Reserve Bank Of India: ಮತ್ತೊಂದು ಬ್ಯಾಂಕಿನ ಗ್ರಾಹಕರ ಖಾತೆಗಳ ಹಣ ಹಿಂಪಡೆತದ ಮೇಲೆ ನಿರ್ಬಂಧ ವಿಧಿಸಿದ RBI

RBI Restriction: ಈ ಬ್ಯಾಂಕ್‌ನ ಗ್ರಾಹಕರು ತಮ್ಮ ಉಳಿತಾಯ ಬ್ಯಾಂಕ್ ಅಥವಾ ಚಾಲ್ತಿ ಖಾತೆಯಿಂದ 10 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇಳಿದೆ. ರಿಸರ್ವ್ ಬ್ಯಾಂಕ್ (Reserve Bank Of India) ಆದೇಶದ ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಲಗತ್ತಿಸಲಾಗಿದ್ದು, ಗ್ರಾಹಕರು ಈ ಬಗ್ಗೆ ಮಾಹಿತಿ ಪಡೆಯಬಹುದು.

Written by - Nitin Tabib | Last Updated : Dec 6, 2021, 10:33 PM IST
  • ಅಹ್ಮದ್ನಗರ್ ಅರ್ಬನ್ ಕೋ-ಆಪ್ ರಟಿವ್ ಬ್ಯಾಂಕ್ ಲಿಮಿಟೆಡ್ ಮೇಲೆ RBI ನಿರ್ಬಂಧನೆ.
  • ಗ್ರಾಹಕರು 10 ಸಾವಿರಕ್ಕಿಂತ ಹೆಚ್ಚು ಹಣ ಹಿಂಪಡೆಯುವ ಹಾಗಿಲ್ಲ.
  • ಬ್ಯಾಂಕಿನ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಹಿನ್ನೆಲೆ ಈ ನಿರ್ಧಾರ.
Reserve Bank Of India: ಮತ್ತೊಂದು ಬ್ಯಾಂಕಿನ ಗ್ರಾಹಕರ ಖಾತೆಗಳ ಹಣ ಹಿಂಪಡೆತದ ಮೇಲೆ ನಿರ್ಬಂಧ ವಿಧಿಸಿದ RBI title=
Reserve Bank Of India (File Photo)

RBI Imposes Ristrictions On One More Bank - ಕೆಟ್ಟ ಆರ್ಥಿಕ ಸ್ಥಿತಿಯ ಹಿನ್ನೆಲೆ  ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೊಂದು ಬ್ಯಾಂಕಿನ ನಿಭಂಧನೆ ವಿಧಿಸಿದೆ. ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (Urban Co Operative Bank), ಅಹಮದ್ನಗರ್ (Ahmednagar), ಮಹಾರಾಷ್ಟ್ರ ಬ್ಯಾಂಕಿನ ಮೇಲೆ RBI ಹಲವು ನಿರ್ಬಂಧಗಳನ್ನು ವಿಧಿಸಿದೆ. ಈ ನಿರ್ಬಂಧಗಳ ಅಡಿಯಲ್ಲಿ, ಬ್ಯಾಂಕ್‌ನ ಗ್ರಾಹಕರು ತಮ್ಮ ಖಾತೆಗಳಿಂದ ಕೇವಲ ರೂ.10,000 ಮಾತ್ರ ಹಿಂಪಡೆಯಬಹುದು ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ.

ಬ್ಯಾಂಕ್ ನ ಆರ್ಥಿಕ ಸ್ಥಿತಿ ಸರಿಯಾಗಿಲ್ಲ 
ಬ್ಯಾಂಕ್‌ನ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ (ಸಹಕಾರಿ ಸಂಘಗಳಿಗೆ ಅನ್ವಯಿಸುತ್ತದೆ), 1949 ರ (Banking Regulation Act 1949) ಅಡಿಯಲ್ಲಿ ಈ ನಿರ್ಬಂಧಗಳು ಡಿಸೆಂಬರ್ 6, 2021 ರಂದು ವ್ಯವಹಾರದ ಅವಧಿಯ ಮುಕ್ತಾಯದಿಂದ ಆರು ತಿಂಗಳ ಅವಧಿಗೆ ಜಾರಿಯಲ್ಲಿರುತ್ತವೆ ಮತ್ತು ನಂತರ ಮರು ಪರಿಶೀಲಿಸಲಾಗುವುದು ಎನ್ನಲಾಗಿದೆ.

ಅಷ್ಟೇ ಅಲ್ಲ, ಬ್ಯಾಂಕ್ ತನ್ನ ಅನುಮತಿಯಿಲ್ಲದೆ ಯಾವುದೇ ಸಾಲ ಅಥವಾ ಮುಂಗಡವನ್ನು ನೀಡುವ ಹಾಗಿಲ್ಲ ಅಥವಾ ಯಾವುದೇ ಸಾಲವನ್ನು ನವೀಕರಿಸುವ ಹಾಗಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಇದರೊಂದಿಗೆ, ಬ್ಯಾಂಕ್‌ನಿಂದ ಯಾವುದೇ ರೀತಿಯ ಹೂಡಿಕೆ, ಯಾವುದೇ ರೀತಿಯ ಹೊಣೆಗಾರಿಕೆ, ಪಾವತಿ ಮತ್ತು ವರ್ಗಾವಣೆ ಅಥವಾ ಆಸ್ತಿಗಳ ಮಾರಾಟವನ್ನು ಸಹ ನಿಷೇಧಿಸಲಾಗಿದೆ.

ಇದನ್ನೂ ಓದಿ-LPG Cylinder:ಅಡುಗೆ ಅನಿಲ ಸಿಲಿಂಡರ್ ನಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಕೇಂದ್ರ, ಮಹಿಳೆಯರಿಗೆ ಸಿಗಲಿದೆ ಲಾಭ

10 ಸಾವಿರಕ್ಕಿಂತ ಹೆಚ್ಚು ಹಿಂಪಡೆಯಲು ಸಾಧ್ಯವಾಗುವುದಿಲ್ಲ
ಬ್ಯಾಂಕ್‌ನ ಗ್ರಾಹಕರು ತಮ್ಮ ಉಳಿತಾಯ ಬ್ಯಾಂಕ್ ಅಥವಾ ಚಾಲ್ತಿ ಖಾತೆಯಿಂದ 10 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ರಿಸರ್ವ್ ಬ್ಯಾಂಕ್ ಆದೇಶದ ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಲಗತ್ತಿಸಲಾಗಿದೆ. ಗ್ರಾಹಕರು ಈ ಬಗ್ಗೆ ಮಾಹಿತಿ ಪಡೆಯಬಹುದು.

ಇದನ್ನೂ ಓದಿ-75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ITR ದಾಖಲಿಸಬೇಕಿಲ್ಲ, ಇಲ್ಲಿದೆ ವಿವರ

ಆದರೆ, ಈ ನಿರ್ಬಂಧಗಳನ್ನು ಬ್ಯಾಂಕಿಂಗ್ ಪರವಾನಗಿಗಳ ರದ್ದತಿ ಎಂದು ಅರ್ಥೈಸಬಾರದು ಎಂದು ಕೇಂದ್ರ ಬ್ಯಾಂಕ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ-ಮನೆಯ ಟೆರೆಸ್ ಮೇಲೆ ಉಚಿತವಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, 20 ವರ್ಷ ಉಚಿತ ವಿದ್ಯುತ್ ಪಡೆಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News