IRCTC ವತಿಯಿಂದ 12 ದಿನಗಳ ಕಾಲ ವಿಶೇಷ ತೀರ್ಥಯಾತ್ರೆ! ಮೇ 4 ರಿಂದ ಅಗ್ಗದ ಬೆಲೆಯಲ್ಲಿ ತೀರ್ಥ ಕ್ಷೇತ್ರ ದರ್ಶನ

IRCTC Tour Package :ಈ ರೈಲು 4 ಹವಾನಿಯಂತ್ರಿತ ಕೋಚ್‌ಗಳನ್ನು ಹೊಂದಿದ್ದು, 752 ಪ್ರಯಾಣಿಕ ಸಾಮರ್ಥ್ಯವಿರುವ ಸ್ಲೀಪಿಂಗ್ ಬರ್ತ್‌ಗಳೊಂದಿಗೆ 7 ಕೋಚ್‌ಗಳನ್ನು ಒಳಗೊಂಡಿದೆ. 

Written by - Ranjitha R K | Last Updated : Apr 12, 2023, 02:37 PM IST
  • IRCTC ವತಿಯಿಂದ ವಿಶೇಷ 12 ದಿನಗಳ ತೀರ್ಥಯಾತ್ರೆ
  • ಮೇ 4 ರಿಂದ ಯಾತ್ರೆ ಆರಂಭ
  • ಅಗ್ಗದ ಬೆಲೆಯಲ್ಲಿ ನಡೆಸಬಹುದು ತೀರ್ಥ ಯಾತ್ರೆ
IRCTC ವತಿಯಿಂದ  12 ದಿನಗಳ ಕಾಲ ವಿಶೇಷ ತೀರ್ಥಯಾತ್ರೆ! ಮೇ 4 ರಿಂದ ಅಗ್ಗದ ಬೆಲೆಯಲ್ಲಿ ತೀರ್ಥ ಕ್ಷೇತ್ರ ದರ್ಶನ  title=

IRCTC Tour Package : ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ IRCTC ವತಿಯಿಂದ ವಿಶೇಷ 12 ದಿನಗಳ ತೀರ್ಥಯಾತ್ರೆಯನ್ನು ಆಯೋಜಿಸಲಾಗಿದೆ. ಈ ನ ಬಗ್ಗೆ IRCTC ವ್ಯವಸ್ಥಾಪಕ ನಿರ್ದೇಶಕ ಕೆ.ರವಿಕುಮಾರ್ ಮತ್ತು ಸಹಾಯಕ ಪ್ರಧಾನ ವ್ಯವಸ್ಥಾಪಕ (ಎಸ್. ಸುಬ್ರಮಣಿ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ವಿಶೇಷ ಭಾರತ್ ಗೌರವ್ ಪ್ರವಾಸೋದ್ಯಮ~ ರೈಲನ್ನು ಪರಿಚಯಿಸಲಾಗಿದೆ.

ಈ ರೈಲು 4 ಹವಾನಿಯಂತ್ರಿತ ಕೋಚ್‌ಗಳನ್ನು ಹೊಂದಿದ್ದು, 752 ಪ್ರಯಾಣಿಕ ಸಾಮರ್ಥ್ಯವಿರುವ ಸ್ಲೀಪಿಂಗ್ ಬರ್ತ್‌ಗಳೊಂದಿಗೆ 7 ಕೋಚ್‌ಗಳನ್ನು ಒಳಗೊಂಡಿದೆ. ದಕ್ಷಿಣ ವಿಭಾಗದ ರೈಲ್ವೆ ವತಿಯಿಂದ ಯಿಂದ ಈ ವಿಶೇಷ ತೀರ್ಥಯಾತ್ರೆ ಟ್ರಿಪ್‌ ಅನ್ನು ಆಯೋಜಿಸಲಾಗುತ್ತಿದೆ.

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಬಂಬಾಟ್ ಲಾಟರಿ, ಏಪ್ರಿಲ್ 30 ರಂದು ಖಾತೆಗೆ ಬರಲಿವೆ 1.20 ಲಕ್ಷ ರೂ.ಗಳು!

12 ದಿನಗಳ ತೀರ್ಥಯಾತ್ರೆ :
 ಮೇ 4 ರಂದು ಪ್ರಾರಂಭವಾಗುವ ಈ ಪ್ರವಾಸದಲ್ಲಿ 12 ದಿನಗಳ ತೀರ್ಥಯಾತ್ರೆ ನಡೆಸಲಾಗುವುದು. ಪುಣೆ, ಕೋನಾರ್ಕ್, ಕೋಲ್ಕತ್ತಾ, ಗಯಾ, ವಾರಣಾಸಿ, ಅಯೋಧಿ, ಅಲಹಾಬಾದ್ ಮತ್ತು ಇತರ ಸ್ಥಳಗಳನ್ನು ಈ ಯಾತ್ರೆ ಒಳಗೊಂಡಿದೆ. ಈ ತೀರ್ಥಯಾತ್ರೆಯ ಸಮಯದಲ್ಲಿ, ವಸತಿ, ಸ್ಥಳೀಯ ಪ್ರವಾಸಗಳು, ಆಹಾರ, ವೈದ್ಯಕೀಯ ನೆರವು, ಭದ್ರತೆ ಮತ್ತು ಪ್ರವಾಸಿ  ಗೈಡ್ ಗಳನ್ನೂ ಒದಗಿಸುಲಾಗುವುದು. 

ದರ ಎಷ್ಟು ? :  
ಒಬ್ಬ ಪ್ರಯಾಣಿಕನಿಗೆ, ಹವಾನಿಯಂತ್ರಿತ ಕೋಚ್‌ನಲ್ಲಿ ಈ ಪ್ರಯಾಣದ ದರ 35,651ರೂಪಾಯಿ. ಇನ್ನು ಹವಾನಿಯಂತ್ರಿತವಲ್ಲದ ಪ್ರಯಾಣಕ್ಕೆ 20,367  ರೂ. ಪಾವತಿಸಬೇಕಾಗುತ್ತದೆ. 
 
ಇದನ್ನೂ ಓದಿ : ಭಾರತದ ಅತ್ಯಂತ ಹಿರಿಯ ಬಿಲಿಯನೇರ್ ಕೇಶುಬ್ ಮಹೀಂದ್ರಾ ವಿಧಿವಶ
 
ಈ ಯಾತ್ರೆಯಲ್ಲಿ ಭಾಗವಹಿಸಲು ಇಚ್ಚಿಸುವವರು IRCTC ಯ ಅಧಿಕೃತ ವೆಬ್‌ಸೈಟ್‌ www.irctctourism.comಗೆ ಭೇಟಿ ನೀಡಬಹುದು. ಅಥವಾ ರೈಲ್ವೇ ಸ್ಟೇಷನ್‌ಗಳಾದ ಚೆನ್ನೈ, ಮಧುರೈ, ತಿರುಚ್ಚಿ ಮತ್ತು ಕೊಯಮತ್ತೂರುಗಳನ್ನು ನೇರವಾಗಿ ಟಿಕೆಟ್ ಕಾಯ್ದಿರಿಸಬಹುದು. 

ಪ್ರವಾಸಿಗರು ಪ್ರವೇಶಿಸಲು ನಿಲ್ದಾಣಗಳು:
ಈ ರೈಲು ಕೊಚುವೇಲಿ ನಿಲ್ದಾಣದಿಂದ (ಕೇರಳ ರಾಜ್ಯ) ಪ್ರಾರಂಭವಾಗುತ್ತದೆ ಮತ್ತು ತೆಂಕಶಿ, ರಾಜಪಾಳ್ಯಂ, ಶಿವಕಾಶಿ, ವಿರುಧುನಗರ, ಮಧುರೈ, ದಿಂಡಿಗಲ್, ತಿರುಚ್ಚಿ, ತಂಜಾವೂರು, ಮೈಲಾಡುತುರೈ, ಚಿದಂಬರಂ, ವಿಲ್ಲುಪುರಂ, ಚೆಂಗಲ್ಪಟ್ಟು, ತಾಂಬರಂ ಮತ್ತು ಚೆನ್ನೈ ಎಗ್ಮೋರ್‌ನಲ್ಲಿ ಪ್ರಯಾಣಿಕರು  ರೈಲು ಹತ್ತಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News