Budget 2023: 1992 ರಲ್ಲಿ ಎಷ್ಟು ಆದಾಯ ತೆರಿಗೆ ಪಾವತಿಸಬೇಕಾಗುತ್ತಿತ್ತು? 30 ವರ್ಷಗಳ ಹಿಂದಿನ ಹಳೆ ಚಿತ್ರ ವೈರಲ್

Union Budget 1992: 1992 ಆದಾಯ ತೆರಿಗೆ ಸ್ಲ್ಯಾಬ್ ಗಳಿಗೆ ಸಂಬಂಧಿಸಿದ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಹೌದು, ಈ ಚಿತ್ರ ವೈರಲ್ ಆಗುತಿದ್ದಂತೆ ಜನರು ಅದನ್ನು ಇಂದಿನ ಬಜೆಟ್ ಗೆ ಹೋಲಿಕೆ ಮಾಡಲು ಆರಂಭಿಸಿದ್ದಾರೆ. ಹಾಗಾದರೆ ಬನ್ನಿ 30 ವರ್ಷಗಳ ಹಿಂದೆ ಯಾವ ಆದಾಯದ ಮೇಲೆ ಜನರು ತೆರಿಗೆ ಪಾವತಿಸುತ್ತಿದ್ದರು ಎಂಬುದನ್ನು ತಿಳಿದುಕೊಳ್ಳೋಣ,

Written by - Nitin Tabib | Last Updated : Feb 1, 2023, 03:55 PM IST
  • ಇಂದು 2023 ರ ಬಜೆಟ್ ನ ಹೊಸ ಘೋಷಣೆಯ ಅಡಿಯಲ್ಲಿ,
  • 7 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ
  • ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ.
Budget 2023: 1992 ರಲ್ಲಿ ಎಷ್ಟು ಆದಾಯ ತೆರಿಗೆ ಪಾವತಿಸಬೇಕಾಗುತ್ತಿತ್ತು? 30 ವರ್ಷಗಳ ಹಿಂದಿನ ಹಳೆ ಚಿತ್ರ ವೈರಲ್ title=
1992 ರ ಆದಾಯ ತೆರಿಗೆ ಚಪ್ಪಡಿಗಳು

Income Tax Slabs 2023: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಪರವಾಗಿ ಬಜೆಟ್ 2023 ಅನ್ನು ಮಂಡಿಸಿದ್ದಾರೆ. ಇದರಲ್ಲಿ ಆದಾಯ ತೆರಿಗೆಯ ಕುರಿತು ಹೊಸ ಘೋಷಣೆಗಳನ್ನು ಮೊಳಗಿಸಿದ ಸೀತಾರಾಮನ್ 5 ಸ್ಲ್ಯಾಬ್ ಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿ, 7 ಲಕ್ಷದವರೆಗಿನ ಆದಾಯದ ಮೇಲಿನ ರಿಯಾಯಿತಿಯನ್ನು ಹೆಚ್ಚಿಸಲಾಗಿದೆ. ಅಂದರೆ, ಈ ಆದಾಯದವರೆಗೆ ಯಾರೂ ತೆರಿಗೆ ಪಾವತಿಸಬೇಕಾಗಿಲ್ಲ. ಏತನ್ಮಧ್ಯೆ, 1992 ರ ಆದಾಯ ತೆರಿಗೆ ಸ್ಲ್ಯಾಬ್ ಗಳ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಗ ಆದಾಯಕ್ಕೆ ಎಷ್ಟು ತೆರಿಗೆ ಪಾವತಿಸಬೇಕಾಗಿತ್ತು ಎಂಬುದು ಅದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

1992 ರ ಬಜೆಟ್‌ನಲ್ಲಿ ಹೊಸ ತೆರಿಗೆ ಸ್ಲ್ಯಾಬ್‌ಗಳು
ವಾಸ್ತವದಲ್ಲಿ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಇಂಡಿಯನ್ ಹಿಸ್ಟರಿ ಪಿಕ್ ಹೆಸರಿನ ಹ್ಯಾಂಡಲ್‌ ಮೂಲಿಕ ಪೋಸ್ಟ್ ಮಾಡಲಾಗಿದೆ. 1992ರ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಸ್ಲ್ಯಾಬ್ ಎಂದು ಇದಕ್ಕೆ ಶೀರ್ಷಿಕೆ ಬರೆಯಲಾಗಿದೆ. ಆಗ 28000 ಸಾವಿರ ರೂಪಾಯಿಗಳ ಆದಾಯದ ಮೇಲೆ ಯಾವುದೇ ತೆರಿಗೆ ಇರಲಿಲ್ಲ. 28001 ಸಾವಿರದಿಂದ 50000 ರೂಪಾಯಿಗಳ ಮೇಲೆ ಶೇ. 20 ರಷ್ಟು ತೆರಿಗೆ,  50001 ರಿಂದ 100000 ವರೆಗೆ ಶೇ. 30 ರಷ್ಟು ತೆರಿಗೆ ಮತ್ತು 1 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ ಶೇ.40 ರಷ್ಟು ಆದಾಯ ತೆರಿಗೆ ಪಾವತಿಸಬೇಕಾಗುತ್ತಿತ್ತು ಎಂಬುದು ವೈರಲ್ ಚಿತ್ರದಿಂದ ನೀವು ತಿಳಿದುಕೊಳ್ಳಬಹುದು.

ಇದನ್ನೂ ಓದಿ-Budget 2023: ಇಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಿಕ್ತು ಸಂತಸದ ಸುದ್ದಿ, ಆಟೋ ಸೆಕ್ಟರ್ ಘೋಷಣೆಗಳು ಇಲ್ಲಿವೆ

ಅಗ ಸ್ಲ್ಯಾಬ್ ಗಳನ್ನು ಒಟ್ಟು ಮೂರು ಭಾಗಗಳಾಗಿ ವಿಂಗಡಿಸಲಾಗಿತ್ತು
ಈ ಚಿತ್ರವು 1992 ರಲ್ಲಿ ಪ್ರಧಾನಿ ನರಸಿಂಹರಾವ್ ಅವರ ಸರ್ಕಾರದಲ್ಲಿದ್ದ ಹಣಕಾಸು ಸಚಿವರಾದ  ಮನಮೋಹನ್ ಸಿಂಗ್ ಅವರು ತೆರಿಗೆ ಸ್ಲ್ಯಾಬ್‌ಗಳನ್ನು ಒಟ್ಟು ಮೂರು ಭಾಗಗಳಾಗಿ ವಿಂಗಡಿಸಿದ್ದರು. ಈ ಚಿತ್ರ ವೈರಲ್ ಆದ ತಕ್ಷಣ ಜನ ಇದಕ್ಕೆ ತರಹೇವಾರಿ ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ. ಇದನ್ನು ಇಂದಿನ ಬಜೆಟ್‌ನೊಂದಿಗೆ ತುಲನೆ ಮಾಡಲು ಹಲವರು ಆರಂಭಿಸಿದ್ದಾರೆ. ಮೂವತ್ತು ವರ್ಷಗಳಲ್ಲಿ, ಭೂಮಿ ಮತ್ತು ಆಕಾಶದ ನಡುವಿನ ವ್ಯತ್ಯಾಸ ಗೋಚರಿಸುತ್ತಿದೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ-Budget 2023: ಇನ್ಮುಂದೆ ಸಗಣಿ ಕೂಡ ಆದಾಯದ ಮೂಲವಾಗಲಿದೆ. ಕೇಂದ್ರ ಸಚಿವೆಯ ಮಹತ್ವದ ಬಜೆಟ್ ಘೋಷಣೆ

ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯ
ಇಂದು 2023 ರ ಬಜೆಟ್ ನ ಹೊಸ ಘೋಷಣೆಯ ಅಡಿಯಲ್ಲಿ, 7 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ. 7 ಲಕ್ಷಕ್ಕಿಂತ ಹೆಚ್ಚು ಇದ್ದರೆ, ನೀವು ಮೂರು ಲಕ್ಷ ರೂಪಾಯಿಗಳವರೆಗೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. 3ರಿಂದ 6 ಲಕ್ಷದವರೆಗೆ ಶೇ.5ರಷ್ಟು ತೆರಿಗೆ ಮತ್ತು 6ರಿಂದ 9 ಲಕ್ಷ ರೂ.ವರೆಗೆ ಶೇ.10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಅದೇನೇ ಇದ್ದರು ಹೊಸ ಬಜೆಟ್ ಮಂಡನೆಯ ನಡುವೆ ಪ್ರಕಟಗೊಂಡ ಈ 1992 ರ ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿರುವುದು ಮಾತ್ರ ನಿಜ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News