ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ: ಇಂದಿನ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ!

Petrol Price Today: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತೆ ಏರಿಕೆಯಾಗಿದೆ. ಕಳೆದ ದಿನ ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗೆ ಏರಿದ್ದ ಕಚ್ಚಾ ತೈಲ ಈಗ 100 ಡಾಲರ್‌ ಗಡಿ ಮುಟ್ಟಿದೆ.  

Written by - Yashaswini V | Last Updated : Aug 30, 2022, 07:15 AM IST
  • ಮೇ 22 ರಂದು ಕೇಂದ್ರ ಸರ್ಕಾರವು ತೈಲ ಬೆಲೆಯ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ದೊಡ್ಡ ಪರಿಹಾರವನ್ನು ನೀಡಿತು.
  • ಮಂಗಳವಾರ ಬೆಳಿಗ್ಗೆ, WTI ಕಚ್ಚಾ ಬೆಲೆ ಪ್ರತಿ ಬ್ಯಾರೆಲ್‌ಗೆ $ 96.77 ತಲುಪಿತು.
  • ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ $104.7 ಇತ್ತು.
ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ: ಇಂದಿನ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ! title=
Petrol Diesel price

30 ಆಗಸ್ಟ್ 2022ರ ಪೆಟ್ರೋಲ್-ಡೀಸೆಲ್ ಬೆಲೆ:  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತೆ ಗಗನಮುಖಿ ಆಗಿದೆ. ಹಿಂದಿನ ದಿನ  ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗೆ ಏರಿದ್ದ ಕಚ್ಚಾ ತೈಲ ಈಗ 100 ಡಾಲರ್‌ ದಾಟಿದೆ. ಆದಾಗ್ಯೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಹಳೆಯ ಮಟ್ಟದಲ್ಲಿಯೇ ಇವೆ ಎಂಬುದು ಸಮಾಧಾನಕರ ವಿಷಯವಾಗಿದೆ. 

ಪ್ರತಿ ಬ್ಯಾರೆಲ್‌ಗೆ  $ 100 ದಾಟಿದ ಕಚ್ಚಾ ತೈಲ ದರ: 
ಮೇ 22 ರಂದು ಕೇಂದ್ರ ಸರ್ಕಾರವು ತೈಲ ಬೆಲೆಯ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ದೊಡ್ಡ ಪರಿಹಾರವನ್ನು ನೀಡಿತು. ಮಂಗಳವಾರ ಬೆಳಿಗ್ಗೆ, WTI ಕಚ್ಚಾ ಬೆಲೆ ಪ್ರತಿ ಬ್ಯಾರೆಲ್‌ಗೆ $ 96.77 ತಲುಪಿತು. ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ $104.7 ಇತ್ತು. ಆದಾಗ್ಯೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಗಮನಾರ್ಹವಾಗಿ,  ಮೇಘಾಲಯ ಮತ್ತು ಮಹಾರಾಷ್ಟ್ರ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಮೂರು ತಿಂಗಳ ಹಿಂದೆ ಪೆಟ್ರೋಲ್ ಬೆಲೆಯನ್ನು ಬದಲಾಯಿಸಲಾಗಿತ್ತು. ಹಿಂದಿನ ಗುರುವಾರ ಅಂದರೆ ಆಗಸ್ಟ್ 25ರಂದು ಮೇಘಾಲಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸುಮಾರು 1.5 ರೂಪಾಯಿಗಳಷ್ಟು ಹೆಚ್ಚಿಸಿದೆ.

ಇದನ್ನೂ ಓದಿ- Fuel Tax Update: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯ ಮಧ್ಯೆ ಮಹತ್ವದ ಮತ್ತು ಭಾರಿ ನೆಮ್ಮದಿ ನೀಡುವ ಘೋಷಣೆ ಮೊಳಗಿಸಿದ ವಿತ್ತ ಸಚಿವೆ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ:
- ದೆಹಲಿ ಪೆಟ್ರೋಲ್ ₹ 96.72 ಮತ್ತು ಡೀಸೆಲ್ ₹ 89.62
- ಮುಂಬೈ ಪೆಟ್ರೋಲ್ ₹ 111.35 ಮತ್ತು ಡೀಸೆಲ್ ₹ 97.28 
- ಚೆನ್ನೈ ಪೆಟ್ರೋಲ್ ₹ 102.63 ಮತ್ತು ಡೀಸೆಲ್ ₹ 94.24 ಪ್ರತಿ ಲೀಟರ್
- ಕೋಲ್ಕತ್ತಾ ಪೆಟ್ರೋಲ್ ₹ 106.03 ಮತ್ತು ಡೀಸೆಲ್ ₹ 92.76 ಪ್ರತಿ ಲೀಟರ್
- ನೋಯ್ಡಾ ಪೆಟ್ರೋಲ್ ₹ 96.57 ಮತ್ತು ಡೀಸೆಲ್ ₹ 89.96 
- ಲಕ್ನೋದಲ್ಲಿ ಪ್ರತಿ ಲೀಟರ್ ₹ 96.57 ಮತ್ತು ಡೀಸೆಲ್ ₹ 89.76
- ಜೈಪುರ್ ಪೆಟ್ರೋಲ್ ₹ 108.48 ಮತ್ತು ಡೀಸೆಲ್ ಲೀಟರ್‌ಗೆ ₹ 93.72
- ತಿರುವನಂತಪುರಂನಲ್ಲಿ ಪೆಟ್ರೋಲ್ ₹ 107.71 ಮತ್ತು ಡೀಸೆಲ್ ₹ 96.52
ರೂ.
- ಪಾಟ್ನಾ ಪೆಟ್ರೋಲ್ ₹ 107.24 ಮತ್ತು ಡೀಸೆಲ್ ₹ 94.04
- ಗುರುಗ್ರಾಮ್‌ನಲ್ಲಿ ಪೆಟ್ರೋಲ್ ₹ 97.18 ರೂ ಮತ್ತು ಡೀಸೆಲ್ ಲೀಟರ್‌ಗೆ ₹ 90.05
- ಬೆಂಗಳೂರಿನಲ್ಲಿ ಪೆಟ್ರೋಲ್ ₹ 101.94 ಮತ್ತು ಡೀಸೆಲ್ ಲೀಟರ್‌ಗೆ ₹ 87.89
- ಭುವನೇಶ್ವರದಲ್ಲಿ ಪೆಟ್ರೋಲ್ ₹ 103.19 ಮತ್ತು ಡೀಸೆಲ್ ಲೀಟರ್‌ಗೆ ₹ 94.76
- ಚಂಡೀಗಢದಲ್ಲಿ ಪೆಟ್ರೋಲ್ ಲೀಟರ್‌ಗೆ ₹ 96.76 ಮತ್ತು ಡೀಸೆಲ್ ₹ 84.26
- ಹೈದರಾಬಾದ್ ಪೆಟ್ರೋಲ್ ಲೀಟರ್‌ಗೆ ₹ 109.66 ಮತ್ತು ಡೀಸೆಲ್ ಲೀಟರ್‌ಗೆ ₹ 97.82 
- ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ ₹ 84.10 ಮತ್ತು ಡೀಸೆಲ್ ಲೀಟರ್‌ಗೆ ₹ 79.74 

ಇದನ್ನೂ ಓದಿ- September 1ಕ್ಕೆ ಕಾದಿದೆಯಾ ಬಿಗ್ ಶಾಕ್ ! ಹಲವು ನಿಯಮಗಳು ಬದಲಾಗಲಿವೆ

ನಿಮ್ಮ ನಗರದಲ್ಲಿ ಇಂದಿನ ಪೆಟ್ರೋಲ್ ಡೀಸೆಲ್ ದರ ಎಷ್ಟಿದೆ ಎಂದು ಈ ರೀತಿ ಪರಿಶೀಲಿಸಿ:
ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇತ್ತೀಚಿನ ದರಗಳನ್ನು ಪರಿಶೀಲಿಸಲು, ತೈಲ ಕಂಪನಿಗಳು SMS ಮೂಲಕ ದರಗಳನ್ನು ಪರಿಶೀಲಿಸುವ ಸೌಲಭ್ಯವನ್ನು ಒದಗಿಸುತ್ತವೆ. ದರವನ್ನು ಪರಿಶೀಲಿಸಲು, ಇಂಡಿಯನ್ ಆಯಿಲ್ (IOC) ಗ್ರಾಹಕರು RSP<ಡೀಲರ್ ಕೋಡ್> ಅನ್ನು ಬರೆದು 9224992249 ಗೆ ಕಳುಹಿಸಬೇಕು. HPCL ಗ್ರಾಹಕರು HPPRICE <ಡೀಲರ್ ಕೋಡ್> ಅನ್ನು 9222201122 ಗೆ ಮತ್ತು BPCL ಗ್ರಾಹಕ RSP<ಡೀಲರ್ ಕೋಡ್> 9223112222 ಗೆ ಎಸ್ಎಂಎಸ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News