ಕಡಿಮೆ ಅವಧಿಯಲ್ಲಿ ಹಣವೂ ದ್ವಿಗುಣ ಬಡ್ಡಿದರವೂ ಹೆಚ್ಚು ! ಅಂಚೆ ಕಚೇರಿಯ ಹೊಸ ಸ್ಕೀಮ್

Post Office Scheme:ಪೋಸ್ಟ್ ಆಫೀಸ್ ನ ಹೊಸ ಸ್ಕೀಮ್ ನಲ್ಲಿ ಕೇವಲ 120  ತಿಂಗಳುಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ಈ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ ಯೋಜನೆ. 

Written by - Ranjitha R K | Last Updated : Feb 22, 2023, 10:26 AM IST
  • ಪೋಸ್ಟ್ ಆಫೀಸ್ ಸ್ಕೀಮ್ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತದೆ.
  • ಇಲ್ಲಿ ಹಣ ಹೂಡುವ ಮೂಲಕ ಅಧಿಕ ಲಾಭವನ್ನು ಪಡೆಯಬಹುದು.
  • 120 ತಿಂಗಳುಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು.
ಕಡಿಮೆ ಅವಧಿಯಲ್ಲಿ ಹಣವೂ ದ್ವಿಗುಣ ಬಡ್ಡಿದರವೂ ಹೆಚ್ಚು ! ಅಂಚೆ ಕಚೇರಿಯ ಹೊಸ ಸ್ಕೀಮ್  title=

Post Office Scheme: ಪೋಸ್ಟ್ ಆಫೀಸ್ ಸ್ಕೀಮ್ ತನ್ನ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಇಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುವ ಮೂಲಕ ಸಾರ್ವಜನಿಕರು ಅಧಿಕ ಲಾಭವನ್ನು ಪಡೆಯಬಹುದು. ಪೋಸ್ಟ್ ಆಫೀಸ್ ನ ಹೊಸ ಸ್ಕೀಮ್ ನಲ್ಲಿ  ಕೇವಲ 120  ತಿಂಗಳುಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ಈ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ ಯೋಜನೆ. ಈ ಯೋಜನೆಯ ಬಡ್ಡಿದರಗಳನ್ನು ಕೂಡಾ ಹೆಚ್ಚಿಸಲಾಗಿದೆ. 

ಅಂಚೆ ಕಚೇರಿಯ ಈ ಹೊಸ ಯೋಜನೆ ಯಾವುದು? :
ಅಂಚೆ ಕಚೇರಿಯ ಒಂದು ಮಹತ್ತರವಾದ ಯೋಜನೆಯನ್ನು ಹೊರತಂದಿದೆ. ಇದರಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಹಣವನ್ನು ದ್ವಿಗುಣಗೊಳಿಸಬಹುದು. ಈ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ ಯೋಜನೆ. ಈ ಯೋಜನೆಯಲ್ಲಿ, ನಿಮ್ಮ ಹಣವು 120 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ. ಇದರಲ್ಲಿ ಶೇಕಡಾ 7.20 ರವರೆಗೆ ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಶೇಕಡಾ 7.2 ಬಡ್ಡಿ ಸಿಗುತ್ತದೆ.  

ಇದನ್ನೂ ಓದಿ : LIC ಪಾಲಿಸಿದಾರರೆ ಮಾರ್ಚ್ 24 ರೊಳಗೆ ಈ ಕೆಲಸ ಮಾಡಿ, ಇಲ್ಲದಿದ್ದರೆ ಭಾರಿ ನಷ್ಟ

ಯೋಜನೆಯಲ್ಲಿ ಹಣವನ್ನು ದ್ವಿಗುಣಗೊಳಿಸುವುದು ಹೇಗೆ ? :
ಈ ಯೋಜನೆಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, 120 ತಿಂಗಳುಗಳಲ್ಲಿ 7.2 ಶೇಕಡಾ ಬಡ್ಡಿಯನ್ನು ಪಡೆಯುತ್ತೀರಿ. ಅಲ್ಲದೆ ನೀವು ಹೂಡಿಕೆ ಮಾಡಿದ ಹಣವು 120 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ. 10 ಲಕ್ಷ ರೂಪಾಯಿಗಳೆಂದರೆ ನಿಮ್ಮ ಕೈಗೆ 20 ಲಕ್ಷ ರೂಪಾಯಿ  ಸೇರುತ್ತದೆ. 

ಖಾತೆಯನ್ನು ತೆರೆಯುವುದು ಹೇಗೆ ? :
ಈ ಯೋಜನೆಯಲ್ಲಿ, 10 ವರ್ಷಗಳ ನಂತರವೂ ಖಾತೆಯನ್ನು ಮುಂದುವರೆಸಬಹುದು. ಇದಕ್ಕಾಗಿ ಅಂಚೆ ಕಚೇರಿಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಬೇಕು. ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಹೂಡಿಕೆಯನ್ನು ಠೇವಣಿ ಮಾಡಬೇಕು. ಇಲ್ಲಿ ನಿಮ್ಮ ಗುರುತಿನ ಚೀಟಿಯನ್ನು  ಹಾಕಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ತಕ್ಷಣ ಕಿಸಾನ್ ವಿಕಾಸ್ ಪ್ರಮಾಣಪತ್ರ ನಿಮಗೆ ಸಿಗುತ್ತದೆ. 

ಇದನ್ನೂ ಓದಿ : Wheat Price : ಗೋಧಿ ಮತ್ತು ಅದರ ಹಿಟ್ಟಿನ ಬೆಲೆಯ ಬಗ್ಗೆ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News