Bullet Train : ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ಟ್ರೈನ್ : ಟಿಕೆಟ್‌ ದರ ತಿಳಿಸಿದ ಸರ್ಕಾರ!

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಲೆಟ್ ಟ್ರೈನ್ ದರವನ್ನು ಫಸ್ಟ್ ಎಸಿಗೆ ಸಮನಾಗಿ ಇರಿಸಲು ಸೂಚಿಸಿದ್ದಾರೆ. ಬಾಡಿಗೆ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲವಾದರೂ ಇದು ಜನರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ ಎಂದು ಹೇಳಿದ್ದಾರೆ. 

Written by - Channabasava A Kashinakunti | Last Updated : Jun 7, 2022, 02:11 PM IST
  • ಪ್ರಧಾನಿ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
  • ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
  • ಬುಲೆಟ್ ಟ್ರೈನ್ ದರವನ್ನು ಫಸ್ಟ್ ಎಸಿಗೆ ಸಮನಾಗಿ ಇರಿಸಲು
Bullet Train : ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ಟ್ರೈನ್ : ಟಿಕೆಟ್‌ ದರ ತಿಳಿಸಿದ ಸರ್ಕಾರ! title=

Bullet Train Ticket Price : ಪ್ರಧಾನಿ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಬುಲೆಟ್ ಟ್ರೈನ್ ಗೆ ಕಾಲ ಕುಡಿ ಬರುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. 

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಲೆಟ್ ಟ್ರೈನ್ ದರವನ್ನು ಫಸ್ಟ್ ಎಸಿಗೆ ಸಮನಾಗಿ ಇರಿಸಲು ಸೂಚಿಸಿದ್ದಾರೆ. ಬಾಡಿಗೆ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲವಾದರೂ ಇದು ಜನರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಎಮ್ಮೆಯ ಮಾಲೀಕನ ಪತ್ತೆಗೆ ಡಿಎನ್ ಎ ಟೆಸ್ಟ್ ಮಾಡಿಸಲು ಪೊಲೀಸರ ಆದೇಶ

ಇದಕ್ಕಾಗಿ, ಫಸ್ಟ್ ಎಸಿಯ ಆಧಾರದ ಮೇಲೆ ಬುಲೆಟ್ ಟ್ರೈನ್ ದರ ನಿಗದಿ ಮಾಡಲಾಗುತ್ತಿದೆ, ಇದು  ತುಂಬಾ ಜಾಸ್ತಿ ದರವೇನಿಲ್ಲ, ವಿಮಾನ ದರಕ್ಕಿಂತ ಕಡಿಮೆಯಿರುತ್ತದೆ. ಆದ್ರೆ ಇಯ್ಲಿ ಸಿಗುವ ಸೌಲಭ್ಯಗಳು ಉತ್ತಮವಾಗಿರುತ್ತವೆ. ಯೋಜನೆ ಪೂರ್ಣಗೊಂಡ ಬಳಿಕ ಬಾಡಿಗೆ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

ಸೋಮವಾರ ಅಶ್ವಿನಿ ವೈಷ್ಣವ್ ಅವರು ಬುಲೆಟ್ ರೈಲು ಯೋಜನೆಗೆ ಭೇಟಿ ನೀಡಿ, ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ ಪೂರ್ಣಗೊಂಡ ನಂತರವೇ ಎರಡನೇ ಹೈಸ್ಪೀಡ್ ರೈಲು ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಈ ನಿಟ್ಟಿನಲ್ಲಿ ಉತ್ತಮ ಪ್ರಗತಿ ಕಾಣುತ್ತಿರುವುದರಿಂದ 2026ರಲ್ಲಿ ಗುಜರಾತ್‌ನ ಸೂರತ್ ಮತ್ತು ಬಿಲಿಮೊರಾ ನಡುವೆ ದೇಶದ ಮೊದಲ ಬುಲೆಟ್ ರೈಲು ಓಡಿಸುವ ಗುರಿಯನ್ನು ಸಾಧಿಸಲಾಗುವುದು ಎಂದು ಹೇಳಿದರು.

ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಸೂರತ್‌ಗೆ ಬಂದಿದ್ದರು. 2026 ರಲ್ಲಿ ಸೂರತ್ ಮತ್ತು ಬಿಲಿಮೋರಾ ನಡುವೆ ಮೊದಲ ಬುಲೆಟ್ ರೈಲು ಓಡಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದರು. ಇದರಲ್ಲಿ ಉತ್ತಮ ಪ್ರಗತಿ ಕಾಣುತ್ತಿದ್ದೇವೆ, ಅಷ್ಟರೊಳಗೆ ರೈಲು ಓಡಿಸುವ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ಪ್ರಯಾಣ ಅವಧಿ ಕೇವಲ 3 ಗಂಟೆ

ಈ ಕುರಿತು ಮಾಹಿತಿ ನೀಡಿದ ರೈಲ್ವೆ ಸಚಿವರು, ಕೇವಲ 115 ಕಿಮೀ ಉದ್ದದ ಮೊದಲ ಹೈಸ್ಪೀಡ್ ರೈಲು ಯೋಜನೆಯನ್ನು ಚೀನಾ ನಿರ್ಮಿಸಿದೆ. ಇದರಿಂದ ಪಾಠ ಕಲಿತ ಚೀನಾ ದೇಶದಲ್ಲಿ ಬೃಹತ್ ವೇಗದ ರೈಲು ಜಾಲವನ್ನು ಸ್ಥಾಪಿಸಿದೆ. ವಾಪಿ ಮತ್ತು ಸಾಬರಮತಿ ನಡುವಿನ ನಮ್ಮ 352 ಕಿಲೋಮೀಟರ್ ದೂರನ್ನ ಕೇವಲ  3 ಗಂಟೆಯಲ್ಲಿ ತಲುಪಲಿದೆ ಎಂದು ತಿಳಿಸಿದ್ದಾರೆ. 

ಮುಂಬೈ ಮತ್ತು ಅಹಮದಾಬಾದ್ ನಡುವೆ ಗಂಟೆಗೆ 320 ಕಿ.ಮೀ ವೇಗದಲ್ಲಿ ಬುಲೆಟ್ ರೈಲು ಓಡಿಸುವ ಪ್ರಸ್ತಾವನೆ ಇದೆ. ಎರಡು ನಗರಗಳ ನಡುವೆ ಒಟ್ಟು 508 ಕಿ.ಮೀ ದೂರವಿದ್ದು, ಇದು 12 ನಿಲ್ದಾಣಗಳನ್ನು ಹೊಂದಿರುತ್ತದೆ. ಈ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಮೂರು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಇದೀಗ ಆರು ಗಂಟೆ ತೆಗೆದುಕೊಳ್ಳುತ್ತದೆ. ಈ ಯೋಜನೆಯ ಒಟ್ಟು ಅಂದಾಜು ವೆಚ್ಚ 1.1 ಲಕ್ಷ ಕೋಟಿ ರೂ. ಆಗಿದೆ.

ಇದನ್ನೂ ಓದಿ : ಈ ರಾಜ್ಯಗಳಲ್ಲಿ ಆರ್‌ಎಸ್‌ಎಸ್‌ ಕಚೇರಿ ಧ್ವಂಸಗೊಳಿಸುವ ಬೆದರಿಕೆ: ದೂರು ದಾಖಲು

ಇದರಲ್ಲಿ ಶೇ.81 ರಷ್ಟು ಹಣವನ್ನು ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ ನೀಡುತ್ತಿದೆ. ಬುಲೆಟ್ ರೈಲು ಯೋಜನೆಯ 61 ಕಿ.ಮೀ ಮಾರ್ಗದಲ್ಲಿ ಪಿಲ್ಲರ್‌ಗಳನ್ನು ನಿರ್ಮಿಸಲಾಗಿದ್ದು, 150 ಕಿ.ಮೀ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News