Aadhaar Card: ನಿಮ್ಮ ಮೊಬೈಲ್ ಸಂಖ್ಯೆ ಬದಲಾಗಿದೆಯೇ- ತಕ್ಷಣವೇ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿ

Aadhaar Card Update Correction: ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಬದಲಾಗಿದ್ದರೆ, ಈ ಸುದ್ದಿ ನಿಮಗಾಗಿ ಮುಖ್ಯವಾಗಿದೆ. ನಿಮ್ಮ ಹೊಸ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಹೇಗೆ ಲಿಂಕ್ ಮಾಡುವುದು ಎಂದು ತಿಳಿಯಿರಿ.

Last Updated : Apr 7, 2022, 04:47 PM IST
  • ಆಧಾರ್ ಕಾರ್ಡ್‌ನೊಂದಿಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವುದು ಬಹಳ ಮುಖ್ಯ
  • ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡದಿರುವುದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
  • ಆಧಾರ್‌ನಲ್ಲಿ ಹೊಸ ಫೋನ್ ಸಂಖ್ಯೆಯನ್ನು ಹೇಗೆ ನವೀಕರಿಸುವುದು ಎಂದು ತಿಳಿಯಿರಿ
Aadhaar Card: ನಿಮ್ಮ ಮೊಬೈಲ್ ಸಂಖ್ಯೆ ಬದಲಾಗಿದೆಯೇ- ತಕ್ಷಣವೇ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿ   title=
Aadhaar Mobile Update

Aadhaar Card Update Correction: ಇಂದಿನ ಕಾಲದಲ್ಲಿ, ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಪ್ರತಿಯೊಂದು ಸರ್ಕಾರಿ ಕೆಲಸದಲ್ಲೂ ಆಧಾರ್ ಕಾರ್ಡ್ ಅಗತ್ಯ ದಾಖಲೆಯಾಗಿದೆ. ಇದರೊಂದಿಗೆ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಸಹ ಅಗತ್ಯವಾಗಿದೆ. ಯಾವುದೇ ಹಣಕಾಸಿನ ವಹಿವಾಟಿನ ಪರಿಶೀಲನೆಗಾಗಿ, OTP ನಿಮ್ಮ ಆಧಾರ್ ಲಿಂಕ್ ಸಂಖ್ಯೆಗೆ ಮಾತ್ರ ಬರುತ್ತದೆ. ಆದ್ದರಿಂದ, ನಿಮ್ಮ  ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಯುಐಡಿಎಐ ವೆಬ್‌ಸೈಟ್‌ನಲ್ಲಿ ನೋಂದಾಯಿಸಬೇಕು.

ಆಧಾರ್‌ಗೆ ಲಿಂಕ್ ಮಾಡಲಾದ ಸಂಖ್ಯೆಯನ್ನು ಹೇಗೆ ಬದಲಾಯಿಸುವುದು?
mAadhaar ಅಪ್ಲಿಕೇಶನ್ ಇನ್‌ಸ್ಟಾಲ್‌ಗಾಗಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಮೊದಲು ಕೇಳಲಾಗುತ್ತದೆ. ಆದರೆ ನಿಮ್ಮ ಮೊಬೈಲ್ ಸಂಖ್ಯೆ ಬದಲಾಗಿದ್ದರೆ, ನೀವು ಆಧಾರ್ ಪರಿಶೀಲನೆಗಾಗಿ OTP ಅನ್ನು ಪಡೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಬದಲಾಯಿಸುವುದು  (Update Mobile Number in Aadhaar Card)  ಅವಶ್ಯಕ. ನಿಮ್ಮ ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ನೀವು ಲಿಂಕ್ ಮಾಡಬಹುದು. ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆಯು ಸರಳವಾಗಿದೆ. 

ಇದನ್ನೂ ಓದಿ-  UIDAI ಹೊಸ ನಿಯಮ : ವಿಳಾಸ ಪುರಾವೆ ಇಲ್ಲದೆಯೂ Aadhaar Card ಪಡೆಯಬಹುದು! 

ಆಧಾರ್ ನೋಂದಣಿ ಕೇಂದ್ರವನ್ನು ಸಂಪರ್ಕಿಸಬೇಕು:
ನಿಮ್ಮ ಮೊಬೈಲ್ ಸಂಖ್ಯೆ ಮುಚ್ಚಿದ್ದರೆ, ಕಳೆದುಹೋಗಿದ್ದರೆ ಅಥವಾ ಬದಲಾಯಿಸಿದ್ದರೆ ಮತ್ತು ನೀವು ಆಧಾರ್ ಕಾರ್ಡ್ ಜೊತೆಗೆ ಇನ್ನೊಂದು ಸಂಖ್ಯೆಯನ್ನು ಲಿಂಕ್  (How to Link your number with aadhaar) ಮಾಡಲು ಬಯಸಿದರೆ, ಇದಕ್ಕಾಗಿ ನೀವು ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಬೇಕು. ನೀವು ಮೊದಲು ನೋಂದಾಯಿಸಿಕೊಳ್ಳಬೇಕು.

ಇದನ್ನೂ ಓದಿ- Aadhaar Card: ಮಿಸ್ ಆಗಿ ಕೂಡ ನಿಮ್ಮ ಆಧಾರ್-ಪ್ಯಾನ್ ಕಾರ್ಡ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

ಆಧಾರ್‌ನಲ್ಲಿ ಹೊಸ ಫೋನ್ ಸಂಖ್ಯೆಯನ್ನು ನವೀಕರಿಸುವುದು ಹೇಗೆ ?
1. ಇದಕ್ಕಾಗಿ ನೀವು ಮೊದಲು ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಿ.
2. ಇಲ್ಲಿ ನಿಮಗೆ ಫೋನ್ ಸಂಖ್ಯೆಯನ್ನು ಲಿಂಕ್ ಮಾಡಲು ಫಾರ್ಮ್ ಅನ್ನು ನೀಡಲಾಗುತ್ತದೆ. 
3. ಈ ಫಾರ್ಮ್ ಅನ್ನು 'ಆಧಾರ್ ತಿದ್ದುಪಡಿ ನಮೂನೆ' ಎಂದು ಕರೆಯಲಾಗುತ್ತದೆ. ಅದರಲ್ಲಿ ನಿಮ್ಮ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ. 
4. ಈಗ ಭರ್ತಿ ಮಾಡಿದ ನಮೂನೆಯನ್ನು ರೂ.25 ಶುಲ್ಕದೊಂದಿಗೆ ಆಧಾರ್ ಕೇಂದ್ರದಲ್ಲಿರುವ ಅಧಿಕಾರಿಗೆ ಸಲ್ಲಿಸಿ.
5. ಇದರ ನಂತರ ನಿಮಗೆ ಸ್ಲಿಪ್ ನೀಡಲಾಗುವುದು. ಈ ಸ್ಲಿಪ್ ನವೀಕರಣ ವಿನಂತಿ ಸಂಖ್ಯೆಯನ್ನು ಹೊಂದಿರುತ್ತದೆ. ಈ ವಿನಂತಿ ಸಂಖ್ಯೆಯೊಂದಿಗೆ, ಹೊಸ ಫೋನ್ ಸಂಖ್ಯೆಯನ್ನು ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬಹುದು. 
6. ಮೂರು ತಿಂಗಳಲ್ಲಿ ನಿಮ್ಮ ಆಧಾರ್ ಅನ್ನು ಹೊಸ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗುತ್ತದೆ. ನಿಮ್ಮ ಆಧಾರ್ ಅನ್ನು ಹೊಸ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿದ ನಂತರ OTP ಅದೇ ಸಂಖ್ಯೆಗೆ ಬರುತ್ತದೆ. 
7. ಆ OTP ಬಳಸಿ, ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು.
8. UIDAI ನ ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡುವ ಮೂಲಕ ನೀವು ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಸ್ಥಿತಿಯನ್ನು ಸಹ ತಿಳಿದುಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News