ಬೆಂಗಳೂರು : ಬೈಕ್ ಟ್ಯಾಕ್ಸಿ ಸೇವೆ ಒದಗಿಸುವ ಭಾರತದ ಪ್ರಮುಖ ಸಂಸ್ಥೆ ರ್ಯಾಪಿಡೊ, ಸ್ಥಳೀಯ ಆಟೊ ಚಾಲಕರಿಗೆ ಅಸಾಧಾರಣ ಸ್ವರೂಪದ ಬೆಂಬಲ ನೀಡುವ ಉದ್ದೇಶದಿಂದ ತನ್ನ ಹೊಸ ಉಪಕ್ರಮವಾದ ’ಆಟೊ ದೋಸ್ತ್’ ಪ್ರಾರಂಭಿಸಲು ಉತ್ಸುಕವಾಗಿದೆ. ಇದರ ಜೊತೆಗೆ, ರಾತ್ರಿ 10ರಿಂದ ಬೆಳಿಗ್ಗೆ 6ರ ನಡುವಣ ಅವಧಿಯಲ್ಲಿ ನಗರದಲ್ಲಿ ಪ್ರಯಾಣಿಸುವವರು ತಮ್ಮ ಪಯಣ ಪೂರ್ಣಗೊಳಿಸಿದ ನಂತರ ರ್ಯಾಪಿಡೊ ಕಾಲ್ ಸೆಂಟರ್ನಿಂದ ಸುರಕ್ಷಿತ ಪ್ರಯಾಣದ ಬಗ್ಗೆ ಮಾಹಿತಿ ಪಡೆಯುವ ಹೊಸ ಸುರಕ್ಷತಾ ಸೌಲಭ್ಯವನ್ನು ಪರಿಚಯಿಸಿದೆ.
ಆಟೊ ದೋಸ್ತ್ : ಬೆಂಗಳೂರು ನಗರದಾದ್ಯಂತ ಪ್ರಯಾಣಿಕರಿಗೆ ವಿಶ್ವಾಸಾರ್ಹ ಸೇವೆಗಳನ್ನು ಒದಗಿಸುವಲ್ಲಿ ಬೆಂಗಳೂರಿನ ಸ್ಥಳೀಯ ಆಟೊ ಚಾಲಕರು ನಿರ್ವಹಿಸುತ್ತಿರುವ ಅಮೂಲ್ಯ ಪಾತ್ರವನ್ನು ರ್ಯಾಪಿಡೊ ಗುರುತಿಸುತ್ತದೆ. ‘ಆಟೊ ದೋಸ್ತ್’ ಉಪಕ್ರಮದ ಮೂಲಕ ತನ್ನ ಆಟೊ ಕ್ಯಾಪ್ಟನ್ರಿಗೆ ಅತ್ಯುತ್ತಮ ದರ್ಜೆಯ ಬೆಂಬಲ ನೀಡಲು ರ್ಯಾಪಿಡೊ ಬದ್ಧವಾಗಿದೆ, ಈ ಮೂಲಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ವಿಭಿನ್ನತೆಯ ಕಾರಣಕ್ಕೆ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತದೆ.
‘ಆಟೊ ದೋಸ್ಟ್’ ಉಪಕ್ರಮದ ಭಾಗವಾಗಿ, ರ್ಯಾಪಿಡೊ ತನ್ನ ಕ್ಯಾಪ್ಟನ್ರಿಗೆ ಹಲವಾರು ಪ್ರಯೋಜನಗಳನ್ನು ನೀಡಲಿದೆ. ಅವುಗಳು ಹೀಗಿವೆ
- ಪ್ರತಿಯೊಂದು ಆರ್ಡರ್ನಲ್ಲಿ ಕಮಿಷನ್ ₹15ಕ್ಕಿಂತ ಕಡಿಮೆ ಇರಲಿದೆ. ಇದು ಚಾಲಕರ ಗಳಿಕೆಯು ಗರಿಷ್ಠ ಮಟ್ಟದಲ್ಲಿ ಇರಲಿರುವುದನ್ನು ಖಚಿತಪಡಿಸುತ್ತದೆ.
- ಅನಿಯಮಿತ ಆರ್ಡರ್ ರದ್ದತಿಗಳಿಗೆ ರದ್ದತಿ ಶುಲ್ಕವು ₹10 ಇರಲಿದೆ. ಇದು ತಮ್ಮ ಸವಾರಿಗಳನ್ನು ನಿರ್ವಹಿಸುವಲ್ಲಿ ಕ್ಯಾಪ್ಟನ್ರಿಗೆ ಅನುಕೂಲತೆ ಒದಗಿಸುತ್ತದೆ.
- ಪ್ರತಿ ರೈಡ್ಗೆ ಪಿಕ್ ಅಪ್ ಶುಲ್ಕ ₹10 ಇರಲಿದ್ದು, ಪ್ರಯಾಣಿಕರನ್ನು ತ್ವರಿತವಾಗಿ ತಲುಪುವ ಕ್ಯಾಪ್ಟನ್ರ ಪ್ರಯತ್ನಗಳಿಗೆ ಮನ್ನಣೆ ನೀಡಲಿದೆ.
- ಆಟೊ ಕ್ಯಾಪ್ಟನ್ನರ ಯಾವುದೇ ಪ್ರಶ್ನೆ ಅಥವಾ ಆತಂಕದ ತ್ವರಿತ ಮತ್ತು ದಕ್ಷ ಪರಿಹಾರ ಉದ್ದೇಶಕ್ಕೆ ಪ್ರತ್ಯೇಕವಾಗಿ ಮೀಸಲಾದ ಕ್ಯಾಪ್ಟನ್ನರನ್ನು ಬೆಂಬಲಿಸುವ ಕೇಂದ್ರ ಸ್ಥಾಪನೆ.
- ಆಟೊ ಕ್ಯಾಪ್ಟನ್ನರ ತೃಪ್ತಿ ಮತ್ತು ಯಶಸ್ಸನ್ನು ಖಚಿತಪಡಿಸಲು,‘ಆಟೊ ದೋಸ್ತ್’ ಉಪಕ್ರಮದ ಅಡಿಯಲ್ಲಿ ಕ್ಯಾಪ್ಟನ್ರಿಗೆ ನೀಡಲಾಗುವ ಪ್ರಯೋಜನಗಳನ್ನು ನಿರಂತರವಾಗಿ ಹೆಚ್ಚಿಸುವ ಗುರಿಯನ್ನು ರ್ಯಾಪಿಡೊ ಹೊಂದಿದೆ.
- ಪ್ರಯಾಣಿಕರ ಸುರಕ್ಷತೆ ಖಾತ್ರಿಪಡಿಸಲು ರಾತ್ರಿ ಸವಾರಿ ತಪಾಸಣೆ : ತನ್ನ ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲು ರ್ಯಾಪಿಡೊ ಬಯಸುತ್ತದೆ. ತಡರಾತ್ರಿಯ ಪ್ರಯಾಣದ ಸಮಸ್ಯೆಗಳನ್ನು ಪರಿಹರಿಸಲು, ರ್ಯಾಪಿಡೊ ತನ್ನ ಆ್ಯಪ್ನಲ್ಲಿ ‘ನೈಟ್ ರೈಡ್ಸ್ ಚೆಕ್’ (Night Rides Check) ಸೌಲಭ್ಯವನ್ನು ಪರಿಚಯಿಸಿದೆ.
- ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ರ್ಯಾಪಿಡೊ ಸೇವೆಗಳನ್ನು ಬಳಸುವ ಪ್ರಯಾಣಿಕರು ತಮ್ಮ ಪಯಣ ಪೂರ್ಣಗೊಳಿಸಿದ ನಂತರ ರ್ಯಾಪಿಡೊ ಕಾಲ್ ಸೆಂಟರ್ನಿಂದ ಸುರಕ್ಷಿತ ಪಯಣದ ಬಗ್ಗೆ ಮಾಹಿತಿ ಪಡೆಯುವ ಕರೆ ಸ್ವೀಕರಿಸುತ್ತಾರೆ.
- ಈ ‘ನೈಟ್ ರೈಡ್ಸ್ ಚೆಕ್’ ಹೆಚ್ಚುವರಿ ಸುರಕ್ಷತಾ ಕ್ರಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಪ್ರಯಾಣಿಕರಿಗೆ ಅವರ ತಡರಾತ್ರಿಯ ಪ್ರಯಾಣದ ಸಮಯದಲ್ಲಿ ಮನಶಾಂತಿ ನೀಡಲಿದೆ. ಈ ಸೌಲಭ್ಯವು ಎಲ್ಲಾ ಸಮಯದಲ್ಲೂ ತನ್ನ ಸೇವೆ ಪಡೆದ ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮ ಖಾತ್ರಿಪಡಿಸುವ ರ್ಯಾಪಿಡೊದ ಬದ್ಧತೆಯನ್ನು ಸೂಚಿಸುತ್ತದೆ.
ರ್ಯಾಪಿಡೊದ ಸಹ ಸ್ಥಾಪಕ ಪವನ್ ಗುಂತುಪಲ್ಲಿ ಅವರ ಪ್ರಕಾರ, ಈ ಸೌಲಭ್ಯವು ಕಂಪನಿಯ ಯಶಸ್ಸಿಗೆ ಕೊಡುಗೆ ನೀಡುವ ನಮ್ಮ ಚಾಲಕ-ಪಾಲುದಾರರಲ್ಲಿ ಬದ್ಧತೆ ಮತ್ತು ಸೇವಾ ಗುಣಮಟ್ಟವನ್ನು ಸುಧಾರಿಸಲಿದೆ. ‘ನಮ್ಮ ರ್ಯಾಪಿಡೊ ಕ್ಯಾಪ್ಟನ್ನರು ನಮ್ಮ ವಹಿವಾಟಿನ ಬೆನ್ನೆಲುಬು ಆಗಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಸೇವೆಗೆ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ. ಬೆಂಗಳೂರಿನಲ್ಲಿ ರ್ಯಾಪಿಡೊ ಸೇವೆ ಮನೆಮಾತಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಸಾಧನೆಗಳ ಬಗ್ಗೆ ನಮಗೆ ಹೆಮ್ಮೆ ಇದೆ.
ನಮ್ಮ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವಾಗ ನಮ್ಮ ಆಟೊ ಕ್ಯಾಪ್ಟನ್ರಿಗೆ ಅಗತ್ಯ ಬೆಂಬಲ ನೀಡುವ ಪೂರಕ ವ್ಯವಸ್ಥೆಯನ್ನು ಬೆಳೆಸುವಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ‘ಆಟೊ ದೋಸ್ತ್’ ಉಪಕ್ರಮವು ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ, ಈ ಉಪಕ್ರಮವನ್ನು ಪ್ರಾರಂಭಿಸುವುದರಿಂದ ನಮ್ಮ ಕ್ಯಾಪ್ಟನ್ನರ ನೈತಿಕ ಸ್ಥೈರ್ಯ ಹೆಚ್ಚಳಗೊಳ್ಳಲಿದೆ. ಜೊತೆಗೆ ಆಟೊ ಕ್ಯಾಪ್ಟನ್ನರನ್ನು ಉಳಿಸಿಕೊಳ್ಳುವುದರ ದರವೂ ಸುಧಾರಿಸಲಿದೆ. ‘ನೈಟ್ ರೈಡ್ಸ್ ಚೆಕ್’ ಸೌಲಭ್ಯವು ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣ ಅನುಭವ ಒದಗಿಸುವ ನಮ್ಮ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸಲಿದೆ’ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪುರಸ್ಕಾರ ಮತ್ತು ಗುರುತಿಸುವಿಕೆ (ಆರ್ & ಆರ್) ಕಾರ್ಯಕ್ರಮದಲ್ಲಿ, ಹೊಸದಾಗಿ ‘ಆಟೊ ದೋಸ್ತ್’ ಮತ್ತು ‘ನೈಟ್ ರೈಡರ್’ ಉಪಕ್ರಮ ಆರಂಭಿಸಿರುವುದನ್ನು ರ್ಯಾಪಿಡೊ ಪ್ರಕಟಿಸಿತು. ನಗರದಲ್ಲಿನ ರ್ಯಾಪಿಡೊ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಬೆಂಗಳೂರು ಆಟೊ ಕ್ಯಾಪ್ಟನ್ರ ಕಠಿಣ ಪರಿಶ್ರಮ ಮತ್ತು ಸಮರ್ಪಣಾಭಾವವನ್ನು ಕಾರ್ಯಕ್ರಮದಲ್ಲಿ ಶ್ಲಾಘಿಸಲಾಯಿತು. ರ್ಯಾಪಿಡೊದ ಪುರಸ್ಕಾರ ಮತ್ತು ಗುರುತಿಸುವಿಕೆ ಕಾರ್ಯಕ್ರಮದಲ್ಲಿ ರ್ಯಾಪಿಡೊದ 500 ಆಟೊ ಕ್ಯಾಪ್ಟನ್ನರು ಭಾಗವಹಿಸಿದ್ದರು.
ಆಟೊ ಕ್ಯಾಪ್ಟನ್ನರು ಪೂರ್ಣಗೊಳಿಸಿದ ರೈಡ್ಗಳ ಆಧಾರದ ಮೇಲೆ ₹ 10 ಲಕ್ಷ ಮೊತ್ತದ ನಗದು ಬಹುಮಾನ ಸೇರಿದಂತೆ ವಿವಿಧ ಉಡುಗೊರೆಗಳನ್ನು ನೀಡಲಾಯಿತು. ನಗರದಲ್ಲಿ ಸಾಧ್ಯವಿರುವ ಮಟ್ಟಿಗೆ ಹೆಚ್ಚಿನ ರೈಡ್ಗಳನ್ನು ಕಾರ್ಯಗತಗೊಳಿಸಿದ ಆಟೊ ಕ್ಯಾಪ್ಟನ್ನರ ನಿರಂತರ ಸಮರ್ಪಣಾ ಸೇವೆಯನ್ನು ಗುರುತಿಸಿ ಮುಂಚೂಣಿ ವಿಜಯಶಾಲಿಗಳಿಗೆ ಟೆಲಿವಿಷನ್ಗಳು ಮತ್ತು ಇತರ ಉಡುಗೊರೆಗಳನ್ನು ವಿತರಿಸಲಾಯಿತು. ಕಂಪನಿಯು ತನ್ನ ಆಟೊ ಕ್ಯಾಪ್ಟನ್ನರನ್ನು ಬೆಂಬಲಿಸಲು ಬದ್ಧವಾಗಿದೆ. ಆಟೊ ಕ್ಯಾಪ್ಟನ್ನರ ವರಮಾನ ಹೆಚ್ಚಿಸುವುದಕ್ಕೆ ಸಹಾಯ ಮಾಡಲು ಉತ್ತಮ ಕೆಲಸದ ಪರಿಸ್ಥಿತಿ ಮತ್ತು ಉತ್ತೇಜನಗಳನ್ನು ಒದಗಿಸಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.