ಇಂಜಿನಿಯರ್, 100 ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಕಾರಜೋಳ, ನೀರಾವರಿ ಇಲಾಖೆಯಲ್ಲಿ ಅನೇಕ ವರ್ಷದಿಂದ ಅಸಿಸ್ಟೆಂಟ್ ಇಂಜಿನಿಯರ್, ಜ್ಯೂನಿಯರ್ ಇಂಜಿನಿಯರ್ ನೇಮಕ ಆಗಿಲ್ಲ. ಸಾವಿರ ಜನರ ಹುದ್ದೆ ನೇಮಕ ಆಗಬೇಕಿದೆ. ಇದರಿಂದ ಕಾಮಗಾರಿ ವಿಳಂಭ ಆಗುತ್ತಿದೆ. ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆ ಜೊತೆ ಮಾತನಾಡಿದ್ದೇನೆ. 400 ಜನರ ನೇಮಕಕ್ಕೆ ಅನುಮತಿ ನೀಡಿದ್ದಾರೆ. 300 ಜನ ಅಸಿಸ್ಟೆಂಟ್ ಇಂಜಿನಿಯರ್, ನೂರು ಜನ ಜ್ಯೂನಿಯರ್ ಇಂಜಿನಿಯರ್ ನೇಮಕ ಮಾಡಿಕೊಳ್ಳಲಾಗುವುದು. ಸಿವಿಲ್ ಇಂಜಿನಿಯರ್ ಗಳ ಕಾಂಟ್ರಾಕ್ಟ್ ನೇಮಕ ಮಾಡಿಕೊಳ್ತಿದ್ದೇವೆ. ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಅಧಿಸೂಚನೆ ಮಾಡಿಕೊಳ್ಳಬೇಕು. ಸ್ಪಷ್ಟವಾಗಿ ಅಭ್ಯರ್ಥಿಗಳಿಗೆ ಹೇಳಬೇಕು ಇದು ಕಾಂಟ್ರಾಕ್ಟ್ ನೇಮಕ ಅಂತ. ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ನೇಮಕ ಮಾಡಲಾಗುವುದು ಎಂದರು.

ಇನ್ನೂ ಮಹದಾಯಿ ನೀರಿನ ವಿಚಾರವಾಗಿ ಮಾತನಾಡಿದ ಅವರು,  ನಮ್ಮ ಪಾಲಿನ ನೀರನ್ನ ಪಡೆದೇ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News