Bank Recruitment 2024: SVC ಬ್ಯಾಂಕಿನಲ್ಲಿ ಉದ್ಯೋಗಾವಕಾಶ, ಇಂದೇ ಅರ್ಜಿ ಸಲ್ಲಿಸಿ

SVC Co-operative Bank Recruitment 2024: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Apr 6, 2024, 02:42 PM IST
  • SVC ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ
  • ಒಟ್ಟು 113 ಬ್ರಾಂಚ್ ಮ್ಯಾನೇಜರ್ & ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ
  • ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಸುವರ್ಣ ಅವಕಾಶ
Bank Recruitment 2024: SVC ಬ್ಯಾಂಕಿನಲ್ಲಿ ಉದ್ಯೋಗಾವಕಾಶ, ಇಂದೇ ಅರ್ಜಿ ಸಲ್ಲಿಸಿ title=
Job Openings

SVC Co-operative Bank Recruitment 2024: SVC ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 113 ಬ್ರಾಂಚ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಏಪ್ರಿಲ್ 9 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಹುದ್ದೆಯ ಮಾಹಿತಿ: 2 ಚೀಫ್ ಮ್ಯಾನೇಜರ್, 6 ಕ್ಲಸ್ಟರ್ ಮ್ಯಾನೇಜರ್, 10 ಬ್ರಾಂಚ್ ಮ್ಯಾನೇಜರ್, 3 ರೀಜನಲ್ ಮ್ಯಾನೇಜರ್, 15 ಸೇಲ್ಸ್ ಮ್ಯಾನೇಜರ್, 7 ಮ್ಯಾನೇಜರ್/ಅಸಿಸ್ಟೆಂಟ್ ಮ್ಯಾನೇಜರ್ ಇನ್​ಸ್ಟಿಟ್ಯೂಶನಲ್ ಸೇಲ್ಸ್​, 20 ಅಸಿಸ್ಟೆಂಟ್ ಮ್ಯಾನೇಜರ್ ಮತ್ತು  50 ಕಸ್ಟಮರ್ ಸರ್ವೀಸ್ ಆಫೀಸರ್ ಹುದ್ದೆಗಳು ಖಾಲಿ ಇವೆ.

ಇದನ್ನೂ ಓದಿ: ಕ್ರಿಮಿನಲ್‌ಗಳ ಅಂತ್ಯಸಂಸ್ಕಾರ ಗ್ಯಾರಂಟಿ: ಯೋಗಿ ಆದಿತ್ಯನಾಥ್‌ ಖಡಕ್‌ ಎಚ್ಚರಿಕೆ!

ವಿದ್ಯಾರ್ಹತೆ: ಚೀಫ್ ಮ್ಯಾನೇಜರ್‌ಗೆ CA ಅಥವಾ ICWA, CFA, ಎಂಬಿಎ, ಪದವಿ, ಕ್ಲಸ್ಟರ್ ಮ್ಯಾನೇಜರ್‌ಗೆ CA ಅಥವಾ ICWA, CFA, ಎಂಬಿಎ, ಪದವಿ, ಬ್ರಾಂಚ್ ಮ್ಯಾನೇಜರ್‌ಗೆ CA ಅಥವಾ ICWA, CFA, ಎಂಬಿಎ, ರೀಜನಲ್ ಮ್ಯಾನೇಜರ್‌ಗೆ CA ಅಥವಾ ICWA, CFA, ಎಂಬಿಎ, ಸೇಲ್ಸ್ ಮ್ಯಾನೇಜರ್‌ಗೆ CA ಅಥವಾ ICWA, CFA, ಎಂಬಿಎ, ಮ್ಯಾನೇಜರ್/ಅಸಿಸ್ಟೆಂಟ್ ಮ್ಯಾನೇಜರ್‌ ಇನ್​ಸ್ಟಿಟ್ಯೂಶನಲ್ ಸೇಲ್ಸ್‌ಗೆ CA ಅಥವಾ ICWA, CFA, ಎಂಬಿಎ, ಅಸಿಸ್ಟೆಂಟ್ ಮ್ಯಾನೇಜರ್‌ಗೆ CA ಅಥವಾ ICWA, CFA, ಡಿಪ್ಲೊಮಾ, ಪದವಿ, ಬಿ.ಆರ್ಕ್​, ಎಂಬಿಎ ಮತ್ತು ಕಸ್ಟಮರ್ ಸರ್ವೀಸ್ ಆಫೀಸರ್‌ಗೆ ಪದವಿ, ಎಂಬಿಎ ಪೂರ್ಣಗೊಳಿಸಿರಬೇಕು.

ವಯೋಮಿತಿ: ಚೀಫ್ ಮ್ಯಾನೇಜರ್‌ಗೆ 35ರಿಂದ 55 ವರ್ಷ, ಕ್ಲಸ್ಟರ್ ಮ್ಯಾನೇಜರ್‌ಗೆ 35ರಿಂದ 45 ವರ್ಷ, ಬ್ರಾಂಚ್ ಮ್ಯಾನೇಜರ್‌ಗೆ 30ರಿಂದ 45 ವರ್ಷ, ರೀಜನಲ್ ಮ್ಯಾನೇಜರ್‌ಗೆ 35ರಿಂದ 45 ವರ್ಷ, ಸೇಲ್ಸ್ ಮ್ಯಾನೇಜರ್‌ಗೆ 30ರಿಂದ 45 ವರ್ಷ, ಮ್ಯಾನೇಜರ್/ಅಸಿಸ್ಟೆಂಟ್ ಮ್ಯಾನೇಜರ್ ಇನ್​ಸ್ಟಿಟ್ಯೂಶನಲ್ ಸೇಲ್ಸ್‌ಗೆ 30ರಿಂದ 45 ವರ್ಷ, ಅಸಿಸ್ಟೆಂಟ್ ಮ್ಯಾನೇಜರ್‌ಗೆ 30ರಿಂದ 45 ವರ್ಷ ಮತ್ತು ಕಸ್ಟಮರ್ ಸರ್ವೀಸ್ ಆಫೀಸರ್‌ಗೆ 27 ವರ್ಷ

ಉದ್ಯೋಗದ ಸ್ಥಳ: ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ಮಧ್ಯಪ್ರದೇಶ

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?: ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ careers@svcbank.comಗೆ ಕಳುಹಿಸಬೇಕು.

ಇದನ್ನೂ ಓದಿ: West Bengal: ಸ್ಫೋಟದ ತನಿಖೆಗೆ ತೆರಳಿದ್ದ NIA ತಂಡದ ಮೇಲೆ ದಾಳಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News