Railway Latest Recruitment 2022: ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ರೈಲ್ವೆಯಲ್ಲಿ ಉದ್ಯೋಗಾವಕಾಶ

Railway Latest Recruitment 2022: ಈ ನೇಮಕಾತಿ ಪ್ರಕ್ರಿಯೆಯ ಮೂಲಕ ರೈಲ್ವೆಯ ವಿವಿಧ ವಿಭಾಗಗಳಲ್ಲಿ ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಕುರಿತಂತೆ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. 

Written by - Yashaswini V | Last Updated : Jun 27, 2022, 06:49 AM IST
  • ಭಾರತೀಯ ರೈಲ್ವೆಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ
  • ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5ನೇ ಜುಲೈ 2022
Railway Latest Recruitment 2022: ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ರೈಲ್ವೆಯಲ್ಲಿ ಉದ್ಯೋಗಾವಕಾಶ  title=
Railway Recruitment 2022

ಭಾರತೀಯ ರೈಲ್ವೆಯಲ್ಲಿ ಉದ್ಯೋಗಗಳು: ಭಾರತೀಯ ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಉತ್ತಮ ಅವಕಾಶವಿದೆ. ವಿಶೇಷವೆಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ನೇಮಕಾತಿಗಾಗಿ, ಅಭ್ಯರ್ಥಿಗಳು ರೈಲ್ವೆಯ ಅಧಿಕೃತ ವೆಬ್‌ಸೈಟ್ ner.indianrailways.gov.in ಗೆ ಭೇಟಿ ನೀಡುವ ಮೂಲಕ ಮನೆಯಿಂದಲೇ ಅರ್ಜಿ ಸಲ್ಲಿಸಬಹುದು.

ನೇಮಕಾತಿ ಪ್ರಕ್ರಿಯೆಯ ಮೂಲಕ ರೈಲ್ವೆಯ ವಿವಿಧ ವಿಭಾಗಗಳಲ್ಲಿ ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಕುರಿತಂತೆ ಅಧಿಸೂಚನೆಯನ್ನೂ ಹೊರಡಿಸಲಾಗಿದೆ.  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5ನೇ ಜುಲೈ 2022. ಯಾವುದೇ ರೀತಿಯ ಮಾಹಿತಿಗಾಗಿ, ನೀವು ಈಶಾನ್ಯ ರೈಲ್ವೆಯ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 20 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಇದರಲ್ಲಿ ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ (ವರ್ಕ್ಸ್) 15 ಹುದ್ದೆಗಳು, ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ 2 ಹುದ್ದೆಗಳು (ಎಲೆಕ್ಟ್ರಿಕಲ್/ ಟಿಆರ್‌ಡಿ) ಮತ್ತು ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ (ಸಿಗ್ನಲ್) 3 ಹುದ್ದೆಗಳು ಸೇರಿವೆ. 

ಇದನ್ನೂ ಓದಿ- ರಾಜ್ಯ ಸರ್ಕಾರದಿಂದ ಅರಿವು ಯೋಜನೆಯಡಿ ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನ

ಅರ್ಹತಾ ಮಾನದಂಡಗಳು
ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ಕ್ಷೇತ್ರದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಅಥವಾ ನಾಲ್ಕು ವರ್ಷಗಳ ಪದವಿ ಕೋರ್ಸ್ ಹೊಂದಿರಬೇಕು. ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಹೆಚ್ಚಿನ ವೆಟೆಜ್ ಸಿಗಲಿದೆ. 

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು. ಆದರೆ, ಅಭ್ಯರ್ಥಿಯ ವಯಸ್ಸು 33 ವರ್ಷಗಳಿಗಿಂತ ಹೆಚ್ಚಿರಬಾರದು. ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

ಇದನ್ನೂ ಓದಿ- DRDO RAC Recruitment 2022 : DRDO ದಲ್ಲಿ ₹88,000 ಸಂಬಳದ 630 ಹುದ್ದೆಗಳಿಗೆ ಅರ್ಜಿ ಆಹ್ವಾನ!

ವೇತನ ಶ್ರೇಣಿ:
ಝಡ್ ವರ್ಗಕ್ಕೆ ಪ್ರತಿ ತಿಂಗಳು, ತಿಂಗಳಿಗೆ 25000 ರೂ., ವೈ ವರ್ಗಕ್ಕೆ ಮಾಸಿಕ 27000 ರೂ. ಮತ್ತು X ವರ್ಗಕ್ಕೆ ತಿಂಗಳಿಗೆ 30000 ರೂ.  ವೇತನವನ್ನು ನಿಗದಿಗೊಳಿಸಲಾಗಿದೆ. 

ಅಭ್ಯರ್ಥಿಗಳ ಆಯ್ಕೆಯಲ್ಲಿ, ಗೇಟ್/ಆಪ್ಟಿಟ್ಯೂಡ್‌ನಲ್ಲಿ ಶೇಕಡಾ 55 ಅಂಕಗಳು, ಅನುಭವಕ್ಕೆ 30 ಅಂಕಗಳು ಮತ್ತು ವ್ಯಕ್ತಿತ್ವ, ಸಂದರ್ಶನ ಮತ್ತು ಮಾನಸಿಕ ಪರೀಕ್ಷೆಗೆ 15 ಅಂಕಗಳು ಇರುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News