ನಿಷೇಧದ ಬಳಿಕ ನಿಮ್ಮ 500 ಮತ್ತು 1000 ರೂ. ಹಳೆಯ ನೋಟುಗಳು ಏನಾದವು ಗೊತ್ತಾ..?

ಅಹಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‌ಐಡಿ) ವಿದ್ಯಾರ್ಥಿಗಳು ತಮ್ಮ ಕೌಶಲ್ಯದಿಂದ 500 ಮತ್ತು 1000 ರ ಹಳೆಯ ನೋಟುಗಳಿಂದ ಅನೇಕ ವಸ್ತುಗಳನ್ನು ತಯಾರಿಸಿದ್ದಾರೆ.

Written by - Puttaraj K Alur | Last Updated : Nov 8, 2021, 05:13 PM IST
  • 2016ರ ನ. 8ರಂದು ಹಳೆಯ 1000 ರೂ. ಮತ್ತು 500 ರೂ. ನೋಟುಗಳ ಅಮಾನ್ಯೀಕರಣ ಮಾಡಲಾಗಿತ್ತು
  • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಷೇಧಿತ ಹಳೆಯ ನೋಟುಗಳನ್ನು ಮರುಬಳಕೆ ಮಾಡುವುದಿಲ್ಲ
  • ಅಮಾನ್ಯೀಕರಣಗೊಂಡ ಹಳೆಯ ನೋಟುಗಳನ್ನು ದಿನಬಳಕೆಯ ವಸ್ತುಗಳ ತಯಾರಿಕೆಗೆ ಬಳಸಲಾಗಿದೆ
ನಿಷೇಧದ ಬಳಿಕ ನಿಮ್ಮ 500 ಮತ್ತು 1000 ರೂ. ಹಳೆಯ ನೋಟುಗಳು ಏನಾದವು ಗೊತ್ತಾ..? title=
ನಿಷೇಧಿತ ಹಳೆಯ ನೋಟುಗಳನ್ನು ಮರುಬಳಕೆ ಮಾಡುವುದಿಲ್ಲ

ನವದೆಹಲಿ: ಇಂದಿಗೆ ಸರಿಯಾಗಿ 5 ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಏಕಾಏಕಿ ನೋಟು ಅಮಾನ್ಯೀಕರಣ(Demonetisation)ವನ್ನು ಘೋಷಿಸಿದಾಗ ಎಲ್ಲರೂ ಬೆಚ್ಚಿಬಿದ್ದಿದ್ದರು. 2016ರ ನವೆಂಬರ್ 8ರಂದು ಹಳೆಯ 1000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಲಾಗಿತ್ತು. ಡಿಜಿಟಲ್ ಪಾವತಿ ಉತ್ತೇಜಿಸುವುದು ಮತ್ತು ಕಪ್ಪು ಹಣ(Balck Money)ದ ಹರಿವನ್ನು ತಡೆಯುವ ಪ್ರಮುಖ ಉದ್ದೇಶದಿಂದ ನೋಟ್ ಬ್ಯಾನ್ ಮಾಡಲಾಗಿತ್ತು.   

ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಇಂದಿನಿಂದ 500 ರೂ. ಮತ್ತು 1000 ರೂ. ನೋಟು(Rs 500 Notes & Rs 1000 Notes)ಗಳು ಕಾನೂನುಬದ್ಧವಾಗಿ ಮಾನ್ಯವಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ಪ್ರಧಾನಿಯವರ ಈ ಘೋಷಣೆಯ ನಂತರ ನೋಟು ಬದಲಾವಣೆ ಪ್ರಕ್ರಿಯೆ ಆರಂಭಗೊಂಡಿತ್ತು. ದೇಶದ ಜನರು ತಮ್ಮ ಹಳೆಯ 500 ಮತ್ತು 1000 ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಹೊಸ ನೋಟುಗಳನ್ನು ಪಡೆದುಕೊಂಡಿದ್ದರು. 5 ವರ್ಷಗಳ ಹಿಂದೆ ಹೀಗೆ ಠೇವಣಿ ಮಾಡಿದ ಆ ಹಳೆಯ ನೋಟುಗಳು ಏನಾಗಿವೆ ಎಂಬುದರ ಬಗ್ಗೆ ನಿಮಗೆ ಗೊತ್ತೆ? ಈ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನಾವು ನೀಡಿದ್ದೇವೆ ನೋಡಿ.  

ಇದನ್ನೂ ಓದಿ: SBI Easy Ride Scheme: ದ್ವಿಚಕ್ರಕ್ಕಾಗಿ ಲೋನ್ ಪಡೆಯುವುದು ಇನ್ನು ಸುಲಭ, ಮನೆಯಲ್ಲಿ ಕುಳಿತೇ ಪಡೆಯಿರಿ 3 ಲಕ್ಷಗಳವರೆಗೆ ಲೋನ್

ಮಾರುಕಟ್ಟೆಯಲ್ಲಿ ಹೊಸ ನೋಟುಗಳ ಚಲಾವಣೆ

ನೋಟು ಅಮಾನ್ಯೀಕರಣ(Demonetised Notes)ದ ನಂತರ 500 ಮತ್ತು 1000 ರೂ.ಗಳ ಹಳೆಯ ಕರೆನ್ಸಿ ನೋಟು(Old Currency)ಗಳನ್ನು RBI ಮೇಲ್ವಿಚಾರಣೆಯಲ್ಲಿ ಠೇವಣಿ ಮಾಡಲಾಯಿತು. ಇದಕ್ಕೆ ಪ್ರತಿಯಾಗಿ ಸಮಾನ ಮೌಲ್ಯದ ಹೊಸ ನೋಟುಗಳನ್ನು ಜನರಿಗೆ ನೀಡಲಾಗಿದ್ದು, ಇಂದು 500 ಮತ್ತು 2000 ಹೊಸ ನೋಟುಗಳು ಚಲಾವಣೆಯಲ್ಲಿವೆ. ಇದರ ಜೊತೆಗೆ 20, 100 ಮತ್ತು 50 ರೂ. ಮುಖಬೆಲೆಯ ಹೊಸ ನೋಟುಗಳು ಸಹ ಬಂದಿವೆ. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ 15 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಳೆಯ ನೋಟುಗಳು ಜಮೆಯಾಗಿದ್ದು, ಆ ನೋಟುಗಳು ಇಂದಿಗೂ ಚಲಾವಣೆಯಲ್ಲಿಲ್ಲ.

ಹಳೆಯ ನೋಟುಗಳಿಂದ ದಿನಬಳಕೆಯ ವಸ್ತುಗಳ ತಯಾರಿಕೆ

2017ರಲ್ಲಿಆರ್‌ಟಿಐ ಮೂಲಕ ಕೇಳಲಾದ ಪ್ರಶ್ನೆಗೆ ಸಿಕ್ಕಿರುವ ಉತ್ತರದ ಪ್ರಕಾರ, ಅಮಾನ್ಯಗೊಂಡ ನೋಟುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ರಿಸರ್ವ್ ಬ್ಯಾಂಕ್(Reserve Bank Of India) ಇಂತಹ ನೋಟುಗಳನ್ನು ಮರುಬಳಕೆ ಮಾಡುವುದಿಲ್ಲ.ಇವು ಮತ್ತೆ ಮಾರುಕಟ್ಟೆಯಲ್ಲಿ ಚಲಾವಣೆಗೂ ಬರುವುದಿಲ್ಲ. ಟೆಂಡರ್ ಮೂಲಕ ವಿಲೇವಾರಿ ಮಾಡಿದ ಈ ಹಳೆಯ ನೋಟುಗಳ ಕಾಗದವನ್ನು ಇತರ ಸರಕುಗಳನ್ನು ತಯಾರಿಸಲು ಬಳಸಲಾಗುತ್ತದೆ. ಆರ್‌ಬಿಐ ನಿಯಮಗಳ ಪ್ರಕಾರ, ಅಮಾನ್ಯಗೊಂಡ ನೋಟುಗಳನ್ನು ಕರೆನ್ಸಿ ವೆರಿಫಿಕೇಶನ್ ಪ್ರೊಸೆಸಿಂಗ್ ಸಿಸ್ಟಮ್ (ಸಿವಿಪಿಎಸ್) ಅಡಿಯಲ್ಲಿ ಕೊಳೆಸಲಾಗುತ್ತದೆ(Decomposed). ಚಲಾವಣೆಯಿಲ್ಲದ ನೋಟುಗಳನ್ನು ಮೊದಲು ವಿವಿಧ ವರ್ಗಗಳಾಗಿ ವಿಂಗಡಿಸಿ, ನಂತರ ಅವುಗಳ ಬಳಕೆಯನ್ನು ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: Post Officeನ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹರಿಯಲಿದೆ ಹಣದ ಹೊಳೆ, ಶೀಘ್ರದಲ್ಲೇ ಆಗಲಿದೆ ಹಣ ಡಬಲ್

ಮೊದಲು ಕರೆನ್ಸಿಯನ್ನು ರದ್ದುಗೊಳಿಸಬಹುದೇ ಅಥವಾ ಇಲ್ಲವೇ ಎಂದು ನೋಡಲಾಗುತ್ತದೆ. ನಂತರ ಈ ನೋಟುಗಳ ಕ್ಲಿಪ್ಪಿಂಗ್‌ಗಳನ್ನು ಇಟ್ಟಿಗೆಗಳಾಗಿ ಪರಿವರ್ತಿಸಲಾಗುತ್ತದೆ. ನೋಟು ಕ್ಲಿಪ್ಪಿಂಗ್‌ಗಳಿಂದ ತಯಾರಾದ ಈ ಇಟ್ಟಿಗೆಗಳಿಂದ ಕಾರ್ಡ್‌ಬೋರ್ಡ್ ಸೇರಿದಂತೆ ಹಲವು ರೀತಿಯ ಕಾರ್ಡ್‌ಬೋರ್ಡ್ ವಸ್ತುಗಳನ್ನು ತಯಾರಿಸಲಾಗುತ್ತದೆ. ಅಹಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‌ಐಡಿ) ವಿದ್ಯಾರ್ಥಿಗಳು ತಮ್ಮ ಕೌಶಲ್ಯದಿಂದ 500 ಮತ್ತು 1000 ರ ಹಳೆಯ ನೋಟುಗಳಿಂದ ಅನೇಕ ವಸ್ತುಗಳನ್ನು ತಯಾರಿಸಿದ್ದಾರೆ. ವಾಸ್ತವವಾಗಿ ಆರ್‌ಬಿಐ ಈ ಕೆಲಸಕ್ಕಾಗಿ ಎನ್‌ಐಡಿಯಿಂದ ಸಹಾಯವನ್ನು ಕೋರಿತ್ತು. ನಂತರ ವಿದ್ಯಾರ್ಥಿಗಳು ದಿನಬಳಕೆಯ ವಸ್ತುಗಳನ್ನು ದಿಂಬುಗಳು, ಟೇಬಲ್ ಲ್ಯಾಂಪ್‌ಗಳನ್ನು ನೋಟ್ ಕ್ಲಿಪ್ಪಿಂಗ್‌ಗಳಿಂದ ತಯಾರಿಸಿದ್ದರು.

ಮಾಹಿತಿಯ ಪ್ರಕಾರ ಆರ್‌ಬಿಐ(RBI) ಹಳೆಯ ನೋಟುಗಳನ್ನು ಮರುಬಳಕೆ ಮಾಡುವುದಿಲ್ಲ. ಅಂದರೆ ನಿಷೇಧಿಸಿದ ಬಳಿಕ ಆ ನೋಟುಗಳನ್ನು ಮತ್ತೆ ಚಲಾವಣೆಗೆ ತರುವುದಿಲ್ಲ. ಹಳೆ ನೋಟುಗಳ ವಿಶೇಷತೆ ಏನೆಂದರೆ ಇವು ನೀರಿನಲ್ಲಿ ಸಂಪೂರ್ಣವಾಗಿ ಕರಗುವುದಿಲ್ಲ ಮತ್ತು ಬಣ್ಣ ಬಿಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವುಗಳನ್ನು ಇತರ ಕಾಗದದ ಸರಕುಗಳನ್ನು ತಯಾರಿಸಲು ಬಳಸಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News