Pension Hike News: ಪಿಂಚಣಿ ಪಡೆಯುವವರ ಪಾಲಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ನೀವೂ ಕೂಡ ಪಿಂಚಣಿ ಹೆಚ್ಚಳಕ್ಕಾಗಿ ಕಾಯುತ್ತಿದ್ದರೆ, ನವರಾತ್ರಿಯ ಈ ಸಂದರ್ಭದಲ್ಲಿ ಸರ್ಕಾರ ತನ್ನ ನೌಕರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದೆ. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರದಿಂದ ಕೂಡ ನೌಕರರಿಗೆ ಹಲವು ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ, ಇದೀಗ ನೌಕರರ ಪಿಂಚಣಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಮಸೂದೆ ಮಂಡನೆಯ ಮೂಲಕ ಪಿಂಚಣಿ ಹೆಚ್ಚಿಸಿರುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. ಇದರೊಂದಿಗೆ ಪ್ರಯಾಣ ಭತ್ಯೆಯನ್ನೂ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪಿಂಚಣಿ 35,000 ರೂ.ನಿಂದ 58,300 ರೂ.ಗೆ ಹೆಚ್ಚಳ
ಛತ್ತೀಸ್ಗಢ ಸರ್ಕಾರವು ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ, ಇದರಲ್ಲಿ ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಮತ್ತು ಪ್ರಯಾಣ ಭತ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಮಸೂದೆ ಪ್ರಕಾರ ಮಾಜಿ ಶಾಸಕರ ಪಿಂಚಣಿಯನ್ನು 35,000 ರೂ.ನಿಂದ 58,300 ರೂ.ಗೆ ಹೆಚ್ಚಿಸಲಾಗುವುದು ಎನ್ನಲಾಗಿದೆ.
ಹೆಚ್ಚುವರಿ ಪಿಂಚಣಿ ಸಿಗಲಿದೆ
ಮಸೂದೆಯ ಪ್ರಕಾರ, ಮಾಜಿ ಶಾಸಕರು ತಮ್ಮ ಸದಸ್ಯತ್ವದ ಮೊದಲ ಅವಧಿಯ ನಂತರ (ಐದು ವರ್ಷಗಳಿಗಿಂತ ಹೆಚ್ಚು ಅವಧಿ) ಪ್ರತಿ ಒಂದು ವರ್ಷಕ್ಕೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
ಇದನ್ನೂ ಓದಿ- Big News: ವಾಹನ ಸವಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿ!
ಭತ್ಯೆ 8 ಲಕ್ಷದಿಂದ 10 ಲಕ್ಷಕ್ಕೆ ಏರಿಕೆಯಾಗಿದೆ
ಈ ಮೊದಲು ವಾರ್ಷಿಕ 8 ಲಕ್ಷ ರೂ.ಗಳವರೆಗೆ ನೀಡಲಾಗುತ್ತಿದ್ದ ರೈಲ್ವೆ ಅಥವಾ ವಿಮಾನ ಪ್ರಯಾಣಕ್ಕೆ ಭತ್ಯೆಯನ್ನು 10 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದೂ ಕೂಡ ಮಸೂದೆಯಲ್ಲಿ ನಮೂಡಿಸಲಾಗಿದೆ. ಅದೇ ಸಮಯದಲ್ಲಿ, ಮಾಜಿ ಶಾಸಕರಿಗೆ ಈ ಭತ್ಯೆ ವಾರ್ಷಿಕವಾಗಿ 4 ಲಕ್ಷದಿಂದ 5 ಲಕ್ಷಕ್ಕೆ ಏರಿಕೆಯಾಗಿದೆ.
ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಬೀಳಲಿದೆ
ಮಾಜಿ ಶಾಸಕರಿಗೆ ದೂರವಾಣಿ ಭತ್ಯೆ 10,000 ಮತ್ತು ಆರ್ಡರ್ಲಿ ಭತ್ಯೆ 15,000 ರೂ. ನಿರ್ಧರಿಸಲಾಗಿದೆ. ರಾಜ್ಯ ಕೈಗೊಂಡಿರುವ ಈ ನಿರ್ಧಾರದ ನಂತರ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 16.96 ಕೋಟಿ ರೂ.ಗಳ ಹೊರೆ ಬೀಳಲಿದೆ.
ಇದನ್ನೂ ಓದಿ- Good News: ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಇಳಿಕೆ, ಇಲ್ಲಿದೆ ಹೊಸ 1 ಲೀಟರ್ ಎಣ್ಣೆ ಬೆಲೆ !
ವಿಧಾನಸಭೆಯ ಎಷ್ಟು ಸದಸ್ಯರು
ಕಳೆದ ವರ್ಷ ಜುಲೈನಲ್ಲಿ ಮುಖ್ಯಮಂತ್ರಿ, ಸ್ಪೀಕರ್, ಸಚಿವರು ಮತ್ತು ಶಾಸಕರ ವೇತನ ಹೆಚ್ಚಳದ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿದ್ದು, ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 6.81 ಕೋಟಿ ರೂ.ಹೊರೆ ಬಿದ್ದಿತ್ತು. ಛತ್ತೀಸ್ಗಢ ವಿಧಾನಸಭೆಯಲ್ಲಿ ಪ್ರಸ್ತುತ 90 ಸದಸ್ಯರಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.