ಈ ದಿನ ಬಿಡುಗಡೆ ಆಗಲಿದೆ ಪಿಎಂ ಕಿಸಾನ್ 12ನೇ ಕಂತು

ಕೋಟ್ಯಾಂತರ ರೈತರಿಗೆ ಗುಡ್ ನ್ಯೂಸ್ ಇದೆ. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಶೀಘ್ರದಲ್ಲೇ 12ನೇ ಕಂತು ಬಿಡುಗಡೆ ಆಗಲಿದೆ. ಈ ಕಂತು ಯಾವಾಗ ಬಿಡುಗಡೆ ಆಗಲಿದೆ. ಇಲ್ಲಿದೆ ಲೇಟೆಸ್ಟ್ ಅಪ್ಡೇಟ್.

Written by - Yashaswini V | Last Updated : Jul 22, 2022, 09:32 AM IST
  • ಪಿಎಂ ಕಿಸಾನ್ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ.
  • ಈ ಯೋಜನೆಯಡಿ ಇದುವರೆಗೂ ಅರ್ಹ ರೈತರ ಖಾತೆಗೆ 11 ಕಂತುಗಳನ್ನು ವರ್ಗಾಯಿಸಲಾಗಿದೆ.
  • ದೇಶದ ರೈತರು ಈ ಯೋಜನೆಯ 12ನೇ ಕಂತಿನ ಹಣವನ್ನು ಪಡೆಯಲು ಕಾತುರರಾಗಿದ್ದಾರೆ.
ಈ ದಿನ ಬಿಡುಗಡೆ ಆಗಲಿದೆ ಪಿಎಂ ಕಿಸಾನ್ 12ನೇ ಕಂತು  title=
PM Kisan yojana 12th installment

ಪಿಎಂ ಕಿಸಾನ್: ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಇದೆ. ಈ ಆರ್ಥಿಕ ವರ್ಷದಲ್ಲಿ ಇದುವರೆಗೆ ಪಿಎಂ-ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ 21,924 ಕೋಟಿ ರೂಪಾಯಿಗಳ ಆರ್ಥಿಕ ಲಾಭವನ್ನು ಸರ್ಕಾರ ನೀಡಿದೆ. ಇದನ್ನು ಅರ್ಹ 10.26 ಕೋಟಿ ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ. ಪಿಎಂ ಕಿಸಾನ್ ಯೋಜನೆಯ 12 ನೇ ಕಂತು ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತು ಯಾವಾಗ ಬಿಡುಗಡೆ ಆಗಲಿದೆ. ಈ ಕಂತು ಯಾವ ರೈತರಿಗೆ ಸಿಗಲಿದೆ? ಯಾರಿಗೆ ಇದರ ಲಾಭ ದೊರೆಯುವುದಿಲ್ಲ ಎಂದು ತಿಳಿಯಲು ಮುಂದೆ ಓದಿ.

ನರೇಂದ್ರ ಮೋದಿ ಸರ್ಕಾರದ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12 ನೇ ಕಂತಿಗಾಗಿ ರೈತರು ಕಾಯುತ್ತಿದ್ದಾರೆ. ಈ ಕಂತಿನ ಬಿಡುಗಡೆ ಬಗ್ಗೆ ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸಬೇಕಾಗಿದೆ. ಆದರೆ, ಪಿಎಂ ಕಿಸಾನ್‌ನ ಮುಂದಿನ ಕಂತು ಆಗಸ್ಟ್‌ನಲ್ಲಿ ಬರಲಿದೆ.

ವಾಸ್ತವವಾಗಿ, ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ, ಪ್ರತಿವರ್ಷ ಮೂರು ಕಂತುಗಳಲ್ಲಿ ರೈತರ ಖಾತೆಗೆ 6,000ರೂ.ಗಳನ್ನು ಜಮಾ ಮಾಡಲಾಗುತ್ತದೆ.  ರೈತರಿಗೆ ವರ್ಷದ ಮೊದಲ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರ ನಡುವೆ ನೀಡಲಾಗುತ್ತದೆ. ಎರಡನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30 ರ ನಡುವೆ ನೀಡಲಾಗುತ್ತದೆ. ಅದೇ ಸಮಯದಲ್ಲಿ, ಮೂರನೇ ಕಂತಿನ ಹಣವನ್ನು ಡಿಸೆಂಬರ್ 1 ಮತ್ತು ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ. ಅದರಂತೆ, ಮುಂದಿನ ಕಂತು ಆಗಸ್ಟ್ ಮತ್ತು ನವೆಂಬರ್ ನಡುವೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ- ಫಾರ್ಮ್-16 ಇಲ್ಲದೆಯೂ ಐಟಿಆರ್ ಸಲ್ಲಿಸಬಹುದು- ಇಲ್ಲಿದೆ ಸುಲಭ ವಿಧಾನ

ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಹುಡುಕಿ:
ನೀವೂ ಸಹ ಈ ಯೋಜನೆಯ ಫಲಾನುಭವಿ ಆಗಿದ್ದರೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12 ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಎಂದು ಕಂಡು ಹಿಡಿಯಿರಿ. * ಇದಕ್ಕಾಗಿ ಮೊದಲು ನೀವು ಅಧಿಕೃತ ವೆಬ್‌ಸೈಟ್ pmkisan.gov.in ಗೆ ಹೋಗಬೇಕು. 
* ಈಗ ನೀವು ಫಾರ್ಮರ್ ಕಾರ್ನರ್ ವಿಭಾಗದಲ್ಲಿ "ಫಲಾನುಭವಿಗಳ ಪಟ್ಟಿ" ಮೇಲೆ ಕ್ಲಿಕ್ ಮಾಡಬೇಕು. 
* ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಹೆಸರನ್ನು ಭರ್ತಿ ಮಾಡಿ ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡಿ.

ಒಂದೊಮ್ಮೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ಅದಕ್ಕೆ ಕಾರಣವನ್ನು ಕಂಡು ಹಿಡಿಯಿರಿ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದನ್ನು ಶೀಘ್ರವಾಗಿ ಪರಿಹರಿಸಿ. ಇದಕ್ಕಾಗಿ, ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಮೇಲ್ ಐಡಿಗೆ ಮೇಲ್ ಮಾಡುವ ಮೂಲಕ ನೀವು ಪರಿಹಾರವನ್ನು ಪಡೆಯಬಹುದು.

ಇದನ್ನೂ ಓದಿ- ಇಂಟರ್‌ಸಿಟಿ ಮತ್ತು ಶತಾಬ್ದಿ ರೈಲ್ವೆ ಪ್ರಯಾಣಿಕರಿಗೊಂದು ಸಿಹಿ ಸುದ್ದಿ...!

ಪಿಎಂ ಕಿಸಾನ್ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ಪಡೆಯಲು ಉಚಿತ ಸಯಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ 011-23381092 ಅನ್ನು ಸಂಪರ್ಕಿಸಬಹುದು. 

ಇ-ಮೇಲ್ ಮೂಲಕವೂ ದೂರು ನೀಡಬಹುದು:-
ನಿಮಗೆ ಬೇಕಾದ ಅಗತ್ಯ ಮಾಹಿತಿಯನ್ನು ಪಡೆಯಲು ಟೋಲ್ ಫ್ರೀ ಸಂಖ್ಯೆಗೆ ಕಾಲ್ ಮಾಡುವುದರ ಹೊರತಾಗಿ ಇ-ಮೇಲ್ ಮೂಲಕವೂ ನೀವು ದೂರು ನೀಡಬಹುದು. ಇದಕ್ಕಾಗಿ  pmkisan-ict@gov.in ಗೆ ಮೇಲ್ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News