Provident Fund News: ನಿಮ್ಮಗೆ UAN ನಂಬರ್ ಗೊತ್ತಿಲ್ಲವೇ, ಅದನ್ನು ಜನರೇಟ್ ಮಾಡಬೇಕಾ? ಹೇಗೆ ಇಲ್ಲಿದೆ

ಈ ಯುನಿವರ್ಸಲ್ ಅಕೌಂಟ್ ನಂಬರ್(UAN) ನಿಂದ ಉದ್ಯೋಗಿಗಳಿಗೆ ತಮ್ಮ ಪಿಎಫ್ ಪ್ರೊಫೈಲ್ ಹುಡುಕಲು ಅಥವಾ ಹೋಗಲು ಅನುಕೂಲಕರವಾಗಿದೆ.

Last Updated : Apr 11, 2021, 11:08 AM IST
  • ಪ್ರಾವಿಡೆಂಟ್ ಫಂಡ್ (ಪಿಎಫ್) ಇದು ಉದ್ಯೋಗಿಗಳಿಗೆ ನಿವೃತ್ತಿ ನಂತರ ಸಿಗುವ ನಿಧಿಯಾಗಿದೆ.
  • ಇದು ಒಂದು ಪ್ರಮುಖ ಹೂಡಿಕೆಯ ಆಯ್ಕೆ
  • ಕಂಪನಿಯ ಪ್ರತಿಯೊಬ್ಬ ಉದ್ಯೋಗಿಗೆ ಯುನಿವರ್ಸಲ್ ಅಕೌಂಟ್ ನಂಬರ್(UAN)
Provident Fund News: ನಿಮ್ಮಗೆ UAN ನಂಬರ್ ಗೊತ್ತಿಲ್ಲವೇ, ಅದನ್ನು ಜನರೇಟ್ ಮಾಡಬೇಕಾ? ಹೇಗೆ ಇಲ್ಲಿದೆ title=

ನವದೆಹಲಿ: ಪ್ರಾವಿಡೆಂಟ್ ಫಂಡ್ (ಪಿಎಫ್) ಇದು ಉದ್ಯೋಗಿಗಳಿಗೆ ನಿವೃತ್ತಿ ನಂತರ ಸಿಗುವ ನಿಧಿಯಾಗಿದೆ. ಇದು ಒಂದು ಪ್ರಮುಖ ಹೂಡಿಕೆಯ ಆಯ್ಕೆಯಾಗಿದ್ದು, ಇದು ನಿಶ್ಚಿತ ಆದಾಯ ಮತ್ತು ಸಾಮಾಜಿಕ ಭದ್ರತೆಯೊಂದಿಗೆ ಬರುತ್ತದೆ. ಕಂಪನಿಯ ಪ್ರತಿಯೊಬ್ಬ ಉದ್ಯೋಗಿಗೆ ಯುನಿವರ್ಸಲ್ ಅಕೌಂಟ್ ನಂಬರ್(UAN) ಎಂದು ಕರೆಯುತ್ತಾರೆ. ಇದು ಸಕ್ರಿಯ ಪಿಎಫ್ (ಪ್ರಾವಿಡೆಂಟ್ ಫಂಡ್) ಖಾತೆಯೊಂದಿಗೆ ಕಂಪನಿಯು ಉದ್ಯೋಗಿಗಳಿಗೆ  ನೀಡುವ 12-ಅಂಕಿಯ ಸಂಖ್ಯೆಯಾಗಿದೆ.

ಈ ಯುನಿವರ್ಸಲ್ ಅಕೌಂಟ್ ನಂಬರ್(UAN) ನಿಂದ ಉದ್ಯೋಗಿಗಳಿಗೆ ತಮ್ಮ ಪಿಎಫ್ ಪ್ರೊಫೈಲ್ ಹುಡುಕಲು ಅಥವಾ ಹೋಗಲು ಅನುಕೂಲಕರವಾಗಿದೆ. ಪಿಎಫ್ ಅಫೀಷಿಯಲ್ ಪೇಜ್ ಗೆ ಹೋಗಿ ಲಾಗ್ ಇನ್ ಮೂಲಕ ಯುಎಎನ್ ಮುಖಪುಟವನ್ನು ಪ್ರವೇಶಿಸುವ ಮೂಲಕ, ಅವರು ಆನ್‌ಲೈನ್ PF ಪಾಸ್‌ಬುಕ್‌, ಹಣ ವರ್ಗಾವಣೆ ಮತ್ತು ಅದನ್ನ ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದು.

ಇದನ್ನೂ ಓದಿ : Paytm ನಿಂದ ಸಿಗುತ್ತೆ ಕೇವಲ 2 ನಿಮಿಷದಲ್ಲಿ ₹ 2 ಲಕ್ಷ ಸಾಲ..!

ನಿಮಗೆ ನಿಮ್ಮ ಯುಎಎನ್ ಗೊತ್ತಿಲವೇ ಅಥವಾ ಅದನ್ನ ಜನರೇಟ್(Generate) ಮಾಡಬೇಕಾ? ಅದನ್ನ ತಿಳಿದಿಕೊಳ್ಳಲು ಈ ಹಂತಗಳನ್ನು ಅನುಸರಿಸಿ. 

ಇದನ್ನೂ ಓದಿ : Gold Rate: ಚಿನ್ನ ಖರೀದಿದಾರರೇ ಗಮನಿಸಿ: ಇಲ್ಲಿದೆ ಇಂದಿನ ಬಂಗಾರ ಬೆಲೆ!

ನಿಮ್ಮ ಯುಎಎನ್ ನಂಬರ್ ಪಡೆಯುವುದು ಹೇಗೆ?

ಹಂತ 1- ಇಪಿಎಫ್‌ಓ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ  epfindia.gov.in.
ಹಂತ 2-  ‘Our services’ ಟ್ಯಾಬ್ ಮೇಲೆ  ಕ್ಲಿಕ್ ಮಾಡಿದ ನಂತರ, ‘For Employees’  ಆಫ್ ಷನ್   ಆಯ್ಕೆ ಮಾಡಿ.
ಹಂತ 3- ಈಗ ಸದಸ್ಯ ಯುಎಎನ್ / ಆನ್‌ಲೈನ್ ಸೇವೆ (ಒಸಿಎಸ್ / ಒಟಿಸಿಪಿ) ಆಯ್ಕೆ ಮಾಡಿಕೊಳ್ಳಿ
ಹಂತ 4- ‘Important links’ ವಿಭಾಗದಲ್ಲಿ ‘Know your UAN’’ ಮೇಲೆ ಕ್ಲಿಕ್ ಮಾಡಿ.
ಹಂತ 5- ನಿಮ್ಮ ಐಡಿ ಅಥವಾ ಆಧಾರ್ ಸಂಖ್ಯೆ ಅಥವಾ ಪ್ಯಾನ್ ಸಂಖ್ಯೆಯನ್ನ ಅಲ್ಲಿ ನಮೂದಿಸಿ. 
ಹಂತ 6- ಇಲ್ಲಿ ನಿಮ್ಮ ವೈಯಕ್ತಿಕ ವಿವರಗಳಾದ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಿ.
ಹಂತ 7-  ಇಲ್ಲಿ ‘Get Authorisation Pin’ ಮೇಲೆ ಕ್ಲಿಕ್ ಮಾಡಿ.
ಹಂತ 8- ನಿಮ್ಮ ಮೊಬೈಲ್ ನಂಬರ್ ಗೆ ಯುಎಎನ್ ಸಂಖ್ಯೆಯನ್ನು SMS ಮೂಲಕ ಬರುತ್ತೆ. ಹೆಚ್ಚಿನ ಉದ್ಯೋಗಿಗಳಿಗೆ ತಮ್ಮ ಕಂಪನಿಗಳಿಂದ ಯುಎಎನ್ ನೀಡಿರುತ್ತಾರೆ, ಅದು ನೆನಪಿಲ್ಲದಿದ್ದರೆ ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಯುಎಎನ್ ಅನ್ನು ಪಡೆಯಬಹುದು.

ಇದನ್ನೂ ಓದಿ : Disney + Hotstar‌ ನಲ್ಲಿ Free ಆಗಿ IPL ನೋಡುವುದು ಹೇಗೆ ಗೊತ್ತಾ?

ಯುಎಎನ್(UAN) ಜನರೇಟ್ ಮಾಡುವುದು ಹೇಗೆ?

ಹಂತ 1- ಯುಎಎನ್‌ನ ಅಧಿಕೃತ ವೆಬ್ ಸೈಟ್ ಪೋರ್ಟಲ್ ಗೆ ಹೋಗಿ unifiedportal-mem.epfindia.gov.in/memberinterface/
ಹಂತ 2-  ‘Know your UAN’ ವಿಭಾಗದ ಮೇಲೆ ಕ್ಲಿಕ್ ಮಾಡಿ. ಹೊಸ ಪುಟ ತೆರೆದುಕೊಳ್ಳುತ್ತದೆ.

ಹಂತ 3- ಡ್ರಾಪ್‌ಡೌನ್ ಮೆನುವಿನಿಂದ, ನಿಮ್ಮ ರಾಜ್ಯದ ಇಪಿಎಫ್‌ಒ ಕಚೇರಿಯನ್ನು ಆಯ್ಕೆ ಮಾಡಿ. ಈಗ ನಿಮ್ಮ ಪಿಎಫ್ ಸಂಖ್ಯೆ / ಸದಸ್ಯರ ಐಡಿ ಮತ್ತು ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್‌ನಂತಹ ಇತರ ವಿವರಗಳನ್ನು ನಮೂದಿಸಿ. (ನಿಮ್ಮ ಸಂಬಳ ಸ್ಲಿಪ್‌ಗಳಲ್ಲಿ ನಿಮ್ಮ ಪಿಎಫ್ ಸಂಖ್ಯೆ / ಸದಸ್ಯರ ಐಡಿಯನ್ನು ನಮೂದಾಗಿರುತ್ತದೆ.)

ಹಂತ 4- ಈಗ ‘Get Authorization Pin’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರ್ ಗೆ  SMS ಮೂಲಕ UAN ನಂಬರ್ ಬರುತ್ತದೆ.  

ಹಂತ 5- ಈಗೆ ಪಿನ್ ನಮೂದಿಸಿ ನಂತರ ‘Validate OTP and get UAN’ ಆಯ್ಕೆ ಮಾಡಿಕೊಳ್ಳಿ.

ಇದನ್ನೂ ಓದಿ : CAR ON LEASE: ಪಾವತಿ, ವಿಮಾ ಪ್ರೀಮಿಯಂ ಇಲ್ಲದೆ ಲೀಸ್‌ನಲ್ಲಿ ಲಭ್ಯವಾಗಲಿದೆ 'ಸ್ಮಾರ್ಟ್' ಕಾರು

ವಿಶೇಷ ಸೂಚನೆ: ನೀವು ಯುಎಎನ್ ಜನರೇಟ್ ಗು ಮುನ್ನ ನಿಮ್ಮ ಸಂಸ್ಥೆಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಲ್ಲಿ ನೋಂದಾಯಿಸಿಕೊಂಡಿರಬೇಕು'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News