ನಾಳೆಯಿಂದ ಸಿಗಲಿದೆ Digital Voter-ID, ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ ಗೊತ್ತಾ?

ಚುನಾವಣಾ ಗುರುತಿನ ಚೀಟಿಯ  ಡಿಜಿಟಲ್ ಆವೃತಿ ಸೋಮವಾರ ಅಂದರೆ ಜನವರಿ 25ರಿಂದ ಲಭ್ಯವಾಗಲಿದೆ.  ಇದಕ್ಕಾಗಿ ಚುನಾವಣಾ ಆಯೋಗವು  e-EPIC ಆ್ಯಪನ್ನು ಬಿಡುಗಡೆ ಮಾಡಲಿದೆ.

Written by - Ranjitha R K | Last Updated : Jan 24, 2021, 08:11 PM IST
  • ನಾಳೆಯಿಂದ ಡಿಜಿಟಲ್ ವೋಟರ್ ಐಡಿ
  • e-EPIC ಆ್ಯಪ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು
  • ಇನ್ನು ಚುನಾವನಾ ಗುರುತಿನಚೀಟಿಗಾಗಿ ಅಲೆದಾಡುವ ಅಗತ್ಯವಿಲ್ಲ
ನಾಳೆಯಿಂದ ಸಿಗಲಿದೆ Digital Voter-ID, ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ ಗೊತ್ತಾ? title=
ನಾಳೆಯಿಂದ ಡಿಜಿಟಲ್ ವೋಟರ್ ಐಡಿ (filephoto)

ನವದೆಹಲಿ: ಚುನಾವಣಾ ಗುರುತಿನ ಚೀಟಿಯ (Voter Id) ಡಿಜಿಟಲ್ ಆವೃತಿ ಸೋಮವಾರ ಅಂದರೆ ಜನವರಿ 25ರಿಂದ ಲಭ್ಯವಾಗಲಿದೆ.  ಇದಕ್ಕಾಗಿ ಚುನಾವಣಾ ಆಯೋಗವು (Election Commission) e-EPIC ಆ್ಯಪನ್ನು ಬಿಡುಗಡೆ ಮಾಡಲಿದೆ. ಈ ಆ್ಯಪ್ ನ ಸಹಾಯದಿಂದ ಆಧಾರ್ ಕಾರ್ಡ್ ನಂತೆಯೇ  ವೋಟರ್ ಐಡಿಯನ್ನುಕೂಡಾ ಆನ್ ಲೈನ್ ನಲ್ಲಿ ಪಡೆಯಬಹುದಾಗಿದೆ. 

ಸೇವೆಯು ಎರಡು ಹಂತಗಳಲ್ಲಿ ಪ್ರಾರಂಭವಾಗಲಿದೆ:
ಈ ಅಪ್ಲಿಕೇಶನ್ ಅನ್ನು ಎರಡು ಹಂತಗಳಲ್ಲಿ ಪ್ರಾರಂಭಿಸಲಾಗುವುದು. ಮೊದಲ ಹಂತ ಜನವರಿ 25 ರಿಂದ ಜನವರಿ 31 ರವರೆಗೆ ನಡೆಯಲಿದೆ. ಈ ವೇಳೆ  19 ಸಾವಿರ ಹೊಸ ಮತದಾರರಿಗೆ ಈ ಸೌಲಭ್ಯ ಲಾಭ ಪಡೆಯಲು ಅನುವು ಮಾಡಿಕೊಡಲಾಗಿದೆ. ಎರಡನೇ ಹಂತ ಫೆಬ್ರವರಿ 1 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಎಲ್ಲಾ ಮತದಾರರು ಈ ಸೌಲಭ್ಯದ ಲಾಭ ಪಡೆಯಬಹುದಾಗಿದೆ.  

ಇದನ್ನೂ ಓದಿDigital India: ವೋಟರ್ IDಗೆ ಸಂಬಂಧಿಸಿದ ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ

ಮೊಬೈಲ್ ನಂಬರಿನೊಂದಿಗೆ ನೋಂದಾಯಿಸಿಕೊಳ್ಳಬಹುದು:
 ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸುವಾಗ ಮೊಬೈಲ್ (Mobile) ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ.  ಮತದಾರರ ಪಟ್ಟಿಯಲ್ಲಿ(Voter List) ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿದ ನಂತರ,  ಫೋನ್‌ (Phone) ಮೂಲಕ ಸಂದೇಶವನ್ನು ರವಾನಿಸಲಾಗುತ್ತದೆ. ನಂತರ ಸಿಗುವ ಒಟಿಪಿಯನ್ನುಬಳಸಿ  e-EPIC ಆ್ಯಪನ್ನು ಡೌನ್ ಲೋಡ್ ಮಾಡಲು ಸಾಧ್ಯವಾಗುತ್ತದೆ.

ಹಳೆಯ ಮತದಾರರು ಕೆವೈಸಿ ಪಡೆಯಬೇಕಾಗುತ್ತದೆ :
ಈಗಾಗಲೇ ವೋಟರ್ ಐಡಿ (Voter ID) ಹೊಂದಿರುವವರು, ಡಿಜಿಟಲ್ ಕಾರ್ಡ್ ಗಾಗಿ ಡಿಜಿಟಲ್ ವೇರಿಫಿಕೆಶನ್ ಮಾಡಿಸಿಕೊಳ್ಳಬೇಕಾಗುತ್ತದೆ.  ಇದು ಬ್ಯಾಂಕಿನ (Bank) ಕೆವೈಸಿ ಪ್ರಕ್ರಿಯೆಯನ್ನು ಹೋಲುತ್ತದೆ. ಇಲ್ಲಿಯೂ, ಮತದಾರ ತನ್ನಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನುನೀಡಬೇಕು. ಈ ಪೋನ್  ನಂಬರ್ ಮತ್ತು ಇಮೇಲ್ ಐಡಿ ಮೂಲಕವೇ ಮಾಹಿತಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ :Aadhaar Card ನವೀಕರಣದಲ್ಲೂ ಮೋಸದ ಜಾಲ, ನಕಲಿ ವೆಬ್ ಸೈಟ್ ಗಳ ಬಗ್ಗೆ ಇರಲಿ ಎಚ್ಚರ..!

ಡಿಜಿಟಲ್ ಕಾರ್ಡ್ ನಿಂದ ಆಗುವ ಲಾಭ :
ಇನ್ನು ವೋಟರ್ ಐಡಿ ಪಡೆಯಲು ಬಹಳ ಸಮಯದವರೆಗೆ  ಕಾಯುವ ಅಗತ್ಯವಿರುವುದಿಲ್ಲ. ಹೊಸ ಗುರುತಿನ ಚೀಟಿ ಪಡೆಯಲು ಅಥವಾ ಗುರುತಿನ ಚೀಟಿಯನ್ನು ಬದಲಾಯಿಸಲು ಕಚೇರಿಗಳಿಗೆ ಸುತ್ತುವ ಅಗತ್ಯವೂ ಇಲ್ಲ. ಪೋನಿನಲ್ಲಿಯೇ e-EPIC ಆ್ಯಪನ್ನು ಡೌನ್ ಲೋಡ್ ಮಾಡಿಕೊಂಡು, ಡಿಜಿಟಲ್ ವೋಟರ್ ಐಡಿ ಕಾರ್ಡನ್ನು ಪಡೆಯಬಹುದಾಗಿದೆ. ಒಂದು ವೇಳೆ ವೋಟರ್ ಐಡಿ ಕಳೆದು ಹೋದಲ್ಲಿ 25 ರೂಪಾಯಿಯನ್ನು ಪಾವತಿಸಿ ಕಾರ್ಡಿನ ನಕಲು ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News