Sovereign Gold Bond Scheme 2021-22 – Series V - ಇಂದಿನಿಂದ ಅಗ್ಗದ ದರದಲ್ಲಿ ಚಿನ್ನವನ್ನು ಖರೀದಿಸಲು ನಿಮಗೆ ಮತ್ತೊಂದು ಮತ್ತೊಂದು ಸುವರ್ಣಾವಕಾಶ ಸಿಗುತ್ತಿದೆ. ಸಾರ್ವಭೌಮ ಚಿನ್ನದ ಬಾಂಡ್ ಯೋಜನೆ 2021-22 (Sovereign Gold Bond Scheme 2021-22 – Series V) ಇಂದಿನಿಂದ ಐದನೇ ಸರಣಿಯ ಮಾರಾಟ ಆರಂಭವಾಗಿದೆ. ಈ ಯೋಜನೆಯು ಕೇವಲ ಐದು ದಿನಗಳವರೆಗೆ (ಅಂದರೆ, ಆಗಸ್ಟ್ 9 ರಿಂದ ಆಗಸ್ಟ್ 13 ರವರೆಗೆ) ತೆರೆದಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಈ ಅವಧಿಯಲ್ಲಿ ನೀವು ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿಸಲು ಸಾಧ್ಯವಾಗಲಿದೆ. ಸಾರ್ವಭೌಮ ಗೋಲ್ಡ್ ಬಾಂಡ್ ಅನ್ನು ಸರ್ಕಾರದ ಪರವಾಗಿ RBI ಬಿಡುಗಡೆ ಮಾಡುತ್ತದೆ. ನೀವು ಅದನ್ನು ಎಲ್ಲಿಂದ ಮತ್ತು ಹೇಗೆ ಖರೀದಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಪ್ರತಿ ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ಸಾವೆರಿನ್ ಚಿನ್ನದ ಬಾಂಡ್ (SGB) ಯೋಜನೆಯ ಅಡಿ ನೀವು 4790 ರೂ.ಗಳಿಗೆ ಒಂದು ಗ್ರಾಂ ಚಿನ್ನವನ್ನು ಖರೀದಿಸಬಹುದು. ಅಂದರೆ, 10 ಗ್ರಾಂ ಚಿನ್ನವನ್ನು ನೀವು 47,900 ರೂ.ಗಳಿಗೆ ಖರೀಸಬಹುದು. ಒಂದು ವೇಳೆ ನೀವು ಆನ್ಲೈನ್ ನಲ್ಲಿ ಚಿನ್ನವನ್ನು ಖರೀದಿಸಿದರೆ, ನಿಮಗೆ 10 ಗ್ರಾಂ ಚಿನ್ನ 47,400 ರೂ. ಬೀಳಲಿದೆ.
ಎಲ್ಲಿಂದ ಖರೀದಿಸಬಹುದು?
ಪ್ರತಿ SGB ಅಪ್ಲಿಕೇಶನ್‌ನೊಂದಿಗೆ ಹೂಡಿಕೆದಾರರು ತಮ್ಮ PAN ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು. ಚಿನ್ನದ ಬಾಂಡ್‌ಗಳನ್ನು ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (HSCIL), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳು (NSE ಮತ್ತು BSE) ಮೂಲಕ ಮಾರಾಟ ಮಾಡಲಾಗುತ್ತದೆ.
ಎಷ್ಟು ವರ್ಷಗಳ ಬಳಿಕ ಮ್ಯಾಚ್ಯೂರ್ ಆಗುತ್ತದೆ?
ಸಾರ್ವಭೌಮ ಚಿನ್ನದ ಬಾಂಡ್ ಮ್ಯಾಚ್ಯೂರಿಟಿ ಅವಧಿ ಎಂಟು ವರ್ಷಗಳದ್ದಾಗಿರುತ್ತದೆ. ಆದರೆ ಐದು ವರ್ಷಗಳ ಬಳಿಕ ಬಡ್ಡಿ ಪಾವತಿಯ ತಾರೀಖಿನಂದು ನೀವು ಈ ಸ್ಕೀಮ್ ನಿಂದ ಹೊರಬೀಳಬಹುದು. ಸಾವೆರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರು ಕನಿಷ್ಠ ಅಂದರೆ ಒಂದು ಗ್ರಾಂ ಚಿನ್ನದಲ್ಲಿ ಹೂಡಿಕೆ ಮಾಡುವುದು ಅವಶ್ಯಕವಾಗಿದೆ. ನಿಮಗೆ ಅವಶ್ಯಕತೆ ಇದೆ ಎಂದಾಗ ನೀವು ಈ ಬಾಂಡ್ ಮೇಲೆ ಸಾಲವನ್ನು ಕೂಡ ಪಡೆಯಬಹುದು. ಆದರೆ, ಇದಕ್ಕಾಗಿ ನೀವು ಗೋಲ್ಡ್ ಬಂದ್ ಅನ್ನು ಅಡವು ಇಡಬೇಕಾಗುತ್ತದೆ.
ಇದನ್ನೂ ಓದಿ-PM Kisan: ಇಂದಿನಿಂದ ರೈತರ ಖಾತೆ ಸೇರಲಿದೆ 2000 ರೂ., ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿ
Gold Bondಗಳ ಲಾಭವೇನು?
- ಗೋಲ್ಡ್ ಬಾಂಡ್ ಹೂಡಿಕೆಯ ಮ್ಯಾಚುರಿಟಿ ತೆರಿಗೆ ಮುಕ್ತವಾಗಿರುತ್ತದೆ. ಅಲ್ಲದೆ ಇದರಲ್ಲಿ ಎಕ್ಷ್ಪೆನ್ಸ ರೆಶ್ಯೋ ಒಟ್ಟಿಗೆ ಇರುವುದಿಲ್ಲ. ಭಾರತ ಸರ್ಕಾರಕ್ಕೆ (Government Of India) ಸಮರ್ಪಿತವಾದ ಕಾರಣ ಡಿಫಾಲ್ಟ್ ಅಪಾಯ ಇರುವುದಿಲ್ಲ.
- ಇದು HINs ಗಾಗಿ ಉತ್ತಮ ಆಯ್ಕೆಯಾಗಿದೆ. ಹೀಗಾಗಿ ಮ್ಯಾಚ್ಯೂರಿಟಿವರೆಗೆ ಕಾಯ್ದರೆ, ಕ್ಯಾಪಿಟಲ್ ಗೆನ್ಸ್ ಟ್ಯಾಕ್ಸ್ ಕೂಡ ಇರುವುದಿಲ್ಲ. ಇಕ್ವಿಟಿ ಮೇಲೆ ಶೇ.10ರಷ್ಟು ಕ್ಯಾಪಿಟಲ್ ಗೆನ್ಸ್ ಟ್ಯಾಕ್ಸ್ ಇರುತ್ತದೆ. ಹೇಗಾಗಿ ದೀರ್ಘಾವಧಿ ಹೂಡಿಕೆಗೆ ಇದೊಂದು ಉತ್ತಮ ಆಯ್ಕೆಯಾಗಿದೆ.
- ಭೌತಿಕ ಚಿನ್ನಕ್ಕೆ ಹೋಲಿಸಿದರೆ ಇದೊಂದು ಸುರಕ್ಷಿತ ಹೂಡಿಕೆಯಾಗಿದೆ.
- ಚಿನ್ನದ ಶುದ್ಧತೆಯನ್ನು ಪರಿಶೀಲಿಸುವ ಅವಶ್ಯಕತೆ ಇಲ್ಲ.
- ಎಕ್ಸಿಟ್ ಗಾಗಿ ತುಂಬಾ ಸರಳ ಆಯ್ಕೆಗಳಿವೆ. ಇದರ ಮೇಲೆ ನೀವು ಸಾಲವನ್ನು ಕೂಡ ಪಡೆಯಬಹುದು.
ಯಾರು ಮತ್ತು ಎಷ್ಟು ಹೂಡಿಕೆ ಮಾಡಬಹುದು?
ಯೋಜನೆಯಡಿಯಲ್ಲಿ, ವೈಯಕ್ತಿಕ ಹೂಡಿಕೆದಾರರು (Investment In Gold)ಮತ್ತು ಹಿಂದೂ ಅವಿಭಾಜ್ಯ ಕುಟುಂಬಗಳು ಆರ್ಥಿಕ ವರ್ಷದಲ್ಲಿ ಕನಿಷ್ಠ ಒಂದು ಗ್ರಾಂ ಮತ್ತು ಗರಿಷ್ಠ ನಾಲ್ಕು ಕಿಲೋಗ್ರಾಂ ಚಿನ್ನದಲ್ಲಿ (Gold) ಹೂಡಿಕೆ ಮಾಡಬಹುದು. ಟ್ರಸ್ಟ್ ಮತ್ತು ಇಂತಹ ಇತರ ಘಟಕಗಳು ಪ್ರತಿ ವರ್ಷ 20 ಕೆಜಿ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಚಿನ್ನದ ಬಾಂಡ್‌ಗಳನ್ನು ಬ್ಯಾಂಕುಗಳು, ಭಾರತದ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್‌ಗಳು, ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳ ಮೂಲಕ ಮಾರಾಟ ಮಾಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ