Petrol Price Hike: ತೈಲ ಬೆಲೆ ಏರಿಕೆ, ಮತ್ತೆ 100 ರೂ. ತಲುಪಿದ ಪೆಟ್ರೋಲ್

Petrol Price Hike: ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂದು ಮತ್ತೆ ತೈಲ ದರ ಏರಿಕೆ ಕಂಡಿದ್ದು, ಹೊಸ ಬೆಲೆಗಳ ಪ್ರಕಾರ, ಈಗ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂಪಾಯಿ ಮತ್ತು ಡೀಸೆಲ್ ಲೀಟರ್‌ಗೆ 91 ರೂಪಾಯಿ ದಾಟಿದೆ.

Written by - Yashaswini V | Last Updated : Mar 29, 2022, 07:09 AM IST
  • ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ
  • ಮಂಗಳವಾರ ಬೆಳಿಗ್ಗೆಯಿಂದಲೇ ಹೊಸ ಬೆಲೆಗಳು ಅನ್ವಯವಾಗಲಿವೆ
  • ಪ್ರತಿ ಲೀಟರ್ ಪೆಟ್ರೋಲ್ ಗೆ 100 ರೂ.
Petrol Price Hike: ತೈಲ ಬೆಲೆ ಏರಿಕೆ, ಮತ್ತೆ 100 ರೂ. ತಲುಪಿದ ಪೆಟ್ರೋಲ್ title=
Petrol Diesel Price Hike

Petrol Price Hike: ಕಳೆದೊಂದು ವಾರದಿಂದ ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಗಗನಮುಖಿಯಾಗುತ್ತಲೇ ಇದೆ. ಮಂಗಳವಾರ  ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 80 ಪೈಸೆ ಏರಿಕೆ ಕಂಡಿದ್ದರೆ, ಡೀಸೆಲ್ ಲೀಟರ್‌ಗೆ  70 ಪೈಸೆ ದುಬಾರಿಯಾಗಿದೆ. 
ಹೊಸ ಬೆಲೆಗಳು ಮಂಗಳವಾರ ಬೆಳಿಗ್ಗೆ 6 ರಿಂದ ಜಾರಿಗೆ ಬಂದಿವೆ. 

ನೂರರ ಗಡಿ ಮುಟ್ಟಿದ ಪೆಟ್ರೋಲ್ :
ಹೊಸ ಬೆಲೆಗಳ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಪೆಟ್ರೋಲ್ ಬೆಲೆ (Petol Price) ಲೀಟರ್‌ಗೆ 100.21 ರೂ. ಅದೇ ಸಮಯದಲ್ಲಿ, ಡೀಸೆಲ್ ಬೆಲೆ ಲೀಟರ್‌ಗೆ 91.47 ರೂ. ದುಬಾರಿಯಾಗಿದೆ. 

ಇದನ್ನೂ ಓದಿ- PVR ಹಾಗೂ INOXಗಳ ವಿಲೀನ, ಮಂಡಳಿಯಿಂದ ಮಹತ್ವದ ನಿರ್ಧಾರ, ಷೇರುಗಳ ಮೇಲೆ ಏನು ಪ್ರಭಾವ?

ಮಾರ್ಚ್ 22 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ (Petrol-Diesel Price) ನಿರಂತರ ಹೆಚ್ಚಳವಾಗುತ್ತಿದೆ. ಎಂಟು ದಿನಗಳಲ್ಲಿ ಇದು ಏಳನೇ ಏರಿಕೆಯಾಗಿದ್ದು, ಇದರೊಂದಿಗೆ ಇದುವರೆಗೆ ಪೆಟ್ರೋಲ್ ಬೆಲೆ ಸುಮಾರು 4.90 ರೂ. ಏರಿಕೆಯಾಗಿದೆ. 

ಇದನ್ನೂ ಓದಿ- ಇದು ವಿಶ್ವದ ಅತ್ಯಂತ ದುಬಾರಿ ನಾಣ್ಯ, ಇದರ ಬೆಲೆ 144 ಕೋಟಿ ರೂ.!

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ತೈಲ ಬೆಲೆ ನಿರಂತರವಾಗಿ ಏರುತ್ತಿದೆ. ತೈಲ ಬೆಲೆ ಏರಿಕೆ ವಿಚಾರದಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಸುತ್ತುವರಿಯಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಸೋಮವಾರ ರಾಜ್ಯಸಭೆಯಲ್ಲಿ, ಪೆಟ್ರೋಲ್ ಬೆಲೆ ಏರಿಕೆಯಿಂದ ಗಗನಕ್ಕೇರುತ್ತಿರುವ ಹಣದುಬ್ಬರ ವಿಷಯದ ಕುರಿತು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದವು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News