EPF Pension ಧಾರಕರಿಗೆ ಒಂದು ಸಂತಸದ ಸುದ್ದಿ, ತಪ್ಪದೆ ಓದಿ

Pension Calculator: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ವೆಬ್‌ಸೈಟ್‌ನಲ್ಲಿ ಕ್ಯಾಲ್ಕುಲೇಟರ್ ಅನ್ನು ಹಂಚಿಕೊಂಡಿದೆ. ಇದರ ಮೂಲಕ ನೀವು ನಿಮ್ಮ ಪಿಂಚಣಿ ಮೊತ್ತವನ್ನು ಲೆಕ್ಕಹಾಕಬಹುದು. ನಿವೃತ್ತಿಯ ಬಳಿಕ ನಿಖರವಾಗಿ ನಿಮಗೆ ಎಷ್ಟು ಪಿಂಚಣಿ ಸಿಗಲಿದೆ? ಮತ್ತು ಅದನ್ನು ಲೆಕ್ಕ ಹಾಕುವ ಪ್ರಕ್ರಿಯೆ ಏನು ಎಂಬುದನ್ನು ಇದರಿಂದ ನೀವು ಸುಲಭವಾಗಿ ತಿಳಿದುಕೊಳ್ಳಬಹುದು.   

Written by - Nitin Tabib | Last Updated : Aug 20, 2022, 06:08 PM IST
  • ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 1995 ರಲ್ಲಿ ಹೊಸ ಪಿಂಚಣಿ ಯೋಜನೆಯೊಂದನ್ನು ಜಾರಿಗೆ ತಂದಿತ್ತು.
  • ಇದರ ಅಡಿಯಲ್ಲಿ ಪಿಎಫ್ ಹೊಂದಿರುವವರಿಗೆ ಪಿಂಚಣಿ ಪಡೆಯುವ ಅವಕಾಶವಿದೆ.
  • ಇಪಿಎಫ್‌ಒ ಇತ್ತೀಚೆಗೆ ತನ್ನ ವೆಬ್‌ಸೈಟ್‌ನಲ್ಲಿ ಪಿಂಚಣಿ ಕ್ಯಾಲ್ಕುಲೇಟರ್ ಅನ್ನು ಹಂಚಿಕೊಂಡಿದೆ.
EPF Pension ಧಾರಕರಿಗೆ ಒಂದು ಸಂತಸದ ಸುದ್ದಿ, ತಪ್ಪದೆ ಓದಿ title=
EPFO Pension Calculator

EPFO UAN PENSION: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 1995 ರಲ್ಲಿ ಹೊಸ ಪಿಂಚಣಿ ಯೋಜನೆಯೊಂದನ್ನು ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ ಪಿಎಫ್ ಹೊಂದಿರುವವರಿಗೆ ಪಿಂಚಣಿ ಪಡೆಯುವ ಅವಕಾಶವಿದೆ. ಇಪಿಎಫ್‌ಒ ಇತ್ತೀಚೆಗೆ ತನ್ನ ವೆಬ್‌ಸೈಟ್‌ನಲ್ಲಿ ಪಿಂಚಣಿ ಕ್ಯಾಲ್ಕುಲೇಟರ್ ಅನ್ನು ಹಂಚಿಕೊಂಡಿದೆ. ಇದರ ಮೂಲಕ ನೀವು ನಿಮ್ಮ ಪಿಂಚಣಿ ಮೊತ್ತವನ್ನು ಸುಲಭವಾಗಿ ಲೆಕ್ಕಹಾಕಬಹುದು. ನಿವೃತ್ತಿಯ ನಂತರ ನಿಮಗೆ ಎಷ್ಟು ಪಿಂಚಣಿ ಸಿಗಲಿದೆ? ನೀವು 50 ವರ್ಷದಿಂದ ಪಿಂಚಣಿ ಪಡೆಯಲು ಪ್ರಾರಂಭಿಸಿದರೆ, ನಿಮಗೆ ಎಷ್ಟು ಪಿಂಚಣಿ ಸಿಗುತ್ತದೆ? ಇತ್ಯಾದಿ ಮಾಹಿತಿಯನ್ನು ನೀವು ಇಲ್ಲಿ ಲೆಕ್ಕಹಾಕಬಹುದು.  ಏಪ್ರಿಲ್ 1, 2014 ರಂದು ಅಥವಾ ನಂತರ ಪಿಂಚಣಿ ಪಡೆಯಲು ಪ್ರಾರಂಭಿಸಿದ ಜನರು EPS ಕ್ಯಾಲ್ಕುಲೇಟರ್ ಅನ್ನು ಬಳಸಬಹುದಾಗಿದೆ. ಅದರ ಪ್ರಕ್ರಿಯೆ ಎಂದು ತಿಳಿದುಕೊಳ್ಳೋಣ ಬನ್ನಿ 

ಪ್ರಕ್ರಿಯೆ ತಿಳಿಯಲು ಈ ಸುಲಭ ಹಂತಗಳನ್ನು ಅನುಸರಿಸಿ
1. ವೆಬ್‌ಸೈಟ್‌ನಲ್ಲಿ, ನೀವು ಪಿಂಚಣಿದಾರರ ಜನ್ಮ ದಿನಾಂಕವನ್ನು ನಮೂದಿಸಬೇಕು. EPF ಸದಸ್ಯರು 1ನೇ ಏಪ್ರಿಲ್ 2011 ಕ್ಕೆ 58 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಅಂದರೆ ಈ ಕ್ಯಾಲ್ಕುಲೇಟರ್ ಅನ್ನು ಬಳಸುವ ಮೊದಲು ಹುಟ್ಟಿದ ದಿನಾಂಕವು 1 ನೇ ಏಪ್ರಿಲ್ 1953 ರಂದು ಅಥವಾ ನಂತರ ಇರಬೇಕು.

2. ಜನ್ಮ ದಿನಾಂಕವನ್ನು ನಮೂದಿಸಿದ ನಂತರ, ನೀವು ಸೇರ್ಪಡೆ ಮತ್ತು ಸೇವಾ ನಿರ್ಗಮನದ ವಿವರಗಳನ್ನು ಅಂದರೆ ನಿವೃತ್ತಿಯ ದಿನಾಂಕವನ್ನು ಕ್ಯಾಲ್ಕುಲೇಟರ್‌ನಲ್ಲಿ ನಮೂದಿಸಬೇಕು. ಇಪಿಎಫ್‌ಒ ನಿಯಮಗಳ ಪ್ರಕಾರ, ಸೇವೆಗೆ ಸೇರುವ ದಿನಾಂಕವು ನವೆಂಬರ್ 16, 1995 ರಂದು ಅಥವಾ ನಂತರ ಇರಬೇಕು.

3. ಇದರ ನಂತರ ನೀವು NCP ದಿನದ ಸಂಖ್ಯೆಯನ್ನು ನಮೂದಿಸಬೇಕು. NCP ಅಂದರೆ ನಾನ್-ಕಾಂಟ್ರಿಬ್ಯೂಟರಿ ಅವಧಿ ಎಂದರ್ಥ, ಅಂದರೆ ನೀವು ಆ ದಿನಗಳಲ್ಲಿ ಆದಾಯವನ್ನು ಪಡೆದಿಲ್ಲ ಅಥವಾ ಸದಸ್ಯರ EPF ಕೊಡುಗೆಯನ್ನು ಕಂಪನಿಯು ಪಾವತಿಸಿಲ್ಲ ಎಂದರ್ಥ. ನೀವು ರಜೆಯಲ್ಲಿರುವ ದಿನವನ್ನು ನಿಮ್ಮ ಕೊಡುಗೆ ರಹಿತ ಅವಧಿ ಎಂದು ಕರೆಯುವ ರೀತಿಯಲ್ಲಿ ನೀವು ಇದನ್ನು ಅರ್ಥೈಸಿಕೊಳ್ಳಬಹುದು. ಎನ್‌ಸಿಪಿಯಲ್ಲಿ ಎರಡು ವಿಧಗಳಿವೆ. NCP-1 ನಲ್ಲಿ, ನೀವು 31ನೇ ಆಗಸ್ಟ್ 2014 ರವರೆಗಿನ NCP ದಿನಗಳನ್ನು ನಮೂದಿಸಬೇಕು. ಇನ್ನೊಂದೆಡೆ, 31 ಆಗಸ್ಟ್ 2014 ರ ನಂತರದ NCP ದಿನಗಳನ್ನು NCP-2 ನಲ್ಲಿ ನಮೂದಿಸಬೇಕು.

4. EPFO ​​ಪ್ರಕಾರ, ಒಬ್ಬ ಸದಸ್ಯರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೌಕರಿಯನ್ನು ಮಾಡಿದ್ದರೆ, ಅವರು ಆ ಎಲ್ಲಾ ಅವಧಿಗಳನ್ನು ಸೇರಿಸಬಹುದು.  ನೀವು ಒಂದು ಕಂಪನಿಯಲ್ಲಿ ಎರಡು ವರ್ಷ ಕೆಲಸ ಮಾಡಿ ನಂತರ ಇನ್ನೊಂದು ಕಂಪನಿಯಲ್ಲಿ ಮೂರು ವರ್ಷ ಕೆಲಸ ಮಾಡಿದರೆ, ನಂತರ EPFO ​​ಪ್ರಕಾರ, ನೀವು ಸೇವಾ ಅವಧಿಯಲ್ಲಿ ಎರಡೂ ಕಂಪನಿಗಳಲ್ಲಿ ಮಾಡಿದ ಕೆಲಸದ ಒಟ್ಟು ಅವಧಿಯನ್ನು ನಮೂದಿಸಬಹುದು.

5. ಇದರ ನಂತರ ನೀವು ವ್ಯವಸ್ಥೆಯಲ್ಲಿ ಪಿಂಚಣಿ ಪ್ರಾರಂಭವಾಗುವ ದಿನಾಂಕವನ್ನು ಗಮನಿಸುವಿರಿ. ಅಲ್ಲಿ ನೀವು ಮೊದಲ ಪಿಂಚಣಿ ಪಡೆದ ದಿನಾಂಕವನ್ನು ನಮೂದಿಸಿ.

6. ಇದರ ನಂತರ ನೀವು ಪಿಂಚಣಿ ವೇತನವನ್ನು ಬರೆದಿರುವುದನ್ನು ಗಮನಿಸುವಿರಿ. ಅದರಲ್ಲಿ ನೀವು ನಿಮ್ಮ ಸಂಬಳವನ್ನು ನಮೂದಿಸಿ. ನಿಮ್ಮ ಪಿಂಚಣಿಯು 31 ಆಗಸ್ಟ್ 2014 ರಂದು ಅಥವಾ ಮೊದಲು ಪ್ರಾರಂಭವಾದರೆ, ಪಿಂಚಣಿ ವೇತನವು ಕಳೆದ 12 ತಿಂಗಳ ಸರಾಸರಿ ಆದಾಯವಾಗಿರುತ್ತದೆ ಮತ್ತು ಈ ದಿನಾಂಕದ ನಂತರ ಪಿಂಚಣಿ ಪ್ರಾರಂಭವಾದರೆ 60 ತಿಂಗಳ ಸರಾಸರಿ ಆದಾಯವಾಗಿರುತ್ತದೆ.

7. EPFO ​​ನ ಹೊಸ ನಿಯಮಗಳ ಪ್ರಕಾರ, ಪಿಂಚಣಿ ಆದಾಯದ ಗರಿಷ್ಠ ಮಿತಿಯು ಆಗಸ್ಟ್ 31, 2014 ರವರೆಗೆ ರೂ.6500 ಆಗಿತ್ತು, ನಂತರದ ದಿನಾಂಕಕ್ಕೆ ರೂ.15 ಸಾವಿರಕ್ಕೆ ಅಂದರೆ ಸೆಪ್ಟೆಂಬರ್ 1, 2014 ರವರೆಗೆ ಈ ಕ್ಯಾಲ್ಕುಲೇಟರ್ ಅನ್ನು ಬಳಸಲು 15 ಸಾವಿರಕ್ಕೆ ಹೆಚ್ಚಿಸಲಾಗಿದೆ. 31 ಆಗಸ್ಟ್ 2014 ರಂತೆ ಗರಿಷ್ಠ ಆದಾಯ ರೂ.6500 ಆಗಿರಬೇಕು.

ಇದರ ನಂತರ ನೀವು ಪಿಂಚಣಿ ವಿವರಗಳನ್ನು ನೋಡುವಿರಿ
ಈ ಎಲ್ಲಾ ದತ್ತಾಂಶ ನಮೂದಿಸಿದ ನಂತರ, ನಿಮ್ಮ ಮಾಸಿಕ ಪಿಂಚಣಿ  ಕ್ಯಾಲ್ಕುಲೇಟರ್ನಲ್ಲಿ ಬಿತ್ತರಗೊಳ್ಳಲಿದೆ. EPFO ಪ್ರಕಾರ, ಸೆಪ್ಟೆಂಬರ್ 1, 2014 ರಿಂದ, ಪಿಂಚಣಿದಾರರಿಗೆ ಕನಿಷ್ಠ 1 ಸಾವಿರ ರೂ ಪಿಂಚಣಿ ನೀಡಲಾಗುತ್ತದೆ, ಅಂದರೆ, ನಿಮ್ಮ ಪಿಂಚಣಿ ರೂ 540 ಆಗಿದ್ದರೆ, ಇಪಿಎಫ್‌ಒ ನಿಮಗೆ ರೂ 1000 ಪಿಂಚಣಿ ನೀಡುತ್ತದೆ.

ಇದನ್ನೂ ಓದಿ-Top Selling Bikes: ಇವೆ ನೋಡಿ ದೇಶದಲ್ಲಿ ಅತ್ಯಧಿಕ ಮಾರಾಟಗೊಳ್ಳುವ ಬೈಕ್ ಗಳು

58 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಏನು?
EPFO ಪ್ರಕಾರ, 50 ವರ್ಷಗಳ ನಂತರ ಪಿಂಚಣಿ ಪಡೆಯಲು ಆರಂಭಿಸಬಹುದು. ಆದರೆ ನೀವು 58 ವರ್ಷಗಳ ಮೊದಲು ಪಿಂಚಣಿ ತೆಗೆದುಕೊಂಡರೆ, ನಂತರ ಇಪಿಎಫ್‌ಒ ವಾರ್ಷಿಕವಾಗಿ ಶೇ.4 ಪ್ರತಿಶತದಷ್ಟು ಕಡಿತಗೊಳಿಸುತ್ತದೆ. ಅಂದರೆ, 58 ರಿಂದ ಪಿಂಚಣಿ ತೆಗೆದುಕೊಳ್ಳುವ ಮೊದಲು ವರ್ಷಗಳ ಸಂಖ್ಯೆ, ಆ ವರ್ಷಗಳಿಗೆ 4% ದರದಲ್ಲಿ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ-Ration Card : ಬಿಪಿಎಲ್ ಕಾರ್ಡುದಾರರ ಗಮನಕ್ಕೆ : ನಿಮಗಾಗಿ ಕೇಂದ್ರದಿಂದ ಹೊಸ ನಿಯಮ ಜಾರಿ!

ಇಲ್ಲಿದೆ ಒಂದು ಉದಾಹರಣೆ
ಇಡೀ ಪ್ರಕ್ರಿಯೆಯನ್ನು ಒಂದು ಉದಾಹರಣೆಯ ಮೂಲಕ ತಿಳಿದುಕೊಳ್ಳುವುದಾದರೆ, ಸದಸ್ಯರ ಜನ್ಮ ದಿನಾಂಕ 2 ಅಕ್ಟೋಬರ್ 1964 ಮತ್ತು ಅವರು 27 ನವೆಂಬರ್ 1995 ರಂದು ಸೇವೆಯನ್ನು ಪ್ರಾರಂಭಿಸಿದ್ದಾರೆ. ಅವರು 21 ಜನವರಿ 2022 ರಂದು ರೂ 15,000 ರ ಪಿಂಚಣಿ ವೇತನದೊಂದಿಗೆ ನಿವೃತ್ತರಾಗುತ್ತಾರೆ. NCP ದಿನಗಳ ಸಂಖ್ಯೆ ಶೂನ್ಯವಾಗಿದ್ದರೆ. ಅವರ ಪಿಂಚಣಿ ಜನವರಿ 21, 2022 ರಿಂದ ಪ್ರಾರಂಭವಾಗಬೇಕಾದರೆ, ಈ ಎಲ್ಲಾ ಮಾಹಿತಿಯನ್ನು ಕ್ಯಾಲ್ಕುಲೇಟರ್‌ನಲ್ಲಿ ಭರ್ತಿ ಮಾಡಿದ ನಂತರ, ಅವರು ಮಾಸಿಕವಾಗಿ  ರೂ. 3327 ರೂ ಪಿಂಚಣಿ ಪಡೆಯಲಿದ್ದಾರೆ ಎಂಬುದನ್ನು ನೀವು ಗಮನಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News