SBI Alert! ಜುಲೈ 10 ಮತ್ತು 11 ರಂದು ಈ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ

SBI Alert! - ಈ ಕುರಿತು ಟ್ವೀಟ್ ಮಾಡಿ ತನ್ನ ಗ್ರಾಹಕರಿಗೆ  ಮಾಹಿತಿ ನೀಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ಜುಲೈ 10 ಮತ್ತು ಜುಲೈ 11 ರಂದು ಮೆಂಟೆನೆನ್ಸ್ ಚಟುವಟಿಕೆಗಳ ಹಿನ್ನೆಲೆ ತನ್ನ ಕೆಲ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೇಳಿದೆ.

Written by - Nitin Tabib | Last Updated : Jul 9, 2021, 09:57 PM IST
  • ನೀವೂ ಕೂಡ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದೀರಾ.
  • ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾದಲ್ಲಿ, ಈ ಸುದ್ದಿಯನ್ನು ನೀವು ತಪ್ಪದೆ ಓದಿ.
  • ಜುಲೈ 10 ಮತ್ತು ಜುಲೈ 11 ರಂದು ಬ್ಯಾಂಕ್ ನ ಕೆಲ ಸೇವೆಯಳಲ್ಲಿ ವ್ಯತ್ಯಯ ಉಂಟಾಗಲಿದೆ
SBI Alert! ಜುಲೈ 10 ಮತ್ತು 11 ರಂದು ಈ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ title=
SBI Alert! (File Photo)

ನವದೆಹಲಿ: SBI Alert! - ಒಂದು ವೇಳೆ ನೀವೂ ಕೂಡ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ, ನಿಮಗಾಗಿ ಇಲ್ಲೊಂದು ಪ್ರಮುಖ ಸುದ್ದಿ ಇದೆ. ಜುಲೈ 10 ಮತ್ತು 11 ರಂದು ಬ್ಯಾಂಕಿನ ಕೆಲವು ಸೇವೆಗಳು ಪ್ರಭಾವಿತಗೊಳ್ಳಲಿವೆ. ಎಸ್‌ಬಿಐ ಟ್ವೀಟ್ ಮಾಡುವ ಮೂಲಕ  ಈ ಕುರಿತು ಮಾಹಿತಿ ನೀಡಿದೆ. ಹೀಗಿರುವಾಗ  ನೀವು ಯಾವುದೇ ಪ್ರಮುಖ ಡಿಜಿಟಲ್ ವಹಿವಾಟು (SBI Digital Banking)ನಡೆಸಬೇಕಿದ್ದರೆ, ಅದನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ.

ನಿರ್ವಹಣೆ ಚಟುವಟಿಕೆಗಳ ಹಿನ್ನೆಲೆ, ಜುಲೈ 10 ರಂದು ರಾತ್ರಿ 10.45 ರಿಂದ ಜುಲೈ 11 ರಂದು ಬೆಳಿಗ್ಗೆ 12.15 ರವರೆಗೆ ಇಂಟರ್ನೆಟ್ ಬ್ಯಾಂಕಿಂಗ್, ಯೋನೊ, ಯುಪಿಐ ಮತ್ತು ಯೋನೊ ಲೈಟ್ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಎಸ್‌ಬಿಐ ಬ್ಯಾಂಕ್ ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದೆ.

ಇದನ್ನೂ ಓದಿ- Amazon Prime Day Sale : ಭಾರೀ ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಜೊತೆ ಸಿಗಲಿದೆ ಬಹಳಷ್ಟು ಪ್ರಯೋಜನ

ಮತ್ತೊಂದು ಟ್ವೀಟ್‌ನಲ್ಲಿ, ಎಸ್‌ಬಿಐ ತನ್ನ ಗ್ರಾಹಕರಿಗೆ ತಮ್ಮ ಪಾಸ್‌ವರ್ಡ್‌ಗಳನ್ನು ನಿಯಮಿತವಾಗಿ ಬದಲಾಯಿಸುವಂತೆ ಮನವಿ ಮಾಡಿದೆ. ಆನ್ಲೈನ್ ಪಾಸ್ವರ್ಡ್ ಅನ್ನು ಬದಲಾಯಿಸುವುದು ವೈರಸ್ ವಿರುದ್ಧದ ಲಸಿಕೆಯಂತೆ ಮತ್ತು ಈ ಕೆಲಸ ಮಾಡಿ ಸೈಬರ್ ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ ಎಂದು ಹೇಳಿದೆ.

ಇದನ್ನೂ ಓದಿ-Business Opportunity: ಸ್ವಂತ ಉದ್ಯಮ ಆರಂಭಿಸಬೇಕೆ? ಮೋದಿ ಸರ್ಕಾರ ನೀಡುತ್ತೆ 10 ಲಕ್ಷ ರೂ. ಧನ ಸಹಾಯ

SBI ನ 44 ಕೋಟಿ ಗ್ರಾಹಕರ ಮೇಲೆ ಚೀನಾ ಹ್ಯಾಕರ್ಗಳ ಕಣ್ಣು
ಇತ್ತೀಚಿಗೆ ಚೀನೀ ಹ್ಯಾಕರ್‌ಗಳು ಎಸ್‌ಬಿಐ ಗ್ರಾಹಕರ (SBI Customers) ಹಣದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ ಎನ್ನಲಾಗಿದೆ. ಈ ಹ್ಯಾಕರ್‌ಗಳು ಫಿಶಿಂಗ್ ಹಗರಣದ ಮೂಲಕ  SBI (State Bank Of India) ಗ್ರಾಹಕರ ಬ್ಯಾಂಕ್ ಖಾತೆಯನ್ನು (SBI Accounts) ಕೆಲವೇ ನಿಮಿಷಗಳಲ್ಲಿ ಖಾಲಿ ಮಾಡಬಹುದು ಎನ್ನಲಾಗುತ್ತಿದೆ. ಈ ರೀತಿಯ ವಂಚನೆಯ ಪ್ರಕರಣಗಳು ಕಳೆದ ಕೆಲವು ತಿಂಗಳುಗಳಲ್ಲಿ ವೇಗವಾಗಿ ಹೆಚ್ಚಾಗತೊಡಗಿವೆ. ಈ ಹ್ಯಾಕರ್‌ಗಳು ಜಾಣತನದಿಂದ ಖಾತೆದಾರರ ವಿವರಗಳನ್ನು ತೆಗೆದುಕೊಂಡು ಹಣ ಕಳ್ಳತನ ಮಾಡುತ್ತಿದ್ದಾರೆ.

ಇದನ್ನೂ ಓದಿ-ಆರ್ಥಿಕವಾಗಿ ತೊಂದರೆಗೊಳಗಾದ ಗ್ರಾಹಕರಿಗಾಗಿ ಮನೆ ಮನೆ ರೇಶನ್ ಸ್ಕೀಮ್ ಆರಂಭಿಸಿದ IDFC First Bank

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News