ಯುವಕರ ಜೀವನಕ್ಕೆ ದಾರಿದೀಪವಾಗಿರುವ ಬೆಂಗಳೂರಿನ ಕುಶಲ ತರಬೇತಿ ಕೇಂದ್ರ

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಭಾರತದ 18 ರಾಜ್ಯಗಳಲ್ಲಿ 95 ಕುಶಲ ತರಬೇತಿ ಕೇಂದ್ರಗಳನ್ನು  ನಡೆಸುತ್ತಿದೆ ಮತ್ತು ಸುಸ್ಥಿರವಾದ ಕ್ಷೇತ್ರಗಳಾದ ಸೌರಶಕ್ತಿಯಂತಹ  ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ಅನೇಕ ಕೇಂದ್ರಗಳು ದೂರದ ಪ್ರದೇಶಗಳಲ್ಲಿ ಮತ್ತು ಭಾರತದ ಈಶಾನ್ಯ ಭಾಗದ ಗಡಿ ಪ್ರದೇಶಗಳ ಹಳ್ಳಿಗಳಲ್ಲಿವೆ. 

Written by - Yashaswini V | Last Updated : Jul 15, 2024, 12:45 PM IST
  • ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಔದ್ಯೋಗಿಕ ತರಬೇತಿ ಕಾರ್ಯಕ್ರಮದಿಂದ ಇದುವರೆಗೂ 200 ಕಾಲೇಜುಗಳ 69,000 ವಿದ್ಯಾರ್ಥಿಗಳಿಗೆ ಲಾಭವಾಗಿದೆ.
  • ಸಂದರ್ಶನದ ಕುಶಲತೆಗಳು, ಆಂಗ್ಲ ಭಾಷೆಯಲ್ಲಿ ತರಬೇತಿ, ವ್ಯಕ್ತಿತ್ವದ ಸುಧಾರಣೆ ಮತ್ತು ತಾಂತ್ರಿಕ ಕುಶಲತೆಗಳ ತರಬೇತಿಯನ್ನು ನೀಡಲಾಗುತ್ತಿದೆ.
  • ಸ್ವ-ಉದ್ದಿಮೆತನದ ತರಬೇತಿಯು ವ್ಯಕ್ತಿಗಳಿಗೆ ವ್ಯಾಪಾರದ ಯೋಜನೆಗಳನ್ನು ಮಾಡಲು, ಮೈಕ್ರೋಫೈನಾನ್ಸ್ ನ ಉಪಯೋಗವನ್ನು ಮಾಡಲು ಸಹಾಯ ಮಾಡುತ್ತದೆ.
ಯುವಕರ ಜೀವನಕ್ಕೆ ದಾರಿದೀಪವಾಗಿರುವ ಬೆಂಗಳೂರಿನ ಕುಶಲ ತರಬೇತಿ ಕೇಂದ್ರ title=

ಕೇವಲ 19 ವರ್ಷ ವಯಸ್ಸಿನ, ಉತ್ತರ ಕರ್ನಾಟಕ ಜಿಲ್ಲೆಯ ಹೊನ್ನಾವರದ ಉಪ್ಪೋಣಿಯ ಭರತ್ ಈಗ ಆರ್ಟ್ ಆಫ್ ಲಿವಿಂಗ್ ನ ಕುಶಲ ತರಬೇತಿ ಕೇಂದ್ರದ ತರಬೇತುದಾರರಾಗಿದ್ದಾರೆ. ಸದಾ  ಏನಾದರೂ ಮಹತ್ತರವಾದುದನ್ನು ಸಾಧಿಸಬೇಕೆಂಬ ಕನಸನ್ನು ಹೊಂದಿರುವ ಭರತ್, ಕೇಂದ್ರದಲ್ಲಿ ಅವರು ಪಡೆದ ತರಬೇತಿಯು ಮೂಲಭೂತ ಚಿಪ್ ಹಂತದ ಮೊಬೈಲ್ ರಿಪೇರಿ, ಸಮಸ್ಯೆಗಳನ್ನು ಕಂಡು ಹಿಡಿಯುವುದು ಮತ್ತು ಸಮಸ್ಯೆಗಳನ್ನು ನಿವಾರಿಸುವುದನ್ನೂ ಒಳಗೊಂಡಿತ್ತು.  ಸ್ವಲ್ಪ ಕಾಲ ಹೊರಗಡೆ ಕೆಲಸ ಮಾಡಿದ ನಂತರ, ಭರತ್ ಈಗ ಕೇಂದ್ರದಲ್ಲಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. 

"ಆರ್ಟ್ ಆಫ್ ಲಿವಿಂಗ್ ನನಗೆ ಈ ಅವಕಾಶ ನೀಡಿದ್ದಕ್ಕಾಗಿ ನಾನು ಬಹಳ ಕೃತಜ್ಞನಾಗಿದ್ದೇನೆ. ನನ್ನೊಡನೆ ತರಬೇತಿ ಪಡೆದ ಇತರರು ಕಂಪನಿಗಳಲ್ಲಿ, ಅವರಿಗೆ ಇಷ್ಟವಿಲ್ಲದಿದ್ದರೂ  ಓವರ್ ಟೈಮ್ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ನಮಗೆ ಸೀಮಿತವಾದ ಕೆಲಸದ ಅವಧಿ ಮಾತ್ರವಿದೆ ಮತ್ತು ಬೆಳೆಯಲು ಅನೇಕ ಅವಕಾಶಗಳಿವೆ" ಎನ್ನುತ್ತಾರೆ ಭರತ್. 

ಭರತ್ ಕೇವಲ ಮೊಬೈಲ್ ದುರಸ್ತಿಯನ್ನು ಮಾತ್ರ ಆರ್ಟ್ ಆಫ್ ಲಿವಿಂಗ್ ನ ಕುಶಲ ಕೇಂದ್ರದಲ್ಲಿ ಕಲಿಯಲಿಲ್ಲ. ಸಂಪರ್ಕದ ಕುಶಲತೆಯನ್ನು ಮತ್ತು ಅಪಾರ ವಿಶ್ವಾಸವನ್ನು ಅವರು ಆರ್ಟ್ ಆಫ್ ಲಿವಿಂಗ್ ನ ಯುವಕ ತರಬೇತಿ ಕಾರ್ಯಕ್ರಮದಲ್ಲಿ (ವೈಎಲ್ಟಿಪಿಯಲ್ಲಿ)  ಪಡೆದರು. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಭರತ್, "ಈ ಕಾರ್ಯಕ್ರಮ ಮಾಡುವ ಮೊದಲು ನನಗೆ ಒಂದು ಗುಂಪಿನ ಎದುರು ನಿಂತು ಮಾತನಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಇತರರಿಗೆ ಕಲಿಸುವುದು ದೂರದ ಮಾತೇ ಆಗಿತ್ತು. ಈಗ ವಿಕೆಐಟಿಯ 70 ವಿದ್ಯಾರ್ಥಿಗಳಿಗೆ, ಅವರ ಬೇಸಿಗೆಯ ರಜೆಯಲ್ಲಿ  ತರಬೇತಿಯನ್ನು ನೀಡಿದ್ದೇನೆ" ಎಂದು ಸ್ಮರಿಸಿಕೊಳ್ಳುತ್ತಾರೆ. 

ಭರತ್ ರವರ ಪಯಣವು ಇತರರಿಗೂ ಸ್ಫೂರ್ತಿಯಾಗಿದೆ. ಅವರ ಅನೇಕ ವಿದ್ಯಾರ್ಥಿಗಳು ಈಗ ತಮ್ಮದೇ ಸ್ವಂತ ಬಿಸಿನೆಸ್  ಆರಂಭಿಸಿದ್ದಾರೆ.  ಇವರಲ್ಲಿ ಮೂವರು ತಮ್ಮ ಅಂಗಡಿಯ ಉದ್ಘಾಟನೆಗೂ ಆಹ್ವಾನಿಸಿದ್ದರು. ಇದು ಅವರಿಗೆ ಅಪಾರ ಹೆಮ್ಮೆಯ ಮತ್ತು ಕೃತಜ್ಞತೆಯ ವಿಷಯವಾಗಿದೆ. ಸಂಕೋಚ ಸ್ವಭಾವವುಳ್ಳ ಗ್ರಾಮೀಣ ಹುಡುಗನಿಂದ ಬೆಂಗಳೂರಿನ ವಿಶ್ವಾಸವುಳ್ಳ ತರಬೇತುದಾರರಾಗಿ ಭರತ್ ರವರ ಪಯಣವು ಆರ್ಟ್ ಆಫ್ ಲಿವಿಂಗ್ ನ ಕುಶಲ ಕೇಂದ್ರದ ಯಶಸ್ಸಾಗಿದೆ.   

ಮತ್ತೊಂದು ಸ್ಫೂರ್ತಿದಾಯಕವಾದ  ಕಥೆಯೆಂದರೆ 19 ವರ್ಷ ವಯಸ್ಸಿನ, ಕಾಶ್ಮೀರದ ಪೂಂಚ್ ಪ್ರದೇಶದ ಇರ್ಫಾನಿನ ಕಥೆ. ಭಯೋತ್ಪಾದಕರ ದಾಳಿಯು ಸರ್ವೇಸಾಮಾನ್ಯವಾದ ಪ್ರದೇಶದಲ್ಲಿ ಬೆಳೆದ ಇರ್ಫಾನ್, ನಿಯಂತ್ರಣ ರೇಖೆಯ (ಎಲ್ ಓಸಿಯ) ಪ್ರದೇಶದಲ್ಲಿ ಜೀವಿಸುತ್ತಾ ನಿತ್ಯ ತನ್ನ ಹಾಗೂ ತನ್ನ ಕುಟುಂಬದವರ ಸುರಕ್ಷತೆಗಾಗಿ ಭಯ ಪಡುತ್ತಾ ಜೀವಿಸುತ್ತಿದ್ದರು. ಸರ್ಜಿಕಲ್ ಸ್ಟ್ರೈಕ್ ನಡೆದ  ಸಮಯದಲ್ಲಿ ಅವರು 10 ನೆಯ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇರ್ಫಾನ್, ಈ ಸಮಯವು ಒಂದು ಭೂಕಂಪವಾದಂತಿತ್ತು. ದೂರದ ಬಾಂಬ್ ದಾಳಿಯು ಅವರ ಭೀತಿಯನ್ನು, ಆತಂಕವನ್ನು ಹೆಚ್ಚಿಸಿತ್ತು ಎಂದು ತಮ್ಮ  ಅನುಭವವನ್ನು ಹಂಚಿಕೊಂಡಿದ್ದಾರೆ. 

ಈ ನಿರಂತರವಾದ ಭಯವು ತನ್ನ ಆತ್ಮವಿಶ್ವಾಸವನ್ನು ಕುಗ್ಗಿಸಿತ್ತು ಎಂದಿರುವ ಇರ್ಫಾನ್,  ಭಾರತೀಯ ಸೇನೆಯು ಆರ್ಟ್ ಆಫ್ ಲಿವಿಂಗ್ ನ ವೈಎಲ್ಟಿಪಿ ಕಾರ್ಯಕ್ರಮವನ್ನು ಪೂಂಚ್ ನಲ್ಲಿ ನಡೆಸಿದಾಗ ತಮ್ಮ ಜೀವನವೇ ಬದಲಾಯಿತು ಎಂದಿದ್ದಾರೆ. ಇತರ 50 ಯುವಕರೊಡನೆ ಇರ್ಫಾನ್ ಈ ತರಬೇತಿಯಲ್ಲಿ ಪಾಲ್ಗೊಂಡರು. ತರಬೇತಿಯ ಸ್ಥಳದಿಂದ 2 ಕಿಲೋಮೀಟರ್ ದೂರದಲ್ಲಿ ಭಾರತೀಯ ಸೇನೆಯ ಮೇಲೆ ದಾಳಿ ಮಾಡಿದಾಗ ಎರಡು ದಿವಸಗಳು ತರಬೇತಿಯು ತಡವಾಯಿತು. ತರಬೇತಿಯು ಯಶಸ್ವಿಯಾಗಿ ಮುಗಿದ ನಂತರ ಇರ್ಫಾನಿಗೆ ತಮ್ಮ ಭಯ ಮತ್ತು ಆತಂಕವನ್ನು ಎದುರಿಸಲು ಸಾಧ್ಯವಾಯಿತು. ಇದರ ನಂತರ ಅನೇಕ ಆರ್ಟ್ ಆಫ್ ಲಿವಿಂಗ್ ನ ಧ್ಯಾನದ ಕಾರ್ಯಕ್ರಮಗಳನ್ನು ಮಾಡಿದ ನಂತರ ಅವರ ಶಕ್ತಿಯ ಮಟ್ಟ ಮತ್ತು ವಿಶ್ವಾಸವು ಅಪಾರವಾಗಿ ಹೆಚ್ಚಿತು. ತಮ್ಮ 17 ನೆಯ ವಯಸ್ಸಿನಲ್ಲಿ ಇರ್ಫಾನ್ ಆರ್ಟ್ ಆಫ್ ಲಿವಿಂಗ್ ನ ಕುಶಲ ತರಬೇತಿ ಕೇಂದ್ರಕ್ಕೆ ಬರಲು ನಿರ್ಧರಿಸಿದರು. ಬಾಷ್ ನ ಔದ್ಯೋಗಿಕ ತರಬೇತಿ ಕೇಂದ್ರದಲ್ಲಿ ಮೊಬೈಲ್ ರಿಪೇರಿಯನ್ನು ಕಲಿತರು. ಇಂದು ಇರ್ಫಾನ್ ಸಿಂಪ್ಲಿ ನಾಮ್ ಧಾರೀಸ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು 13,000 ರೂ. ಸಂಬಳವನ್ನು ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ಹಣದಲ್ಲಿ  ಪ್ರತಿ ತಿಂಗಳೂ 7,000 ರೂ.ಗಳನ್ನು ಕೂಡಿಡುತ್ತಿರುವುದಾಗಿ ತಿಳಿಸಿದ್ದಾರೆ.          

ಭರತ್ ಮತ್ತು ಇರ್ಫಾನ್ ರಂತೆ ಇತರ ಅನೇಕ ಯುವಕರು ಬೆಂಗಳೂರಿನ ಕುಶಲ ತರಬೇತಿ ಕೇಂದ್ರದಿಂದ ಲಾಭವನ್ನು ಪಡೆದಿದ್ದಾರೆ. ಗುರುದೇವ್ ಶ್ರೀ ಶ್ರೀ ರವಿಶಂಕರರಿಂದ ಸ್ಥಾಪಿತವಾದ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮವು (ಎಸ್ ಎಸ್ ಆರ್ಡಿಪಿ) ಅನೇಕ ಸಂಸ್ಥೆಗಳೊಡನೆ ಸಹಕಾರದ ಒಪ್ಪಂದವನ್ನು ಮಾಡಿಕೊಂಡು, ಯುವಕರಿಗೆ ವಿವಿಧ ಕುಶಲತೆಗಳ ತರಬೇತಿಯನ್ನು ನೀಡಿ ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ, ಸುಸ್ಥಿರವಾದ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.      

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಭಾರತದ 18 ರಾಜ್ಯಗಳಲ್ಲಿ 95 ಕುಶಲ ತರಬೇತಿ ಕೇಂದ್ರಗಳನ್ನು  ನಡೆಸುತ್ತಿದೆ ಮತ್ತು ಸುಸ್ಥಿರವಾದ ಕ್ಷೇತ್ರಗಳಾದ ಸೌರಶಕ್ತಿಯಂತಹ  ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ಅನೇಕ ಕೇಂದ್ರಗಳು ದೂರದ ಪ್ರದೇಶಗಳಲ್ಲಿ ಮತ್ತು ಭಾರತದ ಈಶಾನ್ಯ ಭಾಗದ ಗಡಿ ಪ್ರದೇಶಗಳ ಹಳ್ಳಿಗಳಲ್ಲಿವೆ. 

16 ಕಾರಾಗೃಹಗಳಲ್ಲಿ ಕೈದಿಗಳಿಗಾಗಿ ಕುಶಲ ತರಬೇತಿ: 
ಕೈದಿಗಳ ಕುಶಲ ತರಬೇತಿ ಕಾರ್ಯಕ್ರಮಗಳು 16 ಕಾರಾಗೃಹಗಳಲ್ಲಿ ನಡೆಯುತ್ತಿವೆ. ಈ ಕೇಂದ್ರಗಳ ವೈಶಿಷ್ಟ್ಯತೆಯೆಂದರೆ, ಕೈದಿಗಳಿಗೆ ಔದ್ಯೋಗಿಕ ತರಬೇತಿಯನ್ನು  ನೀಡುವುದರೊಡನೆ, ತರಬೇತುದಾರರಿಗೆ ಜೀವನ ಕುಶಲತೆಗಳನ್ನು ನೀಡಿ, ಧ್ಯಾನ ಮತ್ತು ಪ್ರಾಣಾಯಾಮವನ್ನೂ ಬೋಧಿಸಿ, ಅವರ ಜೀವನಗಳ ಸವಾಲುಗಳನ್ನು ಎದುರಿಸುವ ಸ್ಥೈರ್ಯವನ್ನು ನೀಡಿ, ಅವರ ಜೀವನಗಳನ್ನೂ ಪರಿವರ್ತಿಸುತ್ತದೆ. 

ತನ್ನ ಅನೇಕ ಕಾರ್ಯಕ್ರಮಗಳ ಮೂಲಕ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಕೇವಲ ಕುಶಲತೆಗಳನ್ನು ಬೋಧಿಸದೆ, ಜೀವನಗಳನ್ನು ಪರಿವರ್ತಿಸಿ, ಸಕಾರಾತ್ಮಕವಾದ ಸಾಮಾಜಿಕ-ಆರ್ಥಿಕ ಪರಿವರ್ತನೆಯನ್ನೂ ತರುತ್ತಿದೆ. ಉದಾಹರಣೆಗೆ, ಔದ್ಯೋಗಿಕ ತರಬೇತಿ ಕಾರ್ಯಕ್ರಮದಿಂದ ಇದುವರೆಗೂ 200 ಕಾಲೇಜುಗಳ 69,000 ವಿದ್ಯಾರ್ಥಿಗಳಿಗೆ ಲಾಭವಾಗಿದೆ.  ಸಂದರ್ಶನದ ಕುಶಲತೆಗಳು, ಆಂಗ್ಲ ಭಾಷೆಯಲ್ಲಿ ತರಬೇತಿ, ವ್ಯಕ್ತಿತ್ವದ ಸುಧಾರಣೆ ಮತ್ತು ತಾಂತ್ರಿಕ ಕುಶಲತೆಗಳ ತರಬೇತಿಯನ್ನು ನೀಡಲಾಗುತ್ತಿದೆ. ಸ್ವ-ಉದ್ದಿಮೆತನದ ತರಬೇತಿಯು ವ್ಯಕ್ತಿಗಳಿಗೆ ವ್ಯಾಪಾರದ ಯೋಜನೆಗಳನ್ನು ಮಾಡಲು, ಮೈಕ್ರೋಫೈನಾನ್ಸ್ ನ ಉಪಯೋಗವನ್ನು ಮಾಡಲು ಸಹಾಯ ಮಾಡುತ್ತದೆ. ಕುಶಲತೆಗಳ ಅಭಾವವನ್ನು ಕಂಡುಹಿಡಿಯಲು ಸಮೀಕ್ಷೆಗಳನ್ನು ನಡೆಸುತ್ತದೆ, ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಸುತ್ತದೆ, 

ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ವನ್ ಧನ್ ವಿಕಾಸ್ ಯೋಜನೆಯನ್ನು ನಡೆಸುತ್ತಿದೆ. ಇದರೊಡನೆ ಆಪ್ತ ಸಲಹೆಯ ಮೂಲಕ ಯುವಕರ ಸಾಮರ್ಥ್ಯಗಳನ್ನು  ಗುರುತಿಸಿ, ಅವರಿಗೆ ಉದ್ಯೋಗಾವಕಾಶಗಳನ್ನು  ಗುರುತಿಸುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ www.artofliving.org ಲಾಗ್ ಆನ್ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News