Stock market update: ಭಾರತೀಯ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ರಜಾದಿನವಾದ ಶನಿವಾರವೂ ಭಾರತೀಯ ಷೇರು ಮಾರುಕಟ್ಟೆ ಕಾರ್ಯನಿರ್ವಹಿಸಲಿದೆ. ನಾಳೆ(ಜ.20) ವಿಶೇಷ ಲೈವ್ ಟ್ರೇಡಿಂಗ್ ಸೆಷನ್ ನಡೆಯಲಿದೆ. ಹೌದು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಈಕ್ವಿಟಿ ಎಫ್&ಒ ವಿಭಾಗದಲ್ಲಿ ಜ.20ರಂದು ವಿಶೇಷ ಲೈವ್ ಟ್ರೇಡಿಂಗ್ ಸೆಷನ್ ನಡೆಸಲಿದೆ.
BSE ಮತ್ತು NSE ಈ ವಿಶೇಷ ಲೈವ್ ಸೆಷನ್ ಮೂಲಕ DR ಸೈಟ್ಗೆ ಬದಲಾಯಿಸುವ ಗುರಿ ಹೊಂದಿದೆ. BSE ಮತ್ತು NSE ಎರಡೂ ಜನವರಿ 20ರಂದು ಎರಡು ವಿಶೇಷ ಲೈವ್ ಟ್ರೇಡಿಂಗ್ ಸೆಷನ್ಗಳನ್ನು ನಡೆಸುತ್ತಿವೆ. SEBI ಆದೇಶದ ಪ್ರಕಾರ, ವ್ಯಾಪಾರ ಮುಂದುವರಿಕೆ ಯೋಜನೆಯ ಭಾಗವಾಗಿ ಮಾರುಕಟ್ಟೆ ಮೂಲಸೌಕರ್ಯ ಮಧ್ಯವರ್ತಿಗಳು (MIIಗಳು)ತಮ್ಮ Disaster Recovery siteಗೆ ಬದಲಾಯಿಸುವ ಅಗತ್ಯವಿದೆ.
ನಾಳೆ ಷೇರು ಮಾರುಕಟ್ಟೆ ಓಪನ್ ಇರಲಿದೆಯೇ?
ಈ ವಿಶೇಷ ಲೈವ್ ಟ್ರೇಡಿಂಗ್ ಸೆಷನ್ ಅಂದರೆ ಏನು ಎಂಬುದರ ಕುರಿತು ಮಾತನಾಡಿರುವ ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್ನ ಮುಖ್ಯ ಮಾರುಕಟ್ಟೆ ಸ್ಟ್ರಾಟೆಜಿಸ್ಟ್ ಆನಂದ್ ಜೇಮ್ಸ್, ‘ಶನಿವಾರದ ವ್ಯಾಪಾರ ವಹಿವಾಟು ವಿವಿಧ ಕಾರಣಗಳಿಗೆ ವಿಭಿನ್ನವಾಗಿರುತ್ತದೆ ಎಂಬುದನ್ನು ಹೂಡಿಕೆದಾರರು ಗಮನಿಸಬೇಕು. ಕಡಿಮೆ ಸಮಯದ time frameನಲ್ಲಿ ನಡೆಯಲಿರುವ ಸೆಷನ್ಗಳಲ್ಲಿ ಹೂಡಿಕೆದಾರರು ಟ್ರೇಡಿಂಗ್ ಮಾಡಲು ಸಾಕಷ್ಟು ಸಮಯವನ್ನು ಹೊಂದಿರುವುದಿಲ್ಲ.
ಇದನ್ನೂ ಓದಿ: ನಿಮ್ಮ ಪಿಎಫ್ ಅನ್ನು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ವರ್ಗಾಯಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ
ಏಕೆಂದರೆ ದಿನನಿತ್ಯದ ಕಾರ್ಯಾಚರಣಾ ಶ್ರೇಣಿಯು ಈಗಾಗಲೇ ಎಲ್ಲಾ ಸ್ಟಾಕ್ಗಳು ಮತ್ತು ಉತ್ಪನ್ನಗಳಿಗೆ ಶೇ.5ಕ್ಕೆ ನಿರ್ಬಂಧಿಸಲ್ಪಡುತ್ತದೆ. 2% ಬ್ಯಾಂಡ್ನಲ್ಲಿ ಹಾಗೆಯೇ ಉಳಿಯುತ್ತದೆ. ಮೊದಲ ಸೆಷನ್ನಿಂದ ಬಾಕಿ ಉಳಿದಿರುವ ಆದೇಶಗಳನ್ನು 2ನೇ ಸೆಷನ್ ಪ್ರಾರಂಭದ ಮೊದಲು ಫ್ಲಶ್ ಮಾಡಲಾಗುವುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಭುದಾಸ್ ಲಿಲ್ಲಾಧರ್ನ ತಾಂತ್ರಿಕ ವಿಶ್ಲೇಷಕ ಶಿಜು ಕೂತುಪಾಲಕ್ಕಲ್ ಮಾತನಾಡಿ, ‘ಈ ವಿಶೇಷ ಲೈವ್ ಟ್ರೇಡಿಂಗ್ ಸೆಷನ್ನಲ್ಲಿ ಹೂಡಿಕೆದಾರರು ತಮ್ಮ ಖರೀದಿ ಅಥವಾ ಮಾರಾಟದ ಆದೇಶವನ್ನು ನಗದು ಮತ್ತು ಎಫ್ & ಒ ವಿಭಾಗದಲ್ಲಿ ಇರಿಸಲು ಸಾಧ್ಯವಾಗುತ್ತದೆ. ಆದರೆ ಸೆಷನ್ ಚಿಕ್ಕದಾಗಿರುತ್ತದೆ. ಇದರಿಂದಾಗಿ ಹೂಡಿಕೆದಾರರು ಬಹುಬೇಗನೆ ಟ್ರೇಡಿಂಗ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಸಾಮಾನ್ಯ ಅವಧಿಯಲ್ಲಿ ನಡೆಯುವ ಟ್ರೇಡಿಂಗ್ನಂತೆ ಇಲ್ಲಿ ಹೂಡಿಕೆದಾರರಿಗೆ ಹೆಚ್ಚು ಸಮಯ ಸಿಗುವುದಿಲ್ಲ. ಸಿಕ್ಕ ಅಲ್ಪ ಸಮಯದಲ್ಲಿಯೇ ಅವರು ಟ್ರೇಡಿಂಗ್ ಮಾಡಿ ಲಾಭ ಗಳಿಸಬಹುದು’ ಎಂದು ಹೇಳಿದ್ದಾರೆ.
ನಾಳೆ ಷೇರು ಮಾರುಕಟ್ಟೆಯ ಮೊದಲ ಸೆಷನ್ ಬೆಳಗ್ಗೆ 9:15ಕ್ಕೆ ಪ್ರಾರಂಭವಾಗಿ 10 ಗಂಟೆಗೆ ಕೊನೆಗೊಳ್ಳುತ್ತದೆ. 2ನೇ ಸೆಷನ್ 11:30ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:30ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ವಿಶೇಷ ಲೈವ್ ಟ್ರೇಡಿಂಗ್ ಸೆಷನ್ನಲ್ಲಿ ಎಲ್ಲಾ ಭವಿಷ್ಯದ ಒಪ್ಪಂದಗಳು ಶೇ.5ರಷ್ಟು ಕಾರ್ಯಾಚರಣಾ ವ್ಯಾಪ್ತಿಯನ್ನು ಹೊಂದಿರುತ್ತವೆ. ಈ ವಿಶೇಷ ಸೆಷನ್ನಲ್ಲಿ ಸೆಕ್ಯುರಿಟಿಗಳು F&O ವಿಭಾಗದಲ್ಲಿ ಟ್ರೇಡ್ ಆಗುವ ಸ್ಟಾಕ್ಗಳನ್ನು ಒಳಗೊಂಡಂತೆ 5%ನ ಮೇಲಿನ ಮತ್ತು ಕೆಳಗಿನ ಸರ್ಕ್ಯೂಟ್ ಮಿತಿಗಳನ್ನು ಹೊಂದಿರುತ್ತದೆ. 2% ಮೇಲಿನ ಮತ್ತು ಕೆಳಗಿನ ಸರ್ಕ್ಯೂಟ್ ಮಿತಿಗಳನ್ನು ಹೊಂದಿರುವ ಸೆಕ್ಯುರಿಟಿಗಳು 2% ಮಿತಿಯನ್ನು ಮುಂದುವರಿಸುತ್ತವೆ.
ಇದನ್ನೂ ಓದಿ: Credit Card: ಸಾಲದ ಸುಳಿಯಲ್ಲಿ ಸಿಲುಕುವುದನ್ನು ತಪ್ಪಿಸಲು ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದ ಈ 5 ವಿಷಯಗಳನ್ನು ಸದಾ ನೆನಪಿಡಿ
2ನೇ ವಿಶೇಷ ಲೈವ್ ಟ್ರೇಡಿಂಗ್ ಸೆಷನ್ DR ಸೈಟ್ನಲ್ಲಿ ನಡೆಯುತ್ತದೆ. ಈ 2ನೇ ವಿಶೇಷ ಲೈವ್ ಸೆಷನ್ನಲ್ಲಿ ಪೂರ್ವ-ಮುಕ್ತ ಸೆಷನ್ 11:15ಕ್ಕೆ ಪ್ರಾರಂಭವಾಗಿ 11:30ಕ್ಕೆ ಕೊನೆಗೊಳ್ಳುತ್ತದೆ. ಸಾಮಾನ್ಯ ಮಾರುಕಟ್ಟೆಯು ಬೆಳಗ್ಗೆ 11:30ಕ್ಕೆ ತೆರೆಯುತ್ತದೆ ಮತ್ತು ಮಧ್ಯಾಹ್ನ 12:30ಕ್ಕೆ ಕೊನೆಗೊಳ್ಳುತ್ತದೆ. Call Auction ಇಲಿಕ್ವಿಡ್ ಸೆಷನ್ 11:45ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12ಗಂಟೆಗೆ ಕೊನೆಗೊಳ್ಳುತ್ತದೆ. ಮುಕ್ತಾಯದ ಸೆಷನ್ ಮಧ್ಯಾಹ್ನ 12:40ಕ್ಕೆ ಓಪನ್ ಆಗಿ ಅದು 12:50ಕ್ಕೆ ಕೊನೆಗೊಳ್ಳುತ್ತದೆ. Trading modification ಸಮಯ ಮಧ್ಯಾಹ್ನ 1ಗಂಟೆಗೆ ಕೊನೆಗೊಳ್ಳುತ್ತದೆ.
ಜನವರಿ 20ರ ಶನಿವಾರ settlement holiday ಆಗಿದೆ. ಈ ಕಾರಣದಿಂದ F&O ವಿಭಾಗದಲ್ಲಿನ ಯಾವುದೇ ಕ್ರೆಡಿಟ್ಗಳು ಮತ್ತು ಜನವರಿ 19ರ ಇಂಟ್ರಾಡೇ ಲಾಭಗಳು ಸೆಷನ್ ಸಮಯದಲ್ಲಿ ವಹಿವಾಟಿಗೆ ಲಭ್ಯವಿರುವುದಿಲ್ಲ. ಇದರೊಂದಿಗೆ ಜನವರಿ 20ರಂದು BTST ವಹಿವಾಟಿನಿಂದ ಬರುವ sale proceeds ಜನವರಿ 22ರಂದು ಸೋಮವಾರ ಇತ್ಯರ್ಥಗೊಳಿಸಲಾಗುವುದು ಮತ್ತು ಕ್ರೆಡಿಟ್ಗಳು ಜನವರಿ 23ರ ಮಂಗಳವಾರದಂದು ವಹಿವಾಟಿಗೆ ಲಭ್ಯವಿರುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.