ಬೆಂಗಳೂರು: ಭಾರತದ ಅತಿದೊಡ್ಡ ಬ್ಯಾಂಕ್ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಗುಡ್ ನ್ಯೂಸ್ ಇದೆ. ಎಸ್ಬಿಐ ತನ್ನ ಗ್ರಾಹಕರಿಗಾಗಿ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಿದೆ. ಈ ಕುರಿತಂತೆ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿರುವ ಬ್ಯಾಂಕ್ ವಾಟ್ಸಾಪ್ನಲ್ಲಿ ಲಭ್ಯವಿರುವ ಇಂತಹ ಬ್ಯಾಂಕಿಂಗ್ ಸೇವೆಗಳು ಬಳಕೆದಾರರಿಗೆ ಜೀವನವನ್ನು ಸುಲಭಗೊಳಿಸುತ್ತದೆ. ಮುಖ್ಯವಾಗಿ ಅವರು ತಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಹೊಸ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಅಥವಾ ಎಟಿಎಂಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ನಿಮ್ಮ ಬ್ಯಾಂಕ್ ಈಗ ವಾಟ್ಸಾಪ್ನಲ್ಲಿದೆ. ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ತಿಳಿಯಲು ಮತ್ತು ಮಿನಿ ಸ್ಟೇಟ್ಮೆಂಟ್ ಪಡೆಯಲು ನಿಮಗೆ ವಾಟ್ಸಾಪ್ ಸಹಕಾರಿ ಆಗಲಿದೆ. ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳಿಗಾಗಿ, ಬಳಕೆದಾರರು +919022690226 ಸಂಖ್ಯೆಗೆ 'ಹಾಯ್' ಎಂದು ಕಳುಹಿಸಬೇಕಾಗುತ್ತದೆ ಎಂದು ಎಸ್ಬಿಐ ಟ್ವಿಟರ್ನಲ್ಲಿ ಬರೆದುಕೊಂಡಿದೆ.
ಇದನ್ನೂ ಓದಿ- ಫಾರ್ಮ್-16 ಇಲ್ಲದೆಯೂ ಐಟಿಆರ್ ಸಲ್ಲಿಸಬಹುದು- ಇಲ್ಲಿದೆ ಸುಲಭ ವಿಧಾನ
ವಾಟ್ಸಾಪ್ನಲ್ಲಿ ಎಸ್ಬಿಐ ಖಾತೆ ಸ್ಟೇಟ್ಮೆಂಟ್ ಪರಿಶೀಲಿಸಲು ಈ ಹಂತ-ಹಂತದ ಕ್ರಮಗಳನ್ನು ಅನುಸರಿಸಿ:
ಹಂತ 1: ನೀವು ಮೊದಲು ಎಸ್ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳಿಗಾಗಿ ನಿಮ್ಮ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು.
ಹಂತ 2: ಈ ಸೇವೆಗಳಿಗೆ ನೋಂದಾಯಿಸಲು, ನೀವು ಬ್ಯಾಂಕ್ನಲ್ಲಿ ನೋಂದಾಯಿಸಿರುವ ನಿಮ್ಮ 10 ಅಂಕಿಗಳ ಮೊಬೈಲ್ ಸಂಖ್ಯೆಯಿಂದ 917208933148 ಗೆ "SMS WAREG A/c No" ಅನ್ನು ಕಳುಹಿಸಬೇಕು.
ಹಂತ 3: ನೋಂದಣಿ ಪೂರ್ಣಗೊಂಡ ನಂತರ, +919022690226 ಸಂಖ್ಯೆಗೆ 'ಹಾಯ್' ಎಂದು ಕಳುಹಿಸಿ.
ಹಂತ 4: ಅದರ ನಂತರ, "ಆತ್ಮೀಯ ಗ್ರಾಹಕರೇ, ಎಸ್ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳಿಗೆ ಸುಸ್ವಾಗತ" ಎಂಬ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ!
ಕೆಳಗೆ ನೀಡಿರುವ ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆಮಾಡಿ-
1. ಖಾತೆ ಬ್ಯಾಲೆನ್ಸ್
2. ಮಿನಿ ಸ್ಟೇಟ್ಮೆಂಟ್
3. ವಾಟ್ಸಾಪ್ ಬ್ಯಾಂಕಿಂಗ್ನಲ್ಲಿ ನೋಂದಣಿ ರದ್ದು ಮಾಡಿ ಎಂಬ ಮೂರು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿ.
ಹಂತ 5: ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಆಯ್ಕೆಯನ್ನು ಆರಿಸಿ. ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು "1" ಟೈಪ್ ಮಾಡಿ, ಆದರೆ ಮಿನಿ ಸ್ಟೇಟ್ಮೆಂಟ್ ಅನ್ನು ಪಡೆಯಲು "2" ಟೈಪ್ ಮಾಡಿ. ನಿಮ್ಮ ಖಾತೆಯ ಬ್ಯಾಲೆನ್ಸ್ ಅಥವಾ ಮಿನಿ ಸ್ಟೇಟ್ಮೆಂಟ್ ಈಗ ವಾಟ್ಸಾಪ್ನಲ್ಲಿ ಡಿಸ್ಪ್ಲೇ ಆಗುತ್ತದೆ.
ಇದನ್ನೂ ಓದಿ- Bank Holidays: ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ಗಳಿಗೆ 13 ದಿನ ರಜೆ, ಪೂರ್ಣ ಪಟ್ಟಿ ಇಲ್ಲಿದೆ ನೋಡಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ಸೇವೆ:
ಈಗ ವಾಟ್ಸಾಪ್ನಲ್ಲಿ ನಿಮ್ಮ ಖಾತೆ ಬ್ಯಾಲೆನ್ಸ್ ಪರಿಶೀಲಿಸುವುದು ಮಾತ್ರವಲ್ಲ. ಇದರ ಜೊತೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ವಾಟ್ಸಾಪ್ ಸಂಪರ್ಕದ ಹೆಸರಿನಲ್ಲಿ ಖಾತೆ ಆಧಾರಿತ ಇತರ ಸೇವೆಗಳನ್ನು ಒದಗಿಸುತ್ತದೆ. ಈ ಸೇವೆಯು ಎಸ್ಬಿಐ ಕ್ರೆಡಿಟ್ ಕಾರ್ಡ್ ಗ್ರಾಹಕರು ತಮ್ಮ ಖಾತೆಯ ಸಾರಾಂಶ, ರಿವಾರ್ಡ್ ಪಾಯಿಂಟ್ಗಳು, ಬಾಕಿ ಇರುವ ಬ್ಯಾಲೆನ್ಸ್, ಕಾರ್ಡ್ ಪಾವತಿಗಳನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.