ಕುಳಿತಲ್ಲೇ ಓಪನ್ ಮಾಡಿ Post office ಉಳಿತಾಯ ಖಾತೆ..! ಸಿಗಲಿದೆ ಉತ್ತಮ ರಿಟರ್ನ್

ಡಿಜಿಟಲ್ ಇಂಡಿಯಾದ ಹಿನ್ನೆಲೆಯಲ್ಲಿ ಅಂಚೆ ಕಚೇರಿಗಳನ್ನು ನಿರಂತರವಾಗಿ ಅಪ್ ಡೇಟ್ ಮಾಡಲಾಗುತ್ತಿದೆ. ಈಗ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಮೊಬೈಲ್ ಆ್ಯಪ್ ಅನ್ನು ಪ್ರಾರಂಭಿಸಲಾಗಿದೆ.  

Written by - Ranjitha R K | Last Updated : Feb 10, 2021, 02:34 PM IST
  • ಅಕೌಂಟ್ ಓಪನ್ ಮಾಡಲು ಪೋಸ್ಟ್ ಆಫೀಸಿಗೆ ಹೋಗುವ ಅಗತ್ಯವಿಲ್ಲ
  • ಐಪಿಪಿಬಿ ಆಪ್ ಮೂಲಕ ಮನೆಯಿಂದಲೇ ಅಕೌಂಟ್ ಓಪನ್ ಮಾಡಬಹುದು
  • 10 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಬಹುದು
ಕುಳಿತಲ್ಲೇ ಓಪನ್ ಮಾಡಿ Post office ಉಳಿತಾಯ ಖಾತೆ..! ಸಿಗಲಿದೆ ಉತ್ತಮ ರಿಟರ್ನ್  title=
ಐಪಿಪಿಬಿ ಆಪ್ ಮೂಲಕ ಮನೆಯಿಂದಲೇ ಅಕೌಂಟ್ ಓಪನ್ (file photo)

ದೆಹಲಿ: ಡಿಜಿಟಲ್ ಇಂಡಿಯಾದ ಹಿನ್ನೆಲೆಯಲ್ಲಿ ಅಂಚೆ ಕಚೇರಿಗಳನ್ನು ನಿರಂತರವಾಗಿ ಅಪ್ ಡೇಟ್ ಮಾಡಲಾಗುತ್ತಿದೆ. ಈಗ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಮೊಬೈಲ್ ಆ್ಯಪ್ ಅನ್ನು ಪ್ರಾರಂಭಿಸಲಾಗಿದೆ.  ಇನ್ನು ಮುಂದೆ ಪೋಸ್ಟ್ ಆಫೀಸ್ ನಲ್ಲಿ ಅಕೌಂಟ್ ಓಪನ್ ಮಾಡಲು ಪೋಸ್ಟ್ ಆಫೀಸಿಗೆ ಹೋಗುವ ಅಗತ್ಯವಿಲ್ಲ. ಐಪಿಪಿಬಿ ಆಪ್ ಮೂಲಕ ಕುಳಿತ ಜಾಗದಲ್ಲೇ ಅಕೌಂಟ್ ಓಪನ್ ಮಾಡಬಹುದು.  ಇದು ಹೇಗೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..  

 ಅಕೌಂಟ್ ಓಪನ್ ಮಾಡುವುದು ಹೇಗೆ ?: 
1. ನಿಮ್ಮ ಮೊಬೈಲ್ ಫೋನ್‌ನಲ್ಲಿ ಐಪಿಬಿಪಿ (IPPB) ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
2. ಐಪಿಬಿಪಿ ಮೊಬೈಲ್ ಬ್ಯಾಂಕಿಂಗ್ (Mobile banking) ಅಪ್ಲಿಕೇಶನ್ ತೆರೆಯಿರಿ ಮತ್ತು 'ಓಪನ್ ಅಕೌಂಟ್' ಕ್ಲಿಕ್ ಮಾಡಿ
3. ನಿಮ್ಮ ಪ್ಯಾನ್  ಕಾರ್ಡ್ (Pan card) ಸಂಖ್ಯೆ ಮತ್ತು ಆಧಾರ್ ಕಾರ್ಡ್ (Aadhaar card) ಸಂಖ್ಯೆಯನ್ನು ನಮೂದಿಸಿ
4. ನೋಂದಾಯಿತ ಮೊಬೈಲ್ (Mobile) ಸಂಖ್ಯೆಗೆ ಬಂದಿರುವ OTPಯನ್ನು ನಮೂದಿಸಿ
5. ನಿಮ್ಮ ತಾಯಿಯ ಹೆಸರು, ಶೈಕ್ಷಣಿಕ ಅರ್ಹತೆ, ವಿಳಾಸ ಮತ್ತು ನಾಮಿನಿ ಮಾಹಿತಿಯನ್ನು ನೀಡಿ
6. ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿದ ನಂತರ SUBMIT ಬಟನ್ ಕ್ಲಿಕ್ ಮಾಡಿ 
7. ಇಷ್ಟಾದ ನಂತರ ಕೆಲವೇ ಕ್ಷಣಗಳಲ್ಲಿ ಅಂಚೆ ಕಚೇರಿಯಲ್ಲಿ ನಿಮ್ಮ ಖಾತೆ ತೆರೆಯಲಾಗುತ್ತದೆ. 
8. ಡಿಜಿಟಲ್ ಸೇವಿಂಗ್ ಅಕೌಂಟ್ ಒಂದು ವರ್ಷಕ್ಕೆ ಮಾತ್ರ ಮಾನ್ಯವಾಗಿರುತ್ತದೆ
10. ವರ್ಷದೊಳಗೆ ಬಯೋಮೆಟ್ರಿಕ್ ಪ್ರಮಾಣೀಕರಣವನ್ನು ಪೂರ್ಣಗೊಳಿಸಿದರೆ, ನಿಯಮಿತ ಉಳಿತಾಯ ಖಾತೆಯನ್ನು ತೆರೆಯಬಹುದು.

ಇದನ್ನೂ ಓದಿ Paytm : ಅಕೌಂಟಲ್ಲಿ ದುಡ್ಡಿಲ್ಲದಿದ್ದರೂ ಕ್ಲಪ್ತ ಸಮಯಕ್ಕೆ ಬಾಡಿಗೆ ಪಾವತಿಸಲು ಬಳಸಿ ಈ ಐಡಿಯಾ.!

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ : 
ಅಂಚೆ ಕಚೇರಿಯ (Post office) ಮಾಸಿಕ  ಯೋಜನೆ ಉತ್ತಮ ಆದಾಯವನ್ನು ನೀಡುತ್ತದೆ. ಹೂಡಿಕೆದಾರರು ಈ ಯೋಜನೆಯಲ್ಲಿ ಜಂಟಿ ಖಾತೆಯನ್ನು(Joint account)  ತೆರೆದು ಅದರಲ್ಲಿ 9 ಲಕ್ಷ ರೂಪಾಯಿಗಳನ್ನು ಒಟ್ಟಿಗೆ ಜಮಾ ಮಾಡಿದರೆ, ಪ್ರತಿ ತಿಂಗಳು 4950 ರೂಪಾಯಿಗಳಷ್ಟು ಬಡ್ಡಿ ಪಡೆಯಬಹುದು. 6.6 ರಷ್ಟು ದರದಲ್ಲಿ ವಾರ್ಷಿಕ ಬಡ್ಡಿ 59,400 ರೂಪಾಯಿಯಷ್ಟು ಪಡೆಯಬಹುದು. 

ಯಾರು ಈ ಅಕೌಂಟ್ ಓಪನ್ ಮಾಡಬಹುದು ?:
-18 ವರ್ಷಕ್ಕಿಂತ ಮೇಲ್ಪಟ್ಟವರು  
-10 ವರ್ಷಕ್ಕಿಂತ ಮೇಲ್ಪಟ್ಟ ಮಗುವಿನ ಹೆಸರಿನಲ್ಲೂ ಅಕೌಂಟ್  ತೆರೆಯಬಹುದು
- 10 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡುವುದಾದರೆ ಗಾರ್ಡಿಯನ್ (Guardian) ಹೆಸರಿನಲ್ಲಿ ತೆರೆಯಬಹುದು. 

ಇದನ್ನೂ ಓದಿ 7th Pay Commission: ಏಪ್ರಿಲ್ 2021 ರಿಂದ ಬದಲಾಗಬಹುದು ನಿಮ್ಮ PF, Gratuity ಕೊಡುಗೆ
 

ಈ ಯೋಜನೆಯಡಿಯಲ್ಲಿ,  ಕೇವಲ 1000 ರೂಪಾಯಿಗಳೊಂದಿಗೆ ಖಾತೆಯನ್ನು ತೆರೆಯಬಹುದು. ಒಂದೇ ಖಾತೆಯನ್ನು ತೆರೆದರೆ, ಗರಿಷ್ಠ 4.5 ಲಕ್ಷ ರೂಪಾಯಿಗಳನ್ನು ಜಮಾ ಮಾಡಬಹುದು, ಜಾಯಿಂಟ್ ಅಕೌಂಟ್ ನಲ್ಲಿ (Joint account) ಗರಿಷ್ಠ 9 ಲಕ್ಷ ರೂಪಾಯಿಗಳವರೆಗೆ ಠೇವಣಿ ಇಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News