Paytm, PhonePe, Amazon Pay ಬಳಕೆದಾರರಿಗೆ ಬಿಗ್ ನ್ಯೂಸ್ : ಈಗ ನೀವು ಇವುಗಳನ್ನ ಬಳಸಿ ATM  ನಿಂದ ಹಣ ಪಡೆಯಬಹದು!

ನೀವು ಪೇಟಿಎಂ, ಮೊಬಿಕ್ವಿಕ್ ಫೋನ್ ಪೇ, ಅಮೆಜಾನ್ ಪೇ ಅಥವಾ ಜಿಪೆಯಂತಹ ಡಿಜಿಟಲ್ ವ್ಯಾಲೆಟ್ ಅನ್ನು ಬಳಕೆದಾರರಿಗೆ ಇದು ಗುಡ್ ನ್ಯೂಸ್. ಈ ಕುರಿತು ರಿಸರ್ವ್ ಬ್ಯಾಂಕ್ ಅಪ್ ಇಂಡಿಯಾ ಹೊಸ ಸುತ್ತೋಲೆ ಹೊರಡಿಸಿದೆ. ಇದರಲ್ಲಿ ಬ್ಯಾಂಕ್ ಅಥವಾ ಬ್ಯಾಂಕೇತರರು ನೀಡುವ ಎಲ್ಲಾ ಪ್ರಿಪೇಯ್ಡ್ ಪಾವತಿ ಉಪಕರಣಗಳು, ಅಂದರೆ ಪಿಪಿಐಗಳು 31 ಮಾರ್ಚ್ 2022 ರಿಂದ ಪರಸ್ಪರ ಕಾರ್ಯಸಾಧ್ಯವಾಗುತ್ತವೆ ಎಂದು ಹೇಳಲಾಗಿದೆ.

Last Updated : May 20, 2021, 02:52 PM IST
  • ಡಿಜಿಟಲ್ ವ್ಯಾಲೆಟ್ ಅನ್ನು ಬಳಕೆದಾರರಿಗೆ ಇದು ಗುಡ್ ನ್ಯೂಸ್
  • ಈ ಕುರಿತು ರಿಸರ್ವ್ ಬ್ಯಾಂಕ್ ಅಪ್ ಇಂಡಿಯಾ ಹೊಸ ಸುತ್ತೋಲೆ
  • ಪಿಪಿಐಗಳು 31 ಮಾರ್ಚ್ 2022 ರಿಂದ ಪರಸ್ಪರ ಕಾರ್ಯಸಾಧ್ಯವಾಗುತ್ತವೆ
Paytm, PhonePe, Amazon Pay ಬಳಕೆದಾರರಿಗೆ ಬಿಗ್ ನ್ಯೂಸ್ : ಈಗ ನೀವು ಇವುಗಳನ್ನ ಬಳಸಿ ATM  ನಿಂದ ಹಣ ಪಡೆಯಬಹದು! title=

ನವದೆಹಲಿ : ನೀವು ಪೇಟಿಎಂ, ಮೊಬಿಕ್ವಿಕ್ ಫೋನ್ ಪೇ, ಅಮೆಜಾನ್ ಪೇ ಅಥವಾ ಜಿಪೆಯಂತಹ ಡಿಜಿಟಲ್ ವ್ಯಾಲೆಟ್ ಅನ್ನು ಬಳಕೆದಾರರಿಗೆ ಇದು ಗುಡ್ ನ್ಯೂಸ್. ಈ ಕುರಿತು ರಿಸರ್ವ್ ಬ್ಯಾಂಕ್ ಅಪ್ ಇಂಡಿಯಾ ಹೊಸ ಸುತ್ತೋಲೆ ಹೊರಡಿಸಿದೆ. ಇದರಲ್ಲಿ ಬ್ಯಾಂಕ್ ಅಥವಾ ಬ್ಯಾಂಕೇತರರು ನೀಡುವ ಎಲ್ಲಾ ಪ್ರಿಪೇಯ್ಡ್ ಪಾವತಿ ಉಪಕರಣಗಳು, ಅಂದರೆ ಪಿಪಿಐಗಳು 31 ಮಾರ್ಚ್ 2022 ರಿಂದ ಪರಸ್ಪರ ಕಾರ್ಯಸಾಧ್ಯವಾಗುತ್ತವೆ ಎಂದು ಹೇಳಲಾಗಿದೆ.

ಈ ಆರ್‌ಬಿಐ ಆದೇಶದ ಅರ್ಥವೇನೆಂದರೆ, ಪೂರ್ಣ ಕೆವೈಸಿ (Know-Your-Customer) ಹೊಂದಿರುವ ಬಳಕೆದಾರರು ಈಗ ಬೇರೆ ಕಂಪನಿಯ ವ್ಯಾಲೆಟ್ನಲ್ಲಿ ತಮ್ಮ ವ್ಯಾಲೆಟ್ನಿಂದ ಹಣವನ್ನು ಕಳುಹಿಸಲು ಮತ್ತು ಪಡೆಯಲು ಸಾಧ್ಯವಾಗುತ್ತದೆ. ಅಂದರೆ, Paytm ನಿಂದ Paytm ಗೆ ಮಾತ್ರ ಹಣವನ್ನು ಕಳುಹಿಸುವ ಅಗತ್ಯವಿಲ್ಲ, ಈಗ ನೀವು PhonePe Wallet ಗೆ ಹಣವನ್ನು ಕಳುಹಿಸಬಹುದು ಅಥವಾ ಪಡೆಯಬಹುದು.

ಇದನ್ನೂ ಓದಿ :ಈ ಬ್ಯಾಂಕಿನ ಗ್ರಾಹಕರಿಗೆ ಸಿಹಿಸುದ್ದಿ; Doorstep Banking ದರ ಇಳಿಸಿದ ಬ್ಯಾಂಕ್

ಪ್ರಿಪೇಯ್ಡ್ ಕಾರ್ಡ್ ವಾಲೆಟ್ ನಿಂದ ಹಣ ಹಿಂಪಡೆಯುವುದು ಹೇಗೆ?

ಆರ್‌ಬಿಐ ಹೊರಡಿಸಿದ ಸುತ್ತೋಲೆಯಲ್ಲಿ ವಾಲೆಟ್ ಆಧಾರಿತ ಪ್ರಿಪೇಯ್ಡ್ ಅಂದರೆ ಪಿಪಿಐ(PPI)ಗಳು ಯುಪಿಐ ಮೂಲಕ ಕೆಲಸ ಮಾಡುತ್ತದೆ. ಆದರೆ ಕಾರ್ಡ್ ಆಧಾರಿತ ಪ್ರಿಪೇಯ್ಡ್ ಪಾವತಿ ಉಪಕರಣಗಳು ಅದನ್ನು ಕಾರ್ಡ್ ನೆಟ್‌ವರ್ಕ್ ಮೂಲಕ ಕಾರ್ಯಗತಗೊಳಿಸುತ್ತವೆ. ಅಂದರೆ ಮುಂದಿನ ವರ್ಷದ ಮಾರ್ಚ್‌ನಿಂದ ಎಟಿಎಂ, ಮೈಕ್ರೋ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಪಾವತಿಗೆ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳನ್ನು ಬಳಸಬಹುದು. ಅಲ್ಲದೆ, ನೀವು ಪೋಸ್ ಟರ್ಮಿನಲ್‌ನಲ್ಲಿ ಪಾವತಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : Gold -Silver Rate : ಇಂದಿನ ಚಿನ್ನ ಬೆಳ್ಳಿ ಬೆಲೆ : ದೆಹಲಿ, ಚೆನ್ನೈ, ಬೆಂಗಳೂರು, ಮುಂಬೈನಲ್ಲಿ ಚಿನ್ನದ ದರ!

ತಿಂಗಳಲ್ಲಿ 10,000 ನಗದು ವಹಿವಾಟು : 

ಆರ್‌ಬಿಐ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಪೂರ್ಣ ಕೆವೈಸಿ(KYC) ಹೊಂದಿರುವ ಬ್ಯಾಂಕೇತರ ಪಿಪಿಐಗಳ ಬಳಕೆದಾರರು ಒನ್ ಟೈಮ್ ಗೆ 2000 ರೂ. ನಗದು ಹಿಂಪಡೆಯಲು ಅವಕಾಶವಿದೆ ಮತ್ತು ಈ ಮಿತಿ ತಿಂಗಳಲ್ಲಿ 10,000 ರೂ.ಗೆ ನಿಗದಿ ಮಾಡಲಾಗಿದೆ. ಆರ್‌ಬಿಐ ಸುತ್ತೋಲೆಯ ಪ್ರಕಾರ, ಪಿಪಿಐಗಳು (ಪಿಪಿಐ-ಎಂಟಿಎಸ್), ಫಾಸ್ಟ್‌ಟ್ಯಾಗ್ ಮುಂತಾದ ಮೆಟ್ರೋ ಕಾರ್ಡ್‌ಗಳನ್ನು ಸಾಮೂಹಿಕ ಸಾರಿಗೆ ವ್ಯವಸ್ಥೆಗೆ ಪರಸ್ಪರ ಕಾರ್ಯಸಾಧ್ಯತೆಯಿಂದ ಹೊರಗಿಡಲಾಗಿದೆ. ಉಡುಗೊರೆ ಪಿಪಿಐಗಳು ಪರಸ್ಪರ ಕಾರ್ಯಸಾಧ್ಯತೆಯ ಆಯ್ಕೆಯನ್ನು ಹೊಂದಿರುತ್ತವೆ.

ಇದನ್ನೂ ಓದಿ : PM-Kisan ಯೋಜನೆಯ 'ಬ್ಯಾಲೆನ್ಸ್ ಚೆಕ್' ಮಾಡೋದು ಹೇಗೆ? ಇಲ್ಲಿದೆ ನೋಡಿ

ಆರ್‌ಬಿಐ(Reserve Bank of India) ಪೂರ್ಣ ಕೆವೈಸಿಯಲ್ಲಿ ಗರಿಷ್ಠ ಬಾಕಿ ಮಿತಿಯನ್ನು 1 ಲಕ್ಷದಿಂದ 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ರಿಸರ್ವ್ ಬ್ಯಾಂಕಿನ ಹೆಜ್ಜೆಯೊಂದಿಗೆ, ಪ್ರಿಪೇಯ್ಡ್ ಉಪಕರಣಗಳು ಬಹುತೇಕ ಪಾವತಿ ಬ್ಯಾಂಕಿನಂತೆ ಆಗುತ್ತವೆ, ಏಕೆಂದರೆ ಪಿಪಿಐ ಬಳಕೆದಾರರು ಈಗ ಎಟಿಎಂಗಳಿಂದ ಹಣವನ್ನು ಹಿಂಪಡೆಯಬಹುದು.

ಇದನ್ನೂ ಓದಿ :SBI Debit Card PIN: ಕುಳಿತಲ್ಲೇ ಜನರೇಟ್ ಮಾಡಬಹುದು ಎಸ್ ಬಿಐ ಡೆಬಿಟ್ ಕಾರ್ಡ್ ಪಿನ್

ಪಿಪಿಐ ಎಂದರೇನು?

ಪಿಪಿಐಗಳು ಈಗಾಗಲೇ ಒಂದು ದೊಡ್ಡ ಮೊತ್ತವನ್ನು ಹೊಂದಿರುವ ಕಾರ್ಡ್‌(Cards)ಗಳು ಅಥವಾ ಉತ್ಪನ್ನಗಳಾಗಿವೆ, ಮತ್ತು ಅದರ ಬದಲಾಗಿ, ಕಾರ್ಡ್‌ಹೋಲ್ಡರ್ ನಗದು, ಅಗತ್ಯ ಸರಕು ಮತ್ತು ಸೇವೆಗಳ ಖರೀದಿ ಮತ್ತು ವರ್ಗಾವಣೆ, ಹಣ ಮತ್ತು ನಿಧಿ ವರ್ಗಾವಣೆ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಬಹುದು. ಆರ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಮೂರು ವಿಧದ ಪಿಪಿಐ ಉಪಕರಣಗಳಿವೆ. ಇವುಗಳಲ್ಲಿ ಕ್ಲೋಸ್ಡ್ ಸಿಸ್ಟಮ್ ಪಿಪಿಐ, ಸೆಮಿ ಕ್ಲೋಸ್ಡ್ ಸಿಸ್ಟಮ್ ಪಿಪಿಐ ಮತ್ತು ಓಪನ್ ಸಿಸ್ಟಮ್ ಪಿಪಿಐ ಸೇರಿವೆ. Paytm, MobiKwik, PayU ದೇಶದಲ್ಲಿ ಆಫ್ ಕ್ಲೋಸ್ ವ್ಯಾಲೆಟ್ ಗೆ ಬರುತ್ತವೆ.

ಇದನ್ನೂ ಓದಿ : Doorstep Banking: Cash ಬೇಕೇ! ಈ ಕೆಲಸ ಮಾಡಿದರೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ATM

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News