ನವದೆಹಲಿ : ಭಾರತದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯವಾಗಿದೆ. ಬ್ಯಾಂಕಿನಿಂದ ಅಗತ್ಯವಿರುವ ಪ್ರತಿಯೊಂದು ಮಾಹಿತಿಯನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತದೆ. ಅಗತ್ಯ ಮಾಹಿತಿಯನ್ನು ನೀಡುವುದರ ಜೊತೆಗೆ, ವದಂತಿಗಳನ್ನು ತಪ್ಪಿಸಲು ಮತ್ತು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತದೆ. ಇತ್ತೀಚೆಗೆ, ಬ್ಯಾಂಕ್ ತನ್ನ ಗ್ರಾಹಕರಿಗೆ ಪ್ರಮುಖ ಮಾಹಿತಿಯನ್ನು ನೀಡಿದೆ.
ಇದನ್ನು ಓದಿ- ATM ಕಾರ್ಡ್ ಮೇಲೆ ನಿಮ್ಮ ಮಗುವಿನ ಫೋಟೋ ಮುದ್ರಿಸಿ, ಈ ಬ್ಯಾಂಕ್ ಆರಂಭಿಸಿದೆ ಸೇವೆ
ನವೆಂಬರ್ 22 ರಂದು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಖಾತೆಯಲ್ಲಿ ಪ್ರಮುಖ ಮಾಹಿತಿಯನ್ನು ನೀಡಿದೆ. ನವೆಂಬರ್ 22 ರಂದು INB / YONO / YONO LIGHT ಬಳಸುವಾಗ ಬ್ಯಾಂಕಿನ ಗ್ರಾಹಕರು ಕೆಲವು ಅನಾನುಕೂಲತೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಹೇಳಿದೆ. ಅಂದರೆ, ಈ ದಿನ ನೀವು ಈ ಅಪ್ಲಿಕೇಶನ್ಗಳನ್ನು ಬಳಸಿದರೆ, ನಿಮಗೆ ಕೆಲವು ರೀತಿಯ ತಾಂತ್ರಿಕ ಸಮಸ್ಯೆ ಎದುರಾಗಬಹುದು. ಗುರುವಾರ ಸಂಜೆ ಬ್ಯಾಂಕ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಇದನ್ನು ಓದಿ- ಅಲರ್ಟ್: ಎಸ್ಬಿಐನ ATM Cash Withdrawal ನಿಯಮದಲ್ಲಿ ಬದಲಾವಣೆ
ಗ್ರಾಹಕರಿಗೆ ಮನವಿ
ನವೆಂಬರ್ 22 ರಂದು ಈ ಸಮಸ್ಯೆಗಳಿಗೆ ಸಹಕರಿಸುವಂತೆ ಎಸ್ಬಿಐ ತನ್ನ ಗ್ರಾಹಕರಿಗೆ ಮನವಿ ಮಾಡಿದೆ. ಮಾಹಿತಿಯ ಪ್ರಕಾರ, ಬ್ಯಾಂಕ್ ತನ್ನ ಇಂಟರ್ನೆಟ್ ಬ್ಯಾಂಕಿಂಗ್ ವೇದಿಕೆಯನ್ನು ನವೀಕರಿಸುತ್ತಿದೆ. ಆದ್ದರಿಂದ, ಬ್ಯಾಂಕಿಗೆ ಸಂಬಂಧಿಸಿದ ಆನ್ಲೈನ್ ಸೇವೆಗಳಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ.
ಇದನ್ನು ಓದಿ- ಎಸ್ಬಿಐನ ಈ ಆಫರ್ ಅಡಿಯಲ್ಲಿ ಕೇವಲ 1300 ರೂಪಾಯಿಗಳಿಗೆ ಪಡೆಯಿರಿ Health insurance
ಈ ಕುರಿತು ಟ್ವೀಟ್ ಮಾಡಿ ಮನವಿ ಮಾಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ "ನಾವು ನಮ್ಮ ಗೌರವಯುತ ಖಾತೆದಾರರಲ್ಲಿ ಮನವಿ ಮಾಡಿಕೊಳ್ಳುವುದೆನೆಂದರೆ, ನಾವು ನಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಪ್ಲಾಟ್ ಫಾರ್ಮ್ ಅನ್ನು ಅಪ್ಗ್ರೇಡ್ ಮಾಡುತ್ತಿದ್ದೇವೆ. ಈ ಮಾಹಿತಿ ನೀಡಲು ಕಾರಣ ಎಂದರೆ ಗ್ರಾಹಕರು ತಮ್ಮ ಯಾವುದೇ ತ್ವರಿತ ಕೆಲಸಗಳಿದ್ದರೆ ಅವುಗಳನ್ನು ನವೆಂಬರ್ 22 ರೊಳಗೆ ಪೂರ್ಣಗೊಳಿಸಬೇಕು. ನ.22 ರಂದು ಕೆಲ ಸಮಸ್ಯೆಗಳು ಎದುರಾದರೆ ಕಿರಿಕಿರಿಗೊಳ್ಳಬೇಡಿ" ಎಂದು ಹೇಳಿದೆ.