Vodafone Idea ನಿಂದ 'ಬಂಪರ್ ಆಫರ್': ಕೇವಲ ₹ 100 ಗೆ 20 GB ಡೇಟಾ! 

100 ರೂ ಮತ್ತು 200 ರೂ.ವಿನ ಪೋಸ್ಟ್ಪೇಯ್ಡ್ ಡೇಟಾ ಯೋಜನೆ ಗ್ರಾಹಕರಿಗೆ 20ಜಿಬಿ ಮತ್ತು 50ಜಿಬಿ ಡೇಟಾ

Last Updated : Mar 27, 2021, 02:50 PM IST
  • ಟೆಲಿಕಾಂ ಮಾರುಕಟ್ಟೆಯಲ್ಲಿ ಪ್ರಸಿದ್ಧ ಟೆಲಿಕಾಂ ಕಂಪೆನಿಗಳ ನಡುವಣ ದರ ಸಮರ ಮುಂದುವರೆದಿದೆ.
  • 30 ರೂ.ವಿನ ಪಾಕೆಟ್ ಸ್ನೇಹಿ ಪ್ಯಾಕ್
  • 100 ರೂ ಮತ್ತು 200 ರೂ.ವಿನ ಪೋಸ್ಟ್ಪೇಯ್ಡ್ ಡೇಟಾ ಯೋಜನೆ ಗ್ರಾಹಕರಿಗೆ 20ಜಿಬಿ ಮತ್ತು 50ಜಿಬಿ ಡೇಟಾ
Vodafone Idea ನಿಂದ 'ಬಂಪರ್ ಆಫರ್': ಕೇವಲ ₹ 100 ಗೆ 20 GB ಡೇಟಾ!  title=

ಟೆಲಿಕಾಂ ಮಾರುಕಟ್ಟೆಯಲ್ಲಿ ಪ್ರಸಿದ್ಧ ಟೆಲಿಕಾಂ ಕಂಪೆನಿಗಳ ನಡುವಣ ದರ ಸಮರ ಮುಂದುವರೆದಿದೆ. ನಾಮುಂದು ತಾಮುಂದು ಎಂಬಂತೆ ಹೊಸ ಹೊಸ ಆಫರ್ ಗಳನ್ನು ಬಿಡುಗಡೆ ಮಾಡುತ್ತಿವೆ. ಇತ್ತೀಚೆಗಷ್ಟೆ ವೋಡಾಫೋನ್-ಐಡಿಯಾ ತನ್ನ ಗ್ರಾಹಕರಿಗೆ ಒಂದು ವರ್ಷದ ಉಚಿತ ಡಿಸ್ನಿ+ ಹಾಟ್ ಸ್ಟಾರ್ ಉಚಿತ ಚಂದಾದಾರಿಕೆ ಬಂಪರ್ ಆಫರ್ ನೀಡಿದ ಬೆನ್ನಲ್ಲೆ ಫೋಸ್ಟ್ ಪೇಯ್ಡ್ ಪ್ಲ್ಯಾನ್ಗಳ ಬೆಲೆಯಲ್ಲಿ ಹೆಚ್ಚಳ ಮಾಡಿ ಶಾಕ್ ನೀಡಿತ್ತು. ಇದರಿಂದ ಬಳಕೆದಾರರು ಅತೃಪ್ತಗೊಂಡಿದ್ದರು. 

ಸದ್ಯ ಇದನ್ನು ಮನಗಂಡು Vi ಮತ್ತೊಂದಿಷ್ಟು ಆಕರ್ಷಕ ಆಫರ್ ಗಳನ್ನು ಪರಿಚಯಿಸಿದೆ. 100 ರೂ ಮತ್ತು 200 ರೂ.ವಿನ ಪೋಸ್ಟ್ಪೇಯ್ಡ್ ಡೇಟಾ ಯೋಜನೆ(Postpaid Data Plans) ಅಳವಡಿಸಿಕೊಂಡ ಗ್ರಾಹಕರಿಗೆ 20ಜಿಬಿ ಮತ್ತು 50ಜಿಬಿ ಡೇಟಾ ನೀಡಲು ವೊಡಾಫೋನ್-ಐಡಿಯಾ ಮುಂದಾಗಿದೆ. ಈ ಪ್ಲಾನ್ 30 ದಿನಗಳ ವ್ಯಾಲಿಡಿಟಿ ಹೊಂದಿದೆ.

Holi Discounts & Offers : ಈ ಉತ್ಪನ್ನಗಳ ಮೇಲೆ ಸಿಗಲಿದೆ 80% ವರೆಗೆ ರಿಯಾಯಿತಿ

30 ರೂ.ವಿನ ಪಾಕೆಟ್ ಸ್ನೇಹಿ ಪ್ಯಾಕ್: ವೊಡಾಫೋನ್ ಐಡಿಯಾ(Idea-Vodafone) ಟೆಲಿಕಾಂ ಸಂಸ್ಥೆ 30 ರೂ.ವಿನ ಪಾಕೆಟ್ ಸ್ನೇಹಿ ಪೋಸ್ಟ್ ಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಯೋಜನೆ ಅಳವಡಿಸಿಕೊಂಡು ಅಮೆರಿಕ ಮತ್ತು ಕೆನಡಗೆ ಅಂತರಾಷ್ಟ್ರೀಯ ಕರೆ ಮಾಡಿದರೆ ನಿಮಿಷಕ್ಕೆ 50 ಪೈಸೆಗಳ ಚಾರ್ಜ್ ಮಾಡುತ್ತದೆ. ಅಂತೆಯೇ ಚೀನಾ ಮತ್ತು ಹಾಂಗ್ಕಾಂಗ್ಗೆ ನಿಮಿಷಕ್ಕೆ 2 ರೂ. ಬಾಂಗ್ಲಾ ದೇಶ ಮತ್ತು ಯುಕೆ 3 ರೂ ಚಾರ್ಜ್ ಮಾಡುತ್ತದೆ. ಆಸ್ಟ್ರೇಲಿಯಾ, ಬೂತಾನ್, ಜರ್ಮನಿ, ಕುವೈತ್, ಮಲೇಶಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಸಿಂಗಾಪುರ, ಥೈಲ್ಯಾಂಡ್ ಗಳಿಗೆ ನಿಮಿಷಕ್ಕೆ 5 ರೂ. ಚಾರ್ಜ್ ಮಾಡುತ್ತದೆ.

SBI ಗ್ರಾಹಕರಿಗೆ‌ ಸಿಹಿ ಸುದ್ದಿ: ₹ 2 ಲಕ್ಷದವರೆಗೆ ಸಿಗಲಿದೆ ಉಚಿತ ವಿಮೆ!

299 ರೂ. ಪ್ಲ್ಯಾನ್: ವಿ ಟೆಲಿಕಾಂನ ಈ ಪ್ರಿಪೇಯ್ಡ್ ಪ್ಲ್ಯಾನಿನಲ್ಲಿ ಪ್ರತಿದಿನ 2 GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2 GB ಡೇಟಾ ಸೇರಿ ಒಟ್ಟು 4 GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ(Free Calls) ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಪ್ರತಿದಿನ ಬೆಳಿಗ್ಗೆ 12 ರಿಂದ ಬೆಳಿಗ್ಗೆ 6 ರವರೆಗೆ ಅನಿಯಮಿತ ಡೇಟಾ ಬಳಕೆಗೆ ಲಭ್ಯ ಹಾಗೂ ವೀಕೇಂಡ್‌ ಡೇಟಾ ರೋಲ್‌ಓವರ್ ಸೌಲಭ್ಯ ಸಹ ಇದೆ. ಇದರೊಂದಿಗೆ ವಿ ಟೆಲಿಕಾಂನ ಆ್ಯಪ್ಸ್‌ಗಳ ಸೇವೆ ಸಹ ದೊರೆಯುತ್ತದೆ. 

Gold-Silver Rate: ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News