Indian Navy Bharti 2022: ಭಾರತೀಯ ನೌಕಾಪಡೆಯು 212 ಹುದ್ದೆಗಳಿಗೆ ಅರ್ಜಿ ಆಹ್ವಾನ

Indian Navy Bharti 2022:  ಭಾರತೀಯ ನೌಕಾಪಡೆಯಲ್ಲಿ 212 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ joinindiannavy.gov.in ಗೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸಬಹುದು. ವಿವಾಹಿತ ಮತ್ತು ಅವಿವಾಹಿತ ಪುರುಷರು ಮತ್ತು ಮಹಿಳೆಯರು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

Written by - Yashaswini V | Last Updated : Oct 21, 2022, 11:45 AM IST
  • ಭಾರತೀಯ ನೌಕಾಪಡೆಯು ಎಸ್‌ಎಸ್‌ಸಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನ
  • ಈ ನೇಮಕಾತಿ ಮೂಲಕ ಒಟ್ಟು 212 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
  • ಈ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ನವೆಂಬರ್ 2022
Indian Navy Bharti 2022: ಭಾರತೀಯ ನೌಕಾಪಡೆಯು 212 ಹುದ್ದೆಗಳಿಗೆ ಅರ್ಜಿ ಆಹ್ವಾನ  title=
Indian Navy Bharti 2022

Indian Navy Bharti 2022: ಭಾರತೀಯ ನೌಕಾಪಡೆಯು ಎಸ್‌ಎಸ್‌ಸಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಕೋರಿದೆ. ಈ ನೇಮಕಾತಿ ಮೂಲಕ ಒಟ್ಟು 212 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ನವೆಂಬರ್ 2022 ಎಂದು ನಿಗದಿಗೊಳಿಸಲಾಗಿದೆ.

ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಕ್ಕಾಗಿ ಇಚ್ಚಿಸುವ ಆಸಕ್ತ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು,  ಅಧಿಕೃತ ವೆಬ್‌ಸೈಟ್ joinindiannavy.gov.in ಗೆ ಭೇಟಿ ನೀಡಬೇಕು. ವಿವಾಹಿತ ಮತ್ತು ಅವಿವಾಹಿತ ಪುರುಷರು ಮತ್ತು ಮಹಿಳೆಯರು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ- ಮನೆ-ಕಟ್ಟಡ ನಿರ್ಮಿಸುವವರಿಗೆ ಗುಡ್ ನ್ಯೂಸ್: ಉಕ್ಕಿನ ದರದಲ್ಲಿ ಶೇ.40ರಷ್ಟು ಕುಸಿತ!

ಭಾರತೀಯ ನೌಕಾಪಡೆಯ ನೇಮಕಾತಿ 2022: ಹುದ್ದೆಯ ವಿವರಗಳು:

  • ಸಾಮಾನ್ಯ ಸೇವೆ / ಹೈಡ್ರೋ ಕೇಡರ್ - 56 ಪೋಸ್ಟ್ಗಳು
  • ಎಲೆಕ್ಟ್ರಿಕಲ್ (ಸಾಮಾನ್ಯ ಸೇವೆ) - 45 ಪೋಸ್ಟ್ಗಳು
  • ಪೈಲಟ್ - 25 ಪೋಸ್ಟ್ಗಳು
  • ಎಂಜಿನಿಯರಿಂಗ್ (ಸಾಮಾನ್ಯ ಸೇವೆ) - 25 ಪೋಸ್ಟ್ಗಳು
  • ಲಾಜಿಸ್ಟಿಕ್ಸ್ - 20 ಪೋಸ್ಟ್ಗಳು
  • ನೇವಲ್ ಏರ್ ಆಪರೇಷನ್ ಆಫೀಸರ್ - 15 ಪೋಸ್ಟ್ಗಳು
  • ನೇವಲ್ ಕನ್ಸ್ಟ್ರಕ್ಟರ್ - 14 ಪೋಸ್ಟ್ಗಳು
  • ಶಿಕ್ಷಣ - 12 ಪೋಸ್ಟ್ಗಳು
  • ಏರ್ ಟ್ರಾಫಿಕ್ ನಿಯಂತ್ರಕ - 5 ಪೋಸ್ಟ್‌ಗಳು 

ಭಾರತೀಯ ನೌಕಾಪಡೆಯ ನೇಮಕಾತಿ 2022: ಆಯ್ಕೆ ಪ್ರಕ್ರಿಯೆ:
ಈ ನೇಮಕಾತಿಗಾಗಿ  ಅರ್ಹತೆಯಲ್ಲಿ ಕೋರಿದ ಪದವಿಯಲ್ಲಿ ಅಂಕಗಳ ಆಧಾರದ ಮೇಲೆ  ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಸ್ವೀಕರಿಸಿದ ಅರ್ಜಿಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ ಮತ್ತು ಎಸ್‌ಎಸ್‌ಬಿ ಸಂದರ್ಶನಕ್ಕೆ ಕರೆಯಲಾಗುವುದು. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಸಂದರ್ಶನದ ಬಗ್ಗೆ ಎಸ್ಎಂಎಸ್ ಮತ್ತು ಇಮೇಲ್ ಮೂಲಕ ತಿಳಿಸಲಾಗುತ್ತದೆ. ಎಸ್‌ಎಸ್‌ಬಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

ಇದನ್ನೂ ಓದಿ- ಸಾಲ ತೀರಿಸಲು ಕೆಲಸಕ್ಕೆ ಸೇರಿದ ಪತ್ನಿ; ಮನಬಂದಂತೆ ಥಳಿಸಿ ವಿಡಿಯೋ ಮಾಡಿದ ಪತಿ..!

ನವೆಂಬರ್ ನಿಂದ ಅಗ್ನಿವೀರ್ ವಾಯು ನೇಮಕಾತಿ ಆರಂಭ:
ಭಾರತೀಯ ವಾಯುಪಡೆಗೆ ಅಗ್ನಿವೀರ್‌ಗಳ ನೇಮಕಾತಿ ಪ್ರಕ್ರಿಯೆಯು ನವೆಂಬರ್ ಮೊದಲ ವಾರದಿಂದ ಪ್ರಾರಂಭವಾಗಲಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಈ ನೇಮಕಾತಿಗೆ ಸೇರಬಹುದು. ಈ ನಿಟ್ಟಿನಲ್ಲಿ ಆನ್‌ಲೈನ್ ಮಾಧ್ಯಮದಲ್ಲಿ ಪರೀಕ್ಷೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್ agnipathvayu.cdac.in ನಲ್ಲಿ ಅಧಿಸೂಚನೆಯ ಮೂಲಕ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News