ಚಾಮರಾಜನಗರ: ಜೈಲಿನಲ್ಲಿ ಕಂಪ್ಯೂಟರ್ ಕಲಿಸುವ ವಿಶೇಷ ಯೋಜನೆಯನ್ನು ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಆರಂಭಿಸಲಾಗಿದೆ. ಯಾವುದೋ ಕಾರಣಕ್ಕೆ ತಿಳಿದೋ ತಿಳಿಯದೆಯೋ ತಪ್ಪು ಮಾಡಿ ಜೈಲು ಸೇರಿರುವ ಕೈದಿಗಳು ಮತ್ತು ವಿಚಾರಣಾ ಕೈದಿಗಳು ಜೈಲಿನಿಂದ ಹೊರಹೋದ ಬಳಿಕ ಹೊಸ ಬದುಕುಕಟ್ಟಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಕಾರಾಗೃಹದಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್‍ಫೋಸಿಸ್ ರೋಟರಿ ಪಂಚಶೀಲ ಸಹಯೋಗದಿಂದ ಈ ವಿನೂತನ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಕಾರಾಗೃಹದಲ್ಲಿರುವ ಕೈದಿಗಳಿಗಾಗಿ ಕಂಪ್ಯೂಟರ್ ಶಿಕ್ಷಣ ತರಬೇತಿಯನ್ನು ನೀಡುತ್ತಿರುವ ರಾಜ್ಯದ ಮೊಟ್ಟ ಮೊದಲ ಕಾರಾಗೃಹ ಎಂಬ ಹೆಗ್ಗಳಿಕೆಗೆ ಚಾಮರಾಜನಗರ ಕಾರಾಗೃಹ ಪಾತ್ರವಾಗಿದೆ.
35 ಜೈಲು ಹಕ್ಕಿಗಳಿಗೆ ಆಧುನಿಕ ಶಿಕ್ಷಣ:
ಚಾಮರಾಜನಗರ ಕಾರಾಗೃಹದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಕಲಿತ 35 ಮಂದಿ ವಿಚಾರಣಾ ಕೈದಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತದೆ.
ಇದನ್ನೂ ಓದಿ- ನಿರುದ್ಯೋಗಿ ಮಹಿಳೆಯರಿಗೆ ವಿವಿಧ ರೀತಿಯ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ
ಕಾರಾಗೃಹ ಬಂಧಿಗಳಿಗೆ ಕಾರಾಗೃಹದಲ್ಲೇ ಕಂಪ್ಯೂಟರ್ ತರಬೇತಿ ಪಡೆಯಲು ಸುಸಜ್ಜಿತ ಕೊಠಡಿಯಲ್ಲಿ 10 ಕಂಪ್ಯೂಟರ್ ಮತ್ತು ಪ್ರಿಂಟರ್ ಗಳನ್ನು ಇನ್ಫೋಸಿಸ್ ನೀಡಿದೆ ಜೊತೆಗೆ ಮೂವರು ತರಬೇತಿದಾರರನ್ನು ನಿಯೋಜಿಸಲಾಗಿದೆ.
ಕಂಪ್ಯೂಟರ್ ಶಿಕ್ಷಣದ ಜೊತೆಗೆ ಕಲಿಕಾರ್ಥಿಗಳಿಗೆ ಸುಲಭವಾಗಿ ಕಂಪ್ಯೂಟರ್ ಅರ್ಥೈಸುವ ಸಲುವಾಗಿ ಕನ್ನಡ ಕಿರುಪುಸ್ತಕಗಳನ್ನು ಸಹ ನೀಡಲಾಗಿದೆ. ಕಂಪ್ಯೂಟರ್ ಕಲಿತ ಬಳಿಕ ಉದ್ಯೋಗ ಪಡೆದು ಬದುಕು ಬದಲಿಸಿಕೊಳ್ಳಲಿ ಎಂಬ ಮಾದರಿ ಉದ್ದೇಶದಿಂದ ನಿನ್ನೆ (ನವೆಂಬರ್ 15, 2023) ಈ ಕಂಪ್ಯೂಟರ್ ಕಲಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಜೀವನ ರೂಪಿಸಿಕೊಳ್ಳಲು ಈ ಪ್ರಯತ್ನ:
ಕಾರಾಗೃಹ ಬಂಧಿಗಳನ್ನು ಏನೋ ತಪ್ಪು ಮಾಡಿ ಬಂದಿರುತ್ತಾರೆ, ಅವರ ಬದುಕು ಬದಲಿಸಿಕೊಳ್ಳಲು ಕಾರಾಗೃಹ ಈ ಒಂದು ಪ್ರಯತ್ನ ಮಾಡಿದೆ. ಈಗ ಕಂಪ್ಯೂಟರ್ ಜ್ಞಾನ ಎಲ್ಲರಿಗೂ ಅಗತ್ಯ. ಈ ಹಿನ್ನೆಲೆ, ಕೈದಿಗಳಿಗೆ ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗಿದೆ, ಸಾಲ ಸೌಲಭ್ಯವನ್ನು ಕಲ್ಪಿಸಿ ಅವರ ಜೀವನ ರೂಪಿಸಿಕೊಳ್ಳಲು ಇದು ಸಹಾಯಲವಾಗಲಿದೆ ಎಂದು ಚಾಮರಾಜನಗರ ಕಾರಾಗೃಹ ಅಧೀಕ್ಷಕ ಎಸ್.ಎನ್. ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ- ಸಾಂಸ್ಕøತಿಕ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ ರೂಪದಲ್ಲಿ ಧನಸಹಾಯಕ್ಕೆ ಅರ್ಜಿ ಆಹ್ವಾನ
ಒಟ್ಟಿನಲ್ಲಿ ಬದುಕು ಬದಲಿಸಿಕೊಳ್ಳಲು ಇದೇ ಮೊಟ್ಟ ಮೊದಲ ಬಾರಿಗೆ ಕೈದಿಗಳಿಗೆ ಕಂಪ್ಯೂಟರ್ ಶಿಕ್ಷಣ ಕೊಡಲು ಮುಂದಾಗಿರುವುದು ನಿಜಕ್ಕೂ ಬೇರೆ ಕಾರಾಗೃಹಗಳಿಗೂ ಅನುಕರಣೀಯವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.