ಬೆಂಗಳೂರು: ದೀಪಾವಳಿ, ಧಂತೇರಸ್ನಲ್ಲಿ ಚಿನ್ನ ಖರೀದಿಸುವ ಸಂಪ್ರದಾಯವಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಮೇಲಿನ ಹೂಡಿಕೆಯೂ ಬಹಳಷ್ಟು ಜನರನ್ನು ಆಕರ್ಷಿಸುತ್ತಿದೆ. ಜನರು ಕೇವಲ ಭೌತಿಕ ಚಿನ್ನ ಮಾತ್ರವಲ್ಲದೆ, ಧಂತೇರಸ್ನಲ್ಲಿ ಡಿಜಿಟಲ್ ಚಿನ್ನವನ್ನು ಕೂಡ ಖರೀದಿಸುತ್ತಾರೆ. ಆದರೆ, ಚಿನ್ನಾಭರಣ ಖರೀದಿ, ಮಾರಾಟ ಎರಡರಲ್ಲೂ ತೆರಿಗೆ ವಿಧಿಸಲಾಗುತ್ತದೆ ಎಂಬ ವಿಚಾರ ನಿಮ್ಮನ್ನು ಅಚ್ಚರಿಗೊಳಿಸಬಹುದು.
ಚಿನ್ನಾಭರಣಗಳ ಮೇಲೆ ತೆರಿಗೆ:
ಚಿನ್ನದ ಮೇಲೆ ದೀರ್ಘಾವಧಿಯ ಬಂಡವಾಳ ಲಾಭಗಳು (LTCG) ಮತ್ತು ಅಲ್ಪಾವಧಿಯ ಬಂಡವಾಳ ಲಾಭಗಳು (STCG) ಚಿನ್ನದ ಮೇಲೆ ಪಾವತಿಸಬೇಕಾಗುತ್ತದೆ. 2024ರ ಕೇಂದ್ರ ಬಜೆಟ್ನಲ್ಲಿ ಭೌತಿಕ ಚಿನ್ನಕ್ಕಾಗಿ, STCG ಯ ಹಿಡುವಳಿ ಅವಧಿಯನ್ನು ಮೂರು ವರ್ಷಗಳಿಂದ ಎರಡು ವರ್ಷಗಳಿಗೆ ಕಡಿಮೆ ಮಾಡಲಾಗಿದೆ. ದೀರ್ಘಾವಧಿಯ ಬಂಡವಾಳ ಲಾಭಗಳು (LTCG) ಚಿನ್ನದ ಮೇಲಿನ ತೆರಿಗೆಯನ್ನು ಶೇ. 20 ರಿಂದ ಶೇ. 12.5ಕ್ಕೆ ಇಳಿಸಲಾಗಿದೆ. ಆದರೆ, ಖರೀದಿಸಿದ ಎರಡು ವರ್ಷಗಳ ಬಳಿಕ ಮಾರಾಟ ಮಾಡುವ ಚಿನ್ನಕ್ಕಷ್ಟೇ ಈ ರಿಯಾಯಿತಿ ದೊರೆಯಲಿದೆ.
ಚಿನ್ನದ ಮ್ಯೂಚುವಲ್ ಫಂಡ್ಗಳಿಗೂ ತೆರಿಗೆ:
ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಬಂಡವಾಳ ಲಾಭ ತೆರಿಗೆ ನಿಯಮಗಳಲ್ಲಿ ಬದಲಾವಣೆಗಳನ್ನು ತರಲಾಗಿದ್ದು, ಹೊಸ ನಿಯಮದನ್ವಯ ಅಲ್ಪಾವಧಿ ಬಂಡವಾಳ ಲಾಭದ ಹಿಡುವಳಿ ಅವಧಿ ಕಡಿಮೆಯಾಗುತ್ತದೆ. ಇದಲ್ಲದೆ, ಚಿನ್ನದ ಮ್ಯೂಚುವಲ್ ಫಂಡ್ಗಳಿಗೆ ಹಿಡುವಳಿ ಅವಧಿ ಲೆಕ್ಕಿಸದೆ ಇದರ ಲಾಭವನ್ನು ತೆರಿಗೆ ಆದಾಯಕ್ಕೆ ಸೇರಿಸಲಾಗುವುದು. ಇದಕ್ಕಾಗಿ ಹೊಸ ಆದಾಯ ತೆರಿಗೆ ಸ್ಲ್ಯಾಬ್ ಅನ್ವಯ ತೆರಿಗೆಯನ್ನು ವಿಧಿಸಲಾಗುತ್ತದೆ.
ಇದನ್ನೂ ಓದಿ- ಬಿಪಿಎಲ್, ಅಂತ್ಯೋದಯ ಅನ್ನ ಯೋಜನೆಯಲ್ಲಿ ಭಾರೀ ಬದಲಾವಣೆ: ನೇರ ನಗದು ಪಾವತಿ ಬಂದ್!
ಗೋಲ್ಡ್ ಇಟಿಎಫ್:
ಗೋಲ್ಡ್ ಇಟಿಎಫ್ಗಳನ್ನು ಖರೀದಿಸಿದಾಗಲೂ ಯಾವುದೇ ಹಿಡುವಳಿ ಅವಧಿಯನ್ನು ಲೆಕ್ಕಿಸದೆ ತೆರಿಗೆ ಸ್ಲ್ಯಾಬ್ ಅನ್ವಯ ಆದಾಯ ತೆರಿಗೆಯನ್ನು ಪಾವತಿಸಬೇಕು.
ಚಿನ್ನಾಭರಣ ಮಾರಾಟಕ್ಕೆ ತೆರಿಗೆ:
ನಿಮ್ಮ ಬಳಿ ಇರುವ ಚಿನ್ನಾಭರಣವನ್ನು ಮಾರಾಟ ಮಾಡುವಾಗಲೂ ತೆರಿಗೆ ವಿಧಿಸಲಾಗುತ್ತದೆ. ಆದರೆ, ಈ ತೆರಿಗೆಯು ನೀವು ಆ ಆಭರಣವನ್ನು ಎಷ್ಟು ಸಮಯದ ಹಿಂದೆ ಖರೀದಿಸಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿದೆ.
ಇದನ್ನೂ ಓದಿ- Priyanka Gandhi: ಐಷಾರಾಮಿ ಬಂಗಲೆ ಕೋಟ್ಯಾಂತರ ರೂಪಾಯಿ ಆಸ್ತಿಯ ಒಡತಿ ಸೋನಿಯಾ ಗಾಂಧಿ ಪುತ್ರಿ!
ಚಿನ್ನದ ಉಡುಗೊರೆ ಮೇಲೆ ಚಿನ್ನದ ವಿನಾಯಿತಿ:
ನೀವು ನಿಮ್ಮ ಕುಟುಂಬಸ್ಥರು, ಇಲ್ಲವೇ ಆಪ್ತರಿಂದ ಪಡೆಯುವ ಚಿನ್ನದ ಉಡುಗೊರೆಗಳ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಆದಾಗ್ಯೂ, ಇದರ ಮೌಲ್ಯ 50 ಸಾವಿರಕ್ಕಿಂತ ಹೆಚ್ಚಿದ್ದರೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಸಾವರಿನ್ ಗೋಲ್ಡ್ ಬಾಂಡ್:
ಆರ್ಬಿಐ ನಿಯಮದನ್ವಯ ಮೆಚ್ಯೂರಿಟಿ ಅವಧಿಯಲ್ಲಿ ಮಾರಾಟ ಮಾಡಲಾಗುವ ಸಾವರಿನ್ ಗೋಲ್ಡ್ ಬಾಂಡ್ ಗೆ ಯಾವುದೇ ರೀತಿಯ STCG ಅಥವಾ LTCG ವಿಧಿಸಲಾಗುವುದಿಲ್ಲ. ಇದರಲ್ಲಿ ಬರುವ ಲಾಭವನ್ನು ಕೂಡ ತೆರಿಗೆಯ ಆದಾಯಕ್ಕೆ ಸೇರಿಸಲಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.