RBI Repo Rate Hike: ಮತ್ತಷ್ಟು ಹೆಚ್ಚಾಗಲಿದೆಯಾ EMI ಹೊರೆ? ಬುಧವಾರ ಆರಂಭಗೊಳ್ಳಲಿದೆ RBI MPC ಸಭೆ

RBI MPC Meeting: ವರ್ಷ 2022 ರಲ್ಲಿ ಆರ್.ಬಿ.ಐ ತನ್ನ ರೆಪೋ ರೇಟ್ ಅನ್ನು ಶೇ.1.40ರಷ್ಟು ಹೆಚ್ಚಿಸಿದೆ. 

Written by - Nitin Tabib | Last Updated : Sep 27, 2022, 10:15 PM IST
  • ಅಮೇರಿಕಾ ಮತ್ತು ಬ್ರಿಟನ್ ಸಾಲವನ್ನು ದುಬಾರಿ ಮಾಡಿವೆ.
  • ಅದರ ನಂತರ RBI ಕೂಡ ಬಡ್ಡಿದರವನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
  • ಆದರೆ, ಈ ಹೆಚ್ಚಳದೊಂದಿಗೆ ಮುಂದಿನ ದಿನಗಳಲ್ಲಿ ಸರಕುಗಳ ಬೆಲೆಯಲ್ಲಿ ಇಳಿಕೆಯಾಗಿ ಹಣದುಬ್ಬರ ಇಳಿಕೆಯಾಗುವ ಸಾಧ್ಯತೆ ಇದೆ
RBI Repo Rate Hike: ಮತ್ತಷ್ಟು ಹೆಚ್ಚಾಗಲಿದೆಯಾ EMI ಹೊರೆ? ಬುಧವಾರ ಆರಂಭಗೊಳ್ಳಲಿದೆ RBI MPC ಸಭೆ title=
RBI Repo Rate Hike

RBI Repo Rate Hike:ಭಾರತೀಯ ರಿಸರ್ವ್ ಬ್ಯಾಂಕ್ ನ ಮೂರು ದಿನಗಳ ಹಣಕಾಸು ನೀತಿ ಸಮಿತಿ ಸಭೆಯು ಬುಧವಾರ 28 ಸೆಪ್ಟೆಂಬರ್ 2022 ರಿಂದ ಪ್ರಾರಂಭವಾಗಲಿದೆ, ಇದು ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ಸೆಪ್ಟೆಂಬರ್ 30 ರಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ಮತ್ತು ಆರ್‌ಬಿಐನ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಅಂದರೆ ಶೇ.0.5ರಷ್ಟು  ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಆರ್ಬಿಐ ರೆಪೋ ದರವನ್ನು ಶೇ. 5.40 ರಿಂದ 5.90 ಕ್ಕೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಇದು ಒಂದು ವೇಳೆ ಸಂಭವಿಸಿದಲ್ಲಿ ನೀವು ಹಣದುಬ್ಬರದಿಂದ ಹೊಡೆತವನ್ನು ಅನುಭವಿಸುವ ಸಾಧ್ಯತೆ ಇದೆ. ಏಕೆಂದರೆ ಏಕೆಂದರೆ ಇದರಿಂದ ನಿಮ್ಮ ಮೇಲೆ EMI ಹೊರೆ ಮತ್ತಷ್ಟು ಹೆಚ್ಚಾಗಲಿದೆ.

ರೆಪೋ ದರದಲ್ಲಿ ಹೆಚ್ಚಳ ಏಕೆ?
ಆಗಸ್ಟ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ದರ ಶೇ.7 ರಷ್ಟಿತ್ತು. ಹೀಗಾಗಿ ಇದು ಆರ್‌ಬಿಐನ ಸಹಿಷ್ಣುತೆಯ ಮಟ್ಟವಾದ ಶೇ.6ಕ್ಕಿಂತ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಆರ್‌ಬಿಐ ನೀತಿ ಸಭೆಯಲ್ಲಿ ಸತತ ನಾಲ್ಕನೇ ಬಾರಿಗೆ ರೆಪೊ ದರವನ್ನು ಹೆಚ್ಚಿಸಬಹುದು ಎನ್ನಲಾಗುತ್ತಿದೆ. RBI ರೆಪೊ ದರವನ್ನು ಶೇ.0.50 ರಷ್ಟು ಹೆಚ್ಚಿಸಬಹುದು ಎಂದು JP ಮೋರ್ಗಾನ್ ಮೋರ್ಗನ್ ಸ್ಟಾನ್ಲಿ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ಮೊರ್ಗಾನ್ ಸ್ಟಾನ್ಲಿ ತನ್ನ ವರದಿಯಲ್ಲಿ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಬಹುದೆಂದು ನಾವು ಮೊದಲೇ ಅಂದಾಜಿಸಿದ್ದೆವು ಎಂದು ಹೇಳಿತ್ತು. ಆದರೆ ಹಣದುಬ್ಬರ ಏರಿಕೆ ಮತ್ತು ವಿಶ್ವದಾದ್ಯಂತ ಕೇಂದ್ರ ಬ್ಯಾಂಕ್‌ಗಳ ವರ್ತನೆಯ ನಂತರ, ರೆಪೊ ದರವನ್ನು ಶೇ.0.50 ರಷ್ಟು ಹೆಚ್ಚಿಸಬಹುದು ಎಂದು ನಾವು ಮರು ಅಂದಾಜಿಸುತ್ತಿದ್ದೇವೆ ಎಂದು ಹೇಳಿದೆ.

ಇದನ್ನೂ ಓದಿ-Share Market Closing: 57,107 ಅಂಕಗಳಿಗೆ ವಹಿವಾಟು ಅಂತ್ಯಗೊಳಿಸಿದ ಸೆನ್ಸೆಕ್ಸ್, 17,000 ಕ್ಕೂ ಹೆಚ್ಚಿನ ಅಂಕಗಳಿಗೆ ವಹಿವಾಟು ಅಂತ್ಯಗೊಳಿಸಿದ ನಿಫ್ಟಿ

ಪರಿಣಾಮ ಏನಾಗಬಹುದು!
ಆರ್‌ಬಿಐನ ರೆಪೊ ದರ ಹೆಚ್ಚಳದ ನಂತರ, ಬ್ಯಾಂಕ್‌ಗಳ ಸಾಲಗಳು ದುಬಾರಿಯಾಗಲಿವೆ, ಏಕೆಂದರೆ, ಬ್ಯಾಂಕುಗಳು ಈ ಹೊರೆಯನ್ನು ಸಾಮಾನ್ಯವಾಗಿ ತನ್ನ ಗ್ರಾಹಕರ ಮೇಲೆ ವರ್ಗಾಯಿಸುತ್ತವೆ. ರೆಪೊ ದರ ಹೆಚ್ಚಾದಾಗ ಗೃಹ ಸಾಲದಿಂದ ಹಿಡಿದು ವಾಹನ ಸಾಲ, ಶಿಕ್ಷಣ ಸಾಲ ಮತ್ತು ವ್ಯಾಪಾರ ಸಾಲಗಳವರೆಗೆ ಎಲ್ಲವೂ ದುಬಾರಿಯಾಗಲಿದೆ. ಈಗಾಗಲೇ ರೆಪೋ ದರ ಆಧಾರಿತ ಗೃಹ ಸಾಲಗಳನ್ನು ಮರುಪಾವತಿಸುತ್ತಿರುವ ಗ್ರಾಹಕರ  EMI ಗಳು ದುಬಾರಿಯಾಗಲಿದೆ.

ಇದನ್ನೂ ಓದಿ-Liquidity Crisis In Banks: ಬ್ಯಾಂಕ್ ಗಳಲ್ಲಿ ನಗದು ಕೊರತೆ, ಹೂಡಿಕೆದಾರರ ಓಲೈಕೆಗೆ ಮುಂದಾಗಲಿವೆಯಾ ಬ್ಯಾಂಕುಗಳು

ಈಗಾಗಲೇ ಮೂರು ಬಾರಿ ಏರಿಕೆಯಾದ ರೆಪೋ ದರ
2022 ರಲ್ಲಿ, ಆರ್‌ಬಿಐ ರೆಪೊ ದರವನ್ನು ಒಟ್ಟು ಶೇ.1.40 ರಷ್ಟು ಹೆಚ್ಚಿಸಿದೆ. ಮೇ ತಿಂಗಳಲ್ಲಿ ಮೊದಲ ಬಾರಿಗೆ ಆರ್‌ಬಿಐ 40 ಬೇಸಿಸ್ ಪಾಯಿಂಟ್‌ಗಳಷ್ಟು, ಜೂನ್‌ನಲ್ಲಿ ಎರಡನೇ ಬಾರಿಗೆ 50 ಬೇಸಿಸ್ ಪಾಯಿಂಟ್‌ಗಳಷ್ಟು ಮತ್ತು ನಂತರ ಆಗಸ್ಟ್‌ನಲ್ಲಿ 0.50 ರಷ್ಟು ಏರಿಕೆಯಾಗಿದೆ. ಇತ್ತೀಚೆಗೆ, ಸೆಂಟ್ರಲ್ ಬ್ಯಾಂಕ್ ಆಫ್ ಅಮೇರಿಕಾ ಮತ್ತು ಬ್ರಿಟನ್ ಸಾಲವನ್ನು ದುಬಾರಿ ಮಾಡಿವೆ. ಅದರ ನಂತರ RBI ಕೂಡ ಬಡ್ಡಿದರವನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ, ಈ ಹೆಚ್ಚಳದೊಂದಿಗೆ ಮುಂದಿನ ದಿನಗಳಲ್ಲಿ ಸರಕುಗಳ ಬೆಲೆಯಲ್ಲಿ ಇಳಿಕೆಯಾಗಿ ಹಣದುಬ್ಬರ ಇಳಿಕೆಯಾಗುವ ಸಾಧ್ಯತೆ ಇರುವುದರಿಂದ ಬಡ್ಡಿ ದರ ಏರಿಕೆ ಪ್ರಕ್ರಿಯೆಯೂ ಇಲ್ಲಿಗೇ ನಿಲ್ಲುವ ನಿರೀಕ್ಷೆ ಇದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News