ನವದೆಹಲಿ: ‘ವಂದೇ ಭಾರತ್ ಎಕ್ಸ್‌ಪ್ರೆಸ್’ನ 28ನೇ ಆವೃತ್ತಿಯ ರೈಲು ಕೇಸರಿ ಬಣ್ಣದಲ್ಲಿರಲಿದೆ ಎಂದು ರೈಲ್ವೆ ಅಧಿಕಾರಿಗಳು ಘೋಷಿಸಿದ್ದಾರೆ. ಪ್ರಸ್ತುತ ಹೊಸ ಕೇಸರಿ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ. ಇದನ್ನು ಅರೆ-ಹೈ-ಸ್ಪೀಡ್ ರೈಲುಗಳನ್ನು ತಯಾರಿಸುವ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF)ನಲ್ಲಿ ಇರಿಸಲಾಗಿದೆ.
‘ವಂದೇ ಭಾರತ್ ಎಕ್ಸ್‌ಪ್ರೆಸ್’ನ ಒಟ್ಟು 25 ರೈಲುಗಳು ಈಗಾಗಲೇ ವಿವಿಧ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು 2 ರೈಲುಗಳನ್ನು ಮೀಸಲು ಇರಿಸಲಾಗಿದೆ. ಈಗಾಗಲೇ ಸಂಚಾರ ನಡೆಸುತ್ತಿರುವ ರೈಲುಗಳು ಬಿಳಿ ಹಾಗೂ ನೀಲಿ ಬಣ್ಣ ಹೊಂದಿವೆ. ಈ ಹೊಸ ರೈಲು ಬಿಳಿ ಮತ್ತು ಕೇಸರಿ ಬಣ್ಣವನ್ನು ಹೊಂದಿದೆ. ಪ್ರಾಯೋಗಿಕ ಆಧಾರದ ಮೇಲೆ ಬಣ್ಣವನ್ನು ಬದಲಾಯಿಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಸುದ್ದಿಸಂಸ್ಥೆ ANIಗೆ ತಿಳಿಸಿದ್ದಾರೆ.
Hon'ble Minister of Railways Shri @AshwiniVaishnaw visited the Railways' Production Unit Integral Coach Factory in Chennai yesterday & took stock of the progress on production of #VandeBharatExpress. pic.twitter.com/6bG0mIgnE6
— Ministry of Railways (@RailMinIndia) July 9, 2023
ಇದನ್ನೂ ಓದಿ: ಮದುವೆ ಕಾರ್ಯಕ್ರಮದಲ್ಲಿ ಮೈಮೇಲೆ ಹಾವು ಹಾಕ್ಕೊಂಡು ಡಾನ್ಸ್ ಮಾಡಿದ ಯುವಕ..!
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅವರು ದಕ್ಷಿಣ ರೈಲ್ವೇಸ್‌ನ ಸುರಕ್ಷತಾ ಕ್ರಮಗಳನ್ನು ಪರಾಮರ್ಶಿಸಿದರು. ಜೊತೆಗೆ ‘ವಂದೇ ಭಾರತ್ ಎಕ್ಸ್‌ಪ್ರೆಸ್’ನಲ್ಲಿನ ಸುಧಾರಣೆಗಳ ಬಗ್ಗೆಯೂ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ‘ಇದು ಮೇಕ್ ಇನ್ ಇಂಡಿಯಾದ ಪರಿಕಲ್ಪನೆ. ನಮ್ಮ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರಿಂದ ಭಾರತದಲ್ಲಿಯೇ ವಿನ್ಯಾಸಗೊಳಿಸಿರುವುದ. ಹೀಗಾಗಿ ವಂದೇ ಭಾರತ್ ಕಾರ್ಯಾಚರಣೆ ಸಂದರ್ಭದಲ್ಲಿ ಎಸಿಗಳು, ಶೌಚಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ಫೀಲ್ಡ್ ಯುನಿಟ್‌ಗಳಿಂದ ಬರುವ ಅಭಿಪ್ರಾಯಗಳು ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡುವಂತಹ ಸುಧಾರಣೆಗಳನ್ನು ತರುವುದಕ್ಕೆ ಸಹಾಯವಾಗುತ್ತದೆ’ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ಜಿ-20 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಆರಂಭ; ಜವಳಿ ವಸ್ತು ಪ್ರದರ್ಶನಕ್ಕೆ ಚಾಲನೆ
Hon'ble Minister of Railways Shri @AshwiniVaishnaw visited the Railways' Production Unit Integral Coach Factory in Chennai yesterday & took stock of the progress on production of #VandeBharatExpress. pic.twitter.com/6bG0mIgnE6
— Ministry of Railways (@RailMinIndia) July 9, 2023
‘ಹೊಸ ಸುರಕ್ಷತಾ ಫೀಚರ್, ‘ಆಂಟಿ ಕ್ಲೈಂಬರ್ಸ್’ ಅಥವಾ ‘ಆಂಟಿ ಕ್ಲೈಂಬಿಂಗ್ ಡಿವೈಸ್’ ಎಂಬುದರ ಬಗ್ಗೆ ನಾವು ಕೆಲಸ ಮಾಡುತ್ತಿದ್ದು, ಇವುಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ವಂದೇ ಭಾರತ್ ಹಾಗೂ ಇತರೆ ರೈಲುಗಳಲ್ಲಿ ಇದು ನಿರ್ದಿಷ್ಟ ಲಕ್ಷಣಗಳಲ್ಲಿ ಸೇರ್ಪಡೆಯಾಗಲಿದೆ’ ಎಂದು ಕೇಂದ್ರ ಸಚಿವರು ಇದೇ ವೇಳೆ ಮಾಹಿತಿ ನೀಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.