SBI Loan Rate- ಎಸ್‌ಬಿಐ ಸಾಲ ಅಗ್ಗ! ಬಡ್ಡಿ ದರ ಕಡಿತ, ಗೃಹ ಸಾಲ, ಆಟೋ ಇಎಂಐ ಇಳಿಕೆ

SBI Loan Rate- ಈ ಹಿಂದೆ ಏಪ್ರಿಲ್‌ನಲ್ಲಿ ಎಸ್‌ಬಿಐ ಗೃಹ ಸಾಲದ ದರವನ್ನು ಶೇಕಡಾ 6.70 ಕ್ಕೆ ಇಳಿಸಿತ್ತು. ಇದರೊಂದಿಗೆ, ಮಹಿಳಾ ಗ್ರಾಹಕರಿಗೆ 0.05 ಶೇಕಡಾ ಹೆಚ್ಚುವರಿ ರಿಯಾಯಿತಿ ಘೋಷಿಸಲಾಗಿತ್ತು.

Written by - Yashaswini V | Last Updated : Sep 15, 2021, 08:55 AM IST
  • ಎಸ್‌ಬಿಐ ಸಾಲಗಳನ್ನು ಅಗ್ಗವಾಗಿಸಿದೆ
  • ಎಸ್‌ಬಿಐ ಗ್ರಾಹಕರು ಇದರಿಂದ ಪ್ರಯೋಜನ ಪಡೆಯುತ್ತಾರೆ
  • ಗೃಹ ಸಾಲ, ವಾಹನ ಸಾಲ ಇಎಂಐ ಕಡಿಮೆಯಾಗಬಹುದು
SBI Loan Rate- ಎಸ್‌ಬಿಐ ಸಾಲ ಅಗ್ಗ! ಬಡ್ಡಿ ದರ ಕಡಿತ, ಗೃಹ ಸಾಲ, ಆಟೋ ಇಎಂಐ ಇಳಿಕೆ title=
SBI Loan Rate- ಎಸ್‌ಬಿಐ ಸಾಲ ಅಗ್ಗ! ಬಡ್ಡಿ ದರ ಕಡಿತ, ಗೃಹ ಸಾಲ, ಆಟೋ ಇಎಂಐ ಇಳಿಕೆ

ನವದೆಹಲಿ: SBI Loan Rate- ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಡ್ಡಿದರಗಳನ್ನು ಕಡಿತಗೊಳಿಸುವ ಮೂಲಕ ಸಾಲವನ್ನು ಅಗ್ಗವಾಗಿಸಿದೆ. ಹಬ್ಬದ ಋತುವಿನ ಆರಂಭದ ದೃಷ್ಟಿಯಿಂದ, ಎಸ್‌ಬಿಐ (SBI) ಮೂಲ ದರವನ್ನು 5 ಬೇಸಿಸ್ ಪಾಯಿಂಟ್ ಅಥವಾ 0.05 ಶೇಕಡಾ ಕಡಿತ ಮಾಡಿದೆ. ಈ ಕಡಿತದ ನಂತರ, ಎಸ್‌ಬಿಐನ ಮೂಲ ದರ 7.45% ಆಗಿದೆ. ಹೊಸ ದರಗಳು ಸೆಪ್ಟೆಂಬರ್ 15 ರಿಂದ ಅಂದರೆ ಇಂದಿನಿಂದಲೇ ಜಾರಿಗೆ ಬಂದಿವೆ.

ಎಸ್‌ಬಿಐ ಸಾಲವನ್ನು ಅಗ್ಗವಾಗಿಸಿದೆ:
ಇದಲ್ಲದೇ, ಎಸ್‌ಬಿಐ (SBI) ತನ್ನ ಪ್ರಧಾನ ಸಾಲದ ದರವನ್ನು 5bps ನಿಂದ 12.20 ಶೇಕಡಕ್ಕೆ ಇಳಿಸಿದೆ. ಕಳೆದ ವಾರ ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಕೂಡ ಗೃಹ ಸಾಲದ ದರವನ್ನು 15 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿ 6.5%ಕ್ಕೆ ಇಳಿಸಿತು, ಇದು ಬ್ಯಾಂಕಿಂಗ್ ಉದ್ಯಮದಲ್ಲಿ ಅತ್ಯಂತ ಕಡಿಮೆ ದರಗಳಲ್ಲಿ ಒಂದಾಗಿದೆ.

ಇದನ್ನೂ ಓದಿ- ICICI ಬ್ಯಾಂಕ್ ಗ್ರಾಹಕರೇ ಗಮನಿಸಿ, ಸೈಬರ್ ವಂಚಕರಿಂದ ನಿಮ್ಮ ಖಾತೆಯನ್ನು ಈ ರೀತಿ ರಕ್ಷಿಸಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಪ್ರಯೋಜನ ಪಡೆಯುತ್ತಾರೆ : 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಗ್ರಾಹಕರು ಎಸ್‌ಬಿಐನಿಂದ ಬಡ್ಡಿದರದಲ್ಲಿ ಇಳಿಕೆಯ ಲಾಭವನ್ನು ಪಡೆಯುತ್ತಾರೆ. ಇದರೊಂದಿಗೆ ಎಸ್‌ಬಿಐ ಗ್ರಾಹಕರು ಈಗ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ವಿವಿಧ ರೀತಿಯ ಸಾಲಗಳ ಮಾಸಿಕ ಕಂತುಗಳಲ್ಲಿ ಅಂದರೆ ಇಎಂಐನಲ್ಲೂ ಕೂಡ ಪರಿಹಾರ ಪಡೆಯಬಹುದು. 

ಗೃಹ ಸಾಲದ ದರಗಳನ್ನು ಮೊದಲೇ ಕಡಿಮೆ ಮಾಡಲಾಗಿದೆ:
ಈ ಹಿಂದೆ ಏಪ್ರಿಲ್‌ನಲ್ಲಿ ಎಸ್‌ಬಿಐ ಗೃಹ ಸಾಲದ ದರವನ್ನು ಶೇಕಡಾ 6.70 ಕ್ಕೆ ಇಳಿಸಿತ್ತು. ಇದರೊಂದಿಗೆ, ಮಹಿಳಾ ಗ್ರಾಹಕರಿಗೆ 0.05 ಶೇಕಡಾ ಹೆಚ್ಚುವರಿ ರಿಯಾಯಿತಿ ನೀಡುವುದಾಗಿ ಘೋಷಿಸಲಾಗಿತ್ತು. ಬೇಸ್ ದರವು ಕನಿಷ್ಠ ಬಡ್ಡಿದರ ಆಗಿದೆ. ಈ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ನಿಗದಿಪಡಿಸುತ್ತದೆ. ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಪ್ರಸ್ತುತ ಮೂಲ ದರ 7.30-8.80 % ಆಗಿದೆ.

ಇದನ್ನೂ ಓದಿ- SBI Alert : ನಾಳೆ ಸ್ಥಗಿತಗೊಳ್ಳಲಿದೆ ಬ್ಯಾಂಕ್ ಸೇವೆ , ಯಾವುದೇ ವಹಿವಾಟು ನಡೆಸುವುದು ಸಾಧ್ಯವಿಲ್ಲ , ಸಂಪೂರ್ಣ ಮಾಹಿತಿ ಇಲ್ಲಿದೆ

ಜುಲೈ 2010 ರ ನಂತರ ತೆಗೆದುಕೊಂಡ ಎಲ್ಲಾ ಗೃಹ ಸಾಲಗಳನ್ನು ಮೂಲ ದರಕ್ಕೆ ಲಿಂಕ್ ಮಾಡಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಬ್ಯಾಂಕುಗಳು ಸ್ವತಃ ನಿಧಿಯ ವೆಚ್ಚವನ್ನು ಸರಾಸರಿ ನಿಧಿಯ ವೆಚ್ಚಕ್ಕೆ ಅನುಗುಣವಾಗಿ ಅಥವಾ MCLR ಪ್ರಕಾರ ಲೆಕ್ಕ ಹಾಕಲು ನಿರ್ಧರಿಸುತ್ತವೆ. ಪ್ರಸ್ತುತ MCLR ದರವನ್ನು ರಿಸರ್ವ್ ಬ್ಯಾಂಕ್ 6.55-7.00 ಶೇಕಡಾ ನಿಗದಿಪಡಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News