EPFO Rules: ಹಳೆ ಕಂಪನಿಯ ಇಪಿಎಫ್ ವರ್ಗಾವಣೆಯಾಗದಿದ್ದರೆ EPFO ಖಾತೆ ಕ್ಲೋಸ್ ಆಗಬಹುದು!

EPFO Rules: ನಿಮ್ಮ ಹಳೆಯ ಕಂಪನಿ ಮುಚ್ಚಿದ್ದರೆ ಮತ್ತು ನೀವು ಹೊಸ ಕಂಪನಿಯ ಖಾತೆಗೆ ಹಣವನ್ನು ವರ್ಗಾಯಿಸದಿದ್ದರೆ ಅಥವಾ 36 ತಿಂಗಳವರೆಗೆ ಯಾವುದೇ ವಹಿವಾಟು ಇಲ್ಲದಿದ್ದರೆ, 3 ವರ್ಷಗಳ ನಂತರ ಈ ಖಾತೆಯು ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ.

Written by - Yashaswini V | Last Updated : Feb 11, 2022, 01:34 PM IST
  • ಇಪಿಎಫ್ ಖಾತೆಯನ್ನು ವರ್ಗಾಯಿಸುವುದು ಹೇಗೆ?
  • ನಿಮ್ಮ ಪಿಎಫ್ ಖಾತೆಯನ್ನು ಸ್ವಯಂಚಾಲಿತವಾಗಿ ಮುಚ್ಚಬಹುದು ಎಂದು ನಿಮಗೆ ತಿಳಿದಿದೆಯೇ?
  • EPF ಖಾತೆಯನ್ನು ಯಾವಾಗ ಮುಚ್ಚಲಾಗುತ್ತದೆ?
EPFO Rules: ಹಳೆ ಕಂಪನಿಯ ಇಪಿಎಫ್ ವರ್ಗಾವಣೆಯಾಗದಿದ್ದರೆ EPFO ಖಾತೆ ಕ್ಲೋಸ್ ಆಗಬಹುದು! title=
EPFO Inactivate Account

EPFO Rules: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಗೆ ಸಂಬಂಧಿಸಿದಂತೆ ಜನರು ಸಾಮಾನ್ಯವಾಗಿ ಅನೇಕ ಪ್ರಶ್ನೆಗಳನ್ನು ಹೊಂದಿರುತ್ತಾರೆ. ಹಾಗೆ ಅವರು ತಮ್ಮ ಹಣವನ್ನು ಯಾವಾಗ ಹಿಂಪಡೆಯಬಹುದು. ಹಣವನ್ನು ಹಿಂತೆಗೆದುಕೊಳ್ಳುವ ಸಾಧಕ-ಬಾಧಕಗಳೇನು? EPF ಖಾತೆಯನ್ನು ವರ್ಗಾಯಿಸುವುದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳನ್ನು ಹೊಂದಿರುತ್ತಾರೆ. ಆದರೆ, ನಿಮ್ಮ ಪಿಎಫ್ ಖಾತೆಯನ್ನು ಸ್ವಯಂಚಾಲಿತವಾಗಿ ಮುಚ್ಚಬಹುದು ಎಂದು ನಿಮಗೆ ತಿಳಿದಿದೆಯೇ? ಹೀಗಿರುವಾಗ ಪಿಎಫ್ ಹಣವನ್ನು ಹಿಂಪಡೆಯುವುದು ಕೂಡ ತುಂಬಾ ಕಷ್ಟ. ಇದು ಏಕೆ ಸಂಭವಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ ...

EPF ಖಾತೆಯನ್ನು ಯಾವಾಗ ಮುಚ್ಚಲಾಗುತ್ತದೆ?
ನಿಮ್ಮ ಹಳೆಯ ಕಂಪನಿ ಮುಚ್ಚಿದ್ದರೆ ಮತ್ತು ನೀವು ಹೊಸ ಕಂಪನಿಯ ಖಾತೆಗೆ ಹಣವನ್ನು ವರ್ಗಾಯಿಸದಿದ್ದರೆ ಅಥವಾ 36 ತಿಂಗಳವರೆಗೆ ನಿಮ್ಮ ಪಿಎಫ್ ಖಾತೆಯಲ್ಲಿ ಯಾವುದೇ ವಹಿವಾಟು ಇಲ್ಲದಿದ್ದರೆ, ನಂತರ 3 ವರ್ಷಗಳ ನಂತರ ಈ ಖಾತೆಯು ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ ಮತ್ತು EPF ನ ನಿಷ್ಕ್ರಿಯ ಖಾತೆಗೆ  (Inactive account) ಲಿಂಕ್ ಆಗುತ್ತದೆ. ಇಂತಹ ಸಂದರ್ಭದಲ್ಲಿ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಕಷ್ಟು ಶ್ರಮ ಪಡಬೇಕಾಗಬಹುದು. ನೀವು ಬ್ಯಾಂಕಿನ ಸಹಾಯದಿಂದ KYC ಮೂಲಕ ಹಣವನ್ನು ಹಿಂಪಡೆಯಬಹುದು. ಆದಾಗ್ಯೂ, ನಿಮ್ಮ ನಿಷ್ಕ್ರಿಯ ಖಾತೆಯ ಮೇಲೆ ಬಡ್ಡಿಯು ಸಂಗ್ರಹವಾಗುತ್ತಲೇ ಇರುತ್ತದೆ. ಅದೇ ಸಮಯದಲ್ಲಿ, ಖಾತೆಯು 7 ವರ್ಷಗಳವರೆಗೆ ನಿಷ್ಕ್ರಿಯವಾಗಿದ್ದರೆ, ಠೇವಣಿ ಮಾಡಿದ ಹಣವನ್ನು ಹಿರಿಯ ನಾಗರಿಕ ಕಲ್ಯಾಣ ನಿಧಿಗೆ ಹಾಕಲಾಗುತ್ತದೆ.

EPFO ನಿಯಮ ಏನು?
ನಿಷ್ಕ್ರಿಯ ಖಾತೆಗಳಿಗೆ  (Inactive account) ಸಂಬಂಧಿಸಿದ ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಲು ಕಾಳಜಿ ವಹಿಸುವುದು ಅಗತ್ಯ ಎಂದು ಇಪಿಎಫ್‌ಒ ಕೆಲವು ಸಮಯದ ಹಿಂದೆ ತನ್ನ ಸುತ್ತೋಲೆಯೊಂದರಲ್ಲಿ ಹೇಳಿತ್ತು. ಇದರಿಂದ ವಂಚನೆಯ ಅಪಾಯವನ್ನು ಕಡಿಮೆಗೊಳಿಸಲಾಗುತ್ತದೆ ಮತ್ತು ಸರಿಯಾದ ಹಕ್ಕುದಾರರಿಗೆ ಕ್ಲೈಮ್ ಅನ್ನು ಪಾವತಿಸಲಾಗುತ್ತದೆ ಎಂದು ಅದು ತಿಳಿಸಿತ್ತು.

ಇದನ್ನೂ ಓದಿ- #JamesTeaser: ದೊಡ್ಮನೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್; ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್

ನಿಷ್ಕ್ರಿಯ ಖಾತೆ ಎಂದರೇನು?
36 ತಿಂಗಳಿಗಿಂತ ಹೆಚ್ಚು ಕಾಲ ಕೊಡುಗೆ ಮೊತ್ತವನ್ನು ಠೇವಣಿ ಮಾಡದಿರುವ ಭವಿಷ್ಯ ನಿಧಿ ಖಾತೆಗಳನ್ನು ನಿಷ್ಕ್ರಿಯ ಖಾತೆಗಳು ಎಂದು EPFO ​​ವರ್ಗೀಕರಿಸಿದೆ. ಆದಾಗ್ಯೂ, ನಿಷ್ಕ್ರಿಯ ಖಾತೆಗಳ ಮೇಲೆ ಸಹ ಬಡ್ಡಿ ಲಭ್ಯವಿದೆ.

ಯಾರು ಪ್ರಮಾಣೀಕರಿಸುತ್ತಾರೆ?
ನಿಷ್ಕ್ರಿಯ PF ಖಾತೆಗೆ (PF Account) ಸಂಬಂಧಿಸಿದ ಕ್ಲೈಮ್ ಅನ್ನು ಇತ್ಯರ್ಥಗೊಳಿಸಲು, ಉದ್ಯೋಗಿಯ ಉದ್ಯೋಗದಾತನು ಆ ಕ್ಲೈಮ್ ಅನ್ನು ಪ್ರಮಾಣೀಕರಿಸುವುದು ಅವಶ್ಯಕ. ಆದಾಗ್ಯೂ, ಕಂಪನಿಯು ಮುಚ್ಚಲ್ಪಟ್ಟಿರುವ ಉದ್ಯೋಗಿಗಳು ಮತ್ತು ಕ್ಲೈಮ್ ಅನ್ನು ಪ್ರಮಾಣೀಕರಿಸಲು ಯಾರೂ ಇಲ್ಲದಿದ್ದರೆ, ನಂತರ ಬ್ಯಾಂಕ್ KYC ದಾಖಲೆಗಳ ಆಧಾರದ ಮೇಲೆ ಅಂತಹ ಕ್ಲೈಮ್ ಅನ್ನು ಪ್ರಮಾಣೀಕರಿಸುತ್ತದೆ.

ಯಾವ ದಾಖಲೆಗಳು ಬೇಕಾಗುತ್ತವೆ?
KYC ಗಾಗಿ, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪಡಿತರ ಚೀಟಿ, ಇಎಸ್‌ಐ ಗುರುತಿನ ಚೀಟಿ, ಚಾಲನಾ ಪರವಾನಗಿ ಸೇರಿವೆ. ಇದಲ್ಲದೇ ಆಧಾರ್ ನಂತಹ ಸರ್ಕಾರ ನೀಡುವ ಇತರೆ ಯಾವುದೇ ಗುರುತಿನ ಚೀಟಿಯನ್ನು ಸಹ ಇದಕ್ಕೆ ಬಳಸಬಹುದು. ಇದರ ನಂತರ, ಸಹಾಯಕ ಭವಿಷ್ಯ ನಿಧಿ ಆಯುಕ್ತರು ಅಥವಾ ಇತರ ಅಧಿಕಾರಿಗಳು ಮೊತ್ತಕ್ಕೆ ಅನುಗುಣವಾಗಿ ಖಾತೆಗಳಿಂದ ಹಿಂಪಡೆಯಲು ಅಥವಾ ಖಾತೆ ವರ್ಗಾವಣೆಯನ್ನು ಅನುಮೋದಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ- 10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ

ಯಾರ ಅನುಮೋದನೆಯೊಂದಿಗೆ ಹಣವನ್ನು ಸ್ವೀಕರಿಸಲಾಗುತ್ತದೆ?
ಮೊತ್ತವು 50 ಸಾವಿರ ರೂಪಾಯಿ ಮೀರಿದರೆ, ಸಹಾಯಕ ಭವಿಷ್ಯ ನಿಧಿ ಆಯುಕ್ತರ ಅನುಮೋದನೆಯ ನಂತರ ಹಣವನ್ನು ಹಿಂಪಡೆಯಲಾಗುತ್ತದೆ ಅಥವಾ ವರ್ಗಾಯಿಸಲಾಗುತ್ತದೆ. ಅದೇ ರೀತಿ, ಮೊತ್ತವು 25 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಮತ್ತು 50 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿದ್ದರೆ, ಖಾತೆ ಅಧಿಕಾರಿಯು ನಿಧಿ ವರ್ಗಾವಣೆ ಅಥವಾ ಹಿಂಪಡೆಯುವಿಕೆಯನ್ನು ಅನುಮೋದಿಸಲು ಸಾಧ್ಯವಾಗುತ್ತದೆ. ಮೊತ್ತವು 25 ಸಾವಿರ ರೂಪಾಯಿಗಿಂತ ಕಡಿಮೆಯಿದ್ದರೆ, ಡೀಲಿಂಗ್ ಸಹಾಯಕರು ಅದನ್ನು ಅನುಮೋದಿಸಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News