ನವದೆಹಲಿ : ಜನಸಾಮಾನ್ಯನ ಮೇಲೆ ಬೆಲೆ ಏರಿಕೆಯ ಹೊರೆಬಿದ್ದಿದೆ. ದಿನಬಳಕೆಯ ವಸ್ತುಗಳ ಬೆಲೆ (Price hike) ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪೆಟ್ರೋಲ್-ಡೀಸೆಲ್ (Petrol disiel price) ಬೆಲೆಯ ನಂತರ, ಖಾದ್ಯ ತೈಲ, ಹಾಲು, ಬ್ರೆಡ್ ದರಗಳಲ್ಲಿ ಏರಿಕೆ ಕಂಡು ಬಂದದ್ದಾಯಿತು. ಈಗ ಸಾಬೂನು, ಡಿಟರ್ಜೆಂಟ್ ಗಳು ಕೂಡಾ ದುಬಾರಿಯಾಗಿವೆ. ದೇಶದ ಅತಿದೊಡ್ಡ ಎಫ್‌ಎಂಸಿಜಿ ಕಂಪನಿ ಎಚ್‌ಯುಎಲ್ ((HUL) ವ್ಹೀಲ್ ಪೌಡರ್ ಬೆಲೆಯನ್ನು ಶೇಕಡಾ 3.5 ರಷ್ಟು ಹೆಚ್ಚಿಸಿದೆ. ಇದಲ್ಲದೇ, ಲಕ್ಸ್ ಸಾಬೂನಿನ ಬೆಲೆಯನ್ನು ಕೂಡ ಶೇ 8 ರಿಂದ 12 ರಷ್ಟು ಹೆಚ್ಚಿಸಲಾಗಿದೆ. ಅಂದರೆ, ಈಗ ಜನರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತೆ ಆಗಿದೆ.
ಜನತೆಯ ಮೇಲೆ ಬೆಲೆ ಏರಿಕೆ ಪ್ರಹಾರ :
ಈಗ ಡಿಟರ್ಜೆಂಟ್ ಗಳು , ಸಾಬೂನುಗಳ ಬೆಲೆ ಶೇ 14 ರಷ್ಟು ಹೆಚ್ಚಾಗಿದೆ. ಇಂಧನ ವೆಚ್ಚದಿಂದಾಗಿ ಕಂಪನಿಗಳ ವೆಚ್ಚವೂ (Price hike) ಹೆಚ್ಚಾಗಿದೆ ಎಂದು ತಜ್ಞರು ಹೇಳುತ್ತಾರೆ. ಲಕ್ಸ್ ಸೋಪ್ (LUX soap price) ಬ್ರಿಟಿಷ್ ಕಂಪನಿ ಯೂನಿಲಿವರ್ ನ ಅಂಗಸಂಸ್ಥೆಯಾದ ಹಿಂದೂಸ್ತಾನ್ ಯೂನಿಲಿವರ್ ನ ನೆಚ್ಚಿನ ಬ್ರ್ಯಾಂಡ್ ಆಗಿದೆ. ಲಕ್ಸ್ ಸೋಪ್ ಕಂಪನಿಯ ಜನಪ್ರಿಯ ಉತ್ಪನ್ನಗಳಲ್ಲಿ ಒಂದಾಗಿದೆ. ಇದನ್ನು ಭಾರತದ ಬಹುತೇಕ ಎಲ್ಲ ಮನೆಗಳಲ್ಲಿ ಬಳಸಲಾಗುತ್ತದೆ.
ಇದನ್ನೂ ಓದಿ : ಗ್ರಾಹಕರಿಗೆ ಮನೆ ಬಾಗಿಲಿಗೆ ವಿತರಣೆಯಾಗಲಿದೆ ಡಿಸೇಲ್, BPCL ಆರಂಭಿಸಿದೆ 'Safar20' ಸೇವೆ
ಯಾವ ಉತ್ಪನ್ನವು ಹೆಚ್ಚು ದುಬಾರಿಯಾಗಿದೆ ಎನ್ನುವುದನ್ನು ತಿಳಿಯಿರಿ :
1. ವೀಲ್ ಪೌಡರ್ ಬೆಲೆ ಶೇ. 3.5 ರಷ್ಟು ಹೆಚ್ಚಾಗಿದೆ. ಅಂದರೆ, ಈಗ ಅರ್ಧ ಕಿಲೋಗ್ರಾಂ (500 ಕೆಜಿ) ಪ್ಯಾಕ್ ಮೇಲೆ 1-2 ಹೆಚ್ಚಾಗುತ್ತದೆ.
2. ಸರ್ಫ್ ಎಕ್ಸೆಲ್ (Surf Excel Easy wash Variant) 1 ಕೆಜಿ ಪ್ಯಾಕೆಟ್ ಬೆಲೆ 100 ರಿಂದ 114 ರೂ.ಗೆ ಹೆಚ್ಚಾಗುತ್ತದೆ.
3 ರಿನ್ ನ (Rin) 1 ಕೆಜಿ ಪ್ಯಾಕೆಟ್ ಬೆಲೆ 77 ರಿಂದ 82 ರೂ.ಆಗಿದೆ. ಅರ್ಧ ಕಿಲೋಗ್ರಾಂ (500 ಕೆಜಿ) ಬೆಲೆ 37 ರಿಂದ 40 ರೂ.ಗೆ ಹೆಚ್ಚಾಗಿದೆ.
4. ಲಕ್ಸ್ ಸೋಪ್ (Lux Soap) ಬೆಲೆ ಶೇ .12 ರಷ್ಟು ಹೆಚ್ಚಾಗುತ್ತದೆ.
5. ಲೈಫ್‌ಬಾಯ್ ಸೋಪ್‌ನ (lifebuoy Sabun) ಬೆಲೆ 8 ಪ್ರತಿಶತದಷ್ಟು ಹೆಚ್ಚಾಗುತ್ತದೆ.
HUL ಷೇರುಗಳಲ್ಲಿಯೂ ಏರಿಕೆ :
ಈ ಸುದ್ದಿಯ ನಂತರ, ಕಂಪನಿಯ ಸ್ಟಾಕ್ ಕೂಡ ಹೆಚ್ಚಾಗಿದೆ. NSE ನಲ್ಲಿ HUL ನ ಪಾಲು ರೂ 15 ರಿಂದ ರೂ 2795 ಕ್ಕೆ ಏರಿಕೆಯಾಗಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು 10 ಶೇಕಡದಿಂದ 2061 ಪ್ರತಿಶತದಷ್ಟು ಹೆಚ್ಚಾಗಿದೆ. ಕಂಪನಿಯ ಆದಾಯವು ಶೇಕಡಾ 13 ರಷ್ಟು ಏರಿಕೆಯಾಗಿ 11915 ಕೋಟಿ ರೂ. ಆಗಿದೆ.
ಇದನ್ನೂ ಓದಿ : LIC Scheme: 29 ರೂ ಉಳಿಸಿದರೆ ಸಿಗಲಿದೆ 4 ಲಕ್ಷ ರೂ. ಗಳ ಮೊತ್ತ, LIC ತಂದಿದೆ ಹೊಸ ಪ್ಲಾನ್
ಇತರ ಕಂಪನಿಗಳು ಕೂಡ ಬೆಲೆ ಏರಿಸಬಹುದು :
ತಜ್ಞರ ಪ್ರಕಾರ, ಇತರ ಎಫ್ಎಂಸಿಜಿ ಕಂಪನಿಗಳು ಕೂಡ ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಬಹುದು. ಏಕೆಂದರೆ ಕರೋನಾ (Coronavirus) ಹಾನಿಯ ನಂತರ, ವೆಚ್ಚವು ವೇಗವಾಗಿ ಹೆಚ್ಚುತ್ತಿದೆ. ತಾಳೆ ಎಣ್ಣೆಯಿಂದ ಹಿಡಿದು ತೈಲ ಬೆಲೆಗಳು ನಿರಂತರವಾಗಿ ಗರಿಷ್ಠ ಮಟ್ಟದಲ್ಲಿದೆ. ಅದಕ್ಕಾಗಿಯೇ ಇತರ ಕಂಪನಿಗಳು ಈಗ ಬೆಲೆಯನ್ನು ಹೆಚ್ಚಿಸಲು ಯೋಚಿಸುತ್ತಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.