Credit Card Rules: ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ನಿಯಮ ಬದಲಾಯಿಸಿದ ಆರ್‌ಬಿ‌ಐ

Credit Card Rules: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದ್ದು, ಇದರನ್ವಯ ಈಗ ಬ್ಯಾಂಕ್ ಅಲ್ಲ ಬ್ಯಾಂಕ್ ಗ್ರಾಹಕರು ತಮ್ಮ ನೆಚ್ಚಿನ ಕಾರ್ಡ್ ಅನ್ನು ಆಯ್ಕೆ ಮಾಡಬಹುದು. 

Written by - Yashaswini V | Last Updated : Mar 7, 2024, 08:38 AM IST
  • ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕ್ರೆಡಿಟ್ ಕಾರ್ಡ್ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
  • ಕಾರ್ಡ್ ವಿತರಿಸುವ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ಗ್ರಾಹಕರು ಯಾವ ನೆಟ್‌ವರ್ಕ್ ಕಾರ್ಡ್ ಪಡೆಯಲು ಬಯಸುತ್ತಾರೆ ಎಂಬ ಆಯ್ಕೆಯನ್ನು ನೀಡುವಂತೆ ಸೂಚನೆಯನ್ನು ನೀಡಿದೆ.
  • ಇದರನ್ವಯ ಈಗ ಬ್ಯಾಂಕ್ ಅಲ್ಲ ಬ್ಯಾಂಕ್ ಗ್ರಾಹಕರು ತಮ್ಮ ನೆಚ್ಚಿನ ಕಾರ್ಡ್ ಅನ್ನು ಆಯ್ಕೆ ಮಾಡಬಹುದು.
Credit Card Rules: ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ನಿಯಮ ಬದಲಾಯಿಸಿದ ಆರ್‌ಬಿ‌ಐ  title=

RBI Changes Credit Card Rules: ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಂದ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ಮಾರ್ಗಸೂಚಿಗಳನ್ನು ಮಾಡಿದೆ. ಆರ್‌ಬಿ‌ಐನ ಹೊಸ ನಿಯಮವು ಗ್ರಾಹಕರ ಮೇಲೆ ನೇರ ಪರಿಣಾಮ ಬೀರಳಿದ್ದು, ಇದರಿಂದಾಗಿ ಗ್ರಾಹಕರು ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಹೇಳಲಾಗಿದೆ. 

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳು ಅಮೆರಿಕನ್ ಎಕ್ಸ್‌ಪ್ರೆಸ್, ಮಾಸ್ಟರ್‌ಕಾರ್ಡ್ ಏಷ್ಯಾ, ಡೈನರ್ಸ್ ಕ್ಲಬ್ ಮತ್ತು ರುಪೇಯಂತಹ ಯಾವುದೇ ಕಾರ್ಡ್ ನೆಟ್‌ವರ್ಕ್‌ಗಳೊಂದಿಗೆ ವಿಶೇಷ ವ್ಯವಸ್ಥೆಗಳು ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳಬಾರದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಮಾತ್ರವಲ್ಲದೆ, ಕಾರ್ಡ್ ವಿತರಿಸುವ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ಗ್ರಾಹಕರು ಯಾವ ನೆಟ್‌ವರ್ಕ್ ಕಾರ್ಡ್ ಪಡೆಯಲು ಬಯಸುತ್ತಾರೆ ಎಂಬ ಆಯ್ಕೆಯನ್ನು ನೀಡುವಂತೆ ಸೂಚನೆಯನ್ನು ನೀಡಿದೆ. ಇದರನ್ವಯ ಈಗ ಬ್ಯಾಂಕ್ ಅಲ್ಲ ಬ್ಯಾಂಕ್ ಗ್ರಾಹಕರು ತಮ್ಮ ನೆಚ್ಚಿನ ಕಾರ್ಡ್ ಅನ್ನು ಆಯ್ಕೆ ಮಾಡಬಹುದು. 

ಇದನ್ನೂ ಓದಿ- EPFO updated News :ನಿವೃತ್ತಿಯ ಮೊದಲು PF ಹಣವನ್ನು ಹಿಂಪಡೆಯುವುದು ಹೇಗೆ? ಏನು ಹೇಳುತ್ತದೆ ನಿಯಮ?

ಗಮನಾರ್ಹವಾಗಿ, ಭಾರತದಲ್ಲಿ, ವೀಸಾ, ಮಾಸ್ಟರ್‌ಕಾರ್ಡ್, ಅಮೇರಿಕನ್ ಎಕ್ಸ್‌ಪ್ರೆಸ್, ಡೈನರ್ಸ್ ಕ್ಲಬ್, ರುಪೇ ಮುಂತಾದ ಕಾರ್ಡ್ ನೆಟ್‌ವರ್ಕ್‌ಗಳು ಅನೇಕ ಪ್ರಮುಖ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳೊಂದಿಗೆ ಟೈ ಅಪ್‌ಗಳನ್ನು ಹೊಂದಿವೆ. ಆದರೆ, ಆರ್‌ಬಿ‌ಐ ಹೊಸ ನಿಯಮದ ಅನ್ವಯ,  ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳು ಯಾವುದೇ ಕಾರ್ಡ್ ನೆಟ್‌ವರ್ಕ್‌ಗಳೊಂದಿಗೆ ವಿಶೇಷ ವ್ಯವಸ್ಥೆಗಳು ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳುವಂತಿಲ್ಲ. ಕ್ರೆಡಿಟ್ ಕಾರ್ಡ್ ನವೀಕರಣದ ಸಂದರ್ಭದಲ್ಲಿಯೂ ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳು ತಮ್ಮ ಗ್ರಾಹಕರಿಗೆ ಕಾರ್ಡ್ ನೆಟ್‌ವರ್ಕ್ ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡಬೇಕು. 

ಆರ್‌ಬಿ‌ಐನ ಹೊಸ ನಿಯಮ ಯಾರಿಗೆ ಅನ್ವಯಿಸುವುದಿಲ್ಲ? 
10 ಲಕ್ಷಕ್ಕಿಂತ ಕಡಿಮೆ ಸಕ್ರಿಯ ಕಾರ್ಡ್‌ಗಳನ್ನು ಹೊಂದಿರುವ ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳಿಗೆ ಈ ಮಾರ್ಗಸೂಚಿಗಳು ಅನ್ವಯಿಸುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಹೆಚ್ಚುವರಿಯಾಗಿ, ತಮ್ಮ ಸ್ವಂತ ಅಧಿಕೃತ ಕಾರ್ಡ್ ನೆಟ್‌ವರ್ಕ್‌ಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಕಾರ್ಡ್ ವಿತರಕರನ್ನು ಸಹ ಇದರಿಂದ ಹೊರಗಿಡಲಾಗಿದೆ.

ಇದನ್ನೂ ಓದಿ- UDGAM Portal: ಹಳೆಯ ಕ್ಲೈಮ್ ಮಾಡದ ಠೇವಣಿಗಳಿಂದ ಹಣ ಹಿಂಪಡೆಯಲು ಆರ್‌ಬಿ‌ಐನ ಈ ಪೋರ್ಟಲ್ ಬಳಸಿ

ದೇಶದ ಪ್ರಮುಖ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಗ್ರಾಹಕರಿಗೆ ಅವರ ಒಪ್ಪಿಗೆಯನ್ನು ಕೇಳದೆಯೇ ಸ್ಥಿರ ನೆಟ್‌ವರ್ಕ್‌ನ ಕಾರ್ಡ್‌ಗಳನ್ನು ನೀಡುವುದನ್ನು ಗಮನಿಸಿರುವ ಆರ್‌ಬಿ‌ಐ, ದೊಡ್ಡ ಕಾರ್ಡ್ ನೆಟ್‌ವರ್ಕ್‌ಗಳು ಬ್ಯಾಂಕ್‌ಗಳೊಂದಿಗೆ ವಿಶೇಷ ಟೈ-ಅಪ್‌ಗಳನ್ನು ಹೊಂದಿರುವುದರಿಂದ ಗ್ರಾಹಕರಿಗಿಂತ ಬ್ಯಾಂಕ್‌ಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಇದು ಸೇವಾ ಶುಲ್ಕಗಳು ಅಥವಾ ರಿವಾರ್ಡ್ ಪಾಯಿಂಟ್‌ಗಳು ಮತ್ತು ಗ್ರಾಹಕರ ಕೊಡುಗೆಗಳು ಸೇರಿದಂತೆ ಹಲವು ಪ್ರಯೋಜನಗಳನ್ನು ಒಳಗೊಂಡಿದೆ ಎಂಬುದನ್ನೂ ಮನಗಂಡು ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News