Bank privatization : ಎರಡು ಬ್ಯಾಂಕುಗಳ ಖಾಸಗೀಕರಣ ..! ನೌಕರರಿಗಾಗಿ ಸಿದ್ದವಾಗುತ್ತಿದೆ ವಿಆರ್ ಎಸ್ ಪ್ಲಾನ್

 Bank privatization : ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ  ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು (Bank privatization) ಹೊರಟಿದೆ.  ಇದಕ್ಕಾಗಿ ಸರ್ಕಾರವು ಉದ್ಯೋಗಿಗಳಿಗೆ ವಿಆರ್ ಎಸ್ ಪ್ಲಾನ್ ಗಳನ್ನು (VRS Plan) ಸಿದ್ದಪಡಿಸುತ್ತಿದೆ ಎನ್ನಲಾಗಿದೆ. ಅಂದರೆ ಉದ್ಯೋಗಿಗಳಿಗೆ ಉತ್ತಮ ಪ್ಯಾಕೇಜ್ ಗಳನ್ನು ನೀಡಲಿದೆ ಎನ್ನಲಾಗಿದೆ.   

Written by - Ranjitha R K | Last Updated : Jun 9, 2021, 09:55 AM IST
  • ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಹೊರಟ ಸರ್ಕಾರ
  • ಉದ್ಯೋಗಿಗಳಿಗೆ ವಿಆರ್ ಎಸ್ ಪ್ಲಾನ್ ಗಳನ್ನು ಸಿದ್ದಪಡಿಸುತ್ತಿದೆ ಎನ್ನಲಾಗಿದೆ.
  • ವಿಆರ್ ಎಸ್ ತೆಗೆದುಕೊಳ್ಳುವ ಉದ್ಯೋಗಿಗಳಿಗೆ ಈ ಪ್ಯಾಕೇಜ್ ನೀಡುವ ಸಾಧ್ಯತೆ ಇದೆ.
Bank privatization : ಎರಡು ಬ್ಯಾಂಕುಗಳ ಖಾಸಗೀಕರಣ ..! ನೌಕರರಿಗಾಗಿ ಸಿದ್ದವಾಗುತ್ತಿದೆ ವಿಆರ್ ಎಸ್ ಪ್ಲಾನ್  title=
bank privatization (photo zee news)

ನವದೆಹಲಿ : Bank privatization : ಕೇಂದ್ರ ಸರ್ಕಾರವು  ಸರ್ಕಾರಿ ಸ್ವಾಮ್ಯದ  ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು (Bank privatization) ಹೊರಟಿದೆ.  ಇದಕ್ಕಾಗಿ ಸರ್ಕಾರವು ಉದ್ಯೋಗಿಗಳಿಗೆ ವಿಆರ್ ಎಸ್ ಪ್ಲಾನ್ ಗಳನ್ನು (VRS Plan) ಸಿದ್ದಪಡಿಸುತ್ತಿದೆ ಎನ್ನಲಾಗಿದೆ. ಅಂದರೆ ಉದ್ಯೋಗಿಗಳಿಗೆ ಉತ್ತಮ ಪ್ಯಾಕೇಜ್ ಗಳನ್ನು ನೀಡಲಿದೆ ಎನ್ನಲಾಗಿದೆ.  ವಿಆರ್ ಎಸ್ ತೆಗೆದುಕೊಳ್ಳುವ ಉದ್ಯೋಗಿಗಳಿಗೆ ಈ ಪ್ಯಾಕೇಜ್ ನೀಡುವ ಸಾಧ್ಯತೆ ಇದೆ.   ಬ್ಯಾಂಕಿಂಗ್ ಕ್ಷೇತ್ರಕ್ಕೆ ಪ್ರವೇಶಿಸಲು ಆಸಕ್ತಿ ಹೊಂದಿರುವ ಖಾಸಗಿ ವಲಯದ ಸಂಸ್ಥೆಗಳಿಗೆ ಬ್ಯಾಂಕುಗಳಲ್ಲಿ ಹೂಡಿಕೆಯನ್ನು ಸೂಕ್ತವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ  ಉದ್ಯೋಗಿಗಳಿಗೆ ಆಕರ್ಷಕ ವಿಆರ್ ಎಸ್  ಸಿದ್ಧಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎರಡು ಸರ್ಕಾರಿ ಬ್ಯಾಂಕುಗಳ ಖಾಸಗೀಕರಣ : 
ಫೆಬ್ರವರಿ 1 ರಂದು 2021-22ರ ಬಜೆಟ್ ಮಂಡನೆ ವೇಳೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಮತ್ತು ವಿಮಾ ಕಂಪನಿಯೊಂದನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪ ಇಟ್ಟಿದ್ದರು. ವಿಆರ್ ಎಸ್ (VRS) ಪ್ಯಾಕೇಜ್ ಬಲವಂತವಾಗಿ ಕೆಲಸ ಬಿಡಿಸಲು ನೀಡಿರುವ ಆಯ್ಕೆಯಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಉತ್ತಮ ಹಣಕಾಸಿನ ಪ್ಯಾಕೇಜ್ ನೊಂದಿಗೆ ನಿವೃತ್ತಿಯನ್ನು ತೆಗೆದುಕೊಳ್ಳಲು ಬಯಸುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ ಎನ್ನಲಾಗಿದೆ. 

ಇದನ್ನೂ ಓದಿ : Flipkart Launches QR-Code :ಡಿಜಿಟಲ್ ಪಾವತಿಗೆ QR ಕೋಡ್‌ ಆರಂಭಿಸಿದ Flipkart..!

ಯಾವ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಬಹುದು? :
2021-22ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿರುವ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಖಾಸಗೀಕರಣಗೊಳಿಸಬೇಕಾದ ವಿಮಾ ಕಂಪನಿಯ (Insurance company) ಹೆಸರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ನೀತಿ ಆಯೋಗಕ್ಕೆ ವಹಿಸಲಾಗಿದೆ. ಆದರೆ, ಯಾವ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂಬ ಬಗ್ಗೆ ಇನ್ನೂ ಬಹುರಂಗವಾಗಿಲ್ಲ. ಆದರೆ  ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಬ್ಯಾಂಕ್ ಆಫ್ ಮಹಾರಾಷ್ಟ್ರ(Bank of Maharastra), ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (Indian Overseas bank), ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ (Central Bank)  ಮುಂತಾದ ಬ್ಯಾಂಕುಗಳ ಹೆಸರುಗಳು ಈ ಪಟ್ಟಿಯಲ್ಲಿ ಇವೆ ಎನ್ನಲಾಗಿದೆ. ಮೊದಲ ಹಂತದಲ್ಲಿ ಸರ್ಕಾರ ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಹೆಸರನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಇನ್ನು ಸರ್ಕಾರಿ ವಿಮಾ ಕಂಪನಿಗಳ ಪಟ್ಟಿಯಲ್ಲಿ, ಯುನೈಟೆಡ್ ಇಂಡಿಯಾ ಇನ್ಶುರೆನ್ಸ್, (United India Insurance) ಓರಿಯಂಟಲ್ ಇನ್ಶುರೆನ್ಸ್ ಹೆಸರುಗಳು ಕೇಳಿಬರುತ್ತಿವೆ. 

ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಯೂನಿಯನ್ ಪ್ರತಿಭಟನೆ : 
ಈ ಮಧ್ಯೆ, ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ಬ್ಯಾಂಕ್ ಯೂನಿಯನ್  ವಿರೋಧಿಸಿದೆ. ಈ ನಿರ್ಧಾರದ ವಿರುದ್ಧ ಯೂನಿಯನ್ ಪ್ರತಿಭಟನೆ ಕೂಡಾ ನಡೆಸಿತ್ತು.

ಇದನ್ನೂ ಓದಿ : EPFO News: 6 ಕೋಟಿ ಚಂದಾದಾರರಿಗೊಂದು ಮಹತ್ವದ ಮಾಹಿತಿ, ಆದಷ್ಟು ಬೇಗ ಈ ಕೆಲಸ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News