CBSE ಬೋರ್ಡ್ 12ನೇ ತರಗತಿ ಫಲಿತಾಂಶ: ರಿಸಲ್ಟ್‌ ಪರಿಶೀಲಿಸಲು ಈ ಮಾರ್ಗ ಅನುಸರಿಸಿ

ಸಿಬಿಎಸ್‌ಯ ಅಂತಿಮ ಅಂಕಪಟ್ಟಿಯನ್ನು 2022 ರ ಪ್ರಥಮ ಮತ್ತು ದ್ವಿತೀಯ ಅವಧಿಯ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ತೂಕದ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಶೈಕ್ಷಣಿಕ ಅವಧಿಯಲ್ಲಿ ಆಂತರಿಕ ಮೌಲ್ಯಮಾಪನ ಅಂಕಗಳು, ಪ್ರಾಜೆಕ್ಟ್ ವರ್ಕ್, ಪ್ರಾಯೋಗಿಕ ಮತ್ತು ಪೂರ್ವ-ಬೋರ್ಡ್ ಪರೀಕ್ಷೆಯ ರೂಪದಲ್ಲಿ ಪಡೆದ ಅಂಕಗಳ ವಿವರಗಳನ್ನು ಸ್ಕೋರ್ಕಾರ್ಡ್ ಒಳಗೊಂಡಿದೆ.

Written by - Bhavishya Shetty | Last Updated : Jul 22, 2022, 11:15 AM IST
  • ಸಿಬಿಎಸ್‌ಇ ಬೋರ್ಡ್ 12 ನೇ ತರಗತಿಯ ಫಲಿತಾಂಶ ಬಿಡುಗಡೆ
  • ಎಸ್‌ಎಂಎಸ್‌ ಅಥವಾ ವೆಬ್‌ಸೈಟ್‌ ಮೂಲಕ ಫಲಿತಾಂಶ ಪರಿಶೀಲಿಸಿ
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಈ ಸುದ್ದಿಯನ್ನು ಓದಿ
CBSE ಬೋರ್ಡ್ 12ನೇ ತರಗತಿ ಫಲಿತಾಂಶ: ರಿಸಲ್ಟ್‌ ಪರಿಶೀಲಿಸಲು ಈ ಮಾರ್ಗ ಅನುಸರಿಸಿ  title=
CBSE Result

CBSE ಬೋರ್ಡ್ 12 ನೇ ತರಗತಿಯ ಫಲಿತಾಂಶ ಬಿಡುಗಡೆಯಾಗಿದೆ. ಈಗಾಗಲೇ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು CBSE ಮಂಡಳಿಯ ಅಧಿಕೃತ ವೆಬ್‌ಸೈಟ್ cbseresults.nic.in, results.cbse.nic.in, results.gov.in, digilocker.gov.in ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಈ ವರ್ಷ ಸುಮಾರು 14 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಎಲ್ಲಾ ವಿದ್ಯಾರ್ಥಿಗಳು ಇದೀಗ ತಮ್ಮ ಫಲಿತಾಂಶವನ್ನು ಪರೀಕ್ಷಿಸಬಹುದು. 

ಸಿಬಿಎಸ್‌ಯ ಅಂತಿಮ ಅಂಕಪಟ್ಟಿಯನ್ನು 2022 ರ ಪ್ರಥಮ ಮತ್ತು ದ್ವಿತೀಯ ಅವಧಿಯ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ತೂಕದ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಶೈಕ್ಷಣಿಕ ಅವಧಿಯಲ್ಲಿ ಆಂತರಿಕ ಮೌಲ್ಯಮಾಪನ ಅಂಕಗಳು, ಪ್ರಾಜೆಕ್ಟ್ ವರ್ಕ್, ಪ್ರಾಯೋಗಿಕ ಮತ್ತು ಪೂರ್ವ-ಬೋರ್ಡ್ ಪರೀಕ್ಷೆಯ ರೂಪದಲ್ಲಿ ಪಡೆದ ಅಂಕಗಳ ವಿವರಗಳನ್ನು ಸ್ಕೋರ್ಕಾರ್ಡ್ ಒಳಗೊಂಡಿದೆ.

ಸಿಬಿಎಸ್‌ಇ 12 ನೇ ಫಲಿತಾಂಶವನ್ನು ಹೀಗೆ ಪರಿಶೀಲಿಸಿ: 

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ- cbse.gov.in, cbresults.nic.in.
ನಂತರ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ
ಅಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ
12ನೇ ತರಗತಿಯ ಫಲಿತಾಂಶ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ.
12 ನೇ ತರಗತಿಯ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ

SMS ಮೂಲಕ ಫಲಿತಾಂಶವನ್ನು ಪರಿಶೀಲಿಸಿ: 

ಎಸ್‌ಎಂಎಸ್‌ ಮೂಲಕ ಫಲಿತಾಂಶ ಪಡೆಯಬೇಕಾದರೆ cbse12<ರೋಲ್ ಸಂಖ್ಯೆ> ಯನ್ನು ಟೈಪ್‌ ಮಾಡಿ. ಅದನ್ನು 7738299899 ಗೆ ಕಳುಹಿಸಿ. ತಕ್ಷಣವೇ ಮರು ಉತ್ತರದ ಮೂಲಕ ಫಲಿತಾಂಶ ಬರುತ್ತದೆ. 

ಸಿಬಿಎಸ್‌ಇ ಟರ್ಮ್ 2 ಪರೀಕ್ಷೆಯನ್ನು ಏಪ್ರಿಲ್ 26 ರಿಂದ ಜೂನ್ 4 ರವರೆಗೆ ನಡೆಸಲಾಗಿತ್ತು. ಸಿಬಿಎಸ್‌ಇ 2021-22ರ ಶೈಕ್ಷಣಿಕ ಅವಧಿಯ ಪರೀಕ್ಷೆಯನ್ನು ಎರಡು ಅವಧಿಗಳಲ್ಲಿ ನಡೆಸಿತ್ತು. ನವೆಂಬರ್-ಡಿಸೆಂಬರ್ 2021 ರಲ್ಲಿ ನಡೆದ CBSE ಟರ್ಮ್ 1 ಬೋರ್ಡ್ ಪರೀಕ್ಷೆಯನ್ನು ವಸ್ತುನಿಷ್ಠ ಪ್ರಶ್ನೆಗಳಿಗಾಗಿ ನಡೆಸಲಾಯಿತು. ಬಳಿಕ ಟರ್ಮ್ 2 ಪರೀಕ್ಷೆಯು ವಿಶ್ಲೇಷಣಾತ್ಮಕ ಮತ್ತು ಕೇಸ್ ಆಧಾರಿತ ಪ್ರಶ್ನೆಗಳನ್ನು ಹೊಂದಿತ್ತು.ಈ ಪರೀಕ್ಷೆಯನ್ನು ಏಪ್ರಿಲ್-ಮೇ 2022 ರಲ್ಲಿ ನಡೆಸಲಾಗಿದೆ. ಮಂಡಳಿಯು ಟರ್ಮ್ 1 ಫಲಿತಾಂಶವನ್ನು ಪ್ರಕಟಿಸಿರಲಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News