ನವದೆಹಲಿ: ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹಣ ಹಿಂಪಡೆಯುವಿಕೆಯ ನಿಯಮಗಳಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಈ ನಿಯಮಗಳ ಅಡಿಯಲ್ಲಿ ಇದೀಗ ಅವಧಿಪೂರ್ವ ಹಿಂಪಡೆಯುವಿಕೆ ಮಾಡಿದರೆ, ಠೇವಣಿ ಮಾಡಿದ ಮೊತ್ತದಿಂದ ಹಣ ಕಡಿತಗೊಳಿಸಲಾಗುವುದು ಎನ್ನಲಾಗಿದೆ. ಹಿಂದಿನ ನಿಯಮಗಳ ಪ್ರಕಾರ, ಖಾತೆಯಿಂದ ಅಕಾಲಿಕವಾಗಿ ಹಣ ಹಿಂಪಡೆದ ಸಂದರ್ಭದಲ್ಲಿ, ಪಾವತಿಸಿಲಾದ ಬಡ್ಡಿಯನ್ನು ಕಡಿತಗೊಳಿಸಿದ ನಂತರ ಖಾತೆಯಲ್ಲಿ ಠೇವಣಿ ಮಾಡಿದ ಸಂಪೂರ್ಣ ಮೊತ್ತವನ್ನು ಖಾತೆದಾರರಿಗೆ ಹಿಂತಿರುಗಿಸಲಾಗುತ್ತಿತ್ತು. (Business News In Kannada)
ಒಂದು ವರ್ಷದ ಅವಧಿಯ ಮೊದಲು ಹಿಂಪಡೆದರೆ ಏನಾಗುತ್ತದೆ?
ಹೂಡಿಕೆಯ ಅವಧಿಯೂ ಒಂದು ವರ್ಷ ಪೂರ್ಣಗೊಳ್ಳುವ ಮೊದಲು ಖಾತೆಯಿಂದ ಹಣವನ್ನು ಹಿಂಪಡೆದರೆ, ನಂತರ ಒಟ್ಟು ಠೇವಣಿ ಮಾಡಲಾದ ಒಟ್ಟು ಮೊತ್ತದಿಂದ ಶೇ.1 ರಷ್ಟು ಹಣವನ್ನು ಕಡಿತಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ. ಇದಕ್ಕೂ ಮೊದಲು ಒಟ್ಟು ಠೇವಣಿಗಳ ಮೇಲಿನ ಬಡ್ಡಿಯಿಂದ ಕಡಿತಗೊಳಿಸಲಾಗುತಿತ್ತು.
.
ಈ ಆಯ್ಕೆಯನ್ನು ಸಹ ನಿಲ್ಲಿಸಲಾಗಿದೆ
ಹೂಡಿಕೆದಾರರು ಐದು ವರ್ಷಗಳ ಅವಧಿಗೆ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ ಮತ್ತು ನಾಲ್ಕು ವರ್ಷಗಳಲ್ಲಿ ಖಾತೆಯನ್ನು ಮುಚ್ಚಿದರೆ, ಇನ್ಮುಂದೆ ಅವರಿಗೆ ಉಳಿತಾಯ ಖಾತೆಯ ಪ್ರಯೋಜನಗಳನ್ನು ಪಡೆಯುತ್ತಾರೆ. ಮೊದಲು, ಈ ಯೋಜನೆಯಲ್ಲಿ ಬಡ್ಡಿದರಗಳು ಮೂರು ವರ್ಷಗಳವರೆಗೆ ಅನ್ವಯಿಸುತ್ತವೆ. ಐದು ವರ್ಷಗಳವರೆಗಿನ ಹೂಡಿಕೆ ಅವಧಿಯ ಆಯ್ಕೆಯನ್ನು ಸರ್ಕಾರ ತೆಗೆದುಹಾಕಿದೆ.
ಎಷ್ಟು ಬಡ್ಡಿ ಸಿಗುತ್ತದೆ
ಎರಡು ವರ್ಷ, ಮೂರು ವರ್ಷ ಅಥವಾ ಐದು ವರ್ಷಗಳ ಅವಧಿಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ. ನೀವು ಖಾತೆಯನ್ನು ತೆರೆದ ಆರು ತಿಂಗಳ ನಂತರ ಅಥವಾ ಒಂದು ವರ್ಷದ ಮೊದಲು ನಿಮ್ಮ ಖಾತೆಯನ್ನು ಮುಚ್ಚಿದಾಗ, ಹೂಡಿಕೆ ಮಾಡಿದ ತಿಂಗಳ ಸಂಖ್ಯೆಗೆ ಮಾತ್ರ ಬಡ್ಡಿಯನ್ನು ನೀಡಲಾಗುತ್ತದೆ. ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಅನುಗುಣವಾಗಿ ಬಡ್ಡಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ-ಹತ್ತು ವರ್ಷಗಳಷ್ಟು ಹಳೆ ಆಧಾರ್ ಕಾರ್ಡ್ ರದ್ದಾಗಲಿವೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ
ಪ್ರಸ್ತುತ, ಹಿರಿಯ ನಾಗರಿಕ ಉಳಿತಾಯ ಪ್ರಸ್ತುತ ಶೇ.8.2 ರಷ್ಟು ವಾರ್ಷಿಕ ಬಡ್ಡಿ ಲಭಿಸುತ್ತದೆ. ಆದರೆ ಅಕಾಲಿಕವಾಗಿ ಹಿಂಪಡೆತದ ಸಂದರ್ಭದಲ್ಲಿ, ಉಳಿತಾಯ ಖಾತೆಯ ಬಡ್ಡಿ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ, ಅದು ಪ್ರಸ್ತುತ ಶೇ.4ರಷ್ಟಿದೆ.
ಇದನ್ನೂ ಓದಿ-ಹಳೆ ಪಿಂಚಣಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಸಂಸತ್ತಿನಿಂದ ಮಹತ್ವದ ಘೋಷಣೆ ಮೊಳಗಿಸಿದ ಕೇಂದ್ರ ಸರ್ಕಾರ!
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಈ ಪ್ರಮುಖ ಬದಲಾವಣೆಗಳು ನೆನಪಿನಲ್ಲಿಡಿ
>> ಒಂದು ವರ್ಷದ ಮೊದಲು ಖಾತೆಯನ್ನು ಮುಚ್ಚಿದರೆ ಬಡ್ಡಿದರದಲ್ಲಿ ಬದಲಾವಣೆ ಇರುತ್ತದೆ.
>> ಖಾತೆ ತೆರೆದ ಬಳಿಕ ಆರು ತಿಂಗಳ ಮೊದಲು ಖಾತೆಯನ್ನು ಮುಚ್ಚಲಾಗುವುದಿಲ್ಲ.
>> ಖಾತೆಯನ್ನು ಅಕಾಲಿಕವಾಗಿ ಮುಚ್ಚಿದಾಗ, ಪೋಸ್ಟ್ ಆಫೀಸ್ ಉಳಿತಾಯ ಖಾತೆಯ ಬಡ್ಡಿ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ.
>> ಹೂಡಿಕೆದಾರರು ಬಯಸಿದರೆ, ಅವರು ಖಾತೆಯ ಅವಧಿಯನ್ನು ತಲಾ ಮೂರು ವರ್ಷಗಳವರೆಗೆ ವಿಸ್ತರಿಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ