EPFO Rules: ಇಪಿಎಫ್ಒಗೆ ಸಂಬಂಧಿಸಿದ ಈ ಅಗತ್ಯವಾದ ನಿಯಮಗಳನ್ನು ತಪ್ಪದೇ ತಿಳಿಯಿರಿ

EPFO Rules: ನಿವೃತ್ತಿ ಬಳಿಕ ಉತ್ತಮ ಹಣ ಪಡೆಯಲು ಭವಿಷ್ಯ ನಿಧಿಗಿಂತ ಉತ್ತಮ ಹೂಡಿಕೆ ಆಯ್ಕೆಗಳಿಲ್ಲ. ಏಕೆಂದರೆ, ಇಪಿಎಫ್‌ನಲ್ಲಿ ಹೂಡಿಕೆ ಮಾಡುವವರು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ.

Written by - Yashaswini V | Last Updated : Jun 26, 2021, 11:55 AM IST
  • ನಿವೃತ್ತಿಯ ನಂತರ ಪಿಎಫ್ ಹಿಂತೆಗೆದುಕೊಳ್ಳುವಾಗ ಕಾಳಜಿ ವಹಿಸಿ
  • ಉದ್ಯೋಗದಾತ ಇಪಿಎಫ್‌ನಲ್ಲಿ ಠೇವಣಿ ಇಟ್ಟಿರುವ ಮೊತ್ತದ ಕೆಲವು ಭಾಗವೂ ಪಿಂಚಣಿ ನಿಧಿಗೆ ಹೋಗುತ್ತದೆ
  • ನಿವೃತ್ತಿಯ ಮೊದಲು ಪಿಎಫ್ ಖಾತೆಯಿಂದ ಹಣ ಹಿಂಪಡೆಯದಿದ್ದರೆ, ನೀವು ಪಿಂಚಣಿ ಪ್ರಯೋಜನವನ್ನು ಸಹ ಪಡೆಯುತ್ತೀರಿ
EPFO Rules: ಇಪಿಎಫ್ಒಗೆ ಸಂಬಂಧಿಸಿದ ಈ ಅಗತ್ಯವಾದ ನಿಯಮಗಳನ್ನು ತಪ್ಪದೇ ತಿಳಿಯಿರಿ  title=
ಪಿಎಫ್ ಹಣವನ್ನು ಹಿಂಪಡೆಯುವ ಮೊದಲು ಈ ನಿಯಮಗಳ ಬಗ್ಗೆ ಒಮ್ಮೆ ತಿಳಿಯಿರಿ

ನವದೆಹಲಿ: EPFO Rules- ನಿವೃತ್ತಿ ಬಳಿಕ ಉತ್ತಮ ಹಣ ಪಡೆಯಲು ಭವಿಷ್ಯ ನಿಧಿಗಿಂತ ಉತ್ತಮ ಹೂಡಿಕೆ ಆಯ್ಕೆಗಳಿಲ್ಲ. ಏಕೆಂದರೆ, ಇಪಿಎಫ್‌ನಲ್ಲಿ ಹೂಡಿಕೆ ಮಾಡುವವರು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಮೊದಲ ಪ್ರಯೋಜನವೆಂದರೆ 1.5 ಲಕ್ಷ ರೂ.ವರೆಗಿನ ಹೂಡಿಕೆಗಳ ಮೇಲಿನ ಆದಾಯ ತೆರಿಗೆಯಲ್ಲಿ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ. ಅಲ್ಲದೆ ಒಳ್ಳೆಯ ಬಡ್ಡಿದರ ಕೂಡ ಲಭ್ಯವಿದೆ.

ಪ್ರಸ್ತುತ, ಇಪಿಎಫ್ ಹೂಡಿಕೆಯ ಮೇಲೆ ಶೇಕಡಾ 8.50 ರಷ್ಟು ಬಡ್ಡಿ ಪಡೆಯಲಾಗುತ್ತಿದೆ. ಬಡ್ಡಿಯನ್ನು ಒಟ್ಟುಗೂಡಿಸುವ ಪ್ರಯೋಜನವೂ ಇದೆ. ಸರಳವಾಗಿ ಹೇಳುವುದಾದರೆ, ಹೆಚ್ಚಿನ ಹೂಡಿಕೆಗೆ ಮೇಲೆ ಅಧಿಕ ಬಡ್ಡಿ ಲಭ್ಯವಾಗುತ್ತದೆ. ಆದರೆ, ಜನರು ಸಾಮಾನ್ಯವಾಗಿ ಉದ್ಯೋಗಗಳನ್ನು ಬದಲಾಯಿಸಿದ ನಂತರ ಪಿಎಫ್ (PF) ಹಣವನ್ನು ಹಿಂತೆಗೆದುಕೊಳ್ಳುತ್ತಾರೆ ಅಥವಾ ಅಗತ್ಯವಿದ್ದಾಗ ಹೂಡಿಕೆಯನ್ನು ಹಿಂಪಡೆಯುತ್ತಾರೆ. ಹಾಗೆ ಮಾಡುವುದರಿಂದ ನಿಮಗೆ ಕೆಲವು ನಷ್ಟ ಸಂಭವಿಸಬಹುದು.

ನಿವೃತ್ತಿ ನಿಧಿ ತೆರಿಗೆ ಮುಕ್ತವಾಗಿರುತ್ತದೆ:
ಇಪಿಎಫ್‌ಒ ನಿಯಮದಂತೆ (EPFO Rules), ನೀವು ಕೆಲಸದ ಸಮಯದಲ್ಲಿ ಪಿಎಫ್ ಹಣವನ್ನು ಎಂದಿಗೂ ಹಿಂತೆಗೆದುಕೊಳ್ಳದಿದ್ದರೆ, ನಿವೃತ್ತಿಯ ಸಮಯದಲ್ಲಿ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಮೊದಲಿಗೆ, ನಿವೃತ್ತಿಗಾಗಿ ಉತ್ತಮ ಮೊತ್ತವನ್ನು ಜಮಾ ಮಾಡಲಾಗುತ್ತದೆ. ನಿರಂತರ ಸಂಯುಕ್ತ ಬಡ್ಡಿಯ ಲಾಭವನ್ನು ನೀವು ಪಡೆಯುತ್ತೀರಿ. ಅದೇ ಸಮಯದಲ್ಲಿ, ನಿವೃತ್ತಿಯ ನಂತರ ಪಡೆದ ನಿಧಿಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಆದರೆ, ನಿವೃತ್ತಿಯ ಮೊದಲು ಯಾವುದೇ ವಾಪಸಾತಿ ಪಡೆದಿರಬಾರದು ಎಂಬುದನ್ನು ನೆನಪಿನಲ್ಲಿಡಬೇಕು.

ಇದನ್ನೂ ಓದಿ-  SMS ಮೂಲಕ 'PF' ಖಾತೆ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಪಿಂಚಣಿ ಪ್ರಯೋಜನಗಳು:
ನಿವೃತ್ತಿಯ ಮೊದಲು ಪಿಎಫ್ ಖಾತೆಯಿಂದ ಹಣ ಹಿಂಪಡೆಯದಿದ್ದರೆ, ನೀವು ಪಿಂಚಣಿ  (EPS-Pension) ಪ್ರಯೋಜನವನ್ನು ಸಹ ಪಡೆಯುತ್ತೀರಿ. ಇಪಿಎಫ್‌ಒದ ಇಪಿಎಸ್-ನೌಕರರ ಪಿಂಚಣಿ ಯೋಜನೆ (Employee Pension Scheme) ಅಡಿಯಲ್ಲಿ ನೀವು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಪಿಂಚಣಿಯಾಗಿ ಪಡೆಯುತ್ತೀರಿ. ವಾಸ್ತವವಾಗಿ, ನಿಯಮಗಳ ಪ್ರಕಾರ, ಇಪಿಎಫ್ ಖಾತೆಯು ಯಾವುದೇ ವಾಪಸಾತಿ ಇಲ್ಲದೆ 10 ವರ್ಷಗಳವರೆಗೆ ನಡೆಯುತ್ತಿದ್ದರೆ, ಅಂತಹ ಸದಸ್ಯರಿಗೆ ಪಿಂಚಣಿಯ ಲಾಭ ದೊರೆಯುತ್ತದೆ.  ಉದ್ಯೋಗದಾತ ಇಪಿಎಫ್‌ನಲ್ಲಿ ಠೇವಣಿ ಇಟ್ಟಿರುವ ಮೊತ್ತದ ಕೆಲವು ಭಾಗವೂ ಪಿಂಚಣಿ ನಿಧಿಗೆ ಹೋಗುತ್ತದೆ. 58 ವರ್ಷಗಳ ನಂತರ ಈ ಪಿಂಚಣಿ ನಿಧಿಯಿಂದ ಪಿಂಚಣಿ ಸಿಗಲಿದೆ.

ನಿವೃತ್ತಿಯ ನಂತರ ಪಿಎಫ್ ಹಿಂತೆಗೆದುಕೊಳ್ಳುವಾಗ ಕಾಳಜಿ ವಹಿಸಿ:
ನೀವು ನಿವೃತ್ತರಾಗಲಿದ್ದರೆ ಅಥವಾ ನಿವೃತ್ತಿ ಹೊಂದಿದ್ದರೆ ಮತ್ತು ಇನ್ನೂ ಪಿಎಫ್ ಹಣವನ್ನು ಹಿಂತೆಗೆದುಕೊಳ್ಳದಿದ್ದರೆ ಅದರಿಂದಲೂ ಸಹ ನೀವು ನಷ್ಟವನ್ನು ಅನುಭವಿಸಬಹುದು. ಇಪಿಎಫ್‌ಒ ನಿಯಮಗಳ (EPFO Rules) ಪ್ರಕಾರ, ನಿವೃತ್ತಿಯ ನಂತರ, ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ವಿಳಂಬವಾಗಿದ್ದರೆ, ನಿಮ್ಮ ಮೊತ್ತದ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ಏಕೆಂದರೆ, ಇಪಿಎಫ್‌ನ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಸೌಲಭ್ಯವು ನೌಕರರಿಗೆ ಮಾತ್ರ ಮತ್ತು ನಿವೃತ್ತಿಯ ನಂತರ ವ್ಯಕ್ತಿಯನ್ನು ನೌಕರ ಎಂದು ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ-  Exclusive: Big Update - ಜುಲೈನಿಂದಲ್ಲ, ಅಕ್ಟೋಬರ್ ನಿಂದ ಜಾರಿಯಾಗಲಿದೆ New Wage Code! ವೇತನ, PFಗೆ ಸಂಬಂಧಿಸಿದ ಬಿಗ್ ಅಪ್ಡೇಟ್ ಇಲ್ಲಿದೆ

ನೀವು ಹಣವನ್ನು ಹಿಂಪಡೆಯಲು ಬಯಸಿದರೆ, ಇದನ್ನು ನೆನಪಿನಲ್ಲಿಡಿ:
ಕೆಲವು ಕಾರಣಗಳಿಂದಾಗಿ ನಿಮಗೆ ಕೆಲಸದ ಸಮಯದಲ್ಲಿ ಹಣದ ಅಗತ್ಯವಿದ್ದರೆ ಮತ್ತು ನೀವು ಪಿಎಫ್ ಹಣವನ್ನು ಹಿಂಪಡೆಯಲು ಬಯಸಿದರೆ, ಇದಕ್ಕಾಗಿ ನೀವು ಕನಿಷ್ಠ 5 ವರ್ಷಗಳವರೆಗೆ ಕೆಲಸ ಮಾಡಿರಬೇಕು ಎಂಬುದನ್ನು ನೆನಪಿನಲ್ಲಿಡಿ. ವಾಸ್ತವವಾಗಿ, 5 ವರ್ಷಗಳ ಸೇವೆಯ ಮೊದಲು ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲಾಗಿದ್ದರೆ, ಅದರ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ನೀವು 5 ವರ್ಷಗಳ ಕೆಲಸ ಮಾಡಿದ ನಂತರ ನಿಧಿಯಿಂದ ಹಣವನ್ನು ಹಿಂತೆಗೆದುಕೊಂಡರೆ, ನಿಮಗೆ ತೆರಿಗೆ ಮುಕ್ತ ಹಣ ಸಿಗುತ್ತದೆ.

ಬಡ್ಡಿಯ ಲಾಭ ಯಾವಾಗ ಸಿಗುತ್ತದೆ?
ಇಪಿಎಫ್ ಖಾತೆಗಳನ್ನು ಎರಡು ವಿಭಾಗಗಳಲ್ಲಿ ಇರಿಸಲಾಗಿದೆ. ಮೊದಲಿಗೆ ಸಕ್ರಿಯ ಖಾತೆ- ಇದರಲ್ಲಿ ನಿಯಮಿತವಾಗಿ ಹೂಡಿಕೆ ಮಾಡಲಾಗುತ್ತದೆ. ಅದೇ ಸಮಯದಲ್ಲಿ, ಮತ್ತೊಂದು ಸುಪ್ತ ಖಾತೆ- ಇದು 3 ವರ್ಷಗಳಿಂದ ಯಾವುದೇ ಹೊಸ ಹೂಡಿಕೆ ಮಾಡದಿರುವ ಖಾತೆಯಾಗಿರುತ್ತದೆ. ಸಕ್ರಿಯ ಖಾತೆಗಳು ಪ್ರತಿವರ್ಷ ನಿರಂತರವಾಗಿ ಬಡ್ಡಿಯನ್ನು ಗಳಿಸುತ್ತವೆ. ಅದೇ ಸಮಯದಲ್ಲಿ, 2016 ರಿಂದ ನಿಷ್ಕ್ರಿಯ ಖಾತೆಗಳಲ್ಲಿಯೂ ಬಡ್ಡಿ ಲಭ್ಯವಿದೆ. ಈ ಮೊದಲು 2011 ರಲ್ಲಿ, ಸುಪ್ತ ಖಾತೆಗಳ ಮೇಲಿನ ಬಡ್ಡಿಯನ್ನು ನಿಲ್ಲಿಸಲಾಯಿತು. ಆದರೆ, 2016 ರಲ್ಲಿ ಇದನ್ನು ಮತ್ತೆ ಪ್ರಾರಂಭಿಸಲಾಯಿತು. ಖಾತೆ ನಿಷ್ಕ್ರಿಯವಾಗಿದ್ದರೆ ಮತ್ತು ಖಾತೆದಾರರಿಗೆ 58 ವರ್ಷ ಆಗಿದ್ದರೆ ಬಡ್ಡಿ ನಿಲ್ಲುತ್ತದೆ. ಆದರೆ, 58 ವರ್ಷಗಳವರೆಗೆ, ಅವರು ಬಡ್ಡಿಯ ಲಾಭವನ್ನು ಪಡೆಯುತ್ತಾರೆ. ಖಾತೆದಾರ ನಿವೃತ್ತರಾಗಿದ್ದರೆ ಮತ್ತು ಖಾತೆ ನಿಷ್ಕ್ರಿಯವಾಗಿದ್ದರೆ, ಇಪಿಎಫ್‌ಒ ಬಡ್ಡಿಯನ್ನು ಪಾವತಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News