Investment Idea: ಈ ಸರ್ಕಾರಿ ಯೋಜನೆಯಲ್ಲಿ 500 ರೂ. ಹೂಡಿಕೆ ಪ್ರಾರಂಭಿಸಿ 40 ಲಕ್ಷದವರೆಗೆ ಪಡೆಯಿರಿ

ಇಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಉತ್ತಮ ಬಡ್ಡಿ ದೊರೆಯುವುದಲ್ಲದೆ ತೆರಿಗೆ ವಿನಾಯಿತಿಗೂ ಸಹಾಯವಾಗುತ್ತದೆ.

Written by - Puttaraj K Alur | Last Updated : Aug 28, 2022, 12:08 PM IST
  • ಪಿಪಿಎಫ್ ಖಾತೆ ತೆರೆದು ಕನಿಷ್ಠ 500 ರೂ. ಹೂಡಿಕೆ ಪ್ರಾರಂಭಿಸಿ
  • ಇಲ್ಲಿ ಹೂಡಿಕೆಗೆ ಉತ್ತಮ ಬಡ್ಡಿ ಜೊತೆಗೆ ತೆರಿಗೆ ವಿನಾಯಿತಿ ಸಿದಲಿದೆ
  • 15 ವರ್ಷದವರೆಗೂ ಹೂಡಿಕೆ ಮಾಡಿದ್ರೆ ಸಿಗುತ್ತೆ ಭರ್ಜರಿ ಲಾಭ
Investment Idea: ಈ ಸರ್ಕಾರಿ ಯೋಜನೆಯಲ್ಲಿ 500 ರೂ. ಹೂಡಿಕೆ ಪ್ರಾರಂಭಿಸಿ 40 ಲಕ್ಷದವರೆಗೆ ಪಡೆಯಿರಿ title=
ಪಿಪಿಎಫ್ ಹೂಡಿಕೆಯಲ್ಲಿ ಬಂಪರ್ ಲಾಭ

ನವದೆಹಲಿ: ನೀವು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ ಮಾತ್ರ. ಇಂದು ನಾವು ನಿಮಗೆ ಪಿಪಿಎಫ್ ಖಾತೆಯ ಬಗ್ಗೆ ತಿಳಿಸಿಕೊಡಲಿದ್ದೇವೆ. ಇಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಉತ್ತಮ ಬಡ್ಡಿ ದೊರೆಯುವುದಲ್ಲದೆ ತೆರಿಗೆ ವಿನಾಯಿತಿಗೂ ಸಹಾಯವಾಗುತ್ತದೆ. ಅಲ್ಲದೆ ಇಲ್ಲಿ ಯಾವುದೇ ರೀತಿಯ ಅಪಾಯವಿರುವುದಿಲ್ಲ. ಇದು ಸರ್ಕಾರದ ಯೋಜನೆಯಾಗಿದ್ದು, ಯಾವಾಗ ಬೇಕಾದರೂ ನಿಮ್ಮ ಹಣವನ್ನೂ ಹಿಂಪಡೆಯಬಹುದು.

500 ರೂ.ನಿಂದ ಖಾತೆ ತೆರೆಯಬಹುದು

ನೀವು ಪಿಪಿಎಫ್ ಖಾತೆಯನ್ನು ತೆರೆಯಲು ಬಯಸಿದರೆ ಇದಕ್ಕಾಗಿ ನೀವು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗೆ ಹೋಗಬೇಕು. ಇದು ಸರ್ಕಾರದ ಉಳಿತಾಯ ಯೋಜನೆ, ಆದ್ದರಿಂದ ಬಡ್ಡಿದರವನ್ನು ಸರ್ಕಾರವೇ ನಿರ್ಧರಿಸುತ್ತದೆ. ಕೇವಲ 500 ರೂ.ನಿಂದಲೂ ಪಿಪಿಎಫ್ ಖಾತೆ ಆರಂಭಿಸಬಹುದು. PPF ಖಾತೆಯಲ್ಲಿ ನೀವು ಪ್ರತಿ ವರ್ಷ ಕನಿಷ್ಠ 500 ರೂ. ಹೂಡಿಕೆ ಮಾಡಬಹುದು. ಇಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಣವನ್ನು ಠೇವಣಿ ಮಾಡಬಹುದು.

ಪ್ರತಿವರ್ಷ ಕನಿಷ್ಠ 500 ರೂ. ಹೂಡಿಕೆ ಮಾಡಬೇಕು

PPF ಖಾತೆಯಲ್ಲಿ ಮಾಡಿದ ಹೂಡಿಕೆಗೆ ವಾರ್ಷಿಕವಾಗಿ ಶೇ.7.1ರಷ್ಟ ಬಡ್ಡಿ ಸಿಗುತ್ತದೆ. ಇದರ ಪಕ್ವತೆಯ ಅವಧಿ 15 ವರ್ಷಗಳು. 1 ವರ್ಷದಲ್ಲಿ ನೀವು ಕನಿಷ್ಠ 500 ರೂ. ಠೇವಣಿ ಮಾಡದಿದ್ದರೆ, ನಿಮ್ಮ ಖಾತೆಯನ್ನು ಡಿಫಾಲ್ಟ್ ಖಾತೆಯ ವರ್ಗಕ್ಕೆ ಸೇರಿಸಲಾಗುತ್ತದೆ. ಅದನ್ನು ಮತ್ತೆ ಸಕ್ರಿಯಗೊಳಿಸಲು ಬಾಕಿ ಮೊತ್ತವನ್ನು 50 ರೂ. ದಂಡದೊಂದಿಗೆ ಠೇವಣಿ ಮಾಡಬೇಕು.

ಇದನ್ನೂ ಓದಿ: Asia Cup 2022: ಇಂದು ಭಾರತ-ಪಾಕ್ ಹೈವೋಲ್ಟೇಜ್ ಫೈಟ್: ಸಾಂಪ್ರದಾಯಿಕ ವೈರಿಗಳ ಬಗ್ಗುಬಡಿಯಲು ಟೀಂ ಇಂಡಿಯಾ ಸಜ್ಜು

ನೀವು 15 ವರ್ಷಗಳ ನಂತರವೂ ಹೂಡಿಕೆ ಮಾಡಬಹುದು

PPF ಖಾತೆಯ 15 ವರ್ಷಗಳ ಅವಧಿ ಪೂರ್ಣಗೊಂಡ ನಂತರ, ನೀವು ಠೇವಣಿ ಮತ್ತು ಬಡ್ಡಿ ಸೇರಿದಂತೆ ಸಂಪೂರ್ಣ ಹಣವನ್ನು ಮರಳಿ ಪಡೆಯುತ್ತೀರಿ. ಆದರೆ ಆ ವೇಳೆ ನಿಮಗೆ ಹಣದ ಅಗತ್ಯವಿಲ್ಲದಿದ್ದರೆ ನೀವು ಇದನ್ನು ಮುಂದಿನ 5 ವರ್ಷಗಳವರೆಗೆ ಮುಂದುವರಿಸಬಹುದು. ಹಣ ಠೇವಣಿ ಮಾಡುವಾಗಲೂ ಮತ್ತು ಮಾಡುವುದನ್ನು ನಿಲ್ಲಿಸಿದ ನಂತರವೂ ನೀವು ಖಾತೆಯನ್ನು ಮುಂದುವರಿಸಬಹುದು. ಅವಧಿ ಪೂರ್ಣಗೊಂಡ ನಂತರವೂ ನೀವು ಇದನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿರುತ್ತದೆ.

40 ಲಕ್ಷದವರೆಗೆ ಮರಳಿ ಸಿಗಲಿದೆ

PPF ಖಾತೆಯು 15 ವರ್ಷಗಳು ಪೂರ್ಣಗೊಂಡ ನಂತರ ಮುಕ್ತಾಯವಾಗಲಿದೆ. ಈ ಸಮಯದಲ್ಲಿ ನೀವು 40 ಲಕ್ಷ ರೂ.ಗಳವರೆಗೆ ಪಡೆಯುತ್ತೀರಿ. ಎಷ್ಟು ಮೊತ್ತದ ಹೂಡಿಕೆಯಲ್ಲಿ ನೀವು ಎಷ್ಟು ಲಾಭ ಪಡೆಯುತ್ತೀರಿ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: IND vs PAK: ಬಾಬರ್ ಅಜಮ್‍ಗೆ ಮದುವೆಯಾಗು ಎಂದ ರೋಹಿತ್ ಶರ್ಮಾ!

  • ತಿಂಗಳಿಗೆ 1000 ರೂ. ಠೇವಣಿ ಇಟ್ಟರೆ ನಿಮಗೆ 3,15,572 ರೂ. ಸಿಗಲಿದೆ
  • 2000 ರೂ. ಠೇವಣಿ ಇಟ್ಟರೆ 6,31,135 ರೂ. ಸಿಗುತ್ತದೆ
  • 3000 ರೂ. ಠೇವಣಿ ಇಟ್ಟರೆ 9,46,704 ರೂ. ದೊರೆಯಲಿದೆ
  • 4000 ರೂ. ಠೇವಣಿ ಇಟ್ಟರೆ 12,72,273 ರೂ. ಸಿಗಲಿದೆ
  • 5000 ರೂ. ಠೇವಣಿ ಇಟ್ಟರೆ 15,77,841 ರೂ. ದೊರೆಯಲಿದೆ
  • 10,000 ರೂ. ಠೇವಣಿ ಇಟ್ಟರೆ 31,55,680 ರೂ. ಸಿಗಲಿದೆ
  • 12,000 ರೂ. ಠೇವಣಿ ಇಟ್ಟರೆ 37,86,820 ರೂ. ಲಭಿಸಲಿದೆ
  • 12,250 ರೂ. ಠೇವಣಿ ಇಟ್ಟರೆ 39,44,699 ರೂ. ಸಿಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News