ನವದೆಹಲಿ: ಇಡೀ ಪ್ರಪಂಚದಲ್ಲಿಯೇ ಇ-ಕಾಮರ್ಸ್ ದೈತ್ಯ ಎನಿಸಿಕೊಂಡಿರುವ ಅಮೆಜಾನ್ 18,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ತನ್ನ ಉದ್ಯೋಗಿಗಳಿಗೆ ಇದ್ದಕ್ಕಿದ್ದಂತೆಯೇ ಶಾಕ್ ನೀಡಿರುವ ಅಮೆಜಾನ್, ಮೊದಲು ಯೋಜಿಸಿದ್ದಕ್ಕಿಂತ ಶೇ.70ರಷ್ಟು ಹೆಚ್ಚಿನ ಉದ್ಯೋಗಗಳನ್ನು ಕಡಿತಗೊಳಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಅಮೆಜಾನ್‌ನ ಕಾರ್ಪೊರೇಟ್ ಶ್ರೇಣಿ ಹೊಂದಿರುವ ಹೆಚ್ಚಿನ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲು ಅಮೆಜಾನ್ ಯೋಚಿಸಿದೆ. ಸಿಯಾಟಲ್ ಮೂಲದ ಕಂಪನಿಯು ನವೆಂಬರ್‌ನಲ್ಲಿ ತನ್ನ ಸಾಧನಗಳ ವಿಭಾಗದಲ್ಲಿ ಸಿಬ್ಬಂದಿಯನ್ನು ವಜಾಗೊಳಿಸಲು ಪ್ರಾರಂಭಿಸಿತ್ತು. ಆಗ ಅಮೆಜಾನ್ 10,000 ಉದ್ಯೋಗ ಕಡಿತಗಳನ್ನು ಗುರಿಯಾಗಿಸಿಕೊಂಡಿತ್ತು.
ಇದನ್ನೂ ಓದಿ: PPF ಖಾತೆದಾರರ ಗಮನಕ್ಕೆ : ನಿಮಗೆ ಸರ್ಕಾರದಿಂದ ಹೊಸ ಷರತ್ತು!
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಆನ್‌ಲೈನ್ ಚಿಲ್ಲರೆ ದೈತ್ಯ ಹೆಚ್ಚಿನ ಉದ್ಯೋಗಿಗಳನ್ನು ವೇಗವಾಗಿ ನೇಮಕ ಮಾಡಿಕೊಂಡಿತ್ತು. ಆದರೆ ‘ಅನಿಶ್ಚಿತ ಆರ್ಥಿಕತೆ’ ಕಾರಣದಿಂದ ಇದೀಗ ಅನಿವಾರ್ಯವಾಗಿ 18 ಸಾವಿರ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡುವ ನಿರ್ಧಾರ ಮಾಡಿರುವುದಾಗಿ ಕಂಪನಿ ಬುಧವಾರ ಘೋಷಿಸಿದೆ.
ಸಿಇಒ ಆಂಡಿ ಜಾಸ್ಸಿ 2023ರಲ್ಲಿ ಹೊಂದಾಣಿಕೆ ಮುಂದುವರಿಸುವುದರಿಂದ ಹೆಚ್ಚಿನ ಉದ್ಯೋಗ ಕಡಿತ ಇರುತ್ತದೆ ಎಂದು ಕಾರ್ಮಿಕರಿಗೆ ಹಂಚಿಕೊಂಡಿರುವ ಪತ್ರದಲ್ಲಿ ತಿಳಿಸಿದ್ದಾರೆ. ‘ನಾವು ನವೆಂಬರ್‌ನಲ್ಲಿ 10 ಸಾವಿರ ಉದ್ಯೋಗ ಕಡಿತಕ್ಕೆ ನಿರ್ಧರಿಸಿದ್ದೇವು, ಆದರೆ ಇದೀಗ ಅದು 18 ಸಾವಿರ ತಲುಪಿದೆ. ‘ಅನಿಶ್ಚಿತ ಆರ್ಥಿಕತೆ’ಯಿಂದ ನಾವು ಈ ತೀರ್ಮಾನ ತೆಗೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಒಟ್ಟಿಗೆ ಐದು ಹೊಸ ಕಾರು ಲಾಂಚ್ ಮಾಡಿದ ಮಾರುತಿ ! ಬೆಲೆ ಕೇವಲ 5.35 ಲಕ್ಷ
ಅಮೆಜಾನ್‍ನ ಈ ಉದ್ಯೋಗ ಕಡಿತದ ವರದಿ ಒಂದು ವೇಳೆ ನಿಜವಾದರೆ, ಅತಿಹೆಚ್ಚು ಉದ್ಯೋಗಿಗಳನ್ನು ಒಂದೇ ಏಟಿಗೆ ವಜಾಗೊಳಿಸಿದ ದಾಖಲೆ ಇದಾಗಲಿದೆ. ಈ ಹಿಂದೆ ಸಾಫ್ಟ್‍ವೇರ್ ಸಂಸ್ಥೆ ಸೇಲ್ಸ್ ಫೋರ್ಸ್ ತನ್ನ ಶೇ.10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿತ್ತು. ವಿಮಿಯೋ ಶೇ.11ರಷ್ಟು ಹಾಗೂ ಮೆಟಾ ಸುಮಾರು 11,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿತ್ತು. ಇವುಗಳ ಸಾಲಿಗೆ ಇದೀಗ ಅಮೆಜಾನ್ ಸಹ ಸೇರಿದ್ದು, ಬರೋಬ್ಬರಿ 18 ಸಾವಿರ ಜನರಿಗೆ ಗೇಟ್‍ಪಾಸ್ ನೀಡಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.