SBI Alert! QR ಕೋಡ್‌ನೊಂದಿಗೆ ಆನ್‌ಲೈನ್‌ನಲ್ಲಿ Payment ಮಾಡುವ ಮುನ್ನ ಎಚ್ಚರ

QR Code For Online Payment : ದೇಶದಲ್ಲಿ ಡಿಜಿಟಲ್ ಯುಗ ಆರಂಭವಾಗಿದ್ದು ಇದರಿಂದ ಗ್ರಾಹಕರಿಗೆ ಬಹಳ ಅನುಕೂಲವಾಗಿದೆ. ಆದರೆ, ಇದರೊಂದಿಗೆ ಆನ್‌ಲೈನ್ ವಂಚನೆಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. SBI ಈಗ ಹೊಸ ವಂಚನೆಯ ಬಗ್ಗೆ ಹೇಳಿದೆ ಮತ್ತು ಅದನ್ನು ತಪ್ಪಿಸಲು ಜನರನ್ನು ಎಚ್ಚರಿಸಿದೆ. ಕ್ಯೂಆರ್ ಕೋಡ್ ಮೂಲಕ ವಂಚಕರು ಜನರನ್ನು ಹೇಗೆ ವಂಚಿಸುತ್ತಿದ್ದಾರೆಂದು ಮಾಹಿತಿ ನೀಡುವ ಮೂಲಕ ಎಸ್‌ಬಿಐ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ.

Written by - Yashaswini V | Last Updated : Sep 29, 2021, 12:56 PM IST
  • ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಆನ್‌ಲೈನ್ ವಹಿವಾಟುಗಳತ್ತ ಸಾಗುತ್ತಿದ್ದಾರೆ, ಅದಕ್ಕೆ ಸಂಬಂಧಿಸಿದ ವಂಚನೆಗಳು ಕೂಡ ಹೆಚ್ಚುತ್ತಿವೆ
  • ಕ್ಯೂಆರ್ ಕೋಡ್ ಮೂಲಕ ವಂಚಕರು ಜನರನ್ನು ಮೋಸ ಮಾಡುತ್ತಿದ್ದಾರೆ
  • ಈ ಕುರಿತಂತೆ ಟ್ವೀಟ್ ಮೂಲಕ ವಿಡಿಯೋ ಸಂದೇಶ ರವಾನಿಸಿರುವ ಎಸ್‌ಬಿಐ
SBI Alert! QR ಕೋಡ್‌ನೊಂದಿಗೆ ಆನ್‌ಲೈನ್‌ನಲ್ಲಿ Payment ಮಾಡುವ ಮುನ್ನ ಎಚ್ಚರ title=
SBI Alert! QR ಕೋಡ್‌ನೊಂದಿಗೆ ಆನ್‌ಲೈನ್‌ನಲ್ಲಿ Payment ಮಾಡುವ ಮುನ್ನ ಎಚ್ಚರ

ನವದೆಹಲಿ: ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಆನ್‌ಲೈನ್ ಪಾವತಿ ಅಗತ್ಯವಾಗಿದೆ. ಆದಾಗ್ಯೂ, ಆನ್‌ಲೈನ್ ವಹಿವಾಟು ನಡೆಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ತಂತ್ರಜ್ಞಾನವು ನಮ್ಮ ಜೀವನವನ್ನು ತುಂಬಾ ಸುಲಭವಾಗಿಸಿದೆ, ಆದರೆ ಸೈಬರ್ ವಂಚಕರೂ ಕೂಡ ಜನರನ್ನು ಮೋಸ ಮಾಡಲು ಹೊಸ ಹೊಸ ದಾರಿ ಹುಡುಕುತ್ತಲೇ ಇರುತ್ತಾರೆ ಎಂಬುದನ್ನು ನಾವು ಮರೆಯುವಂತಿಲ್ಲ.  ದೇಶದಲ್ಲಿ ಡಿಜಿಟಲ್ ಯುಗ ಆರಂಭವಾಗಿದ್ದು ಇದರಿಂದ ಗ್ರಾಹಕರಿಗೆ ಬಹಳ ಅನುಕೂಲವಾಗಿದೆ. ಆದರೆ, ಇದರೊಂದಿಗೆ ಆನ್‌ಲೈನ್ ವಂಚನೆಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. SBI ಈಗ ಹೊಸ ವಂಚನೆಯ ಬಗ್ಗೆ ಹೇಳಿದೆ ಮತ್ತು ಅದನ್ನು ತಪ್ಪಿಸಲು ಜನರನ್ನು ಎಚ್ಚರಿಸಿದೆ. ಕ್ಯೂಆರ್ ಕೋಡ್ ಮೂಲಕ ವಂಚಕರು (QR Code Scam) ಜನರನ್ನು ಹೇಗೆ ವಂಚಿಸುತ್ತಿದ್ದಾರೆಂದು ಮಾಹಿತಿ ನೀಡುವ ಮೂಲಕ ಎಸ್‌ಬಿಐ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ.

ವಾಸ್ತವವಾಗಿ, ಕ್ರೆಡಿಟ್ ಕಾರ್ಡ್ (Credit Card) ಅಥವಾ ಡೆಬಿಟ್ ಕಾರ್ಡ್ (Debit Card) ಮೂಲಕ ಪಾವತಿ ಮಾಡುವುದಕ್ಕಿಂತ ಕ್ಯೂಆರ್ ಕೋಡ್ ಬಳಸಿ ಪಾವತಿ ಮಾಡುವುದು ಹೆಚ್ಚು ಸುರಕ್ಷಿತ ಎಂಬುದು ಹಲವರ ನಂಬಿಕೆ. ಆದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ನೀಡಿರುವ ಮಾಹಿತಿಯ ಪ್ರಕಾರ ಜನರನ್ನು ಮೋಸಗೊಳಿಸಲು ಕ್ಯೂಆರ್ ಕೋಡ್‌ಗಳು ಹೆಚ್ಚು ಜನಪ್ರಿಯ ಮಾರ್ಗವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- Post Office: ಅಂಚೆ ಕಚೇರಿ ಎಟಿಎಂ ಕಾರ್ಡ್ ಸಂಬಂಧಿತ ನಿಯಮ ಬದಲಾವಣೆ, ನಿಮ್ಮ ಮೇಲೆ ನೇರ ಪರಿಣಾಮ

ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ಎಸ್‌ಬಿಐ ಸಂದೇಶ: 
ಕ್ಯೂಆರ್ ಕೋಡ್ ಮೂಲಕ ವಂಚಕರು (QR Code Scam) ಜನರನ್ನು ಮೋಸ ಮಾಡುತ್ತಿದ್ದಾರೆ ಎಂಬ ಸಂದೇಶವನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ, ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ನಿಮಗೆ ಹಣ ಸಿಗುವುದಿಲ್ಲ. ನಿಮ್ಮ ಬ್ಯಾಂಕ್ ಖಾತೆಯನ್ನು 'XX' ಮೊತ್ತಕ್ಕೆ ಡೆಬಿಟ್ ಮಾಡಲಾಗಿದೆ ಎಂಬ ಸಂದೇಶವನ್ನು ಮಾತ್ರ ನೀವು ಪಡೆಯುತ್ತೀರಿ. ನೀವು ಪಾವತಿಸಲು ಬಯಸದಿದ್ದರೆ, ಯಾರೋ ಹಂಚಿಕೊಂಡಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ. ಯಾವಾಗಲೂ ಜಾಗರೂಕರಾಗಿರಿ. ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವುದು ನಿಮ್ಮ ಬ್ಯಾಂಕ್ ಖಾತೆಯನ್ನು ಹೇಗೆ ಡೆಬಿಟ್ ಮಾಡುತ್ತದೆ ಎಂಬುದನ್ನು ವಿವರಿಸುವ 2.5 ನಿಮಿಷಗಳ ವೀಡಿಯೊವನ್ನು ಹಂಚಿಕೊಂಡಿದೆ.

ಕ್ಯೂಆರ್ ಕೋಡ್ ಅನ್ನು ಪಾವತಿ (Payment By Using QR Code) ಮಾಡಲು ಮಾತ್ರ ಸ್ಕ್ಯಾನ್ ಮಾಡಬೇಕೇ ಹೊರತು ಹಣ ಸ್ವೀಕರಿಸಲು ಅಲ್ಲ ಎಂಬುದನ್ನು ನೆನಪಿಡಿ.

ಇದನ್ನೂ ಓದಿ- SBI: ಹಿರಿಯ ನಾಗರಿಕರಿಗೆ ವಿಶೇಷ ಎಫ್‌ಡಿ ಮೇಲೆ ಮಾರ್ಚ್ 2022 ರವರೆಗೆ ಸಿಗಲಿದೆ 0.80% ಹೆಚ್ಚಿನ ಬಡ್ಡಿ

ಕ್ಯೂಆರ್ ಕೋಡ್ ವಂಚನೆ ಹೇಗೆ ಸಂಭವಿಸುತ್ತದೆ?
ಆನ್ಲೈನ್ ​​ಮಾರಾಟ ವೆಬ್‌ಸೈಟ್‌ನಲ್ಲಿ ಉತ್ಪನ್ನವನ್ನು ಹಾಕುವ ಮೂಲಕ ಹಗರಣ ಆರಂಭವಾಗುತ್ತದೆ. ಆಗ ಮಾತ್ರ ವಂಚಕರು ಖರೀದಿದಾರರಾಗಿ ಬಂದು ಟೋಕನ್ ಮೊತ್ತವನ್ನು ಪಾವತಿಸಲು ಕ್ಯೂಆರ್ ಕೋಡ್ ಅನ್ನು ಹಂಚಿಕೊಳ್ಳುತ್ತಾರೆ. ನಂತರ ಅವರು ಕ್ಯೂಆರ್ ಕೋಡ್ ಅನ್ನು ರಚಿಸುತ್ತಾರೆ ಮತ್ತು ಅದನ್ನು ಉದ್ದೇಶಿತ ಬಲಿಪಶುವಿಗೆ WhatsApp ಅಥವಾ ಇಮೇಲ್ ಮೂಲಕ ಹಂಚಿಕೊಳ್ಳುತ್ತಾರೆ. ಅವರು ಕಳುಹಿಸಿದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಅವರು ಗ್ರಾಹಕರನ್ನು ಕೇಳುತ್ತಾರೆ. ಇದರಿಂದ ಅವರು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಪಡೆಯಬಹುದು. ಅವರನ್ನು ನಂಬಿ, ಸಂತ್ರಸ್ತರು ವಂಚಕರು ಕಳುಹಿಸಿದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಾರೆ, ಅವರು ತಮ್ಮ ಖಾತೆಯಲ್ಲಿ ಹಣವನ್ನು ಪಡೆಯುತ್ತಾರೆ ಎಂದು ಭಾವಿಸುತ್ತಾರೆ, ಆದರೆ ಅವರು ಹಣವನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಕ್ಯೂಆರ್ ಕೋಡ್ ಬಳಸಿ ಪಾವತಿ ಮಾಡುವ ಮುನ್ನ ಎಚ್ಚರಿಕೆಯಿಂದಿರುವುದು ಅತ್ಯಗತ್ಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News