EPF ಕಡಿತಕ್ಕೆ ವೇತನ ಮಿತಿ ಹೆಚ್ಚಳ ! 75 ಲಕ್ಷ ಉದ್ಯೋಗಿಗಳಿಗೆ ಭರ್ಜರಿ ಲಾಭ

ಪಿಎಫ್ ಬಡ್ಡಿಯ ಹೊರತಾಗಿ, ಉದ್ಯೋಗಿಗಳು ಸಂಭ್ರಮಿಸುವ ಮತ್ತೊಂದು ಹೊಸ ಅಪ್‌ಡೇಟ್ ಇದೆ. ಇದರ ಅಡಿಯಲ್ಲಿ ಇಪಿಎಫ್‌ಒ ಇಪಿಎಫ್‌ಗೆ ನಿಗದಿಪಡಿಸಿದ ವೇತನ ಮಿತಿಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.

Written by - Ranjitha R K | Last Updated : Nov 7, 2023, 08:41 AM IST
  • ಇಪಿಎಸ್‌ಗೆ ನಿಗದಿಪಡಿಸಿದ ವೇತನ ಮಿತಿಯನ್ನು ಇಪಿಎಫ್‌ಒ ಹೆಚ್ಚಿಸಬಹುದು.
  • EPFO ಈ ಮಿತಿಯನ್ನು 15,000 ರೂ.ನಿಂದ 21,000 ರೂ.ಗೆ ಹೆಚ್ಚಿಸಲು ಪರಿಗಣಿಸುತ್ತಿದೆ.
  • ಎಲ್ಲಾ ಸದಸ್ಯರು ಈ ನಿರ್ಧಾರದ ಪರವಾಗಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
EPF ಕಡಿತಕ್ಕೆ ವೇತನ ಮಿತಿ ಹೆಚ್ಚಳ ! 75 ಲಕ್ಷ ಉದ್ಯೋಗಿಗಳಿಗೆ ಭರ್ಜರಿ ಲಾಭ  title=

ಬೆಂಗಳೂರು : ನೀವು ಕಚೇರಿ ಕೆಲಸಗಾರರೇ? ನಿಮ್ಮ ಮಾಸಿಕ ಸಂಬಳದಿಂದ PF ಮೊತ್ತವನ್ನು ಕಡಿತಗೊಳಿಸಲಾಗಿದೆಯೇ? ಹಾಗಿದ್ದರೆ ಈ ಲೇಖನ ನಿಮಗೆ ತುಂಬಾ ಉಪಯುಕ್ತವಾಗಿರಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)  ಎಲ್ಲಾ ಉದ್ಯೋಗಿಗಳ ಖಾತೆಗಳಿಗೆ ಬಡ್ಡಿ ಪಾವತಿ ಮಾಡುವುದಾಗಿ ಘೋಷಿಸಿದೆ. ಈ ಘೋಷಣೆಯ ನಂತರ ಪ್ರಸ್ತುತ ಸುಮಾರು ಆರು ಕೋಟಿ ಪಿಎಫ್ ಚಂದಾದಾರರು ಪ್ರಯೋಜನ ಪಡೆಯಲಿದ್ದಾರೆ.

ಪಿಎಫ್ ಬಡ್ಡಿಯ ಹೊರತಾಗಿ, ಉದ್ಯೋಗಿಗಳು ಸಂಭ್ರಮ ಪಡುವ ಮತ್ತೊಂದು ವಿಚಾರವಿದೆ. ಇದರ ಅಡಿಯಲ್ಲಿ ಇಪಿಎಫ್‌ಒ ಇಪಿಎಸ್‌ಗೆ ನಿಗದಿಪಡಿಸಿದ ವೇತನ ಮಿತಿಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ, EPFO ​​ಮಿತಿಯನ್ನು 15,000 ರೂ.ನಿಂದ 21,000 ರೂ.ಗೆ ಹೆಚ್ಚಿಸುವ ಬಗ್ಗೆ  ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. 

ಇದನ್ನೂ ಓದಿ :  ಈ ಸರ್ಕಾರಿ ನೌಕರರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ರಾಜ್ಯ ಸರ್ಕಾರ! ದೀಪಾವಳಿ ಬೋನಸ್ ಕೂಡ ಸಿಗಲಿದೆ!

ಇಪಿಎಸ್ ವೇತನ ಮಿತಿಯನ್ನು ಹೆಚ್ಚಿಸಿದರೆ, ಹೆಚ್ಚಿನ ಉದ್ಯೋಗಿಗಳು ಪಿಎಫ್ ಲಾಭ ಪಡೆಯುವುದು ಸಾಧ್ಯವಾಗುತ್ತದೆ. ಹೆಚ್ಚು ಜನ ಈ ಯೋಜನೆ ಅಡಿ ಸೇರಿಕೊಂಡರೆ  ಹೆಚ್ಚುವರಿ ಮೊತ್ತ ಎಂದರೆ ಹೊರೆ ಹೆಚ್ಚುತ್ತದೆ. ಸದ್ಯ ಸಾಮಾನ್ಯ ಪ್ರಾಧಿಕಾರದಿಂದ ಇದಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ವರದಿಯ ಪ್ರಕಾರ, ಇಲ್ಲಿಯವರೆಗೆ ಕೇಂದ್ರ ಸರ್ಕಾರವು ಇಪಿಎಫ್‌ಒನ ಉದ್ಯೋಗಿ ಪಿಂಚಣಿ ಯೋಜನೆಗೆ ಪ್ರತಿ ವರ್ಷ 6,750 ಕೋಟಿ ರೂ. ಮೀಸಲಿಡುತ್ತಿದೆ. ಹೊಸ ಯೋಜನೆ ಜಾರಿಗೆ ಬಂದ ನಂತರ 7.5 ಲಕ್ಷ ಹೆಚ್ಚುವರಿ ಉದ್ಯೋಗಿಗಳನ್ನು ಯೋಜನೆಯ ವ್ಯಾಪ್ತಿಗೆ ತರಲಾಗುತ್ತದೆ. ಈ ಹಿಂದೆ 2014ರಲ್ಲಿ ಪಿಎಫ್‌ನ ಗರಿಷ್ಠ ಮಿತಿಯನ್ನು 6,500 ರೂ.ನಿಂದ 15,000 ರೂ.ಗೆ ಏರಿಸಲಾಯಿತು. EPFO ​​ತೆಗೆದುಕೊಂಡ ಈ ನಿರ್ಧಾರದಿಂದ ಸುಮಾರು 75 ಲಕ್ಷ ಉದ್ಯೋಗಿಗಳು ನೇರವಾಗಿ ಪ್ರಯೋಜನ ಪಡೆಯುತ್ತಾರೆ. 

ಇಪಿಎಸ್ ಬಗ್ಗೆ ಪ್ರಸ್ತುತ ನಿಯಮವೇನು? :
ಯಾವುದೇ ವ್ಯಕ್ತಿ ಕೆಲಸಕ್ಕೆ ಸೇರಿಕೊಂಡಾಗ ಮತ್ತು ಇಪಿಎಫ್‌ನ ಸದಸ್ಯನಾದಾಗ, ಅವನು ಇಪಿಎಸ್‌ನ ಸದಸ್ಯನಾಗುತ್ತಾನೆ. ಉದ್ಯೋಗಿ ಇಪಿಎಫ್‌ಗೆ 12% ಕೊಡುಗೆ ನೀಡುತ್ತಾನೆ. ಅವರ ಕಂಪನಿ ಕೂಡಾ ಅದೇ ಮೊತ್ತವನ್ನು ನೀಡುತ್ತದೆ. ಆದರೆ ಅದರಲ್ಲಿ ಶೇಕಡಾ 8.33 ಇಪಿಎಸ್‌ಗೆ ಹೋಗುತ್ತದೆ. ಪ್ರಸ್ತುತ ಇಪಿಎಸ್‌ಗೆ ಗರಿಷ್ಠ ಪಿಂಚಣಿ ವೇತನ ಮಿತಿ ಕೇವಲ ರೂ. 15 ಸಾವಿರ. ಗರಿಷ್ಠ ವಾರ್ಷಿಕ ಪಾಲು (15000 ರಲ್ಲಿ 8.33%) ರೂ. 1250 ಆಗಿರುತ್ತದೆ.

ಇದನ್ನೂ ಓದಿ :  ಉದ್ಯೋಗ ಆಧಾರ್ ಗಾಗಿ ಈ ರೀತಿ ಆನ್ಲೈನ್ ಅರ್ಜಿ ಸಲ್ಲಿಸಿ, ನಿಮ್ಮ ಬಿಸ್ನೆಸ್ ಗೆ ಸರ್ಕಾರ ನೀಡುತ್ತೇ ಲಕ್ಷಾಂತರ ಧನಸಹಾಯ!

ನೌಕರನ ನಿವೃತ್ತಿಯ ನಂತರವೂ ಪಿಂಚಣಿ ಲೆಕ್ಕಾಚಾರಕ್ಕೆ ಗರಿಷ್ಠ ವೇತನವನ್ನು 15,000 ರೂ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಒಬ್ಬ ಉದ್ಯೋಗಿ ಇಪಿಎಸ್ ಅಡಿಯಲ್ಲಿ ಗರಿಷ್ಠ 7,500 ರೂ ಪಿಂಚಣಿ ಪಡೆಯಬಹುದು.

ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952 ರ ಅಡಿಯಲ್ಲಿ, ಇಪಿಎಫ್ಒ ಉದ್ಯೋಗಿಗಳಿಗೆ ಪಿಂಚಣಿ ಮತ್ತು ಭವಿಷ್ಯ ನಿಧಿಯ ರೂಪದಲ್ಲಿ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಒದಗಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News