PM Kisan: ಪಿಎಂ ಕಿಸಾನ್ ನಿಧಿಯ 12ನೇ ಕಂತಿಗೆ ಸಂಬಂಧಿಸಿದಂತೆ ಬಿಗ್ ನ್ಯೂಸ್

PM Kisan Yojana Latest Update: ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12 ನೇ ಕಂತಿನ ಕುರಿತಂತೆ ಪ್ರಮುಖ ಸುದ್ದಿಯೊಂದು ಹೊರಬಿದ್ದಿದೆ. ಪಿಎಂ ಕಿಸಾನ್ ಯೋಜನೆಯ  ಇತ್ತೀಚಿನ ಅಪ್‌ಡೇಟ್ ಏನೆಂದು ತಿಳಿಯೋಣ...

Written by - Yashaswini V | Last Updated : Jul 6, 2022, 09:49 AM IST
  • ಈ ದಿನಾಂಕದಿಂದ ಖಾತೆಗೆ ಬರಲಿದೆ ಪಿಎಂ ಕಿಸಾನ್ ನಿಧಿಯ 12ನೇ ಕಂತು
  • ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಸರ್ಕಾರವು ಇಕೆವೈಸಿಯನ್ನು ಕಡ್ಡಾಯಗೊಳಿಸಿದೆ.
  • ಈ ಯೋಜನೆಯ ಲಾಭವನ್ನು ಪಡೆಯುವ ರೈತರು ಈಗ ಜುಲೈ 31 ರೊಳಗೆ eKYC ಅನ್ನು ನವೀಕರಿಸಬೇಕಾಗುತ್ತದೆ.
PM Kisan: ಪಿಎಂ ಕಿಸಾನ್ ನಿಧಿಯ 12ನೇ ಕಂತಿಗೆ ಸಂಬಂಧಿಸಿದಂತೆ ಬಿಗ್ ನ್ಯೂಸ್   title=
PM Kisan 12th Installment

ಪಿಎಂ ಕಿಸಾನ್ ಯೋಜನೆಯ ಇತ್ತೀಚಿನ ಅಪ್‌ಡೇಟ್: ದೇಶದ ರೈತರಿಗೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಪ್ರತಿ ವರ್ಷ ರೈತರಿಗೆ ಮೂರು ಕಂತುಗಳಲ್ಲಿ ಆರು ಸಾವಿರ ರೂ. ನೀಡಲಾಗುತ್ತದೆ. ಈ ಯೋಜನೆಯಡಿ ಇದುವರೆಗೆ 11 ಕಂತುಗಳು ರೈತರ ಖಾತೆ ಸೇರಿದೆ. ಇದೀಗ 12ನೇ ಕಂತು ಯಾವಾಗ ಖಾತೆ ಸೇರಲಿದೆ ಎಂದು ರೈತರು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಕುರಿತಂತೆ ಪ್ರಮುಖ ಮಾಹಿತಿ ಲಭ್ಯವಾಗಿದ್ದು ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಆಗಸ್ಟ್‌ನಲ್ಲಿ ರೈತರ ಖಾತೆಗೆ ಜಮೆಯಾಗಲಿದೆ. ಭಾರತ ಸರ್ಕಾರವು ನಿಗದಿಪಡಿಸಿದ ನಿಯಮದ ಪ್ರಕಾರ, ಈ ಯೋಜನೆಯಡಿಯಲ್ಲಿ, ರೈತರಿಗೆ ಮೊದಲ ಕಂತನ್ನು ಏಪ್ರಿಲ್ 1 ಮತ್ತು 32 ಜುಲೈ ನಡುವೆ ನೀಡಲಾಗುತ್ತದೆ ಮತ್ತು ಎರಡನೇ ಕಂತನ್ನು 1 ಆಗಸ್ಟ್ 1 ಮತ್ತು 30 ನವೆಂಬರ್ ನಡುವೆ ನೀಡಲಾಗುತ್ತದೆ. ಮೂರನೇ ಕಂತಿನ ಹಣವನ್ನು ಡಿಸೆಂಬರ್ 1 ಮತ್ತು ಮಾರ್ಚ್ 31 ರ ಸ್ಲಾಟ್ ನಡುವೆ ವರ್ಗಾಯಿಸಲಾಗುತ್ತದೆ. 

ಇದನ್ನೂ ಓದಿ- Aadhaar Update: ಆಧಾರ್‌ಗೆ ಸಂಬಂಧಿಸಿದ ವಂಚನೆ ತಡೆಯಲು ಯುಐಡಿಎಐ ಮಾಸ್ಟರ್ ಪ್ಲಾನ್

ಇಂತಹ ರೈತರಿಗೆ ಸಿಗಲ್ಲ ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಪ್ರಯೋಜನ:
ಸರ್ಕಾರದಿಂದ ಈ ಮೊದಲೇ ಮಾಹಿತಿ ನೀಡಿದಂತೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಲಾಭವನ್ನು ಪಡೆಯಲು ಅರ್ಹ ರೈತರು ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಕೆವೈಸಿ ಪೂರ್ಣಗೊಳಿಸದ ರೈತರಿಗೆ ಪಿಎಂ ಕಿಸಾನ್‌ನ ಮುಂದಿನ ಕಂತಿನ ಪ್ರಯೋಜನ ಲಭ್ಯವಾಗುವುದಿಲ್ಲ. 

ರೈತರು ಕೆವೈಸಿ ಅನ್ನು ಪೂರ್ಣಗೊಳಿಸದೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಸಿಗುವ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.  ಪಿಎಂ ಕಿಸಾನ್ 12 ನೇ ಕಂತು ಬಿಡುಗಡೆ ಮಾಡುವ ಮೊದಲು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ನಿರ್ದೇಶಿಸಿದೆ. ಇ- ಕೆವೈಸಿ ಪೂರ್ಣಗೊಳಿಸಲು ಕೊನೆಯ ದಿನಾಂಕ ಜುಲೈ 31 ಆಗಿದೆ, ಅದಕ್ಕೂ ಮೊದಲು ರೈತರು ಪಿಎಂ ಕಿಸಾನ್ ಯೋಜನೆಯಲ್ಲಿ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. 

ಇದನ್ನೂ ಓದಿ- ಬಿಗ್ ಶಾಕ್! ಎಲ್‌ಪಿಜಿ ಬೆಲೆಯಲ್ಲಿ ಭಾರಿ ಏರಿಕೆ: ಈಗ ಇಷ್ಟು ರೂಪಾಯಿಗೆ ಗ್ಯಾಸ್ ಸಿಲಿಂಡರ್ ಲಭ್ಯ

ಇ-ಕೆವೈಸಿ ಪೂರ್ಣಗೊಳಿಸುವ ಹಂತ ಹಂತದ ಪ್ರಕ್ರಿಯೆ:
ಪಿಎಂ ಕಿಸಾನ್ ಯೋಜನೆಯಲ್ಲಿ ನೀವು ಇನ್ನೂ ಸಹ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಈ ರೀತಿ ಅದನ್ನು ಪೂರ್ಣಗೊಳಿಸಿ.
* ಮೊದಲಿಗೆ  pmkisan.gov.in ನಲ್ಲಿ ಪಿಎಂ ಕಿಸಾನ್ ಯೋಜನೆಯ ವೆಬ್‌ಸೈಟ್‌ಗೆ ಹೋಗಿ.
* ಇಲ್ಲಿ ಫಾರ್ಮರ್ ಕಾರ್ನರ್ ನಲ್ಲಿರುವ ಇ-ಕೆವೈಸಿ  ಟ್ಯಾಬ್ ಅನ್ನು  ಕ್ಲಿಕ್ ಮಾಡಿ.
* ಈಗ ಹೊಸ ವೆಬ್ ಪುಟದಲ್ಲಿ  ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಹುಡುಕಾಟ ಟ್ಯಾಬ್ ಅನ್ನು ಕ್ಲಿಕ್ ಮಾಡಿ. 
* ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
* ನಿಗದಿತ ಸ್ಥಳದಲ್ಲಿ ಒಟಿಪಿ ಸಲ್ಲಿಸಿದ ಬಳಿಕ ಮುಂದಿನ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ಈ ರೀತಿ ಆಗಿ ನಿಮ್ಮ ಇ-ಕೆವೈಸಿ ಅನ್ನು ಪೂರ್ಣಗೊಳಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News