IT Hardware ಗಾಗಿ 17000 ಕೋಟಿ ರೂ.ಗಳ ಪಿಎಲ್ಐ ಯೋಜನೆಗೆ ಅನುಮತಿ

Cabinet Meeting: ಐಟಿ ಹಾರ್ಡ್‌ವೇರ್‌ನಲ್ಲಿ ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಸಾಬೀತಾಗುವ ನಿರೀಕ್ಷೆ ಹೊಂದಲಾಗಿದೆ. ದೇಶದಲ್ಲಿ ಡಿಕ್ಸನ್ ಟೆಕ್, ಆಂಬರ್ ಎಂಟರ್‌ಪ್ರೈಸಸ್ ಮತ್ತು ಮೆರ್ಕ್ ಎಲೆಕ್ಟ್ರಾನಿಕ್ಸ್‌ನಂತಹ ಕಂಪನಿಗಳು ಇದರ ಲಾಭ ಪಡೆಯಲಿವೆ.  

Written by - Nitin Tabib | Last Updated : May 18, 2023, 01:08 PM IST
  • ಸರ್ಕಾರದ ಗಮನವು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆ ಮೇಲಿದೆ.
  • 3 ಟ್ರಿಲಿಯನ್ ಡಾಲರ್ ಜಾಗತಿಕ ಎಲೆಕ್ಟ್ರಾನಿಕ್ ಉದ್ಯಮದಲ್ಲಿ ಭಾರತದ ಪಾಲನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
  • ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (MeIT) ಈ ಹಿಂದೆ $10 ಬಿಲಿಯನ್ PLI ಯೋಜನೆಯನ್ನು ಘೋಷಿಸಿತ್ತು.
IT Hardware ಗಾಗಿ 17000 ಕೋಟಿ ರೂ.ಗಳ ಪಿಎಲ್ಐ ಯೋಜನೆಗೆ ಅನುಮತಿ title=

Union Cabinet: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಐಟಿಗೆ ಸಂಬಂಧಿಸಿದ ಹಾರ್ಡ್‌ವೇರ್ ತಯಾರಿಸಲು ಪಿಎಲ್‌ಐ (ಪ್ರೊಡಕ್ಷನ್ ಲಿಂಕ್ಡ್ ಸ್ಕೀಮ್) ಅನುಮೋದಿಸಲಾಗಿದೆ. ಈ ಯೋಜನೆಯಲ್ಲಿ ಸುಮಾರು 17,000 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗುವುದು. ಮೂಲಗಳನ್ನು ಉಲ್ಲೇಖಿಸಿ ಈ ಮಾಹಿತಿ ಮುನ್ನೆಲೆಗೆ ಬಂದಿದೆ.

ಐಟಿ ಹಾರ್ಡ್‌ವೇರ್‌ನಲ್ಲಿ ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಸಾಬೀತಾಗಲಿದೆ. ದೇಶದಲ್ಲಿ ಡಿಕ್ಸನ್ ಟೆಕ್, ಆಂಬರ್ ಎಂಟರ್‌ಪ್ರೈಸಸ್ ಮತ್ತು ಮೆರ್ಕ್ ಎಲೆಕ್ಟ್ರಾನಿಕ್ಸ್‌ನಂತಹ ಕಂಪನಿಗಳು ಇದರ ಲಾಭ ಪಡೆಯಲಿವೆ.

ಇದನ್ನೂ ಓದಿ-PMFBY Claim: ಈ ಕಾರಣಕ್ಕಾಗಿ ಬ್ಲಾಕ್ ಲಿಸ್ಟ್ ಆಗಲಿದೆ ಐಸಿಐಸಿಐ ಲಂಬಾರ್ಡ್, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಆಡಳಿತ
 
ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾಲು ಹೆಚ್ಚಾಗಲಿದೆ
ಸರ್ಕಾರದ ಗಮನವು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆ ಮೇಲಿದೆ. 3 ಟ್ರಿಲಿಯನ್ ಡಾಲರ್ ಜಾಗತಿಕ ಎಲೆಕ್ಟ್ರಾನಿಕ್ ಉದ್ಯಮದಲ್ಲಿ ಭಾರತದ ಪಾಲನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (MeIT) ಈ ಹಿಂದೆ $10 ಬಿಲಿಯನ್ PLI ಯೋಜನೆಯನ್ನು ಘೋಷಿಸಿತ್ತು. ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ತಯಾರಿಕೆಯನ್ನು ಉತ್ತೇಜಿಸುವುದು ಇವರ ಉದ್ದೇಶವಾಗಿದೆ.

ಇದನ್ನೂ ಓದಿ-Farmers Scheme: ದೇಶದ ಪಶುಪಾಲಕರಿಗೆ ಕೇಂದ್ರ ಸರ್ಕಾರ ನೀಡುತ್ತಿದೆ 3 ಲಕ್ಷ ರೂ.ಧನಸಹಾಯ!

2026 ರ ವೇಳೆಗೆ ಹಾರ್ಡ್‌ವೇರ್ ಉತ್ಪಾದನೆಯನ್ನು $ 300 ಶತಕೋಟಿ ಮತ್ತು ರಫ್ತುಗಳನ್ನು $ 120 ಶತಕೋಟಿಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News