ಮಹಿಳೆಯರಿಗೊಂದು ಗುಡ್ ನ್ಯೂಸ್, ಇನ್ಮುಂದೆ ವಾಸಕ್ಕೆ ಶಾಶ್ವತ ಮನೆಯ ಜೊತೆಗೆ ಸರ್ಕಾರ ಧನಸಹಾಯ ಕೂಡ ನೀಡಲಿದೆ!

Five State Assembly Elections 2023: ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಬಾರಿಯ ಪ್ರಣಾಳಿಕೆಯಲ್ಲೂ ಸರ್ಕಾರ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. (Political News In Kannada)  

Written by - Nitin Tabib | Last Updated : Nov 11, 2023, 06:25 PM IST
  • ಈ ಯೋಜನೆಯಡಿಯಲ್ಲಿ, ಇನ್ನೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನವನ್ನು ಪಡೆದಿರದ ಮಹಿಳೆಯರು ಮಾತ್ರ ಮನೆಗಾಗಿ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ.
  • ಇನ್ನೂ ಶಾಶ್ವತ ಮನೆ ಇಲ್ಲದವರು ಮಾತ್ರ ಈ ಯೋಜನೆಯ ಲಾಭ ಪಡೆಯಲಿದ್ದಾರೆ.
  • ಇದಲ್ಲದೆ, ಫಲಾನುಭವಿಯು ಲಾಡ್ಲಿ ಬೆಹನ್ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಳ್ಳುವುದು ಸಹ ಅಗತ್ಯವಾಗಿದೆ.
ಮಹಿಳೆಯರಿಗೊಂದು ಗುಡ್ ನ್ಯೂಸ್, ಇನ್ಮುಂದೆ ವಾಸಕ್ಕೆ ಶಾಶ್ವತ ಮನೆಯ ಜೊತೆಗೆ ಸರ್ಕಾರ ಧನಸಹಾಯ ಕೂಡ ನೀಡಲಿದೆ! title=

ನವದೆಹಲಿ: ದೇಶಾದ್ಯಂತ ಮಹಿಳೆಯರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಪ್ರಸ್ತುತ ಮಧ್ಯಪ್ರದೇಶ ಚುನಾವಣೆಗೆ ಮೊದಲು, ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಬಾರಿಯ ಪ್ರಣಾಳಿಕೆಯಲ್ಲೂ ಸರ್ಕಾರ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರೀತಿಯ ಸಹೋದರಿಯರಿಗೆ ಶಾಶ್ವತ ಮನೆ ನೀಡುವುದಾಗಿ ಹೇಳಿದೆ. ಇದರೊಂದಿಗೆ ಆರ್ಥಿಕ ಸಹಾಯವನ್ನೂ ನೀಡಲಾಗುವುದು ಎಂದು ಹೇಳಿದೆ.

ಈ ಪ್ರಣಾಳಿಕೆಯಲ್ಲಿ ಜೆಪಿ ನಡ್ಡಾ ಅವರು 'ಲಾಡ್ಲಿ ಬಹನ್' ಯೋಜನೆಯ ಲಾಭದ ಜೊತೆಗೆ 1 ಲಕ್ಷ ಮಹಿಳೆಯರಿಗೆ ಶಾಶ್ವತ ಮನೆ ಸೌಲಭ್ಯವನ್ನು ಒದಗಿಸುವುದಾಗಿ ಹೇಳಿದ್ದಾರೆ. ಇದರೊಂದಿಗೆ ಗ್ರಾಮೀಣ ಮಹಿಳೆಯರನ್ನು ಲಕ್ಷಾಧೀಶರನ್ನಾಗಿಸಲು ಈ ಹೆಜ್ಜೆ ಇಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುವುದು
ಮಹಿಳೆಯರ ಬಗ್ಗೆ ಮಾತನಾಡುವ ಬಿಜೆಪಿ ಸರಕಾರ ಪ್ರಣಾಳಿಕೆಯಲ್ಲಿ 15 ಲಕ್ಷ ಗ್ರಾಮೀಣ ಮಹಿಳೆಯರನ್ನು ಕೌಶಲ್ಯ ತರಬೇತಿ ಮೂಲಕ ಲಕ್ಷಾಧಿಪತಿಗಳನ್ನಾಗಿ ಮಾಡುವುದಾಗಿ ಹೇಳಿದೆ.

ಲಾಡ್ಲಿ ಬಹನ್ ಯೋಜನೆ ಎಂದರೇನು?
ಲಾಡ್ಲಿ ಬಹನ್ ಯೋಜನೆಯಡಿ, ರಾಜ್ಯ ಸರ್ಕಾರವು ಮಧ್ಯಪ್ರದೇಶದ ಮಹಿಳೆಯರಿಗೆ ಪ್ರತಿ ವರ್ಷ 12,000 ರೂಪಾಯಿಗಳ ಆರ್ಥಿಕ ನೆರವು ನೀಡುತ್ತಿದೆ. ಸಾಮಾನ್ಯ, ಒಬಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಧವೆ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದು.

ಇದನ್ನೂ ಓದಿ-ಏಳು ದಿನಗಳ ಬಳಿಕ ಈ ರಾಶಿಗಳ ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭ! ಧನ ಕುಬೇರ ನಿಧಿ ಪ್ರಾಪ್ತಿಯೋಗ!

ವಯಸ್ಸು ಎಷ್ಟಿರಬೇಕು?
21 ವರ್ಷದಿಂದ 60 ವರ್ಷದೊಳಗಿನ ಎಲ್ಲಾ ಮಹಿಳೆಯರು ಈ ಯೋಜನೆಗೆ ಅರ್ಹರಾಗಿದ್ದಾರೆ. ಈ ಯೋಜನೆಯು ವಿವಾಹಿತ, ವಿಧವೆ ಮತ್ತು ವಿಚ್ಛೇದಿತ ಮಹಿಳೆಯರಿಗೆ ಮುಕ್ತವಾಗಿದೆ. ಆದಾಯ ತೆರಿಗೆದಾರರು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ . ಇದಲ್ಲದೇ ಕುಟುಂಬದ ಆದಾಯ ವರ್ಷಕ್ಕೆ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಇದನ್ನೂ ಓದಿ-ಮೂವತ್ತು ವರ್ಷಗಳ ಬಳಿಕ ಮೂಲ ತ್ರಿಕೋನ ರಾಶಿಯಲ್ಲಿ ಶನಿಯ ನೇರನಡೆ ಆರಂಭ, ಮುಂದಿನ ವರ್ಷ ಈ ಜನರಿಗೆ ಅಪಾರ ಸಿರಿ-ಸಂಪತ್ತು ಪ್ರಾಪ್ತಿಯೋಗ!

ಯಾವ ಮಹಿಳೆಯರಿಗೆ ಮನೆ ಸಿಗಲಿದೆ?
ಈ ಯೋಜನೆಯಡಿಯಲ್ಲಿ, ಇನ್ನೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನವನ್ನು ಪಡೆದಿರದ ಮಹಿಳೆಯರು ಮಾತ್ರ ಮನೆಗಾಗಿ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ. ಇನ್ನೂ ಶಾಶ್ವತ ಮನೆ ಇಲ್ಲದವರು ಮಾತ್ರ ಈ ಯೋಜನೆಯ ಲಾಭ ಪಡೆಯಲಿದ್ದಾರೆ.  ಇದಲ್ಲದೆ, ಫಲಾನುಭವಿಯು ಲಾಡ್ಲಿ ಬೆಹನ್ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಳ್ಳುವುದು ಸಹ ಅಗತ್ಯವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News