Free Calling ಹಾಗೂ Free Data ಸೇವೆ ಸ್ಥಗಿತಗೊಳ್ಳಲಿದೆಯೇ? ಈ ವರದಿ ತಪ್ಪದೆ ಓದಿ

Telecom Companies Tarrif Hike: ನೂತನ ವರ್ಷದಿಂದ ನಿಮ್ಮ ಮೊಬೈಲ್ ಬಿಲ್ ಗಳು ಹೆಚ್ಚಾಗಲಿವೆ. ವರದಿಯೊಂದರ ಪ್ರಕಾರ, ಮೂರು ಟೆಲಿಕಾಂ ಕಂಪನಿಗಳು ತನ್ನ ಪ್ರೀಪೇಡ್ ಪ್ಲಾನ್ಸ್ ಗಳ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Last Updated : Dec 12, 2020, 06:09 PM IST

    ನೂತನ ವರ್ಷದಲ್ಲಿ ನಿಮ್ಮ ಮೊಬೈಲ್ ಖರ್ಚಿನಲ್ಲಿ ಹೆಚ್ಚಳವಾಗಲಿದೆ.

    ದೇಶದ ಮೂರು ದಿಗ್ಗಜ ಕಂಪನಿಗಳು ದರ ಏರಿಕೆ ಮಾಡಲಿವೆ ಎನ್ನಲಾಗಿದೆ.

    ಕಳೆದ ಬಾರಿ ಡಿಸೆಂಬರ್ 2019 ರಲ್ಲಿ ಈ ಕಂಪನಿಗಳು ತನ್ನ ಟ್ಯಾರಿಫ್ ದರಗಳನ್ನು ಹೆಚ್ಚಿಸಿದ್ದವು.

Free Calling ಹಾಗೂ Free Data ಸೇವೆ ಸ್ಥಗಿತಗೊಳ್ಳಲಿದೆಯೇ? ಈ ವರದಿ ತಪ್ಪದೆ ಓದಿ title=
Telecom Companies Tariff Hike

Telecom Companies Tariff Hike: ನೂತನ ವರ್ಷದಿಂದ ನಿಮ್ಮ ಮೊಬೈಲ್ ಬಿಲ್ ಗಳು ಹೆಚ್ಚಾಗಲಿವೆ. ವರದಿಯೊಂದರ ಪ್ರಕಾರ, ಮೂರು ಟೆಲಿಕಾಂ ಕಂಪನಿಗಳು ತನ್ನ ಪ್ರೀಪೇಡ್ ಪ್ಲಾನ್ಸ್ ಗಳ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ವೊಡಾಫೋನ್-ಐಡಿಯಾ ಕಂಪನಿ ಮೊದಲು ತನ್ನ ದರಗಳನ್ನು ಹೆಚ್ಚಿಸಲಿದೆ ಎನ್ನಲಾಗಿದೆ ಹಾಗೂ ನಂತರ ರಿಲಯನ್ಸ್ ಜಿಯೋ ಹಾಗೂ ಏರ್ಟೆಲ್ ಕಂಪನಿಗಳ ಟ್ಯಾರಿಫ್ ಕೂಡ ಹೆಚ್ಚಾಗಲಿದೆ.

ಈ ಮೂರು ಕಂಪನಿಗಳು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(Trai)ಗೆ ಫ್ಲೋರ್ ಪ್ರೈಸ್ ಘೋಷಣೆ ಮಾಡಲು ಮನವಿ ಸಲ್ಲಿಸಿವೆ. ಫ್ಲೋರ್ ಪ್ರೈಸ್ ಯಾವುದೇ ಒಂದು ಸೇವೆಯ ಕನಿಷ್ಠ ದರ ಆಗಿರುತ್ತದೆ. ಅದಕ್ಕಿಂತ ಕಡಿಮೆ ದರದಲ್ಲಿ ಸೇವೆ ನೀಡಲಾಗುವುದಿಲ್ಲ. ಪ್ರಸ್ತುತ ಟೆಲಿಕಾಂ ಕಂಪನಿಗಳು ಕಾಲಿಂಗ್ ಹಾಗೂ ಡೇಟಾ ದರಗಳನ್ನು ಈಗಾಗಲೇ ನಿರ್ಧರಿಸಿವೆ ಎನ್ನಲಾಗಿದೆ.

ಇದನ್ನು ಓದಿ- ಜನವರಿ 1 ರಿಂದ 11 ಡಿಜಿಟ್ ಆಗಲಿದೆ ನಿಮ್ಮ Mobile Number, ಏನಿದು ಹೊಸ ನಿಯಮ?

ಕನಿಷ್ಠ ಫ್ಲೋರ್ ಪ್ರೈಸ್ ನಿರ್ಧರಿಸುವುದು ಅಂದರೆ, ಮುಂದಿನ ವರ್ಷದಿಂದ ನಿಮಗೆ ಉಚಿತ ಕರೆ ಸೇವೆ ಹಾಗೂ ಅಗ್ಗದ ದರದಲ್ಲಿ ಡೇಟಾ ಸೇವೆ ಸಾಧ್ಯತೆಯನ್ನು ಕಡಿಮೆಯಾಗಲಿದೆ ಎಂದೇ ಅರ್ಥ. ತಮ್ಮ ಅವರೇಜ್ ರೆವಿನ್ಯೂ ಪರ್ ಯುಜರ್ (ARPU) ತಿಂಗಳಿಗೆ ರೂ.300 ಆಗಬೇಕು ಎಂದುದು ಟೆಲಿಕಾಂ ಕಂಪನಿಗಳ ಬಯಕೆ. Vodafone-Idea ಕಂಪನಿ ಮಾರ್ಚ್ ತಿಂಗಳಿನಲ್ಲಿ ದರ ಹೆಚ್ಚಳದ ಘೋಷಣೆ ಮಾಡುವ ಸಾಧ್ಯತೆ ಇದೆ. ICICI ಸಿಕ್ಯೋರಿಟಿ ವರದಿ ಪ್ರಕಾರ, ಈ ಟ್ಯಾರಿಫ್ ಹೈಕ್ ನಿಂದ ಭಾರತಿ ಏರ್ಟೆಲ್ ಹಾಗೂ ವೊಡಾಫೋನ್-ಐಡಿಯಾ ಕಂಪನಿಗಳ ARPU 2022ರ ಆರ್ಥಿಕ ವರ್ಷದಲ್ಲಿ ಶೇ.20 ರಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ.

ಇದನ್ನು ಓದಿ- Broadband ಹೆಸರಿನಲ್ಲಿ ಅರ್ಧಕ್ಕಿಂತ ಕಡಿಮೆ ಸ್ಪೀಡ್ ನೀಡಲಾಗುತ್ತಿದೆಯಂತೆ!

ಡಿಸೆಂಬರ್ 2019ರಲ್ಲಿ ದರ ಏರಿಕೆ ಮಾಡಲಾಗಿತ್ತು
ಈ ಹಿಂದೆ ಡಿಸೆಂಬರ್ 2019ರಲ್ಲಿ ಈ ಮೂರು ಕಂಪನಿಗಳು ತಮ್ಮ ತಮ್ಮ ಪ್ಲಾನ್ ಗಳಲ್ಲಿ ಶೇ.25 ರಿಂದ ಶೇ.40 ರಷ್ಟು ಹೆಚ್ಚಿಸಿದ್ದವು. ಈ ವೇಳೆ ರಿಲಯನ್ಸ್ ಜಿಯೋ ಇತರೆ ನೆಟ್ವರ್ಕ್ ಗಳಿಗೆ ನೀಡುತ್ತಿದ್ದ ಅನಿಯಮಿತ ಉಚಿತ ಕರೆ ಸೌಲಭ್ಯ ಕೂಡ ಸ್ಥಗಿತಗೊಳಿಸಿತ್ತು. ವರ್ಷ 2020ರಲ್ಲಿಯೂ ಕೂಡ ದರ ಏರಿಕೆ ನಿರೀಕ್ಷಿಸಲಾಗಿತ್ತು. ಆದರೆ ಕೊರೊನಾ ವೈರಸ್ ಹಾಗೂ ಫ್ಲೋರ್ ಪ್ರೈಸ್ ಅನಿಶ್ಚಿತತೆಯ ಹಿನ್ನೆಲೆ ಅದನ್ನು ಮುಂದೂಡಲಾಗಿದೆ.

Trending News