ಜಿಯೋ ಗ್ರಾಹಕರಿಗೆ ಶಾಕ್: ಪ್ಲಾನ್ ಬೆಲೆಯಲ್ಲಿ 150 ರೂ. ಹೆಚ್ಚಳ!

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಪ್ರಮುಖ ಯೋಜನೆಯೊಂದರ ಬೆಲೆಯಲ್ಲಿ ಬರೋಬ್ಬರಿ 150 ರೂ. ಹೆಚ್ಚಳ ಮಾಡಿದೆ.

Written by - Puttaraj K Alur | Last Updated : Jun 9, 2022, 07:29 PM IST
  • ಕೋಟ್ಯಂತರ ಗ್ರಾಹಕರಿಗೆ ದಿಢೀರ್ ಶಾಕ್ ನೀಡಿದ ರಿಲಯನ್ಸ್ ಜಿಯೋ
  • ಪ್ರಮುಖ ಯೋಜನೆಯೊಂದರ ಬೆಲೆಯಲ್ಲಿ 150 ರೂ. ಹೆಚ್ಚಳ
  • JioPhoneನ 749 ರೂ. ಪ್ಲಾನ್ ಬೆಲೆ 899 ರೂ.ಗೆ ಏರಿಕೆಯಾಗಿದೆ
ಜಿಯೋ ಗ್ರಾಹಕರಿಗೆ ಶಾಕ್: ಪ್ಲಾನ್ ಬೆಲೆಯಲ್ಲಿ 150 ರೂ. ಹೆಚ್ಚಳ! title=
ಗ್ರಾಹಕರಿಗೆ ದಿಢೀರ್ ಶಾಕ್ ನೀಡಿದ ರಿಲಯನ್ಸ್ ಜಿಯೋ

ನವದೆಹಲಿ: ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಕೋಟ್ಯಂತರ ಗ್ರಾಹಕರಿಗೆ ದಿಢೀರ್ ಶಾಕ್ ನೀಡಿದೆ. ತನ್ನ ಪ್ರಮುಖ ಯೋಜನೆಯೊಂದರ ಬೆಲೆಯಲ್ಲಿ ಬರೋಬ್ಬರಿ 150 ರೂ. ಹೆಚ್ಚಳ ಮಾಡಿದೆ. ಈ ಬೆಲೆ ಏರಿಕೆಯು ಕೇವಲ ಒಂದೇ ಒಂದು ಯೋಜನೆಗೆ ಮಾತ್ರ ಅನ್ವಯಿಸುತ್ತದೆ. ಇನ್ನುಳಿದ ರೀಚಾರ್ಜ್ ಪ್ಲಾನ್‍ಗಳ ಬೆಲೆಗಳು ಮೊದಲನಂತೆಯೇ ಇರಲಿವೆ.

ಹೌದು, ಜಿಯೋ ಕಂಪನಿಯು JioPhone 4G ಸ್ಮಾರ್ಟ್‍ಫೋನ್ ಖರೀದಿಸಲು ವಿವಿಧ ಆಯ್ಕೆ ನೀಡುತ್ತಿದೆ. ಈ ಫೋನ್ ಖರೀದಿಸಲು ಗ್ರಾಹಕರು 1999 ರೂ., 1499 ರೂ. ಮತ್ತು 749 ರೂ.ನ ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಆದರೆ, ಈ 749 ರೂ. ಪ್ಲಾನ್ ಬೆಲೆಯನ್ನು 899 ರೂ.ಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ, ಹೆಚ್ಚಾಗಲಿವೆ ಈ 4 ಭತ್ಯೆ, ಸಂಬಳದಲ್ಲಿ ಬಂಪರ್ ಹೆಚ್ಚಳ!

JioPhoneನ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಈ ಆಫರ್ ಅನ್ವಯಿಸಲಿದೆ. ಹೊಸ JioPhone ಖರೀದಿಸಲು ಬಯಸಿದರೆ, ಗ್ರಾಹಕರು 899 ರೂ.ಗಳಿಗೆ Jio ಫೋನ್ ಪಡೆಯಲಿದ್ದಾರೆ. ಇದರ ಜೊತೆಗೆ 1 ವರ್ಷದ ಅನಿಯಮಿತ ಯೋಜನೆ ಸಹ ದೊರೆಯಲಿದೆ. ಈ ಯೋಜನೆಯಡಿ ವರ್ಷವಿಡೀ ಅನಿಯಮಿತ ಧ್ವನಿ ಕರೆ ಜೊತೆಗೆ ಒಟ್ಟು 24 GB ಡೇಟಾ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಸಹ ಲಭ್ಯವಿರುತ್ತದೆ.

ಜಿಯೋ ಯೋಜನೆಗಳು ಏರ್‌ಟೆಲ್ ಮತ್ತು ವೊಡಾಫೋನ್ ಎರಡಕ್ಕೂ ಹೋಲಿಸಿದರೆ ಅಗ್ಗವಾಗಿವೆ. ಹೀಗಾಗಿ ಹೆಚ್ಚಿನ ಜನರು ವೊಡಾಫೋನ್‌ನಿಂದ ಜಿಯೋಗೆ ವಲಸೆ ಹೋಗಿದ್ದಾರೆ. ನವೆಂಬರ್ 2021ರಲ್ಲಿ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಶೇ.18ರಿಂದ 25ರಷ್ಟು ಹೆಚ್ಚಿಸಿದ ಟೆಲಿಕಾಂ ಆಪರೇಟರ್‌ಗಳಲ್ಲಿ ಏರ್‌ಟೆಲ್ ಮೊದಲನೆಯದಾಗಿದೆ. ಇದರ ಬೆನ್ನಲ್ಲಿಯೇ ವೊಡಾಫೋನ್ ಐಡಿಯಾ ಸಹ ಬೆಲೆ ಏರಿಕೆಗೆ ನಿರ್ಧರಿಸಿತು.

ಇದನ್ನೂ ಓದಿ: ರೈತರಿಗೆ ಸಿಹಿಸುದ್ದಿ: 17 ಬೆಳೆಗಳಿಗೆ MSP ಹೆಚ್ಚಿಸಿದ ಪ್ರಧಾನಿ ಮೋದಿ ಸರ್ಕಾರ

ಜಿಯೋ ಕೂಡ ಕೆಲ ದಿನಗಳ ಕಾಲ ಕಾದು ಬೆಲೆ ಏರಿಸಿತು. ಆದರೆ, ಏರ್‌ಟೆಲ್ ಮತ್ತು ವೊಡಾಫೋನ್‍ಗೆ ಹೋಲಿಸಿದರೆ ಜಿಯೋದ ಕೆಲವು ಪ್ಲಾನ್‍ಗಳು ಅಗ್ಗವಾಗಿವೆ. ಜನರು ತಮ್ಮ ನೆಟ್‍ವರ್ಕ್‍ನಿಂದ ಬೇರೆ ನೆಟ್‍ವರ್ಕ್‍ಗೆ ಪೋರ್ಟ್‍ ಆಗುವುದು ಮುಂದುವರಿಯುತ್ತಿದೆ. ಆದರೂ ಸಹ ಜಿಯೋ ಹೆಚ್ಚಿನ ಗ್ರಾಹಕರನ್ನು ತನ್ನಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಜಿಯೋ ಪರಿಚಯಿಸಿರುವ ಕೆಲವು ರಿಚಾರ್ಜ್ ಪ್ಲಾನ್‍ಗಳು. ವಿವಿಧ ಆಕರ್ಷಕ ಯೋಜನೆಗಳ ಮೂಲಕ ಜಿಯೋ, ವೋಡಾಫೋನ್ ಮತ್ತು ಏರ್‌ಟೆಲ್‍ನ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News