RBI News: ಕೋ-ಆಪರೇಟಿವ್ ಸೊಸೈಟಿಗಳ (Co-Operative Societies) ಹೆಸರಿನಲ್ಲಿ 'ಬ್ಯಾಂಕ್' ಪದ ಬಳಕೆಯ (Use Of Bank Word In Name) ಬಗ್ಗೆ ಜಾಗರೂಕರಾಗಿರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶಾದ್ಯಂತ ಇರುವ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರಲ್ಲಿ (Banking Regulation Act, 1949) ಮಾಡಿದ ತಿದ್ದುಪಡಿಯ ನಂತರ, ಯಾವುದೇ ಸಹಕಾರ ಸಂಘವು ತನ್ನ ಹೆಸರಿನಲ್ಲಿ 'ಬ್ಯಾಂಕ್ (Bank), ಬ್ಯಾಂಕರ್ (Banker) ಅಥವಾ ಬ್ಯಾಂಕಿಂಗ್(Banking)' ಪದವನ್ನು ಬಳಸುವಂತಿಲ್ಲ ಎಂದು ಆರ್ಬಿಐ ಸೋಮವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಲವು ಸಹಕಾರಿ ಸಂಘಗಳು ಈ ನಿಯಮವನ್ನು ಉಲ್ಲಂಘನೆ ಮಾಡುತ್ತಿವೆ
ಆದರೆ, ರಿಸರ್ವ್ ಬ್ಯಾಂಕಿನ ಪೂರ್ವಾನುಮತಿ ಪಡೆದರೆ ಹಾಗೆ ಮಾಡಲು ಸ್ವಾತಂತ್ರ್ಯವಿರುತ್ತದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ತಿದ್ದುಪಡಿಗಳು ಸೆಪ್ಟೆಂಬರ್ 29, 2020 ರಿಂದ ಜಾರಿಗೆ ಬಂದಿವೆ. ಕೆಲವು ಸಹಕಾರ ಸಂಘಗಳು ತಮ್ಮ ಹೆಸರಿನಲ್ಲಿ 'ಬ್ಯಾಂಕ್' ಪದವನ್ನು ಬಳಸುತ್ತಿರುವ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ, ಇದು ಈ ತಿದ್ದುಪಡಿ ಮಾಡಲಾದ ನಿಯಮವನ್ನು ಉಲ್ಲಂಘಿಸುತ್ತದೆ.
ಇದನ್ನೂ ಓದಿ-Share Market Update: ಷೇರು ಮಾರುಕಟ್ಟೆ ಧಡಂ, ಹೂಡಿಕೆದಾರರ 8 ಲಕ್ಷ ಕೋಟಿ ರೂ. ಗುಳುಂ
ರಿಸರ್ವ್ ಬ್ಯಾಂಕ್ ಸಾರ್ವಜನಿಕರಿಗೆ ಮಾಹಿತಿ ನೀಡಿದೆ
ಇದಲ್ಲದೇ ಕೆಲವು ಸಹಕಾರ ಸಂಘಗಳು ಸದಸ್ಯರಲ್ಲದವರಿಂದ ಠೇವಣಿಗಳನ್ನು ಸ್ವೀಕರಿಸುತ್ತಿದ್ದು ಇದು ಬ್ಯಾಂಕಿಂಗ್ ವ್ಯವಹಾರದಲ್ಲಿ ತೊಡಗಿಸಿಕೊಂಡಂತೆ ಆಗಿದೆ. ರಿಸರ್ವ್ ಬ್ಯಾಂಕ್ ಸಹ ಸಹಕಾರ ಸಂಘಗಳ ಈ ನಡವಳಿಕೆಯನ್ನು ಬ್ಯಾಂಕಿಂಗ್ (Banking Alert) ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಎಂದು ಬಣ್ಣಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ RBI, "ಇಂತಹ ಪರಿಸ್ಥಿತಿಯಲ್ಲಿ, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಅಡಿಯಲ್ಲಿ ಬ್ಯಾಂಕಿಂಗ್ಗೆ ಯಾವುದೇ ಪರವಾನಗಿಯನ್ನು ಅಂತಹ ಸಹಕಾರ ಸಂಘಗಳಿಗೆ ನೀಡಲಾಗಿಲ್ಲ ಅಥವಾ ಹಾಗೆ ಮಾಡಲು ಆರ್ಬಿಐನಿಂದ ಅಧಿಕಾರ ಪಡೆದಿಲ್ಲ ಎಂದು ಸಾರ್ವಜನಿಕರಿಗೆ ತಿಳಿಸಲಾಗುತ್ತದೆ " ಎಂದಿದೆ.
ಇದನ್ನೂ ಓದಿ-Alert! ಅಪ್ಪಿ-ತಪ್ಪಿಯೂ ಕೂಡ ಗೂಗಲ್ ನಲ್ಲಿ ಈ ಸಂಖ್ಯೆ ಹುಡುಕಾಟ ನಡೆಸಬೇಡಿ
ಗ್ರಾಹಕರು ಎಚ್ಚರಿಕೆ ವಹಿಸಬೇಕು
ಇಂತಹ ಸಹಕಾರಿ ಸಂಘಗಳಲ್ಲಿ ಠೇವಣಿ ಇರಿಸಲಾಗಿರುವ ಮೊತ್ತವು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಬ್ಯಾಂಕ್ ಜನರಿಗೆ ಎಚ್ಚರಿಕೆ ನೀಡಿದೆ. ಆದ್ದರಿಂದ ಜನರು ತಮ್ಮ ಹಣವನ್ನು ಇಂತಹ ಸಹಕಾರಿ ಸಂಘಗಳಲ್ಲಿ ಠೇವಣಿ ಇಡುವಾಗ ಎಚ್ಚರಿಕೆ ವಹಿಸಬೇಕು ಎಂದು ಅದು ಹೇಳಿದೆ. ಬ್ಯಾಂಕಿಂಗ್ ಕಾರ್ಯಾಚರಣೆಗಳಿಗಾಗಿ ಅಧಿಕೃತ ಪರವಾನಗಿ ಪಡೆದ ಸಂಸ್ಥೆಗಳೊಂದಿಗೆ ಮಾತ್ರ ವಹಿವಾಟು ನಡೆಸುವಂತೆ ಕೇಂದ್ರೀಯ ಬ್ಯಾಂಕ್ ಗ್ರಾಹಕರಿಗೆ ಹೇಳಿದೆ.
ಇದನ್ನೂ ಓದಿ-Indian Railways: ರೈಲಿನ ರಿಸರ್ವ್ ಟಿಕೆಟ್ ಅನ್ನು ರದ್ದುಗೊಳಿಸುವ ಮೊದಲು, IRCTC ಯ ಈ ನಿಯಮಗಳನ್ನು ತಪ್ಪದೇ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.